Raebareli:ಪುತ್ರ ರಾಹುಲ್‌ ಗಾಂಧಿ ಪರ ಪ್ರಚಾರಕ್ಕೆ ಸೋನಿಯಾ ಪ್ರವೇಶ!


Team Udayavani, May 18, 2024, 6:45 AM IST

1-wewewq

ಲಕ್ನೋ: “ನನ್ನ ಮಗನನ್ನು ನಿಮ್ಮ ಕೈಗೆ ಒಪ್ಪಿಸುತ್ತಿದ್ದೇನೆ. ಆತ ನಿಮ್ಮನ್ನು ಎಂದಿಗೂ ನಿರಾಸೆಗೊಳಿಸುವುದಿಲ್ಲ. ಅವ ನನ್ನೂ ನಿಮ್ಮವನೆಂದು ಪರಿಗಣಿಸಿ’ ಎಂದು ರಾಯ್‌ಬರೇಲಿ ಜನತೆಗೆ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮನವಿ ಮಾಡಿದ್ದಾರೆ.

ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸೋನಿಯಾ ಪ್ರಚಾರ ಕಣಕ್ಕೆ ಧುಮುಕಿದ್ದು, ಸ್ವಕ್ಷೇತ್ರ ರಾಯ್‌ಬರೇಲಿಯಲ್ಲಿ ಪುತ್ರನ ಪರ ಮತಯಾಚಿಸಿದ್ದಾರೆ. ಸಮಾಜವಾದಿ ಪಕ್ಷದ ಜತೆಗೆ ನಡೆಸಿದ ಜಂಟಿ ಚುನಾವಣ ಪ್ರಚಾರ ಸಭೆಯಲ್ಲಿ ಪುತ್ರ ರಾಹುಲ್‌ ಹಾಗೂ ಪುತ್ರಿ ಪ್ರಿಯಾಂಕಾ ವಾದ್ರಾರನ್ನು ಪಕ್ಕದಲ್ಲೇ ನಿಲ್ಲಿಸಿಕೊಂಡು ಸೋನಿಯಾ ಭಾಷಣ ಮಾಡಿದ್ದಾರೆ.

ಈ ವೇಳೆ ಭಾವುಕರಾಗಿ ಮಾತನಾಡಿರುವ ಅವರು “ನನಗೆ ದೊರೆತಿರುವ ಎಲ್ಲವನ್ನೂ ನೀಡಿದ್ದು ನೀವು! ರಾಯ್‌ಬರೇಲಿಯ ನನ್ನ ಸಹೋದರ-ಸಹೋದರಿ ಯರು ನನ್ನನ್ನು ಅವರ ಸ್ವಂತದವಳೆಂದು ಭಾವಿಸಿದ್ದಾರೆ. ಈಗ ನನ್ನ ಮಗನನ್ನೂ ನಿಮಗೆ ನೀಡುತ್ತಿದ್ದೇನೆ ಅವನನ್ನು ನಿಮ್ಮವನೆಂದು ಪರಿಗಣಿಸಿ ಆತ ಎಂದಿಗೂ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ’ ಎಂದಿದ್ದಾರೆ.

ಅಲ್ಲದೇ,” ಇಂದಿರಾ ಗಾಂಧಿ ಹಾಗೂ ರಾಯ್‌ಬರೇಲಿ ಕ್ಷೇತ್ರದ ಜನರು ನನಗೆ ಏನು ಕಲಿಸಿದ್ದರೋ ಅದೇ ಪಾಠಗಳನ್ನು ನಾನು ರಾಹುಲ್‌, ಪ್ರಿಯಾಂಕಾಗೆ ಕಲಿಸಿದ್ದೇನೆ. ಎಲ್ಲರನ್ನೂ ಗೌರವಿಸಿ, ದುರ್ಬಲರನ್ನು ರಕ್ಷಿಸಿ, ಅನ್ಯಾಯದ ವಿರುದ್ಧ ಹೋರಾಡಿ, ಜನರಿಗೆ ನ್ಯಾಯ ದೊರಕಿಸಿಕೊಡಿ, ಹೆದರದಿರಿ ಏಕೆಂದರೆ ನಿಮ್ಮ ಹೋರಾಟದ ಐತಿಹ್ಯ ದೀರ್ಘ‌ವಾದದ್ದು ಎಂಬುದನ್ನು ತಿಳಿಸಿದ್ದೇನೆ’ ಎಂದೂ ಸೋನಿಯಾ ಹೇಳಿದ್ದಾರೆ. ಇದೇ ವೇಳೆ, 20 ವರ್ಷಗಳ ಕಾಲ ನಿಮ್ಮ ಸಂಸದೆಯಾಗಿ ಸೇವೆ ಸಲ್ಲಿಸುವ ಅವಕಾಶವನ್ನು ನೀವು ನನಗೆ ಕೊಟ್ಟಿರುವಿರಿ. ಇದು ನನ್ನ ಜೀವನದ ಬಹುದೊಡ್ಡ ಆಸ್ತಿ. ನಿಮ್ಮೆಲ್ಲರಿಗೂ ನಾನು ಋಣಿ ಎಂದು ಸೋನಿಯಾ ಹೇಳಿದ್ದಾರೆ.

ರಾಯ್‌ಬರೇಲಿ, ಅಮೇಠಿಗೆ ಸಮಾನ ಪ್ರಾಶಸ್ತ್ಯ
ರಾಯ್‌ಬರೇಲಿಯಲ್ಲಿ ಸಂಸದನಾಗಿ ಆಯ್ಕೆ ಯಾದರೆ ಆ ಕ್ಷೇತ್ರದ ಅಭಿವೃದ್ಧಿ ಮಾತ್ರವಲ್ಲ, ಅಮೇಠಿಯ ಅಭಿವೃದ್ಧಿಗೂ ಸಮಾನ ಪ್ರಾಶಸ್ತ್ಯ ನೀಡುತ್ತೇನೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಅಮೇಠಿಯಲ್ಲಿ ರ್ಯಾಲಿ ನಡೆ ಸಿ ಮಾತನಾಡಿ, “ಸಂಸದನಾಗಿ ನಾನು ಆಯ್ಕೆ ಯಾದರೆ ರಾಯ್‌ಬರೇಲಿಯ ಅಭಿವೃದ್ಧಿಗೆ 10 ರೂ. ಖರ್ಚು ಮಾಡಿದರೆ, ಅಮೇಠಿಯ ಅಭಿವೃದ್ಧಿಗೂ ಅಷ್ಟೇ ವ್ಯಯಿಸುತ್ತೇನೆ. ಇದು ನನ್ನ ವಾಗ್ಧಾನ’ ಎಂದಿದ್ದಾರೆ.

ಮೋದಿಯಿಂದ ಏನು ಬೇಕಾದರೂ ಹೇಳಿಸಬಲ್ಲೆ: ರಾಹುಲ್‌ ಲೇವಡಿ

ಲಕ್ನೋ: ಮೋದಿ ಅವರ ಬಾಯಿಂದ ನೀವು ಏನನ್ನು ಕೇಳ ಬಯಸುತ್ತೀರಿ ಹೇಳಿ, ಅದೆಲ್ಲವನ್ನೂ ನಾನು ಹೇಳಿಸಬಲ್ಲೆ ಎಂದು ರಾಹುಲ್‌ ಗಾಂಧಿ ಪ್ರಧಾನಿ ಮೋದಿ ಅವರನ್ನು ಲೇವಡಿ ಮಾಡಿದ್ದಾರೆ.

ರಾಯ್‌ಬರೇಲಿ ರ್ಯಾಲಿಯಲ್ಲಿ ಪ್ರಧಾನ ಮೋದಿ ವಿರುದ್ಧ ಚಾಟಿ ಬೀಸಿರುವ ರಾಹುಲ್‌, “ನಾನು ಅದಾನಿ-ಅಂಬಾನಿ ವಿಚಾರವನ್ನು ಮೋದಿ ಮಾತಾಡುತ್ತಿಲ್ಲ ಎಂದೆ, 2 ದಿನದಲ್ಲಿ ಅದನ್ನೇ ಮೋದಿ ಮಾತನಾಡಿದರು. ನಾನು ಬ್ಯಾಂಕ್‌ ಖಾತೆಗಳಿಗೆ ಫ‌ಟಾ-ಫ‌ಟ್‌ ಹಣ ಹಾಕುತ್ತೇವೆ ಎಂದೆ – ಮೋದಿ ಅದನ್ನೇ ಭಾಷಣದಲ್ಲಿ ಹೇಳಿದರು. ಹೇಳಿ ಮೋದಿ ಬಾಯಿಯಿಂದ ನೀವು ಏನು ಕೇಳಬಯಸುತ್ತೀರೋ ಅದನ್ನೇ ನಾನು ಹೇಳಿಸಬಲ್ಲ, ಹಾಗೆಯೇ ಏನು ಬೇಡವೋ ಅದನ್ನೂ ನಾನು ಸಾಧ್ಯವಾಗಿಸುತ್ತೇನೆ’ ಎಂದಿದ್ದಾರೆ.

ಪಿಎಂ ಹುದ್ದೆಗೆ ಅರ್ಹರಲ್ಲ ಎಂದು ಮೋದಿಗೆ ಗೊತ್ತಾಗಿದೆ: ಪ್ರಿಯಾಂಕಾ
ತಾವು ಪ್ರಧಾನಿ ಹುದ್ದೆಗೆ ಅರ್ಹರಲ್ಲ ಎಂಬುದು ಮೋದಿ ಅವ ರಿಗೆ ಈಗ ಅರಿವಾಗುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ಒಂದು ಕಡೆ ಹಿಂದೂ, ಮುಸ್ಲಿಂ ರಾಜಕಾರಣ ಮಾಡಿ ದರೆ, ಮತ್ತೂಂದೆಡೆ ಮುಸ್ಲಿಮರು ನಮ್ಮ ಮನೆ ಅಕ್ಕ ಪಕ್ಕದಲ್ಲಿದ್ದರು ಎನ್ನುತ್ತಾರೆ. ಇಂದಿರಾ ತಮ್ಮ ಹೇಳಿ ಕೆಗೆ ಸದಾ ಬದ್ಧರಾಗಿದ್ದರು. ಹಾಗೆಯೇ ಮೋದಿ ತಮ್ಮ ಮಾತಿಗೆ ಬದ್ಧ ಇರಬೇಕು ಎಂದರು.

ಟಾಪ್ ನ್ಯೂಸ್

Postponed UGC NET, CSIR NET exam date announced

NTA; ಮುಂದೂಡಲಾಗಿದ್ದ UGC NET, CSIR NET ಪರೀಕ್ಷಾ ದಿನಾಂಕ ಪ್ರಕಟ

7-thirthahalli

Thirthahalli: ಕಳ್ಳತನಕ್ಕೆ ಬಂದವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು !

1

Renukaswamy: ಕಿರುತೆರೆಯ ಕ್ರೈಮ್‌ ಶೋನಲ್ಲಿ ಪ್ರಸಾರವಾಗಲಿದೆ ರೇಣುಕಾಸ್ವಾಮಿ ಪ್ರಕರಣದ ಕಥೆ?

ಮಮತಾ ಬ್ಯಾನರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಂಗಾಳ ರಾಜ್ಯಪಾಲ

Defamation Case: ಮಮತಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಂಗಾಳ ರಾಜ್ಯಪಾಲ ಬೋಸ್

6-honnavar

Tata Steel ಅಖಿಲ ಭಾರತ ವಿಶೇಷ ಚೇತನರ ಚೆಸ್ ಟೂರ್ನಿ; ಹೊನ್ನಾವರದ ಸಮರ್ಥ ಚಾಂಪಿಯನ್

5-kushtagi

Kushtagi: ಕೋತಿ ದಾಳಿಗೆ ಊರಿನ 15 ಜನರಿಗೆ ಗಾಯ; ಕೋತಿ ಸೆರೆಹಿಡಿಯಲು ಮುಂದಾದ ಅರಣ್ಯ ಇಲಾಖೆ

Ballari: ವಾಲ್ಮೀಕಿ ನಿಗಮದ ಪ್ರಕರಣ… ಎರಡನೇ ದಿನವೂ ಮುಂದುವರೆದ ಬಿಜೆಪಿ ಪ್ರತಿಭಟನೆ

Ballari: ವಾಲ್ಮೀಕಿ ನಿಗಮದ ಪ್ರಕರಣ… ಎರಡನೇ ದಿನವೂ ಮುಂದುವರೆದ ಬಿಜೆಪಿ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ ಪಿಎಂ ಕಿಸಾನ್‌ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ

Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್‌ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ

Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್‌ ಗೋಪಿ!

Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್‌ ಗೋಪಿ!

1-sadsadasd

Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ

Sometimes governments topple in a single day…: Mamata gives big hint

LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ

Modi pays homage to Mahatma Gandhi and Vajpayee memorial before taking oath

Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

Postponed UGC NET, CSIR NET exam date announced

NTA; ಮುಂದೂಡಲಾಗಿದ್ದ UGC NET, CSIR NET ಪರೀಕ್ಷಾ ದಿನಾಂಕ ಪ್ರಕಟ

7-thirthahalli

Thirthahalli: ಕಳ್ಳತನಕ್ಕೆ ಬಂದವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು !

1

Renukaswamy: ಕಿರುತೆರೆಯ ಕ್ರೈಮ್‌ ಶೋನಲ್ಲಿ ಪ್ರಸಾರವಾಗಲಿದೆ ರೇಣುಕಾಸ್ವಾಮಿ ಪ್ರಕರಣದ ಕಥೆ?

ಮಮತಾ ಬ್ಯಾನರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಂಗಾಳ ರಾಜ್ಯಪಾಲ

Defamation Case: ಮಮತಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಂಗಾಳ ರಾಜ್ಯಪಾಲ ಬೋಸ್

6-honnavar

Tata Steel ಅಖಿಲ ಭಾರತ ವಿಶೇಷ ಚೇತನರ ಚೆಸ್ ಟೂರ್ನಿ; ಹೊನ್ನಾವರದ ಸಮರ್ಥ ಚಾಂಪಿಯನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.