Loksabha ಸಮರಕ್ಕೆ ವಿದ್ಯುಕ್ತ ಚಾಲನೆ: 1ನೇ ಹಂತಕ್ಕೆ ಅಧಿಸೂಚನೆ ಪ್ರಕಟ
ನಾಮಪತ್ರ ಸಲ್ಲಿಕೆಗೆ ಮಾ.27 ಕೊನೆ ದಿನ , 28ರಂದು ಉಮೇದುವಾರಿಕೆ ಪರಿಶೀಲನೆ
Team Udayavani, Mar 21, 2024, 6:10 AM IST
ಹೊಸದಿಲ್ಲಿ: ಎಪ್ರಿಲ್ 19ರಂದು ನಡೆಯ ಲಿರುವ ಲೋಕಸಭೆ ಚುನಾವಣೆಯ ಮೊದಲ ಹಂತಕ್ಕೆ ಚುನಾವಣ ಆಯೋಗವು ಬುಧವಾರ ಅಧಿಸೂಚನೆ ಹೊರಡಿಸಿದೆ. 21 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 102 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಫಲಿತಾಂಶವು ಜೂನ್ 4ಕ್ಕೆ ಪ್ರಕಟವಾಗಲಿದೆ.
ನಾಮಪತ್ರ ಸಲ್ಲಿಸಲು ಮಾ.27 ಕೊನೆಯ ದಿನವಾಗಿದೆ. ನಾಮ ಪತ್ರ ಪರಿಶೀಲನೆ ಮಾ.28ಕ್ಕೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಮಾ.30 ಕೊನೆಯ ದಿನವಾಗಿದೆ. ಆದರೆ ಹಬ್ಬದ ಹಿನ್ನೆಲೆಯಲ್ಲಿ ಬಿಹಾರದಲ್ಲಿ ದಿನಾಂಕಗಳು ಪರಿಷ್ಕೃತ ಗೊಂಡಿವೆ. ನಾಮಪತ್ರ ಸಲ್ಲಿಸಲು ಮಾ.28 ಕೊನೆಯ ದಿನವಾಗಿದ್ದರೆ, ನಾಮಪತ್ರ ಪರಿಶೀಲನೆ ಮಾ.30ರಂದು ನಡೆಯಲಿದೆ. ನಾಮ ಪತ್ರ ವಾಪಸ್ ಪಡೆಯಲು ಎಪ್ರಿಲ್ 2 ಕೊನೆಯ ದಿನವಾಗಿದೆ.
ಎಲ್ಲೆಲ್ಲಿ ಚುನಾವಣೆ?
ಮೊದಲ ಹಂತದಲ್ಲಿ ಅರುಣಾಚಲ(2), ಅಸ್ಸಾಂ(5), ಬಿಹಾರ(4), ಛತ್ತೀಸ್ಗಢ(1), ಮಧ್ಯ ಪ್ರದೇಶ(2), ಮಿಜೋರಾಂ (1), ನಾಗಾಲ್ಯಾಂಡ್(1), ರಾಜಸ್ಥಾನ(12), ಸಿಕ್ಕಿಂ(1), ತಮಿಳುನಾಡು(39), ತ್ರಿಪುರಾ(1), ಉತ್ತರ ಪ್ರದೇಶ(8), ಉತ್ತರಾಖಂಡ(5), ಪಶ್ಚಿಮ ಬಂಗಾಲ(3) ರಾಜ್ಯಗಳಲ್ಲಿ ಮತದಾನ ನಡೆಯಲಿದೆ.
ಅರುಣಾಚಲ, ಸಿಕ್ಕಿಂ ವಿಧಾನಸಭೆಗೆ ಚುನಾವಣೆ
ಇದೇ ವೇಳೆ, ಅರುಣಾಚಲ ಮತ್ತು ಸಿಕ್ಕಿಂ ವಿಧಾನಸಭೆ ಚುನಾವಣೆಗಾಗಿ ರಾಜ್ಯ ಚುನಾವಣ ಕಚೇರಿಯು ಪ್ರತ್ಯೇಕ ಅಧಿಸೂಚನೆ ಹೊರಡಿಸಿದೆ. ಅರುಣಾಚಲ ಪ್ರದೇಶ 60 ವಿಧಾನಸಭೆ ಕ್ಷೇತ್ರಗಳು ಮತ್ತು 2 ಲೋಕಸಭೆ ಹಾಗೂ ಸಿಕ್ಕಿಂನ 32 ವಿಧಾನಸಭೆ ಕ್ಷೇತ್ರಗಳಿಗೆ ಎ.19ರಂದು ಮತದಾನ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ
Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್ ಗೋಪಿ!
Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ
LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ
Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.