Modi ಮತ್ತೆ ಪ್ರಧಾನಿ ಆಗುವುದಿಲ್ಲ: ವಾರಾಣಸಿಯಲ್ಲಿ ರಾಹುಲ್ ಪ್ರಚಾರ
Team Udayavani, May 29, 2024, 6:00 AM IST
ವಾರಾಣಸಿ: ನರೇಂದ್ರ ಮೋದಿ ಅವರು ಮತ್ತೂಮ್ಮೆ ಪ್ರಧಾನಿಯಾಗುವುದಿಲ್ಲ. ಇದು ಗ್ಯಾರಂಟಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ಪ್ರಧಾನಿ ಮೋದಿ ಲೋಕಸಭಾ ಕ್ಷೇತ್ರ ವಾರಾಣಸಿ ಯಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲ್ಲಿ ನಡೆಯುತ್ತಿರುವ ಸ್ಪರ್ಧೆ ಪ್ರಧಾನಿ ಅಭ್ಯರ್ಥಿ ಮತ್ತು ಅಜಯ್ ರಾಯ್ ನಡುವೆ ಅಲ್ಲ. ಏಕೆಂದರೆ ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ. ಅಜಯ್ ರಾಯ್ ಇಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದರು.
ಅದಾನಿಗೆ ಸಹಾಯ ಮಾಡಲು ಮೋದಿ ಬಂದಿದ್ದಾರೆ: ನನ್ನನ್ನು ದೇವರು ಕಳುಹಿಸಿದ್ದಾರೆ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಹುಲ್, ಅದಾನಿಗೆ ಸಹಾಯ ಮಾಡುವುದಕ್ಕಾಗಿ ದೇವರು ಮೋದಿಯನ್ನು ಕಳುಹಿಸಿದ್ದಾನೆ. ಬಡವರಿಗೆ ಸಹಾಯ ಮಾಡಲು ಅಲ್ಲ. ಈ ಚುನಾವಣೆ ಯಾವುದೇ ಸಿದ್ಧಾಂತಗಳ ನಡುವಿನ ಹೊರಾಟವಲ್ಲ. ಇದು ಸಂವಿಧಾನವನ್ನು ಉಳಿಸಲು ಹೋರಾಡು ತ್ತಿರುವ ಇಂಡಿಯಾ ಒಕ್ಕೂಟ ಹಾಗೂ ಅದನ್ನು ನಾಶ ಮಾಡಲು ಹೊರಟಿರುವವರ ನಡುವಿನ ಹೋರಾಟ ಎಂದು ಹೇಳಿದರು.
ದಲಿತರು ಈ ದೇಶದಲ್ಲಿ ದೌರ್ಜನ್ಯಕ್ಕೆ ತುತ್ತಾಗಿದ್ದರು. ಸಂವಿಧಾನ ಅವರಿಗೆ ಗೌರವವನ್ನು ಒದಗಿಸಿಕೊಟ್ಟಿತು. ಇಂತಹ ಸಂವಿಧಾನವನ್ನು ನಾಶ ಮಾಡಲು ಯಾರಿಗೂ ಶಕ್ತಿ ಇಲ್ಲ. ಹೃದಯ, ಜೀವನ ಮತ್ತು ರಕ್ತವನ್ನು ಒತ್ತೆ ಇಟ್ಟಾದರೂ ಇಂಡಿಯಾ ಒಕ್ಕೂಟ ಸಂವಿಧಾನವನ್ನು ರಕ್ಷಣೆ ಮಾಡುತ್ತದೆ ಎಂದು ಭರವಸೆ ನೀಡಿದರು.
ಅಖೀಲೇಶ್ ಜತೆ ರ್‍ಯಾಲಿ: ಉತ್ತರ ಪ್ರದೇಶದಲ್ಲಿ ಸಮಾಜ ವಾದಿ ಪಕ್ಷದ ನಾಯಕ ಅಖೀಲೇಶ್ ಯಾದವ್ ಜತೆ ಸೇರಿ ರಾಹುಲ್ ರ್‍ಯಾಲಿ ನಡೆಸಿದರು. ಈ ಬಾರಿ ಕಾಂಗ್ರೆಸ್ ಕೈ ಸಮಾಜವಾದಿ ಪಕ್ಷದ ಸೈಕಲನ್ನು ಹಿಡಿದಿದೆ. ಈ ಮೂಲಕ ಉತ್ತರ ಪ್ರದೇಶದಲ್ಲಿ ಕ್ಲೀನ್ ಸ್ವೀಪ್ ಮಾಡಲಿದ್ದೇವೆ ಎಂದು ಹೇಳಿದರು.
ಅಧಿಕಾರದಲ್ಲೇ ಇರಲು ಧರ್ಮ ಬಳಸುವ ಪಿಎಂ: ಪ್ರಿಯಾಂಕಾ ಆರೋಪ
ಉನಾ: ಅಧಿಕಾರದಲ್ಲಿ ಮುಂದುವರಿಯಲು ಧರ್ಮದ ಹೆಸರಲ್ಲಿ ಜನರನ್ನು ತಪ್ಪುದಾರಿಗೆಳೆಯುತ್ತಿ ರುವ ಪ್ರಧಾನಿ ಮೋದಿ “ಜನವಿರೋಧಿ’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರಾ ಆರೋಪಿಸಿ ದ್ದಾರೆ. ಹಿಮಾಚಲ ಪ್ರದೇಶದಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿ, ಮೋದಿ ಹಿಮಾ ಚಲ ಪ್ರದೇಶದ ಜನರನ್ನು ಕಡೆಗಣಿಸಿದ್ದಾರೆ. ಕಳೆದ ವರ್ಷ ಮಳೆ ಸಂತ್ರಸ್ತರಿಗೆ ಒಂದು ರೂಪಾಯಿಯನ್ನೂ ಪರಿಹಾರ ನೀಡಿಲ್ಲ. ಹಿಂದೂ ಧರ್ಮ ನಮಗೆ ಪ್ರಾಮಾಣಿಕ ಜೀವನ ನಡೆಸುವುದನ್ನು ಕಲಿಸಿದೆ. ಅದೇ ಧರ್ಮದ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಕೇಂದ್ರ ಸರಕಾರ ರಾಜ್ಯದಲ್ಲಿ ಮಳೆಯಿಂದಾದ ದುರಂತಕ್ಕೆ ಪರಿಹಾರ ನೀಡುವ ಬದಲಾಗಿ ರಾಜ್ಯದಲ್ಲಿ ರುವ ಕಾಂಗ್ರೆಸ್ ಸರಕಾರವನ್ನು ಉರುಳಿಸುವ ಪ್ರಯತ್ನದಲ್ಲಿದೆ ಎಂದು ಹರಿಹಾಯ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ
Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್ ಗೋಪಿ!
Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ
LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ
Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.