Nomination; ವಾರಾಣಸಿಯಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ
ಕಾಶಿಯೇ ವಿಶೇಷ... ಇಲ್ಲಿನ ಜನರ ಪ್ರೀತಿ, ವಾತ್ಸಲ್ಯ ನಂಬಲಸಾಧ್ಯ! ಎಂದ ಪ್ರಧಾನಿ
Team Udayavani, May 13, 2024, 8:42 PM IST
ವಾರಾಣಸಿ : ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ನಾಳೆ ಮಂಗಳವಾರ ಬೆಳಗ್ಗೆ ನಾಮಪತ್ರ ಸಲ್ಲಿಸಲಿದ್ದಾರೆ. ಉಮೇದುವಾರಿಕೆ ಸಲ್ಲಿಸುವ ಮುನ್ನ ಸೋಮವಾರ ಸಂಜೆ ಭರ್ಜರಿ ರೋಡ್ ಶೋ ನಡೆಸಿ ಮತದಾರರಲ್ಲಿ ಹೊಸ ಸಂಚಲನ ಮೂಡಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ಲಕ್ಷಾಂತರ ಜನರು ಜಮಾಯಿಸಿ ಪ್ರಧಾನಿ ಮೋದಿ ಅವರಿಗೆ ಜೈಕಾರ ಹಾಕಿದರು.
ಕೇಸರಿಮಯವಾಗಿದ್ದ ವಾರಾಣಸಿಯಲ್ಲಿ ಜೈ ಶ್ರೀರಾಮ್, ಮೋದಿ ಕಿ ಹ್ಯಾಟ್ರಿಕ್ ಘೋಷಣೆ ಗಳು ಮೊಳಗಿದವು. ಪ್ರಧಾನಿ ಮೋದಿ ಮೂರನೇ ಬಾರಿ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವುದು ವಿಶೇಷವಾಗಿದೆ.
ಲಂಕಾ ಚೌಕ್ ನಿಂದ ಆರಂಭವಾದ ರೋಡ್ ಶೋನಲ್ಲಿ ಪ್ರಚಾರ ವಾಹನದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಉಪಸ್ಥಿತರಿದ್ದರು.
6 ಕಿಲೋ ಮೀಟರ್ ಉದ್ದಕ್ಕೆ ನಡೆದ ರೋಡ್ ಶೋ ಕಣ್ತುಂಬಿಕೊಳ್ಳಲು ವಾರಾಣಸಿ ಲೋಕ ಸಭಾ ಕ್ಷೇತ್ರದ ಮೂಲೆ ಮೂಲೆಯ ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲದೆ ಸಾರ್ವಜನಿಕರೂ ಆಗಮಿಸಿದ್ದರು. ”ಕಾಶಿಯೇ ವಿಶೇಷ… ಇಲ್ಲಿನ ಜನರ ಪ್ರೀತಿ, ವಾತ್ಸಲ್ಯ ನಂಬಲಸಾಧ್ಯ!” ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್ ಮಾಡಿದ್ದಾರೆ.
#WATCH | Prime Minister Narendra Modi’s roadshow underway in Varanasi.
Uttar Pradesh CM Yogi Adityanath & state BJP president Bhupendra Singh Chaudhary present during the roadshow. pic.twitter.com/ZM39cFhZ6x
— ANI (@ANI) May 13, 2024
ಗಂಗಾ ಸ್ನಾನ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಳಗ್ಗೆ 11.40 ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ.
ರೋಡ್ ಶೋ ಹೈಲೈಟ್
ಪ್ರಧಾನಿ ರೋಡ್ ಶೋಗಾಗಿ 11 ವಿಭಾಗ ಮಾಡಲಾಗಿತ್ತು.
11 ವಿಭಾಗಗಳ 100 ಸ್ಥಳಗಳಲ್ಲಿ ಪ್ರಧಾನಿಯವರ ಸ್ವಾಗತಕ್ಕೆ ವಿಶೇಷ ವ್ಯವಸ್ಥೆ.
ಮರಾಠಿ, ಗುಜರಾತಿ, ಬಂಗಾಲಿ, ಮಹೇಶ್ವರಿ, ಮಾರವಾಡಿ, ತಮಿಳು ಮತ್ತು ಪಂಜಾಬಿಗಳು ಸೇರಿದಂತೆ ವಿವಿಧ ಸಮುದಾಯದ ಪ್ರತಿನಿಧಿಗಳು ಭಾಗಿ.
ಮದನ ಮೋಹನ್ ಮಾಳವೀಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೋಡ್ ಶೋ ಆರಂಭ.
ಲಂಕಾದ ಮಾಳವೀಯ ಚೌರಾಹದಿಂದ ರೋಡ್‌ಶೋ ಆರಂಭ. ಸಂತ ರವಿದಾಸ್ ಗೇಟ್, ಅಸ್ಸಿ, ಶಿವಲಾ, ಸೋನಾರ್‌ಪುರ, ಜಂಗಮಬಡಿ, ಗೋದೌಲಿಯಾ ಮೂಲಕ ಹಾಯ್ದು ಶ್ರೀ ಕಾಶಿ ವಿಶ್ವನಾಥ ಧಾಮ್‌ಗೆ ಆಗಮನ.
5,000 ಮಹಿಳೆಯರು ಕೇಸರಿ ಉಡುಗೆ ತೊಟ್ಟು ವಾಹನದ ಮುಂದೆ ನಡೆದು ಮಿಂಚಿದರು.
ಶೆಹನಾಯ್ ವಾದಕ ಬಿಸ್ಮಿಲಾ ಖಾನ್ ವಂಶಸ್ಥರಿಂದಲೂ ಪ್ರಧಾನಿ ಮೋದಿಗೆ ಸ್ವಾಗತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ
Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್ ಗೋಪಿ!
Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ
LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ
Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.