Mr. Bond..!; ಪ್ರಧಾನಿ ಮೋದಿಗೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ ಸ್ವಾಗತ!
ಪ್ರಧಾನಿಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟ ಸಚಿವ..
Team Udayavani, Mar 15, 2024, 10:12 PM IST
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕಲಬುರಗಿಯಲ್ಲಿ ಬೃಹತ್ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗಿಯಾಗಲು ಆಗಮಿಸುತ್ತಿದ್ದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಗಿ ಸ್ವಾಗತಿಸಿ ಕೆಲವು ಪ್ರಶ್ನೆಗಳನ್ನು ಎಕ್ಸ್ ಪೋಸ್ಟ್ ಮೂಲಕ ಕೇಳಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ,”ಮಿಸ್ಟರ್ ಬಾಂಡ್ ನರೇಂದ್ರ ಮೋದಿ ಅವರಿಗೆ ಕಲಬುರಗಿಗೆ ಆತ್ಮೀಯ ಸ್ವಾಗತ. ಕಲಬುರಗಿ ಜನತೆಯ ಕೆಲವು ಪ್ರಶ್ನೆಗಳಿಗೆ ನಾಳೆ ಉತ್ತರಿಸುವ ನಿರೀಕ್ಷೆಯಿದೆ. ಕರ್ನಾಟಕದಲ್ಲಿ MGNREGA ಕಾರ್ಮಿಕರ ವೇತನ ಪಾವತಿಯನ್ನು ಕೇಂದ್ರ ಸರ್ಕಾರ ಏಕೆ ಬಿಡುಗಡೆ ಮಾಡುತ್ತಿಲ್ಲ? ಮೋದಿ ಸರ್ಕಾರ ದಿವಾಳಿಯಾಗಿದೆಯೇ?, ಕರ್ನಾಟಕದಲ್ಲಿ ಭೀಕರ ಬರ ಕಾಡುತ್ತಿದ್ದರೂ ಮೋದಿ ಸರ್ಕಾರ ಎನ್‌ಡಿಆರ್‌ಎಫ್ ಹಣ ಬಿಡುಗಡೆ ಮಾಡುತ್ತಿಲ್ಲ ಏಕೆ? ಬಿಜೆಪಿ ಹಿಂದಿನ ಚುನಾವಣೆಗಳಲ್ಲಿ ನೀಡಿದ ಭರವಸೆಯಂತೆ ನೀವು ಯಾವಾಗ ಕೋಲಿ ಮತ್ತು ಗೊಂಡ ಕುರುಬ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಸೇರಿಸುತ್ತೀರಿ? ಮಲ್ಲಿಕಾರ್ಜುನ ಖರ್ಗೆ ಅವರು ಅನುಮೋದಿಸಿದ ಕಲಬುರ್ಗಿ ರೈಲ್ವೆ ವಿಭಾಗವನ್ನು ನಿಮ್ಮ ಸರ್ಕಾರ ಏಕೆ ಕೈಬಿಟ್ಟಿದೆ? ಕಲಬುರಗಿಯಲ್ಲಿ ರಾಷ್ಟ್ರೀಯ ಹೂಡಿಕೆ ತಯಾರಿಕಾ ವಲಯವನ್ನು ನಿಮ್ಮ ಸರ್ಕಾರ ಕೈಬಿಟ್ಟಿದ್ದು ಏಕೆ? ಕಲಬುರಗಿ ಒಆರ್‌ಆರ್‌ಗೆ ಏಕೆ ಅನುದಾನ ನೀಡಿಲ್ಲ? #ಮೋದಿಮೋಸ” ಎಂದು ಸರಣಿ ಪ್ರಶ್ನೆಗಳನ್ನು ಪೋಸ್ಟ್ ಮಾಡಿದ್ದಾರೆ.
Warm welcome to Mr. Bond, PM @narendramodi to Kalaburagi.
A few questions the people of Kalaburgi expect you to answer tomorrow.
– Why is Union Govt not releasing the wage payments of MGNREGA labourers in Karnataka? Is the Modi Sarkar bankrupt?
– Why is Modi Sarkar not…
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) March 15, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ
Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್ ಗೋಪಿ!
Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ
LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ
Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.