Hema Malini ವಿರುದ್ಧ ಕೀಳು ಮಟ್ಟದ ಟೀಕೆ: ಸುರ್ಜೆವಾಲಾ ವಿರುದ್ಧ ಬಿಜೆಪಿ ಆಕ್ರೋಶ
ಸುಳ್ಳನ್ನು ಹರಡುವ ಅಭ್ಯಾಸ ಬಿಜೆಪಿ ಹೊಂದಿದೆ ಎಂದ ಕಾಂಗ್ರೆಸ್ ನಾಯಕ
Team Udayavani, Apr 4, 2024, 5:22 PM IST
ಹೊಸದಿಲ್ಲಿ: ಪ್ರಖ್ಯಾತ ನಟಿ ಮತ್ತು ಮಥುರಾ ಬಿಜೆಪಿ ಸಂಸದೆ ಹೇಮಾ ಮಾಲಿನಿ ವಿರುದ್ಧ “ಕೀಳು ಮಟ್ಟದ”ವಿವಾದಾತ್ಮಕ ಟೀಕೆ ಮಾಡಿದ್ದಕ್ಕಾಗಿ ಕಾಂಗ್ರೆಸ್ ಸಂಸದ ರಣದೀಪ್ ಸುರ್ಜೇವಾಲಾ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ”ಇದು ರಾಹುಲ್ ಗಾಂಧಿ ಅವರ ಕಾಂಗ್ರೆಸ್ ಪಕ್ಷದ ಸ್ತ್ರೀದ್ವೇಷ ಮತ್ತು ಮಹಿಳೆಯರ ಕುರಿತು ಇರುವ ಅಸಹ್ಯಕರ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ” ಎಂದು ಹೇಳಿದೆ.
ಟೇಕೆಗಳ ಬಳಿಕ ಸುರ್ಜೇವಾಲಾ ಅವರು ತಮ್ಮ ಭಾಷಣದ ಆಯ್ದ ಭಾಗಗಳನ್ನು ಮಾತ್ರ ಬಿಜೆಪಿ ಐಟಿ ಸೆಲ್ ಹಂಚಿಕೊಂಡಿದೆ ಎಂದು ಹೇಳಿದ್ದು, “ಸತ್ಯ ತಿರುಚುವ ಮತ್ತು ಸುಳ್ಳನ್ನು ಹರಡುವ” ಅಭ್ಯಾಸವನ್ನು ಹೊಂದಿದೆ ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಬಿಜೆಪಿಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಹಿಮಾಚಲದಲ್ಲಿ ಇದನ್ನು “50 ಕೋಟಿ ಗರ್ಲ್ ಫ್ರೆಂಡ್” ಎಂದು ಏಕೆ ಕರೆಯಲಾಯಿತು? ಸಂಸದೆಯರನ್ನು ಸಂಸತ್ತಿನಲ್ಲಿ “ಶೂರ್ಪನಖಾ” ಎಂದು ಏಕೆ ಕರೆಯಲಾಯಿತು?, ಮಹಿಳಾ ಮುಖ್ಯಮಂತ್ರಿಯನ್ನು ಅಸಭ್ಯ ರೀತಿಯಲ್ಲಿ ಟ್ರೋಲ್ ಮಾಡಿದ್ದು ಏಕೆ?, “ಕಾಂಗ್ರೆಸ್‌ನ ವಿಧವೆ” ಎಂದು ಹೇಳುವುದು ಸರಿಯೇ?, ಕಾಂಗ್ರೆಸ್‌ನ ಉನ್ನತ ನಾಯಕತ್ವವನ್ನು “ಜೆರ್ಸಿ ಹಸು” ಎಂದು ಕರೆಯುವುದು ಸರಿಯೇ?, ಹಿಮಾಚಲದಲ್ಲಿ ಇದನ್ನು “50 ಕೋಟಿ ಗರ್ಲ್ ಫ್ರೆಂಡ್” ಎಂದು ಏಕೆ ಕರೆಯಲಾಯಿತು?” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹರಿಯಾಣ ಮಹಿಳಾ ಸಮಿತಿಯು ಸುರ್ಜೆವಾಲಾ ಅವರ ಹೇಳಿಕೆಗಳ ಮೇಲೆ ಏಪ್ರಿಲ್ 9 ಕ್ಕೆ ಅನ್ವಯವಾಗುವಂತೆ ಸಮನ್ಸ್ ನೀಡಿದೆ. ಹೇಮಾ ಮಾಲಿನಿಯವರು ಹೇಳಿಕೆಯ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿ ನಮ್ಮ ಪಕ್ಷವು ಇದನ್ನು ಪರಿಶೀಲಿಸುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ‘ಇದು ಹೇಮಾ ಮಾಲಿನಿಯವರಿಗೆ ಮಾತ್ರವಲ್ಲ, ಸಾಮಾನ್ಯ ಮಹಿಳೆಯರಿಗೂ ಅವಮಾನಕರವಾಗಿದೆ” ಎಂದು ಎಕ್ಸ್‌ನಲ್ಲಿ ದಿನಾಂಕವಿಲ್ಲದ ವೀಡಿಯೋವನ್ನು ಹಂಚಿಕೊಂಡ ನಂತರ ಸುರ್ಜೇವಾಲಾ ಅವರು ಬಿಜೆಪಿಯಿಂದ ಭಾರೀ ಟೀಕೆಗೆ ಗುರಿಯಾಗಿದ್ದಾರೆ ಹೇಮಾ ಮಾಲಿನಿ ಬಗ್ಗೆ ಸುರ್ಜೆವಾಲಾ ಕೆಲವು ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ.
Congress MP Randeep Surjewala makes a vile sexist comment, that is demeaning and derogatory, not just for Hema Malini, who is an accomplished individual, but women in general. He asks, “MLA/MP क्यों बनाते हैं? ताकि वो हमारी आवाज़ उठा सकें, हमारी बात मनवायें, इसीलिए बनाते होंगे।… pic.twitter.com/JO0UIXSOt1
— Amit Malviya (मोदी का परिवार) (@amitmalviya) April 3, 2024
”ಪ್ರೀತಿಯ ಅಂಗಡಿ ತೆರೆಯುವ ಮಾತು ಕೇಳಿ ಬಂದಿತ್ತು ಆದರೆ ಕಾಂಗ್ರೆಸ್ ದ್ವೇಷದ ಅಂಗಡಿ ತೆರೆದಿದೆ. ಮಹಿಳೆಯರ ಬಗ್ಗೆ ಕೀಳುಮಟ್ಟದ ದೃಷ್ಟಿಕೋನ ಹೊಂದಿರುವ ಕಾಂಗ್ರೆಸ್ ನಾಯಕರು ಅನಿವಾರ್ಯ ಸೋಲಿನ ಹತಾಶೆಯಲ್ಲಿ ದಿನದಿಂದ ದಿನಕ್ಕೆ ತಮ್ಮ ಚಾರಿತ್ರ್ಯ ಹದಗೆಡಿಸಿಕೊಳ್ಳು ತ್ತಿದ್ದಾರೆ” ಎಂದು ನಟಿ ಮತ್ತು ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ
Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್ ಗೋಪಿ!
Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ
LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ
Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.