Loksabha Election; ರಾಜಸ್ಥಾನದಲ್ಲಿ ಬಿಜೆಪಿ-ಕಾಂಗ್ರೆಸ್‌ ಪೈಪೋಟಿ

ಕಾಂಗ್ರೆಸ್‌ಗೆ ಗ್ಯಾರಂಟಿ ಬಲದ ಮೇಲೆ ನಿರೀಕ್ಷೆ...ರಾಜ್ಯದಲ್ಲಿ ಆಡಳಿತದಲ್ಲಿರುವುದು ಬಿಜೆಪಿಗೆ ಪ್ಲಸ್‌ಪಾಯಿಂಟ್‌

Team Udayavani, Apr 9, 2024, 8:50 AM IST

bjp-congress

ಉತ್ತರ ಭಾರತದ ಹಿಂದಿ ಭಾಷಿಕ ರಾಜ್ಯಗಳ ಪೈಕಿ ಪ್ರಮುಖವಾದದ್ದು ರಾಜಸ್ಥಾನ. ಕಳೆದ ಹತ್ತು ವರ್ಷಗಳಲ್ಲಿ ಇಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷವನ್ನು ಪರ್ಯಾಯವಾಗಿ ಆರಿಸಿಕೊಂಡು ಬಂದರೆ, ಲೋಕಸಭಾ ಚುನಾವಣೆಯಲ್ಲಿ ಮಾತ್ರ ಬಿಜೆಪಿಯನ್ನೇ ಬೆಂಬಲಿಸಿಕೊಂಡು ಬಂದಿದ್ದಾರೆ. 2019ರ ಚುನಾವಣೆಯಲ್ಲಿ ಒಟ್ಟು 25 ಕ್ಷೇತ್ರಗಳ ಪೈಕಿ 24ರಲ್ಲಿ ಬಿಜೆಪಿಯೇ ಗೆದ್ದಿತ್ತು. ಇತ್ತೀಚೆಗೆ ಪ್ರಕಟ ಗೊಂಡಿರುವ ಹಲವು ಸುದ್ದಿ ವಾಹಿನಿಗಳ ಸಮೀಕ್ಷೆಗಳಲ್ಲಿ ಕೂಡ ಬಿಜೆಪಿಯೇ ಜಯ ಸಾಧಿಸಲಿದೆ ಎಂದು ಉಲ್ಲೇಖಿಸಿವೆ.

ರಾಜಸ್ಥಾನದಲ್ಲಿ ಪ್ರಮುಖವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿಯ ನಡುವೆ ನೇರ ಪೈಪೋಟಿ ಇದೆ. ಮಾಯಾವತಿ ನೇತೃತ್ವದ ಬಿಎಸ್‌ಪಿ ಎಲ್ಲ 25 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ರಾಜ್ಯದಲ್ಲಿರುವ ಮುಸ್ಲಿಂ ಸಮುದಾಯದ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಅಳ್ವಾರ್‌ ಮತ್ತು ಶ್ರೀಗಂಗಾನಗರ ಕ್ಷೇತ್ರದಿಂದ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶ ನೀಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟವನ್ನು ನೋಡಿದಾಗ ಕಾಂಗ್ರೆಸ್‌ ನಗೌರ್‌ ಕ್ಷೇತ್ರವನ್ನು ಆರ್‌ಎಲ್‌ಪಿಗೆ, ಅಮ್ರಾ ಕ್ಷೇತ್ರವನ್ನು ಸಿಪಿಎಂಗೆ ಬಿಟ್ಟುಕೊಟ್ಟಿದೆ. ಜಾತಿ ಲೆಕ್ಕಾಚಾರದಲ್ಲಿ ಹೇಳುವುದಿದ್ದರೆ 2 ಕ್ಷೇತ್ರಗಳಲ್ಲಿಯೂ ಕೂಡ ಜಾಟರೇ ಹೆಚ್ಚು ಪ್ರಭಾವಶಾಲಿಗಳಾಗಿದ್ದಾರೆ. ರಾಜಸ್ಥಾನಕ್ಕೆ ಸಂಬಂಧಿಸಿದಂತೆ ಎನ್‌ಡಿಎಯಲ್ಲಿ ಯಾವ ಮಿತ್ರಪಕ್ಷವೂ ಇಲ್ಲ. ಹೀಗಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಈ ಬಾರಿ ರಾಜಸ್ಥಾನದಲ್ಲಿ 2 ಹಂತದಲ್ಲಿ ಮತದಾನ ನಡೆಯಲಿದೆ. ಎ.19ರಂದು 11, ಎ.26ರಂದು 13 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಜಾತಿ ಲೆಕ್ಕಾಚಾರ: ರಾಜ್ಯದ ಒಟ್ಟು ಜನಸಂಖ್ಯೆ 6.86 ಕೋಟಿ. ಈ ಪೈಕಿ ರಾಜಕೀಯ ಭವಿಷ್ಯ ನಿರ್ಧಾರ ಮಾಡುವ ಜಾತಿಗಳಿಂದರೆ ಜಾಟರು, ರಜಪೂತರು, ಗುರ್ಜರ್‌, ಮೀನಾ. ಹಿಂದೂ ಸಮುದಾಯ ಶೇ.89, ಎಸ್‌ಸಿ ಸಮುದಾಯ ಶೇ.18, ಎಸ್‌ಟಿ ಶೇ.13, ಜಾಟರು ಶೇ.20, ಗುಜ್ಜರ್‌ ಮತ್ತು ರಜಪೂತರು ತಲಾ ಶೇ.9, ಬ್ರಾಹ್ಮಣರು ಮತ್ತು ಮೀನಾ ಸಮುದಾಯ ತಲಾ ಶೇ.7 ಇದ್ದಾರೆ. ಟಿಕೆಟ್‌ ನೀಡುವ ಸಂದರ್ಭದಲ್ಲಿ ಕೂಡ ಕಾಂಗ್ರೆಸ್‌ ಅಥವಾ ಬಿಜೆಪಿ ಎಚ್ಚರಿಕೆ ಯಿಂದಲೇ ವರ್ತಿಸಿವೆ. ಬಿಜೆಪಿ ಈ ಬಾರಿ ಜಾಟರಿಗೆ 7, ರಜಪೂತರಿಗೆ 4, ಬ್ರಾಹ್ಮಣರಿಗೆ 2, ಒಬಿಸಿಗೆ 2, ವೈಶ್ಯ, ಗುರ್ಜರ್‌ ಸಮುದಾಯಕ್ಕೆ ತಲಾ 1, ಎಸ್‌ಸಿ ಸಮುದಾಯಕ್ಕೆ 4, ಎಸ್‌ಟಿಗೆ 3 ಕ್ಷೇತ್ರಗಳಲ್ಲಿ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ ಕೂಡ ಜಾಟ್‌ ಸಮುದಾಯದ 6 ಮಂದಿಗೆ ಟಿಕೆಟ್‌ ನೀಡಿದೆ. ಪಶ್ಚಿಮ ರಾಜಸ್ಥಾನದ 13 ಜಿಲ್ಲೆಗಳಲ್ಲಿ ಜಾಟರ ಪ್ರಭಾವ ಇದೆ. ಕೋಟಾ, ಬುಂದಿ ಸೇರಿದಂತೆ 5 ಜಿಲ್ಲೆಗಳಲ್ಲಿ ಮೀನ ಸಮುದಾಯದ ಪ್ರಭಾವ ಇದೆ.

ಪ್ರಮುಖ ವಿಚಾರಗಳು: ನಿರುದ್ಯೋಗ ಮತ್ತು ಹಣದುಬ್ಬರ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖವಾಗಿ ಪ್ರಸ್ತಾವಗೊಳ್ಳುವ ಸಾಧ್ಯತೆಗಳಿವೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಕುಸ್ತಿಪಟುಗಳ ಸಮಸ್ಯೆಗಳು ಪ್ರಧಾನವಾಗಿ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ವಿರುದ್ಧ ಪ್ರಸ್ತಾವ ಮಾಡುವ ಸಾಧ್ಯತೆಗಳು ಇವೆ. ಇದರ ಜತೆಗೆ ಆಡಳಿತ ವಿರೋಧಿ ಅಲೆ, ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಮೀಸಲು ನೀಡುವುದೂ ಮುನ್ನೆಲೆಗೆ ಬರಲಿದೆ.
ಸರಕಾರ ಬದಲಿನಿಂದ ಪ್ರಯೋಜನ: 6 ತಿಂಗಳ ಹಿಂದಷ್ಟೇ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆದು ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ. ಹೀಗಾಗಿ, ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ ಎಂಬ ಬಗ್ಗೆ ವಿಶ್ಲೇಷಣೆಗಳು ನಡೆದಿವೆ. 2019ರಲ್ಲಿ ರಾಜಸ್ಥಾನದಲ್ಲಿ ಅಶೋಕ್‌ ಗೆಹೊÉàಟ್‌ ನೇತೃತ್ವದ ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿ ಇದ್ದಾಗಲೂ ಕೂಡ, ಎನ್‌ಡಿಎಯೇ ಎಲ್ಲ ಕ್ಷೇತ್ರಗಳಲ್ಲಿಯೂ ಜಯ ಸಾಧಿಸಿದೆ. ಹಿಂದಿನ ಚುನಾವಣೆಯಲ್ಲಿ ನಗೌರ್‌ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಮಿತ್ರ ಪಕ್ಷ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ ಅಭ್ಯರ್ಥಿ ಹನುಮಾನ್‌ ಬೇನಿವಾಲ್‌ ಜಯ ಸಾಧಿಸಿದ್ದರು.

ಹಲವೆಡೆ ಪೈಪೋಟಿ: ಬಿಜೆಪಿ ವರಿಷ್ಠರು ರಾಜ್ಯದ 25 ಕ್ಷೇತ್ರಗಳ ಪೈಕಿ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾವಣೆ ಮಾಡಿದೆ. ಕೋಟಾ-ಬುಂದಿ ಕ್ಷೇತ್ರದಿಂದ ಬಿಜೆಪಿ ಓಂ ಬಿರ್ಲಾರನ್ನು ಕಣಕ್ಕೆ ಇಳಿಸಿದರೆ ಕಾಂಗ್ರೆಸ್‌ನಿಂದ ಪ್ರಹ್ಲಾದ್‌ ಗುಂಜಲ್‌ ಅವರ ಎದುರಾ ಳಿಯಾಗಿದ್ದಾರೆ. ಸಿಕರ್‌ ಕ್ಷೇತ್ರದಲ್ಲಿ ಬಿಜೆಪಿಯ ಸುಮೇಧಾನಂದ ಸರಸ್ವತಿ ಮತ್ತು ಸಿಪಿಎಂನ ಆಮ್ರಾ ರಾಮ್‌, ಚುರುನಲ್ಲಿ ಬಿಜೆಪಿಯ ದೇವೇಂದ್ರ ಜಝಾರಿಯಾ ಮತ್ತು ಕಾಂಗ್ರೆಸ್‌ನ ರಾಹುಲ್‌ ಕಸ್ವಾನ್‌ ನಡುವೆ ನೇರ ಪೈಪೋಟಿ ಇದೆ.

2019ರ ಚುನಾವಣೆಯಲ್ಲಿ ನಗೌರ್‌ ಕ್ಷೇತ್ರದಲ್ಲಿ ಮಾತ್ರ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (ಆರ್‌ಎಲ್‌ಪಿ)ಯ ಹನುಮಾನ್‌ ಬೇನಿವಾಲ್‌ ಜಯ ಸಾಧಿಸಿದ್ದರು. ಅವರಿಗೆ 6.60 ಲಕ್ಷ ಮತಗಳು ಪ್ರಾಪ್ತ ವಾಗಿದ್ದವು. ಆ ಸಂದರ್ಭದಲ್ಲಿ ಅವರು ಬಿಜೆಪಿಯ ಜತೆಗೆ ಮೈತ್ರಿ ಮಾಡಿಕೊಂಡಿದ್ದರು. ಬೇನಿವಾಲ್‌ ಮೂಲತಃ ಬಿಜೆಪಿಯವರೇ ಆಗಿದ್ದರು. ಈ ಬಾರಿಯ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟದ ಜತೆಗೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅಲ್ಲಿ ಕಾಂಗ್ರೆಸ್‌ ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ.
ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಆಗ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಜ್ಯೋತಿ ಮಿರ್ಧಾ ಬಿಜೆಪಿಗೆ ನಿಷ್ಠೆ ಬದಲಿಸಿ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ನಗೌರ್‌ ಎನ್ನುವುದು ಮರುಭೂಮಿ ರಾಜ್ಯ ರಾಜಸ್ಥಾನದ 5ನೇ ಅತ್ಯಂತ ದೊಡ್ಡ ಜಿಲ್ಲೆಯೂ ಹೌದು.

2019ರ ಫ‌ಲಿತಾಂಶ
ಒಟ್ಟು ಕ್ಷೇತ್ರ25
ಬಿಜೆಪಿ24
ಆರ್‌ಎಲ್‌ಪಿ 01

ಚುನಾವಣ ವಿಷಯಗಳು
ಕಾಂಗ್ರೆಸ್‌ ಬಿಡುಗಡೆ ಮಾಡಿ ರುವ 25 ಗ್ಯಾರಂಟಿಗಳ ಕುರಿತು ಇಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದೆ. ಕಳೆದ ವಿಧಾನಸಭಾ ಚುನಾವಣೆ ಯಲ್ಲೂ ಇಲ್ಲಿ ಗ್ಯಾರಂಟಿ ಚರ್ಚೆ ಜೋರಾಗಿತ್ತು.
ರಾಷ್ಟ್ರೀಯತೆಯ ವಿಷಯವನ್ನು ಬಿಜೆಪಿ ಇಲ್ಲಿ ಪ್ರಮುಖವಾಗಿ ಬಳಸಿಕೊಳ್ಳುತ್ತಿದೆ.
ಬಿಜೆಪಿ ಇದಕ್ಕೆ ಪರ್ಯಾಯ ವಾಗಿ ಮೋದಿ ಗ್ಯಾರಂಟಿ ಎಂಬ ಅಸ್ತ್ರವನ್ನು ಮುಂದಿಟ್ಟಿದೆ. ಕಳೆದ ವಿಧಾನಸಭಾ ಚುನಾ ವಣೆಯಲ್ಲಿಯೂ ಬಿಜೆಪಿ ಮೋದಿ ಗ್ಯಾರಂ ಟಿಯ ಲಾಭ ಪಡೆದಿತ್ತು.
ಕಾಂಗ್ರೆಸ್‌ ಇಲ್ಲಿ ನಿರು ದ್ಯೋಗ ಮತ್ತು ಬೆಲೆ ಏರಿಕೆಯನ್ನು ಮುಖ್ಯ ಅಸ್ತ್ರವಾಗಿಸಿಕೊಂಡಿದೆ.
ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಮೀಸಲು ನೀಡುವ ವಿಚಾರ ಮುನ್ನೆಲೆಗೆ

ಸದಾಶಿವ ಕೆ.

ಟಾಪ್ ನ್ಯೂಸ್

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ ಪಿಎಂ ಕಿಸಾನ್‌ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ

Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್‌ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ

Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್‌ ಗೋಪಿ!

Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್‌ ಗೋಪಿ!

1-sadsadasd

Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ

Sometimes governments topple in a single day…: Mamata gives big hint

LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ

Modi pays homage to Mahatma Gandhi and Vajpayee memorial before taking oath

Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.