![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Apr 18, 2024, 12:37 AM IST
ಕೋಲ್ಕತಾ: ಕೇಂದ್ರದಲ್ಲಿ “ಇಂಡಿಯಾ’ ಒಕ್ಕೂಟ ಅಧಿಕಾರಕ್ಕೆ ಬಂದರೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ರದ್ದು ಮಾಡುವ ಭರವಸೆಯನ್ನು ತೃಣಮೂಲ ಕಾಂಗ್ರೆಸ್ ಬುಧವಾರ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ತಿಳಿಸಿದೆ.
“ದಿಢೀರ್ ಶಪಥ್’ ಹೆಸರಿನ ಪ್ರಣಾಳಿಕೆಯಲ್ಲಿ ಶ್ರಮಿಕ ಕಾರ್ಡ್ ಹೊಂದಿರುವ ಕಾರ್ಮಿ ಕರಿಗೆ ಪ್ರತೀ ದಿನ 400 ರೂ. ದಿನಗೂಲಿ ನೀಡುವ ವಾಗ್ಧಾನ ಮಾಡಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ 10 ಉಚಿತ ಸಿಲಿಂಡರ್ ನೀಡುವ ವಾಗ್ಧಾನ ಮಾಡಿದೆ. ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬರಿಗೆ ಉಚಿತವಾಗಿ 5 ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ ಎಂದು ಪಕ್ಷ ಹೇಳಿಕೊಂಡಿದೆ. ಇದಲ್ಲದೆ, ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಜಾರಿಯನ್ನೂ ಟಿಎಂಸಿ ಹೇಳಿಕೊಂಡಿದೆ.
ಮೋದಿ ಮತ್ತೆ ಬಂದರೆ ದೇಶ ಮಾರುತ್ತಾರೆ: ಅಸ್ಸಾಂ ನಲ್ಲಿ ನಡೆದ ಚುನಾವಣೆ ರ್ಯಾಲಿಯಲ್ಲಿ ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ ಮತ್ತೆ ಆಯ್ಕೆಯಾದರೆ ದೇಶದಲ್ಲಿ ಪ್ರಜಾಪ್ರಭುತ್ವ ಇರುವುದೇ ಇಲ್ಲ, ಯಾವ ಚುನಾವಣೆಗಳೂ ನಡೆಯುವುದಿಲ್ಲ. ಮುಂದೆ ದೇಶವನ್ನು ಮಾರಿಯೇ ಬಿಡುತ್ತಾರೆ ಎಂದಿದ್ದಾರೆ.
ಭರವಸೆಗಳೇನು ?
ಸಿಎಎ ಕಾಯ್ದೆ ವಾಪಸಾತಿ, ಎನ್‌ಆರ್‌ಸಿ ರದ್ದು ಮತ್ತು ಯುಸಿಸಿ ಜಾರಿಗೆ ನಿರ್ಬಂಧ
ಶ್ರಮಿಕ ಕಾರ್ಡ್ ಹೊಂದಿರುವ ಕಾರ್ಮಿ ಕರಿಗೆ ದಿನಕ್ಕೆ 400 ರೂ.ಗಳ ದಿನಗೂಲಿ ಇರುವ 100 ದಿನಗಳ ಉದ್ಯೋಗ ಖಾತರಿ, ವೇತನ ಹೆಚ್ಚಳದ ಭರವಸೆ
ಎಲ್ಲ ಬಡ ಕುಟುಂಬಗಳಿಗೆ ಉಚಿತ ವಸತಿ ಸೌಲಭ್ಯ ಒದಗಿಸುವ ಜತೆಗೆ ಗೌರವಯುತ ಹಾಗೂ ಸುರಕ್ಷಿತ ನಿವಾಸಗಳನ್ನು ನಿರ್ಮಿಸಿಕೊಡುವ ಭರವಸೆ
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ವರ್ಷಕ್ಕೆ 10 ಉಚಿತ ಎಲ್‌ಪಿಜಿ ಸಿಲಿಂಡರ್
ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬರಿಗೂ ಮನೆ ಬಾಗಿಲಿಗೆ ಉಚಿತ ಪಡಿತರ, ಪ್ರತೀ ತಿಂಗಳು ಉಚಿತವಾಗಿ 5 ಕೆ.ಜಿ. ಅಕ್ಕಿ ವಿತರಣೆ
ಪ್ರಸಕ್ತವಿರುವ ಮಾಸಿಕ ವೃದ್ಧಾಪ್ಯ ವೇತನದಲ್ಲಿ 1,000 ರೂ. ಏರಿಕೆ
Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ
Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್ ಗೋಪಿ!
Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ
LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ
Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.