LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

21 ರಾಜ್ಯಗಳ 102 ಕ್ಷೇತ್ರಗಳಲ್ಲಿ 1625 ಅಭ್ಯರ್ಥಿಗಳ ಹಣೆಬರಹ ಬರೆದ ಮತದಾರರು.. ಅರುಣಾಚಲ, ಸಿಕ್ಕಿಂ ವಿಧಾನಸಭೆಗೂ ಎಲೆಕ್ಷ‌ನ್‌

Team Udayavani, Apr 20, 2024, 6:20 AM IST

1-ewqwqewq

ಹೊಸದಿಲ್ಲಿ: ಜಗತ್ತಿನ ಅತೀದೊಡ್ಡ ಚುನಾವಣೆ ಎನಿಸಿ ರುವ ಭಾರತದ ಲೋಕಸಭೆ ಎಲೆಕ್ಷನ್‌ನ ಮೊದಲ ಹಂತಕ್ಕೆ ಶುಕ್ರವಾರ ಬಹುತೇಕ ಶಾಂತಿಯುತ ಮತ ದಾನ ನಡೆಯಿತು. 21 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಗಳ 102 ಲೋಕಸಭೆ ಕ್ಷೇತ್ರಗಳಿಗೆ ಶೇ.62.37 ರಷ್ಟು ಮತದಾನವಾಗಿದೆ. ಲೋಕಸಭೆ ಚುನಾವಣೆಯ 7 ಹಂತಗಳ ಪೈಕಿ, 1ನೇ ಹಂತವು ಅತೀ ದೊಡ್ಡ ಹಂತವಾಗಿದ್ದು, 1625 ಅಭ್ಯರ್ಥಿಗಳ ಹಣೆಬರಹವನ್ನು 16.53 ಕೋಟಿ ಮತದಾರರು ನಿರ್ಧರಿಸಿದ್ದಾರೆ. ಇದೇ ವೇಳೆ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನ ಸಭೆಗೂ ಮತದಾನ ನಡೆಯಿತು. ಜೂ.4ರಂದು ಫ‌ಲಿತಾಂಶ ಪ್ರಕಟವಾಗಲಿದೆ.

ಪಶ್ಚಿಮ ಬಂಗಾಲ, ಮಣಿಪುರ, ಛತ್ತೀಸ್‌ಗಢ ಹೊರತುಪಡಿಸಿ ಉಳಿದ ಕಡೆ ಬಹುತೇಕ ಚುನಾ ವಣೆಯು ಶಾಂತಯುತವಾಗಿ ನಡೆಯಿತು. ಶುಕ್ರವಾರ ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನವು ಸಂಜೆ 6 ಗಂಟೆಯವರೆಗೂ ನಡೆಯಿತು. ಬಹುತೇಕ ಕಡೆ ಮೊದಲ ಬಾರಿಗೆ ಹಕ್ಕು ಚಲಾವಣೆ ಮಾಡಿದ್ದಾರೆ. ಹೊಸ ದಾಗಿ ಮದುವೆಯಾದ ಜೋಡಿ, ಅಂಗವಿಕಲರು ಸೇರಿದಂತೆ ಎಲ್ಲರೂ ಹುರುಪಿನಿಂದ ಬಂದು ಮತದಾನ ಮಾಡಿದರೆ, ಹಿರಿಯ ನಾಗರಿಕರೂ ಅತ್ಯುತ್ಸಾಹದಿಂದ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ತಮಿಳುನಾಡು, ಅರುಣಾಚಲ ಪ್ರದೇಶ, ಅಂಡಮಾನ್‌ ಮತ್ತು ನಿಕೋಬಾರ್‌ ಹಾಗೂ ಅಸ್ಸಾಂನ ಕೆಲವು ಮತದಾನ ಕೇಂದ್ರಗಳಲ್ಲಿ ಇವಿಎಂಗಳು ಕೈ ಕೊಟ್ಟಿವೆ.

ನದಿಯಲ್ಲಿ ಮುಳುಗಿದ ಇವಿಎಂ ವಾಹನ

ಅಸ್ಸಾಂನ ಲಖೀಂಪುರ್‌ ಕ್ಷೇತ್ರದಲ್ಲಿ ಇವಿಎಂ ವಾಹನ ನದಿಯಲ್ಲಿ ಮುಳುಗಿದ ಘಟನೆ ನಡೆಯಿತು. ಇವಿಎಂಗಳಿದ್ದ ಎಸ್‌ಯುವಿಯನ್ನು ಬೋಟ್‌ನಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ, ನದಿ ನೀರಿನ ಮಟ್ಟ ದಿಢೀರ್‌ ಏರಿಕೆಯಾದ ಪರಿಣಾಮ ವಾಹನ ಭಾಗಶಃ ಮುಳುಗಿತು.

ತಮಿಳುನಾಡು: ಕಳೆದ ಸಲದಷ್ಟೇ ಮತ
ಚೆನ್ನೈ: ಮೊದಲ ಹಂತದ ಚುನಾವಣೆಯಲ್ಲಿ ತಮಿಳುನಾಡಿನ ಎಲ್ಲ 39 ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆಯಿತು. ಒಟ್ಟು ಶೇ.72.09 ಮತದಾನವಾಗಿದ್ದು, 2019ರಲ್ಲಿ ಶೇ.74ರಷ್ಟು ಮತ ಚಲಾವಣೆಯಾಗಿದ್ದವು. ಈ ಹಿಂದಿನ ಚುನಾವಣೆಯಲ್ಲಿ ಎರಡನೇ ಹಂತದಲ್ಲಿ ತಮಿಳುನಾಡು ಮತದಾನ ಎದುರಿಸಿತ್ತು. ಡಿಎಂಕೆ ಮತ್ತು ಕಾಂಗ್ರೆಸ್‌, ಎಐಎಡಿಎಂಕೆ ಮತ್ತು ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಮುಖಾಮುಖೀಯಾಗಿವೆ. ಹಾಗಾಗಿ, ಚುನಾವಣೆಯ ಭಾರೀ ತುರಿಸಿನಿಂದ ಕೂಡಿತ್ತು. ಬಿಜೆಪಿಯ ಈ ಬಾರಿ ತಮಿಳುನಾಡಿನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸ್ಥಾನ ಗೆಲ್ಲುವ ವಿಶ್ವಾಸ ಹೊಂದಿದ್ದರೆ, ಡಿಎಂಕೆ ತನ್ನ ಪಾರಮ್ಯವನ್ನು ಕಾಯ್ದುಕೊಳ್ಳುವ ಪ್ರಯತ್ನ ಮಾಡಿದೆ. ತಮಿಳುನಾಡಿನಲ್ಲಿ ಒಟ್ಟು 950 ಅಭ್ಯರ್ಥಿಗಳು ಕಣದಲ್ಲಿದ್ದರು.

ಮೊದಲ ಹಂತದ ಲೋಕಸಭೆ ಚುನಾವಣೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಮತದಾನ ಮಾಡಿದವರಿಗೆ ವಂದನೆಗಳು. ದೇಶಾದ್ಯಂತ ಜನರು ಎನ್‌ಡಿಎಗೆ ದಾಖಲೆ ಮಟ್ಟದಲ್ಲಿ ಮತ ನೀಡಿರುವುದು ನಮಗೆ ಸ್ಪಷ್ಟವಾಗಿದೆ.
-ನರೇಂದ್ರ ಮೋದಿ, ಪ್ರಧಾನಿ

2019ರ 1ನೇ ಹಂತದಲ್ಲಿ ಶೇ.69.43 ಮತದಾನ
2019ರ ಚುನಾವಣೆಯ ಮೊದಲ ಹಂತದಲ್ಲಿ ಶೇ.69.93ರಷ್ಟು ಮತದಾನವಾಗಿತ್ತು. ಆದರೆ ಆಗ ಮೊದಲ ಹಂತದಲ್ಲಿ 91 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. 2024ರ ಚುನಾವಣೆಯಲ್ಲಿ 1ನೇ ಹಂತದಲ್ಲಿ 102 ಕ್ಷೇತ್ರಗಳಿಗೆ ಮತದಾನ ನಡೆದಿದೆ ಎಂದು ಕೇಂದ್ರ ಚುನಾವಣ ಆಯೋಗವು ತಿಳಿಸಿದೆ.

ನಾಗಾಲ್ಯಾಂಡ್‌ನ‌ 6 ಜಿಲ್ಲೆಗಳಲ್ಲಿ ಮತದಾನ ಬಹಿಷ್ಕಾರ
ನಾಗಾಲ್ಯಾಂಡ್‌ನ‌ ಪೂರ್ವ ಭಾಗದ ಜಿಲ್ಲೆಗಳಲ್ಲಿ ಶುಕ್ರ ವಾರ ಶೂನ್ಯ ಮತದಾನವಾಗಿದೆ. ಮತಗಟ್ಟೆಗಳಲ್ಲಿ ಅಧಿಕಾರಿಗಳು, ಸಿಬಂದಿ 9 ಗಂಟೆ ಕಾಲ ಮತದಾರರಿಗಾಗಿ ಕಾದು ಕುಳಿತದ್ದೇ ಬಂತು. ಆದರೆ 4 ಲಕ್ಷ ಮತದಾರರ ಪೈಕಿ ಯಾರೂ ಹಕ್ಕು ಚಲಾವಣೆ ಮಾಡಲು ಆಗಮಿ ಸಲಿಲ್ಲ. ಆಡಳಿತಾತ್ಮಕವಾಗಿ ಪ್ರತ್ಯೇಕ ವಿಭಾಗ ರಚನೆ ಮಾಡಬೇಕು ಎಂದು ಪೂರ್ವ ನಾಗಾಲ್ಯಾಂಡ್‌ ಜನರ ಒಕ್ಕೂಟ ಆಗ್ರಹಿಸಿತ್ತು. ಜತೆಗೆ ಮತದಾನ ಬಹಿಷ್ಕರಿ ಸಲೂ ಒತ್ತಾಯಿಸಿತ್ತು. ಪ್ರಮುಖ ಜಿಲ್ಲೆಗಳಲ್ಲಿ ಮತದಾ ರರು ಮನೆಯಿಂದಲೇ ಹೊರಗೆ ಬರಲಿಲ್ಲ. ಜತೆಗೆ ವಾಹನಗಳ ಸಂಚಾರವೂ ಇರಲಿಲ್ಲ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತದಾನ ಬಹಿಷ್ಕಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ನೆಪ್ಯೂ ರಿಯೋ ಅವರ ಬೇಡಿಕೆಗಳನ್ನು ಗೌರವಿಸುವುದಾಗಿ ತಿಳಿಸಿದ್ದಾರೆ.

ಮತ ಚಲಾಯಿಸಿದ ಜಗತ್ತಿನ ಅತ್ಯಂತ ಕುಳ್ಳಿ ಜ್ಯೋತಿ
ಶುಕ್ರವಾರ ಆರಂಭಗೊಂಡ ಮೊದಲ ಹಂತದ ಲೋಕಸಭೆ ಚುನಾವಣೆಯಲ್ಲಿ ಜಗತ್ತಿನ ಅತ್ಯಂತ ಕುಬj ವ್ಯಕ್ತಿಯಾಗಿರುವ ಜ್ಯೋತಿ ಕಿಶಂಜಿ ಆಮ್ಗೆ ಮತ ಚಲಾಯಿಸಿದ್ದಾರೆ. ಮಹಾರಾಷ್ಟ್ರದ ನಾಗಪುರ ಲೋಕಸಭಾ ಕ್ಷೇತ್ರದಲ್ಲಿ ಕುಟುಂಬಸ್ಥರೊಂದಿಗೆ ಮತಗಟ್ಟೆಗೆ ತೆರಳಿ ಜ್ಯೋತಿ ಮತ ಚಲಾಯಿಸಿ, ಮತದಾನ ಪ್ರತಿಯೊಬ್ಬರ ಕರ್ತವ್ಯ ಎಂದೂ ಹೇಳಿದ್ದಾರೆ. ಕೆಂಪು ಬಣ್ಣದ ಬಾರ್ಬಿ ಡ್ರೆಸ್‌ ಧರಿಸಿ ಮತಗಟ್ಟೆಗೆ ತೆರಳಿದ್ದ ಜ್ಯೋತಿ ಅಲ್ಲಿದ್ದ ಎಲ್ಲರ ಗಮನಸೆಳೆದಿದ್ದಾರೆ. ಮತಚಲಾಯಿಸಿ ಬಳಿಕ ಮಾತನಾಡಿ, ಇದು 2ನೇ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ನಾನು ಮತದಾನ ಮಾಡುತ್ತಿದ್ದೇನೆ. ಮತದಾನ ಮಾಡುವುದು ನನ್ನ ದೇಶಕ್ಕೆ ನಾನು ಸಲ್ಲಿಸುವ ಸೇವೆಯಾಗಿದೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಮತದಾನದಲ್ಲಿ ಭಾಗಿಯಾಗುವಂತೆ ಚುನಾವಣೆ ಆಯೋಗದ ಪರವಾಗಿಯೂ ಜ್ಯೋತಿ ಜನರಿಗೆ ಕರೆ ನೀಡಿದ್ದರು.

ಬಂಗಾಲ, ಮಣಿಪುರ, ಛತ್ತೀಸ್‌ಗಢದಲ್ಲಿ ಹಿಂಸಾಚಾರ: ಸಿಆರ್‌ಪಿಎಫ್ ಯೋಧ ಸಾವು

ಹೊಸದಿಲ್ಲಿ: ತಮಿಳುನಾಡು ಸೇರಿದಂತೆ ದೇಶದ 21 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶುಕ್ರವಾರ ಮೊದಲ ಹಂತದ ಮತದಾನ ನಡೆದಿದೆ. ಪಶ್ಚಿಮ ಬಂಗಾಲ, ಛತ್ತೀಸ್‌ಗಢ, ಮಣಿಪುರಗಳಲ್ಲಿ ಹಿಂಸಾತ್ಮಕ ಘಟನೆಗಳು ನಡೆದಿದೆ. ಛತ್ತೀಸ್‌ಗಢದ ನಕ್ಸಲ್‌ ಪೀಡಿತ ಲೋಕಸಭಾ ಕ್ಷೇತ್ರ ಬಸ್ತಾರ್‌ನಲ್ಲಿ ಗ್ರೆನೇಡ್‌ ಸ್ಫೋಟಗೊಂಡು ಸಿಆರ್‌ಪಿಎಫ್ನ ಒಬ್ಬ ಯೋಧ ಹುತಾತ್ಮರಾಗಿದ್ದಾರೆ.

ಆ ರಾಜ್ಯದ ಬಿಜಾಪುರದಿಂದ 55 ಕಿ.ಮೀ. ದೂರದಲ್ಲಿರುವ ಗಾಲ್ಗಾಂ ಎಂಬ ಮತಗಟ್ಟೆಯಿಂದ 500 ಮೀಟರ್‌ ದೂರದಲ್ಲಿ ಈ ಘಟನೆ ನಡೆದಿದೆ. ಯೋಧ ದೇವೇಂದ್ರ ಕುಮಾರ್‌ (32) ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಪಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮತ್ತೂಂದು ಘಟನೆಯಲ್ಲಿ ಚಿಹಾಕಾ ಎಂಬ ನಗರದಲ್ಲಿ ಐಇಡಿ ಸ್ಫೋಟಗೊಂಡು ಹಲವು ಯೋಧರು ಗಾಯಗೊಂಡಿದ್ದಾರೆ. ಈ ಪೈಕಿ ಯೋಧರೊಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಬಂಗಾಲದಲ್ಲಿ ಟಿಎಂಸಿ- ಬಿಜೆಪಿ ಘರ್ಷಣೆ

ಪಶ್ಚಿಮ ಬಂಗಾಲದ 3 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದರೂ, ಭಾರೀ ಪ್ರಮಾಣದಲ್ಲಿ ಹಿಂಸಾತ್ಮಕ ಘಟನೆಗಳು ನಡೆದಿವೆ. ಟಿಎಂಸಿ ಹಾಗೂ ಬಿಜೆಪಿ ಕ್ರಮವಾಗಿ 100 ಮತ್ತು 50 ಕೇಸುಗಳನ್ನು ಪರಸ್ಪರ ನೀಡಿವೆ. ಕೂಚ್‌ ಬೆಹಾರ್‌ ಜಿಲ್ಲೆಯ ಫ‌ಲಿಮಾರಿ ಗ್ರಾಮದ ಮತಗಟ್ಟೆಯಿಂದ 200 ಮೀಟರ್‌ ದೂರದಲ್ಲಿ 9 ಸ್ಫೋಟಕಗಳನ್ನು ಪತ್ತೆ ಹಚ್ಚಲಾಗಿದೆ. ಅಲ್ಲಲ್ಲಿ ಆಯಾ ಪಕ್ಷಗಳ ಪ್ರತಿನಿಧಿಗಳನ್ನು ಬೆದರಿಸಿದ ಘಟನೆ, ಬಡಿದಾಟಗಳು ನಡೆದಿವೆ. ಸಿತಾಲ್‌ಕುಚಿ, ಮತಭಂಗ, ಚಾಂದ್‌ಮರಿ ಪ್ರದೇಶಗಳಲ್ಲಿ ಮಾತ್ರವಲ್ಲದೇ, ಅಲಿಪುರ್‌ದುರಾಸ್‌ನಲ್ಲಿ ಬಿಜೆಪಿ ಮತ್ತು ಸಿಆರ್‌ಪಿಎಫ್ ಸಿಬಂದಿ ಮತದಾರರನ್ನು ಬೆದರಿಸಿದ್ದಾರೆಂದು ಟಿಎಂಸಿ ಆರೋಪಿಸಿದೆ. ಇದರ ಹೊರತಾಗಿಯೂ ಭಾರೀ ಪ್ರಮಾಣದಲ್ಲಿ ಮತದಾನವಾಗಿದೆ.

ಮಣಿಪುರದಲ್ಲಿ ಗುಂಡು ಹಾರಾಟ; ಇವಿಎಂ ಧ್ವಂಸ: ಮಣಿಪುರದ ಇನ್ನರ್‌ ಮಣಿಪುರ ಕ್ಷೇತ್ರದ ವಿವಿಧ ಭಾಗಗಳಲ್ಲಿ ಘರ್ಷಣೆಗಳು ನಡೆದಿವೆ. ವಿವಿಧ ಭಾಗ ಗಳಲ್ಲಿ 4 ಇವಿಎಂಗಳನ್ನು ಅಪರಿಚಿತರು ಧ್ವಂಸಗೊಳಿ ಸಿದ್ದಾರೆ. ಮೊಯರಾಂಗ್‌ ಕ್ಷೇತ್ರದ ಥಮನಪೋಕ್‌ಪಿ, ಇಂಫಾಲ ಪಶ್ಚಿಮ ಜಿಲ್ಲೆಯ ಉರಿಪೋಕ್‌, ಇರಿಯೋಶೆಂಬಾ ಹಾಗೂ ಇಂಫಾಲ ಪೂರ್ವ ಜಿಲ್ಲೆಯ ಕೀರಾವೋ ಕ್ಷೇತ್ರದ ಕಿಯಾಮ್‌ಗೆàಯಲ್ಲಿ ಶಸ್ತ್ರಧಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಮೂಲಕ ಜನರನ್ನು ಬೆದರಿಸುವ ಪ್ರಯತ್ನ ಮಾಡಿದ್ದಾರೆ.

ಟಾಪ್ ನ್ಯೂಸ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ ಪಿಎಂ ಕಿಸಾನ್‌ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ

Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್‌ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ

Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್‌ ಗೋಪಿ!

Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್‌ ಗೋಪಿ!

1-sadsadasd

Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ

Sometimes governments topple in a single day…: Mamata gives big hint

LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ

Modi pays homage to Mahatma Gandhi and Vajpayee memorial before taking oath

Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.