Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ
Team Udayavani, May 7, 2024, 10:31 AM IST
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಮೇ 7) ಗುಜರಾತ್‌ನ ಅಹ್ಮದಾಬಾದ್‌ನ ನಿಶಾನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮೂರನೇ ಹಂತದ ಲೋಕಸಭೆ ಚುನಾವಣೆಗೆ ಮತ ಚಲಾಯಿಸಿದರು. ನಿಶಾನ್ ಹೈಯರ್ ಸೆಕೆಂಡರಿ ಶಾಲೆ ತಲುಪಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿಯವರನ್ನು ಸ್ವಾಗತಿಸಿದರು.
ಬಿಳಿ ಕುರ್ತಾ-ಪೈಜಾಮ ಮತ್ತು ಕೇಸರಿ ಬಣ್ಣದ ಹಾಫ್ ಜಾಕೆಟ್ ಧರಿಸಿದ ಪ್ರಧಾನಿ ಮೋದಿ ಅಮಿತ್ ಶಾ ಅವರೊಂದಿಗೆ ಮತಗಟ್ಟೆಗೆ ತೆರಳಿದರು. ಈ ವೇಳೆ ದಾರಿಯುದ್ದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಿಂತಿದ್ದು ಮೋದಿ ಬರುತ್ತಿದ್ದಂತೆ ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಬಳಿಕ ಗುಜರಾತ್‌ನ ಅಹ್ಮದಾಬಾದ್‌ನ ನಿಶಾನ್ ಹೈಯರ್ ಸೆಕೆಂಡರಿ ಶಾಲೆಗೆ ತೆರಳಿ ಮತ ಚಲಾಯಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮನವಿ:
ಏತನ್ಮಧ್ಯೆ, ಅಹ್ಮದಾಬಾದ್‌ನ ನಿಶಾನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತಮ್ಮ ಮತಗಟ್ಟೆಗೆ ತೆರಳುವ ವೇಳೆ ಮತಗಟ್ಟೆಯ ಹೊರಗೆ ಮೋದಿ ಅವರು ಚಿಕ್ಕ ಬಾಲಕಿಯೊಂದಿಗೆ ಫೋಟೋ ತೆಗೆದರು. ಬಳಿಕ ಮಾತನಾಡಿದ ಅವರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸುತ್ತಿರುವ ದೇಶದ ಮತ್ತು ಗುಜರಾತ್‌ನ ಮತದಾರರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಅವರು ಹೇಳಿದರು. ಇಂದು ಮೂರನೇ ಹಂತದ ಮತದಾನವಾಗಿದ್ದು, ಇನ್ನೂ ನಾಲ್ಕು ಸುತ್ತಿನ ಮತದಾನ ಬಾಕಿ ಇದೆ. ಪ್ರಜಾಪ್ರಭುತ್ವದ ಈ ಮಹಾನ್ ಕಾರ್ಯದಲ್ಲಿ ಭಾಗವಹಿಸಿದ ಎಲ್ಲ ಜನರಿಗೆ ಅಭಿನಂದನೆಗೆ ಅರ್ಹರು ಎಂದು ಮೋದಿ ಹೇಳಿದರು. ಇಂದು ಗುಜರಾತ್‌ನಲ್ಲಿ ಮತ್ತು ದೇಶದ ಎಲ್ಲೆಲ್ಲಿ ಮತದಾನ ನಡೆಯುತ್ತದೋ ಅಲ್ಲೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಪ್ರಜಾಪ್ರಭುತ್ವದ ಈ ಹಬ್ಬವನ್ನು ಹಬ್ಬವಾಗಿ ಆಚರಿಸುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ಹೇಳಿದರು.
#WATCH | Prime Minister Narendra Modi casts his vote for #LokSabhaElections2024 at Nishan Higher Secondary School in Ahmedabad, Gujarat pic.twitter.com/i057pygTkJ
— ANI (@ANI) May 7, 2024
PM Narendra Modi and HM Amit Shah arrive at booth to cast their vote.
pic.twitter.com/TWrUDxAaAJ— News Arena India (@NewsArenaIndia) May 7, 2024
#WATCH | Prime Minister Narendra Modi shares a light-hearted moment with a child as he greets people after casting his vote at a polling booth in Ahmedabad, Gujarat #LokSabhaElections2024 pic.twitter.com/h1QI7l1dDD
— ANI (@ANI) May 7, 2024
#WATCH | PM Narendra Modi asks media personnel to take care of their health while covering #LokSabhaElection2024
“You should drink more water and it will be good for your health and will also give you energy…,” says PM Modi pic.twitter.com/mlW1Ez4HMI
— ANI (@ANI) May 7, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court: ಸರ್ಕಾರಿ ನೇಮಕ ಪ್ರಕ್ರಿಯೆ ನಡುವೆ ನಿಯಮ ಬದಲು ಸಲ್ಲದು
JPC ಅಧ್ಯಕ್ಷ ಪಾಲ್ ಕರ್ನಾಟಕ ಪ್ರವಾಸ ಏಕಪಕ್ಷೀಯ: ಅಸಾಸುದ್ದೀನ್ ಒವೈಸಿ
Maharashtra: ಉದ್ಧವ್ ಸೇನೆ ಪ್ರಣಾಳಿಕೆ: ಬಾಲಕರಿಗೂ ಉಚಿತ ಶಿಕ್ಷಣ!
Fight Terrorism: ಶೀಘ್ರವೇ ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ನೀತಿ ಬಿಡುಗಡೆ: ಅಮಿತ್ ಶಾ
Rahul Gandhi: ನಾನು ಉದ್ಯಮ ವಿರೋಧಿಯಲ್ಲ, ಏಕಸ್ವಾಮ್ಯದ ವಿರೋಧಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.