![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, May 12, 2024, 11:43 PM IST
ಹೊಸದಿಲ್ಲಿ: ರಾಹುಲ್ ಗಾಂಧಿ ಅವರ ಜತೆಗೆ ಬಹಿರಂಗ ಚರ್ಚೆ ನಡೆಸುವ ಆಹ್ವಾನವನ್ನು ಒಪ್ಪಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇನ್ನೂ ಧೈರ್ಯ ಮಾಡಿಯೇ ಇಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಬಹಿರಂಗ ಚರ್ಚೆಗೆ ನೀಡಲಾಗಿದ್ದ ಆಹ್ವಾನವನ್ನು ರಾಹುಲ್ ಗಾಂಧಿ ಸ್ವೀಕರಿಸಿ 1 ದಿನ ಕಳೆದಿದೆ. ಆದರೆ 56 ಇಂಚಿನ ಎದೆಯ ವ್ಯಕ್ತಿ ಮಾತ್ರ ಆಹ್ವಾನ ಸ್ವೀಕರಿಸಿಲ್ಲ. ಟಿ.ವಿ. ಚಾನೆಲ್‌ಗಳಿಗೆ ಮೋದಿ ನೀಡುವ ಸಂದರ್ಶನಗಳೆ ಲ್ಲವೂ ಬರೀ ನಾಟಕಗಳು. ದೇಶದ ಸಮಸ್ಯೆಗಳ ಬಗ್ಗೆ ಅವರಿಗೆ ಕೇಳುವ ಎಲ್ಲ ಪ್ರಶ್ನೆಗಳು, ಉತ್ತರಗಳೆಲ್ಲವೂ ಪೂರ್ವ ನಿರ್ಧರಿತ. ಇಲ್ಲಿಯವರೆಗೆ ಮಾಧ್ಯಮಗಳು ಮೋದಿಯನ್ನು ಏಕಾಏಕಿ ಪ್ರಶ್ನೆ ಮಾಡಿದ್ದೇ ಇಲ್ಲ ಎಂದಿದ್ದಾರೆ.
ರಾಹುಲ್ “ಇಂಡಿಯಾ’ ಕೂಟದ ಪ್ರಧಾನಿ ಅಭ್ಯರ್ಥಿಯೇ?
ಪ್ರಸಕ್ತ ಸಾಲಿನ ಚುನಾವಣೆಗೆ ಸಂಬಂಧಿ ಸಿದಂತೆ ಪ್ರಧಾನಿ ಜತೆಗೆ ರಾಹುಲ್ ಗಾಂಧಿ ಚರ್ಚೆ ನಡೆಸಬಹುದು ಎಂಬ ಸಲಹೆಯನ್ನು ಒಪ್ಪಿಕೊಂಡ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರನ್ನು ಕೇಂದ್ರ ಸಚಿವೆ ಸ್ಮತಿ ಇರಾನಿ ಟೀಕಿಸಿ ದ್ದಾರೆ. ರಾಹುಲ್ ಗಾಂಧಿಯ ವರೇನು ಇಂಡಿಯಾ ಒಕ್ಕೂ ಟದ ಪ್ರಧಾನಿ ಅಭ್ಯ ರ್ಥಿಯೇ? ಅಮೇಠಿಯಲ್ಲೇ ಸಾಮಾನ್ಯ ಬಿಜೆಪಿ ಕಾರ್ಯಕರ್ತನ ಎದುರು ಸ್ಪರ್ಧಿಸಲೂ ರಾಹುಲ್ ಅಂಜುತ್ತಾರೆ. ಇಷ್ಟು ಮಾತ್ರವಲ್ಲದೆ ವಯನಾಡ್ ಸಂಸದ ರಾಹುಲ್ ಗಾಂಧಿಯವರಿಗೆ ಪ್ರಧಾನಿ ಎದುರಾಗಿ ಮಾತನಾಡುವಷ್ಟು ತಿಳಿವಳಿಕೆ ಇದೆಯೇ ಎಂದು ಸಚಿವೆ ಸ್ಮತಿ ಇರಾನಿ ಪ್ರಶ್ನಿಸಿದ್ದಾರೆ.
ಮೋದಿ ಗೆದ್ದರೆ ದಲಿತರು ಸೇವಕರಾಗಬೇಕಾಗುತ್ತದೆ: ಖರ್ಗೆ
ಮುಂಬಯಿ: “ದೇಶದ ಆಡಳಿತವನ್ನು ಮೂರನೇ ಬಾರಿಯೂ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೈಗಿಟ್ಟರೆ ಆ ಇಬ್ಬರೂ ಸೇರಿ ಬಡವರು, ದಲಿತರು ಮತ್ತು ಬುಡಕಟ್ಟು ಜನಂಗಾದವರನ್ನು ಸೇವಕರಂತೆ ನಡೆಸಿಕೊಳ್ಳುತ್ತಾರೆ’ ಹೀಗೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಮಹಾರಾಷ್ಟ್ರದ ಧುಲೆಯಲ್ಲಿ ಚುನಾವಣ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, “ಸ್ವಾತಂತ್ರ್ಯಕ್ಕೂ ಮುನ್ನ ದಲಿತರು, ದಮನಿತ ರನ್ನು ಸೇವಕರಂತೆ ನಡೆಸಿಕೊಳ್ಳಲಾಗುತ್ತಿತ್ತು. ನೀವೇ ನಾದರೂ 3ನೇ ಅವಧಿಯ ಅಧಿಕಾರವನ್ನೂ ಕೊಟ್ಟರೆ ಅದೇ ಪರಿಸ್ಥಿತಿ ಮರಳಲಿದೆ. ಅಲ್ಲದೆ ನೀವು ನಿಮ ಗಾಗಿ ನಿಮ್ಮವರಿಗಾಗಿ ಈ ಬಾರಿ ಮತದಾನ ಮಾಡ ಬೇಕಿದೆ. ಸಂವಿಧಾನ ಇಲ್ಲದಿದ್ದರೆ ನಿಮ್ಮನ್ನು ರಕ್ಷಿಸಲೂ ಯಾರೂ ಇರುವುದಿಲ್ಲ ಎಂದು ಹೇಳಿದ್ದಾರೆ.
Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ
Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್ ಗೋಪಿ!
Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ
LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ
Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.