Lok Sabha Elections 6ನೇ ಹಂತ: ಶೇ.59.06ರಷ್ಟು ಮತದಾನ
58 ಕ್ಷೇತ್ರಗಳ 889 ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರ
Team Udayavani, May 25, 2024, 11:25 PM IST
ಹೊಸದಿಲ್ಲಿ: ಲೋಕಸಭೆ ಚುನಾವಣೆಯ 6ನೇ ಹಂತದಲ್ಲಿ 2 ಕೇಂದ್ರಾಡಳಿತ ಪ್ರದೇಶ ಹಾಗೂ 6 ರಾಜ್ಯಗಳ 58 ಲೋಕಸಭಾ ಕ್ಷೇತ್ರಗಳಲ್ಲಿ ಶನಿವಾರ ಮತದಾನ ನಡೆದಿದ್ದು, ಶೇ.59.06ರಷ್ಟು ಮತದಾನ ದಾಖಲಾಗಿದೆ. ಪಶ್ಚಿಮ ಬಂಗಾಲ, ಝಾರ್ಖಂಡ್ ಹೊರತು ಪಡಿಸಿ ಉಳಿದೆಡೆ ಚುನಾವಣೆ ಶಾಂತಿಯುತವಾಗಿ ನಡೆದಿದೆ.
ಒಡಿಶಾದ 6 ಲೋಕಸಭಾ ಕ್ಷೇತ್ರದ ಜತೆಗೆ 42 ವಿಧಾನಸಭಾ ಕ್ಷೇತ್ರಗಳಿಗೂ ಇದೇ ಹಂತ ದಲ್ಲಿ ಮತದಾನ ನಡೆದಿದೆ. 6ನೇ ಹಂತದಲ್ಲಿ ಒಟ್ಟು 11.13 ಕೋಟಿ ಅರ್ಹ ಮತದಾರಿದ್ದಾರೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಮನೋಜ್ ತಿವಾರಿ, ಕನ್ಹಯ್ಯ ಕುಮಾರ್, ಮೇನಕಾ ಗಾಂಧಿ, ಮೆಹಬೂಬಾ ಮುಫ್ತಿ, ಅಭಿಜಿತ್ ಗಂಗೋಪಾಧ್ಯಾಯ, ಮನೋಹರ್ ಲಾಲ್ ಕಟ್ಟರ್, ನವೀನ್ ಜಿಂದಾಲ್ ಸಹಿತ 889 ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದೆ.
ಈ ಹಂತದಲ್ಲಿ ಹರಿಯಾಣದ 10 ಮತ್ತು ದಿಲ್ಲಿಯ ಎಲ್ಲ 7 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಪಶ್ಚಿಮ ಬಂಗಾಲದಲ್ಲಿ ಅತೀ ಹೆಚ್ಚು(ಶೇ.78.19) ಮತ ದಾನ ವಾದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಅತೀ ಕಡಿಮೆ (ಶೇ.51.41) ಮತದಾನವಾಗಿದೆ. ಕೊನೇ ಹಂತದಲ್ಲಿ ಜೂ.1ರಂದು 57 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ರಾಷ್ಟ್ರಪತಿ, ಸಿಜೆಐ ವೋಟಿಂಗ್: ರಾಷ್ಟ್ರಪತಿ ದ್ರೌಪದಿ ಮುರ್ಮು ಹೊಸದಿಲ್ಲಿ ಕ್ಷೇತ್ರದ ಮಹಿಳಾ ಮತದಾನ ಕೇಂದ್ರದಲ್ಲಿ ಹಕ್ಕು ಚಲಾಯಿಸಿದರು. ಪ್ರಸಿಡೆಂಟ್ ಎಸ್ಟೇಟ್‌ನಲ್ಲಿ ತೆರೆಯಲಾಗಿದ್ದ ಮಹಿಳಾ ಮತದಾನ ಕೇಂದ್ರಕ್ಕೆ ಬೆಳಗ್ಗೆ 9ಕ್ಕೆ ತೆರಳಿ ರಾಷ್ಟ್ರಪತಿ ಮತ ಚಲಾ ಯಿ ಸಿ ದರು. ಇದೇ ವೇಳೆ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ತಮ್ಮ ಪತ್ನಿ ಕಲ್ಪನಾ ದಾಸ್ ಜತೆಗೂಡಿ ಮತದಾನ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿದರು.
ಮಹಿಳಾ ಹಾಕಿ ಥೀಮ್ ಮತದಾನ ಕೇಂದ್ರ
ಝಾರ್ಖಂಡ್‌ನ ರಾಂಚಿ ಲೋಕಸಭೆ ಕ್ಷೇತ್ರದಲ್ಲಿರುವ ಮಹಿಳಾ ಹಾಕಿ ಥೀಮ್ ಮತದಾನ ಕೇಂದ್ರವು ಭಾರೀ ಗಮನ ಸೆಳೆಯಿ ತು. ರಾಂಚಿಯ ಬರಿಯತು ಸಿಎಂ ಸ್ಕೂಲ್ ಆಫ್ ಎಕ್ಸೆ ಈ ಕೇಂದ್ರದಲ್ಲಿ ಒಟ್ಟು 6 ಬೂತ್‌ಗಳಿದ್ದವು. ಇಲ್ಲಿ ಭಾರತೀಯ ಹಾಕಿ ತಂಡದ ಆಟಗಾರ್ತಿಯರಾದ ನಾಯಕಿ ಸಲಿಮಾ ತೇಟೆ, ನಿಕ್ಕಿ ಪ್ರಧಾನ್ ಮತ್ತು ಸಂಗೀತಾ ಕುಮಾರಿ ಅವರು ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು.
ಪಿಡಿಪಿ ಕಾರ್ಯಕರ್ತರು ವಶ: ಮೆಹಬೂಬಾ ಪ್ರತಿಭಟನೆ
ತಮ್ಮ ಪಕ್ಷದ ಪೋಲಿಂಗ್ ಏಜೆಂಟ್ ಮತ್ತು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದನ್ನು ವಿರೋಧಿಸಿ ಪಿಡಿಪಿ ನಾಯಕಿ ಮೆಹ ಬೂಬಾ ಮುಫ್ತಿ ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಿಜ್‌ಬಿಹಾರಾ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ನೆರೆದಿದ್ದರಿಂದ ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಮತದಾನ ಕೇಂದ್ರದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದಕ್ಕೆ ವಶಕ್ಕೆ ಪಡೆದಿದೆ ಎಂದು ಪೊಲೀಸರು ಸಮಜಾಯಿಷಿ ನೀಡಿದ್ದಾರೆ. ಇದೇ ವೇಳೆ, ತಮ್ಮ ಮೊಬೈಲ್ ನಲ್ಲಿ ಔಟ್ ಗೋ ಯಿಂಗ್ ಕರೆಗಳನ್ನು ತಡೆ ಹಿಡಿಯಲಾಗಿದೆ ಎಂದೂ ದೂರಿದ್ದಾರೆ.
ಪಶ್ಚಿಮ ಬಂಗಾಲದ 8 ಕ್ಷೇತ್ರಗಳಲ್ಲಿ ಹಿಂಸಾಚಾರ
ಪಶ್ಚಿಮ ಬಂಗಾಲದ 8 ಲೋಕಸಭಾ ಕ್ಷೇತ್ರಗಳ ಚುನಾವಣೆ ವೇಳೆ ಅಲ್ಲಲ್ಲಿ ಹಿಂಸಾಚಾರ ನಡೆದಿದೆ. ಸಾವಿರಕ್ಕೂ ಅಧಿಕ ದೂರುಗಳನ್ನು ಚುನಾವಣ ಆಯೋಗವು ಸ್ವೀಕರಿಸಿದೆ. ಇಷ್ಟಾಗಿಯೂ ಮತದಾನ ಶಾಂತಿಯುತವಾಗಿ ನಡೆದಿದೆ ಎಂದು ಆಯೋಗ ಹೇಳಿದೆ. ಘಟಾಲ್‌ನಲ್ಲಿ ಬಿಜೆಪಿ- ಟಿಎಂಸಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ರಸ್ತೆಯಲ್ಲೇ ಕುಳಿತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಿಡ್ನಾಪುರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೋ ಬ್ಯಾಕ್ ಪ್ರತಿಭಟನೆ ಎದುರಿಸಬೇಕಾಯಿತು. ತಮುಕ್ ಕ್ಷೇತ್ರದ ಅಭ್ಯರ್ಥಿ, ಹೈಕೋರ್ಟ್‌ನ ಮಾಜಿ ಜಡ್ಜ್ ಗಂಗೋಪಾಧ್ಯಾಯ ವಿರುದ್ಧವು ಕೆಲವರು ಘೋಷಣೆಗಳನ್ನು ಕೂಗಿದರು. ಬನಕುರಾ, ಪೂರ್ವ ಮಿಡ್ನಾಪುರ್ ಸೇರಿ ಅಲ್ಲಲ್ಲಿ ಅಹಿತಕರ ಘಟನೆಗಳು ನಡೆದಿವೆ. ತಮ್ಮ ಬೆಂಗಾವಲು ಪಡೆಯ ಮೇಲೆ ದಾಳಿ ನಡೆದಿದೆ ಎಂದು ಝಾಡಗ್ರಾಮ್ ಕ್ಷೇತ್ರದ ಅಭ್ಯರ್ಥಿ ಪ್ರಣತ್ ಟುಡು ಆರೋಪಿಸಿದ್ದಾರೆ. ರಸ್ತೆ ಅಡ್ಡಗಟ್ಟಿದ ಟಿಎಂಸಿ ಗೂಂಡಾಗಳು ನನ್ನ ಕಾರಿನ ಮೇಲೆ ಇಟ್ಟಿಗೆಗಳನ್ನು ಎಸೆದರು. ಸಿಐಎಸ್‌ಎಫ್ನ ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court: ಸರ್ಕಾರಿ ನೇಮಕ ಪ್ರಕ್ರಿಯೆ ನಡುವೆ ನಿಯಮ ಬದಲು ಸಲ್ಲದು
JPC ಅಧ್ಯಕ್ಷ ಪಾಲ್ ಕರ್ನಾಟಕ ಪ್ರವಾಸ ಏಕಪಕ್ಷೀಯ: ಅಸಾಸುದ್ದೀನ್ ಒವೈಸಿ
Maharashtra: ಉದ್ಧವ್ ಸೇನೆ ಪ್ರಣಾಳಿಕೆ: ಬಾಲಕರಿಗೂ ಉಚಿತ ಶಿಕ್ಷಣ!
Fight Terrorism: ಶೀಘ್ರವೇ ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ನೀತಿ ಬಿಡುಗಡೆ: ಅಮಿತ್ ಶಾ
Rahul Gandhi: ನಾನು ಉದ್ಯಮ ವಿರೋಧಿಯಲ್ಲ, ಏಕಸ್ವಾಮ್ಯದ ವಿರೋಧಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.