Congress, SP ಗೆದ್ದರೆ ರಾಮ ಮಂದಿರ ಮೇಲೆ ಬುಲ್ಡೋಜರ್: ಮೋದಿ
Team Udayavani, May 18, 2024, 6:50 AM IST
ಬಾರಾಬಂಕಿ: ಕಾಂಗ್ರೆಸ್, ಎಸ್‌ಪಿ ಅಧಿಕಾರಕ್ಕೆ ಬಂದರೆ ರಾಮ ಮಂದಿರದ ಮೇಲೆ ಬಲ್ಡೋಜರ್ ಹರಿಸಲಿವೆ. ಆದರೆ, ಬುಲ್ಡೋಜರ್ ಎಲ್ಲಿ ಹರಿಸಬೇಕು ಎಂಬ ಕುರಿತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರಿಂದ ಕಲಿಯಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬಾರಾಬಂಕಿಯಲ್ಲಿ ಆಯೋಜಿಸಲಾಗಿದ್ದ ಚುನಾವಣ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ, ಅಸ್ಥಿರತೆಯನ್ನು ಸೃಷ್ಟಿಸು ವುದಕ್ಕಾಗಿ ಐಎನ್‌ಡಿಐಎ ಪಕ್ಷಗಳು ಕಚ್ಚಾಡುತ್ತಿವೆ. ಚುನಾವಣೆಯ ಬಳಿಕ ಈ ಒಕ್ಕೂಟವು ಇಸ್ಪೀಟ್ ಎಲೆಯಂತೆ ಉರುಳಲಿವೆ ಎಂದು ಹೇಳಿದರು.
3ನೇ ಬಾರಿಗೆ ಅಧಿಕಾರ ಹಿಡಿಯಲಿರುವ ಬಿಜೆಪಿಯು ಬಡವರು, ಯುವಕರು, ಮಹಿಳೆಯರು, ರೈತರಿಗಾಗಿ ಅತೀದೊಡ್ಡ ಯೋಜನೆಗಳನ್ನು ಜಾರಿ ಮಾಡಲಿದೆ. ಆ ಕಾರಣಕ್ಕಾಗಿ ನಿಮ್ಮ ಆಶೀರ್ವಾದ ಪಡೆಯಲು ಬಾರಾಬಂಕಿ ಮತ್ತು ಮೋಹನಲಾಲ್ ಗಂಜ್‌ಗೆ ಬಂದಿರುವೆ ಎಂದು ಹೇಳಿದರು.
ನಿಮಗೆ ಒಳ್ಳೆಯದನ್ನು ಬಯಸುವ, ಕೆಲಸ ಮಾಡುವ ಸಂಸದ ಬೇಕು. ನಮಗೆ ಪ್ರದೇಶ ಅಭಿವೃದ್ಧಿ ಮಾಡುವ ಸಂಸದರು ಬೇಕೇ ಹೊರತು 5 ವರ್ಷ ಕಾಲ ಮೋದಿಯನ್ನು ಬೈಯುವವರಲ್ಲ. ಇದಕ್ಕಾಗಿ ನಿಮಗೆ ಕಮಲವೊಂದೇ(ಬಿಜೆಪಿ ಚಿಹ್ನೆ) ಆಯ್ಕೆ ಯಾಗಿದೆ ಎಂದು ಮೋದಿ ಹೇಳಿದರು.
ರಾಜಕುಮಾರನಿಗೆ ಈಗ ಹೊಸ ಸೋದರತ್ತೆ: ಮೋದಿ
ಅಖೀಲೇಶ್ ವಿರುದ್ಧ ಹರಿಹಾಯ್ದ ಮೋದಿ, ಸಮಾಜವಾದಿ ರಾಜಕುಮಾರ (ಅಖೀಲೇಶ್) ನಿಗೆ ಹೊಸ ಬುವಾ(ಸೋದರತ್ತೆ) ಸಿಕ್ಕಿದ್ದಾರೆ. ಈ ಸೋದರತ್ತೆ ಪಶ್ಚಿಮ ಬಂಗಾಲದಲ್ಲಿದ್ದಾರೆ ಎಂದು ಲೇವಡಿ ಮಾಡಿದರು. ಈ ಮೊದಲು ಬಿಎಸ್‌ಪಿ ನಾಯಕಿ ಮಾಯವತಿಯನ್ನು ಅಖೀಲೇಶ್ ಯಾದವ್ ಅವರು ಬುವಾ ಎಂದು ಕರೆಯುತ್ತಿದ್ದರು.
ಆಗಲೇ ಕಾಂಗ್ರೆಸ್ ವಿಸರ್ಜನೆಯಾಗಿದ್ದರೆ ಒಳ್ಳೆಯದಿತ್ತು: ಮೋದಿ
ಮುಂಬಯಿ: ಕಾಂಗ್ರೆಸ್ ಸ್ವಾತಂತ್ರ್ಯಾ ನಂತರ ಅಂದ ರೆ 1947ರಲ್ಲೇ ವಿಸರ್ಜನೆಗೊಂಡಿದ್ದರೆ ಭಾರತ ಈಗ ಐದು ದಶಕಗಳಷ್ಟು ಮುಂದೆ ಇರುತ್ತಿತ್ತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಮುಂಬಯಿಯಲ್ಲಿ ನಡೆದ ಚುನಾವಣೆ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಭಾರತೀಯರ ಸಾಮರ್ಥ್ಯದ ಮೇಲೆ ವಿಶ್ವಾಸವಿಡದ ಸರಕಾರ ಅಸಮರ್ಥ. ಭಾರತೀಯರು ಸೋಮಾರಿಗಳೆಂದು ಕೆಂಪುಕೋಟೆಯ ಮೇಲೆ ಪ್ರಧಾನ ಮಂತ್ರಿಗಳು ಹೇಳಿರುವುದನ್ನು ನೋಡಿದ್ದೇನೆ. ಗಾಂಧೀಜಿಯವರ ನೇತೃತ್ವದಲ್ಲಿ ಅಂದೇ ಕಾಂಗ್ರೆಸ್ ವಿಸರ್ಜನೆಗೊಂಡಿದ್ದರೆ, ಭಾರತವು ಈಗ ಇರುವುದಕ್ಕಿಂತ 5 ದಶಕಗಳಷ್ಟು ಮುಂದೆ ಇರುತ್ತಿತ್ತು ಎಂದಿದ್ದಾರೆ. ಜತೆಗೆ, “2047ಕ್ಕೆ ಮೋದಿ 24×7′ ಎನ್ನುವುದು ಭಾರತದ ಅಭಿವೃದ್ಧಿಯ ಮಂತ್ರವಾಗಿದೆ ಎಂದು ಮೋದಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ
Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್ ಗೋಪಿ!
Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ
LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ
Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.