ಕಾಂಗ್ರೆಸ್ ಪ್ರಣಾಳಿಕೆ ಎ. 5ಕ್ಕೆ ಬಿಡುಗಡೆ; ಬಿಜೆಪಿ ಸಿದ್ಧತೆ
ಬಿಜೆಪಿ ಪ್ರಣಾಳಿಕೆಗೆ ಜನರಿಂದ 5.45 ಲಕ್ಷ ಸಲಹೆಗಳು
Team Udayavani, Apr 2, 2024, 12:15 AM IST
ಹೊಸದಿಲ್ಲಿ: ದೇಶಾದ್ಯಂತ ಲೋಕಸಭೆ ಚುನಾವಣೆ ಪ್ರಚಾರ, ಚುನಾವಣೆ ಸಿದ್ಧಗೊಳ್ಳುತ್ತಿರುವಂತೆಯೇ ರಾಜಕೀಯ ಪಕ್ಷಗಳು ಪ್ರಣಾಳಿಕೆ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ತೊಡಗಿವೆ. ಅದಕ್ಕೆ ಪೂರಕವಾಗಿ ಆಡಳಿತಾರೂಢ ಬಿಜೆಪಿಯ ಪ್ರಣಾಳಿಕೆ ರಚನಾ ಸಮಿತಿಯ ಸಭೆಯೂ ಹೊಸದಿಲ್ಲಿಯಲ್ಲಿ ನಡೆಯಿತು.
ಎ.5ಕ್ಕೆ ಚುನಾವಣ ಕೈ ಪ್ರಣಾಳಿಕೆ ಬಿಡುಗಡೆ
ವಿಪಕ್ಷ ಕಾಂಗ್ರೆಸ್‌ನ ಚುನಾವಣ ಪ್ರಣಾಳಿಕೆಯನ್ನು ಎ.5ರಂದು ಹೊಸದಿಲ್ಲಿಯಲ್ಲಿ ಬಿಡುಗಡೆ ಮಾಡುವುದಾಗಿ ಸೋಮವಾರ ಪ್ರಕಟಿಸಿದೆ. ಈ ಬಗ್ಗೆ ಪಕ್ಷದ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಟ್ವೀಟ್ ಮಾಡಿದ್ದಾರೆ. ಪಂಚ ನ್ಯಾಯಗಳಾಗಿರುವ ಯುವ ನ್ಯಾಯ, ನಾರಿ ನ್ಯಾಯ, ಕಿಸಾನ್ ನ್ಯಾಯ, ಶ್ರಮಿಕರ ನ್ಯಾಯ, ಮತ್ತು ಪಾಲುದಾರಿಕೆ (ಹಿಸೇದಾರಿ ) ನ್ಯಾಯ ಎಂಬ ಅಂಶಗಳನ್ನು ಒಳಗೊಂಡಿರಲಿದೆ ಎಂದು ಬರೆದುಕೊಂಡಿದ್ದಾರೆ.
ಇದಲ್ಲದೆ ಎ.5 ಮತ್ತು ಎ.6ರಂದು ರಾಜಸ್ಥಾನದ ಜೋಧ್‌ಪುರ್ ಮತ್ತು ಹೈದರಾಬಾದ್‌ನಲ್ಲಿ ಬೃಹತ್ ರ್ಯಾಲಿಯನ್ನು ಕಾಂಗ್ರೆಸ್ ಆಯೋಜಿಸಲಿದೆ. ಜೈಪುರ ರ್ಯಾಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಭಾಗವಹಿ ಸಲಿದ್ದರೆ, ಹೈದರಾಬಾದ್ ರ್ಯಾಲಿಯಲ್ಲಿ ರಾಹುಲ್ ಗಾಂಧಿಯವರು ಮಾತನಾಡಲಿದ್ದಾರೆ ಎಂದು ವೇಣುಗೋಪಾಲ್ ಟ್ವೀಟ್ ಮಾಡಿದ್ದಾರೆ.
ಇದರ ಜತೆಗೆ ಎ.3ರಂದು ಮನೆ ಮನೆಗೆ ಗ್ಯಾರಂಟಿ ಎಂಬ ಯೋಜನೆಯನ್ನೂ ದೇಶಾದ್ಯಂತ ಆರಂಭ ಮಾಡಲಿದೆ ಎಂದೂ ವೇಣುಗೋಪಾಲ್ ಹೇಳಿ ಕೊಂಡಿದ್ದಾರೆ. ಅದರ ಅನ್ವಯ ಒಟ್ಟು 8 ಕೋಟಿ ಮನೆಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಭೇಟಿ ನೀಡಲಿದ್ದಾರೆ.
ಬಿಜೆಪಿ ಪ್ರಣಾಳಿಕೆಗೆ ಜನರಿಂದ 5.45 ಲಕ್ಷ ಸಲಹೆಗಳು
ರಕ್ಷಣ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಮಿತಿಯ ಮೊದಲ ಸಭೆ ಹೊಸದಿಲ್ಲಿಯಲ್ಲಿ ನಡೆ ಯಿತು. ಅದರಲ್ಲಿ “ವಿಕಸಿತ ಭಾರತ’ ಅಜೆಂಡಾವು ಪ್ರಣಾಳಿಕೆಯ ಕೇಂದ್ರ ಬಿಂದುವಾಗಿತ್ತು.
ಸಭೆ ಬಳಿಕ ಮಾತನಾಡಿದ ಕೇಂದ್ರ ಸಚಿವ ಪಿಯೂ ಷ್ ಗೋಯಲ್ ಅವರು, “ಪ್ರಣಾಳಿಕೆಗೆ ಸಂಬಂಧಿ ಸಿದಂತೆ ಪಕ್ಷಕ್ಕೆ ಮಿಸ್ಡ್ ಕಾಲ್ ಮೂಲಕ 3.75 ಲಕ್ಷ ಹಾಗೂ ಪ್ರಧಾನಿ ಅವರ ಮೋದಿ ಆ್ಯಪ್ ಮೂಲಕ 1.70 ಲಕ್ಷ ಸಲಹೆಗಳು ಬಂದಿವೆ(ಒಟ್ಟು 5.45 ಲಕ್ಷ)’ ಎಂದು ತಿಳಿಸಿದರು. 2047ರ ಹೊತ್ತಿಗೆ ವಿಕಸಿತ ಭಾರತದ ರೂಪುರೇಶೆಗಳ ಬಗ್ಗೆ ಸಭೆಯಲ್ಲಿ ಚರ್ಚಿ ಸಲಾಯಿತು. ನಮ್ಮ ಪ್ರಣಾಳಿಕೆ ರೂಪಿಸುವುದರಲ್ಲಿ ಜನರು ತೋರಿಸುತ್ತಿರುವ ಉತ್ಸಾಹವು ಅವರು ಪ್ರಧಾನಿ ನರೇಂದ್ರ ಮೋದಿ ಮೇಲೆ ಇಟ್ಟಿರುವ ನಂಬಿಕೆ ಮತ್ತು ಅವರಿಂದ ಜನರು ಹೆಚ್ಚು ನಿರೀಕ್ಷಿಸು ತ್ತಿರುವುದನ್ನು ಖಚಿತಪಡಿಸುತ್ತದೆ. ಜನರು ಕಳುಹಿಸಿರುವ ಸಲಹೆಗಳನ್ನು ವಿವಿಧ ವಿಭಾಗಗಳಲ್ಲಿ ವರ್ಗೀಕರಿಸಿ ಪ್ರಣಾಳಿಕೆಯನ್ನು ಸಿದ್ಧಡಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ರ್ಯಾಲಿಗಳಲ್ಲಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬಡವರು, ಯುವಕರು, ಮಹಿಳೆಯರು ಮತ್ತು ರೈತರ ಪರ ಕೇಂದ್ರ ಸರಕಾರ ಜಾರಿಗೊಳಿಸಿದ ಕಾರ್ಯಕ್ರಮಗಳ ಬಗ್ಗೆ ಹೆಚ್ಚಾಗಿ ಪ್ರಸ್ತಾವ ಮಾಡುತ್ತಿದ್ದಾರೆ. ಹೀಗಾಗಿ ಅವುಗಳಿಗೆ ಅನುಸಾ ರವಾಗಿ ಪ್ರಣಾಳಿಕೆಯಲ್ಲಿ ಅಂಶಗಳು ಇರುವ ಸಾಧ್ಯತೆ ಗಳು ಇವೆ ಎನ್ನಲಾಗಿದೆ. ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆ ಯಲ್ಲಿ 8 ಕೇಂದ್ರ ಸಚಿವರು, ಮೂವರು ಮುಖ್ಯ ಮಂತ್ರಿಗಳು, ಪಕ್ಷದ ಇತರ ನಾಯಕರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ
Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್ ಗೋಪಿ!
Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ
LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ
Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ
MUST WATCH
ಹೊಸ ಸೇರ್ಪಡೆ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.