ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Team Udayavani, Apr 24, 2024, 4:26 PM IST
ಕಲಬುರಗಿ: ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ. ಯಾರೇ ಹೇಳಿದರೂ ಚುನಾವಣೆಗೆ ನಿಲ್ಲೋದಿಲ್ಲ ಎಂದು ಅಫಜಲಪುರ ಕಾಂಗ್ರೆಸ್ ಪಕ್ಷದ ಶಾಸಕ ಎಂ.ವೈ. ಪಾಟೀಲ್ ಘೋಷಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲೇ ಸ್ಪರ್ಧಿಸದಿರಲು ಹಿಂದೇಟು ಹಾಕಿದ್ದೇ, ಆದರೆ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿಎಂ ಸಿದ್ದರಾಮಯ್ಯ ಇದೊಂದು ಸಲ ಸ್ಪರ್ಧಿಸಿ ಎಂದು ಹೇಳಿದ್ದರಿಂದ ಅನಿವಾರ್ಯ ವಾಗಿ ಸ್ಪರ್ಧಿಸಿದೆ. ಆದರೆ ಮುಂಬರುವ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಯುವಕರಿಗೆ ಸ್ಥಾನ ಬಿಟ್ಟು ಕೊಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಈಗ ಮಾಲೀಕಯ್ಯ ಗುತ್ತೇದಾರ ಕಾಂಗ್ರೆಸ್ ಬಂದಿರುವುದು ಸಂತಸ ತಂದಿದೆ. ಯಾವುದೋ ಕಾರಣಕ್ಕೆ ಪಕ್ಷ ಬಿಟ್ಟು ಹೋಗಿದ್ದರು. ಈಗ ಮರಳಿ ಬಂದಿದ್ದಾರೆ. ದೊಡ್ಡ ಶಕ್ತಿಯಾಗಿದೆ ಎಂದರು.
2019 ಚುನಾವಣೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಅಫಜಲಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಗೆ ಆಶೀರ್ವಾದ ಮಾಡಲಿಲ್ಲ. ಹೀಗಾಗಿ ಸೋಲಿಲ್ಲದ ಸರದಾರ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಿನ್ನಡೆ ಆಯಿತು. ಹೀಗಾಗಿ ತಾವು ತಲೆ ಎತ್ತಿ ತಿರುಗಾಡದಂತಾಗಿದೆ. ನಾನು ಬೀದಿಗೆ ಬಿದ್ದಾಗ ಡಾ. ಖರ್ಗೆ ಶಾಸಕರಾಗಿ ಮಾಡಿದ್ದಾರೆ. ಶಿರಸಾಸ್ಟಾಗ ನಮಸ್ಕಾರ ಹಾಕಿ ವಿನಂತಿಸುತ್ತೇನೆ. ಇದು ಕೊನೆ ಚುನಾವಣೆ. ಹೀಗಾಗಿ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಕೈ ಹಿಡಿದು ಎಬ್ಬಿಸಬೇಕೆಂದರು.
ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಮಹಾತ್ಮಗಾಂಧಿ ಕುಳಿತ ಸ್ಥಳದಲ್ಲಿ ಕುಳಿತ್ತಿದ್ದಾರೆ. ಈಗ ಕಲಬುರಗಿಯಲ್ಲಿ ಕಾಂಗ್ರೆಸ್ ಗೆಲ್ಲಿಸಿ ಮುಖಾಂತರ ಏಲ್ಲಿ ಕಳೆದಿದೆಯೋ ಅಲ್ಲೇ ಹುಡುಕುತ್ತೇವೆ. ರಾಧಾಕೃಷ್ಣ ಅವರು ಅನೇಕ ಕೆಲಸ ಕಾರ್ಯ ಮಾಡಿದ್ದಾರೆ. ಬೀದರ್ ದಿಂದ ಈ ಹಿಂದೆ ಸ್ಪರ್ಧಿಸುವ ಅವಕಾಶ ಇದ್ದರೂ ನಿಲ್ಲಲಿಲ್ಲ. ಡಾ.ಖರ್ಗೆ – ರಾಧಾಕೃಷ್ಣ ಇಬ್ಬರಲ್ಲಿ ಒಬ್ಬರೂ ನಿಲ್ಲುವ ಅನಿವಾರ್ಯ ಇತ್ತು. ಡಾ. ಖರ್ಗೆ ಅವರು ದೇಶ ಸುತ್ತಿ ಪಕ್ಷ ಸಂಘಟಿಸುವ ಜವಾಬ್ದಾರಿ ಇರೋದ್ರಿಂದ. ಸ್ಪರ್ಧಿಸಲಿಲ್ಲ ಎಂದರು.
ಬದುಕು ಕೊಟ್ಟಂತಹ 371 ಜೆ ವಿಧಿ ಜಾರಿಗೆ ತಂದಂತಹ ಹಾಗೂ ಉದ್ಯೋಗಾವಕಾಶ ದೊರಕಿ ಜನ ಕೈ ಹಿಡಿಯಲಿಲ್ಲ ಬೇಸರ ಉಂಟು ಮಾಡಿದೆ. ಈ ಸಲ ಹಾಗೆ ಮಾಡುವುದಿಲ್ಲ. ಕೈ ಹಿಡಿದೇ ಹಿಡಿಯುತ್ತಾರೆಂಬ ಆತ್ಮಸಾಕ್ಷಿ ಹೇಳುತ್ತಿದೆ ಎಂದರು.
ಕೊನೆ ಚುನಾವಣೆ ಅಲ್ಲ: ಇದೇ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಈಗ ತಾವು ಕಾಂಗ್ರೆಸ್ ಸೇರಿದ್ದರಿಂದ ಕಾರ್ಯಕರ್ತರ ಸಮ್ಮೀಲನ ಸಹ ಆಗಿದೆ. ಆದರೆ ತಮ್ಮದು ಕೊನೆ ಚುನಾವಣೆಯಲ್ಲ. ಬಿಜೆಪಿ ಗೆ ತಕ್ಕಪಾಠ ಕಲಿಸಲು ಜೀವಂತ ಇರುತ್ತೇನೆ ಎಂದು ಗುಡುಗಿದರು.
ಅದೇ ರೀತಿ ಎಐಸಿಸಿ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ. ಜೀವ ಇರೋವರೆಗೂ ರಾಜಕೀಯ ಮಾಡುತ್ತೇನೆ ಎಂದು ಘೋಷಿಸಿದರಲ್ಲದೇ ಚುನಾವಣೆಯಲ್ಲಿ ಮತ ಹಾಕದಿದ್ದರೂ ಪರ್ವಾಗಿಲ್ಲ. ಆದರೆ ಸತ್ತಾಗ ಮಣ್ಣಿಗಾದರೂ ಬನ್ನಿ ಎಂದು ಭಾವನಾತ್ಮಕವಾಗಿ ನುಡಿದರು. ಸಿಎಂ ಸಿದ್ದರಾಮಯ್ಯ ಸೇರಿ ಇತರರು ಹಾಜರಿದ್ದರು.
ಇದನ್ನೂ ಓದಿ: Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.