Lok Sabha Election: ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿಗೆ ಇಂದು ಮತ್ತೆ ಸಿಇಸಿ ಸಭೆ
Team Udayavani, Mar 20, 2024, 9:30 AM IST
ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದಕ್ಕಾಗಿ ದಿಲ್ಲಿಯಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ ಸಿಇಸಿ ಸಭೆ ನಡೆಯಿತು. ಈ ವೇಳೆ, ಕರ್ನಾಟಕ ಸೇರಿ ಕೆಲವು ರಾಜ್ಯಗಳ 30ಕ್ಕೂ ಅಧಿಕ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಉಳಿದ ರಾಜ್ಯಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬುಧವಾರ ಮತ್ತೆ ಸಿಇಸಿ ಸಭೆ ಸೇರಲಿದೆ.
ಮಂಗಳವಾರದ ಸಭೆಯಲ್ಲಿ ಕರ್ನಾಟಕ, ತೆಲಂಗಾಣ, ಚಂಡೀಗಢ, ಪಶ್ಚಿಮ ಬಂಗಾಲ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಜತೆಗೆ, ಆಂಧ್ರ ಪ್ರದೇಶ, ಸಿಕ್ಕಿಂ ವಿಧಾನಸಭೆ ಚುನಾವಣೆಗೂ ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗಿದೆ. ಪಶ್ಚಿಮ ಬಂಗಾಲದಲ್ಲಿ ಹಾಲಿ ಸಂಸದರಾದ ಅಧೀರ್ ರಂಜನ್ ಚೌಧರಿ, ಅಬು ಹಸನ್ ಅವರು ಕ್ರಮವಾಗಿ ಬೆಹರಾಮಪುರ್ ಮತ್ತು ಮಾಲ್ಡಾ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಿದೆ.
ರಾಜಸ್ಥಾನ, ಮಧ್ಯ ಪ್ರದೇಶ, ಗುಜರಾತ್ ಸೇರಿದಂತೆ ಇನ್ನೂ ಕೆಲವು ರಾಜ್ಯಗಳ ಅಭ್ಯರ್ಥಿಗಳ ಕುರಿತು ಬುಧವಾರ ನಡೆಯುವ ಸಿಇಸಿ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಸುಖ್ವಿಂದರ್ ಸಿಂಗ್ ರಾಂಧ್ವಾ ಅವರು, ನಾವು ನಾಳೆ(ಮಾ.20) ಮತ್ತೆ ಸಭೆ ಸೇರಿ, ಪಟ್ಟಿ ಅಂತಿಮಗೊಳಿಸಲಿದ್ದೇವೆ ಎಂದು ಹೇಳಿದರು.
ರಾಹುಲ್ ಗಾಂಧಿ ಗೈರು: ಮಲ್ಲಿಕಾರ್ಜನ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸೋನಿಯಾ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣು ಗೋಪಾಲ್ ಸೇರಿ ಸಮಿತಿಯ ಸದಸ್ಯರು ಹಾಜರಿದ್ದಾರೆ. ಆದರೆ ರಾಹುಲ್ ಗಾಂಧಿ ಗೈರು ಹಾಜರಾಗಿದ್ದರು. ಕಾಂಗ್ರೆಸ್ ಪಕ್ಷವು ಈವರೆಗೆ ಒಟ್ಟು 82 ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದೆ.
“ಕೈ’ ಪ್ರಣಾಳಿಕೆಯಲ್ಲಿ ಹಳೆ ಪಿಂಚಣಿ ವ್ಯವಸ್ಥೆ ಭರವಸೆ?
ದೇಶದ ಮನೆ ಮನೆಗೂ ಗ್ಯಾರಂಟಿ ಒದಗಿಸುವುದು ಮತ್ತು ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಮಾಡುವುದರ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಸ್ತಾವಿಸುವ ಬಗ್ಗೆ ಚರ್ಚಿಸಲಾಗಿದೆ.
ಮಂಗಳವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಪ್ರಣಾಳಿಕೆ ಬಗ್ಗೆ ಅಂತಿಮ ರೂಪ ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು.
“ನ್ಯಾಯ ಪತ್ರ’ದ ಮೂಲಕ ಎಲ್ಲ ಜನರಿಗೂ ನ್ಯಾಯ ಒದಗಿಸುವುದರ ಮೇಲೆ ಪ್ರಣಾಳಿಕೆಯನ್ನು ಕೇಂದ್ರೀಕರಿಸಲಾಗುತ್ತದೆ. 2004ರಲ್ಲಿ ಇಂಡಿಯಾ ಶೈನಿಂಗ್‌ಗೆ ಆದ ಗತಿಯೇ ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸುತ್ತಿರುವ “ಬಿಜೆಪಿ ಗ್ಯಾರಂಟಿ’ಗಳಿಗೂ ಆಗಲಿದೆ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಗಿದೆ. “ನ್ಯಾಯ ಗ್ಯಾರಂಟಿ’ಗಳ ಮೂಲಕ ದೇಶದ ಯುವ ಜನ, ಮಹಿಳೆ, ಕಾರ್ಮಿಕರು, ರೈತರು, ಸೌಲಭ್ಯ ವಂಚಿತರನ್ನು ತಲುಪುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಇದನ್ನೂ ಓದಿ: Sirsi ಮಾರಿಕಾಂಬಾ ಜಾತ್ರೆ… ಗದ್ದುಗೆ ಏರಲು ಹೊರಟ ‘ಅಮ್ಮ’
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ED; ಅಕ್ರಮವಾಗಿ ಒಳನುಸುಳಿದ ಇಬ್ಬರು ಬಾಂಗ್ಲಾ ಪ್ರಜೆಗಳು ಸೇರಿ ಮೂವರ ಬಂಧನ
Supreme Court: ಆರೋಪಿ, ಅಪರಾಧಿ ಮನೆಯನ್ನು ಏಕಾಏಕಿ ನೆಲಸಮ ಮಾಡುವಂತಿಲ್ಲ: ಸುಪ್ರೀಂ ತೀರ್ಪು
Ayodhya; ಖಲಿಸ್ಥಾನ್ ನಾಯಕನಿಂದ ಬೆದರಿಕೆ: ರಾಮ ಮಂದಿರದ ಭದ್ರತೆ ಇನ್ನಷ್ಟು ಹೆಚ್ಚಳ
By-election: ರಾಹುಲ್ ತೊರೆದ ವಯನಾಡಲ್ಲಿ ಪ್ರಿಯಾಂಕಾ ಗಾಂಧಿ ಗೆಲ್ಲುತ್ತಾರಾ?
Maharashtra: ಕಾಂಗ್ರೆಸ್ ಅಭ್ಯರ್ಥಿ ಕಚೇರಿಗೆ ಹೋಗಿ ಮುಖಂಡರಿಗೆ ಸಿಎಂ ಏಕನಾಥ ಶಿಂಧೆ ತರಾಟೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.