Maha Kumbh ; ಭಾರೀ ಸನ್ನದ್ಧತೆಯ ಹೊರತಾಗಿಯೂ ಅಮಾವಾಸ್ಯೆಯಂದು ನಡೆಯಿತು ದುರಂತ

ಸಿಎಂ ಯೋಗಿಗೆ ಕರೆ ಮಾಡಿದ ಪ್ರಧಾನಿ, ಅಮಿತ್ ಶಾ.. ಕೋಟ್ಯಂತರ ಭಕ್ತರು ಕಂಗಾಲು

Team Udayavani, Jan 29, 2025, 9:41 AM IST

1-kumbh

ಪ್ರಯಾಗ್ ರಾಜ್ : 144 ವರ್ಷಗಳಿಗೊಮ್ಮೆ ಮಾತ್ರ ಬರುವ ಮಾಹಾಕುಂಭಮೇಳಕ್ಕೆ ವಿಶ್ವದೆಲ್ಲೆಡೆಯಿಂದ ಕೋಟ್ಯಂತರ ಭಕ್ತರು ಉತ್ತರಪ್ರದೇಶದ ಪ್ರಯಾಗ್ ರಾಜ್ ಗೆ ಹರಿದು ಬರುತ್ತಿದ್ದು ಮೌನಿ ಅಮಾವಾಸ್ಯೆಯ(ಜ29) ಪುಣ್ಯಸ್ನಾನದ ದಿನ ಅನಿರೀಕ್ಷಿತ ಎಂಬಂತೆ ಕಾಲ್ತುಳಿತ ಸಂಭವಿಸಿದ್ದು ಪುಣ್ಯ ಸ್ನಾನಕ್ಕೆ ಬಂದ ಹಲವರು ಪ್ರಾಣ ಕಳೆದುಕೊಂಡಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದೇಶದ ವಿವಿಧೆಡೆಯಿಂದ ಬಂದಿದ್ದ ಭಕ್ತರು ರಾತ್ರಿಯಿಂದಲೇ ಪುಣ್ಯಸ್ನಾನಕ್ಕೆಂದು ನಿದ್ದೆ ಬಿಟ್ಟು ಕಾದು ನಿಂತಿದ್ದರು. ನಡುರಾತ್ರಿ ಕಳೆದ ಬಳಿಕ ಏಕಕಾಲಕ್ಕೆ ಬ್ಯಾರಿಕೇಡ್ ಗಳನ್ನು ತಳ್ಳಿ ತಾ ಮುಂದು ನಾ ಮುಂದು ಎಂದು ಲಕ್ಷೋಪ ಲಕ್ಷ ಸಂಖ್ಯೆಯ ಜನರು ಏಕಾಏಕಿ ನುಗ್ಗಿದ್ದರಿಂದ ಪೊಲೀಸರೂ ಪರಿಸ್ಥಿತಿ ನಿಯಂತ್ರಿಸಲು ಅಸಹಾಯಕರಾಗಬೇಕಾಗಿ ಬಂತು. ನಸುಕಿನ 2 ಗಂಟೆಯ ವೇಳೆ ಕಾಲ್ತುಳಿತ ಸಂಭವಿಸಿ ಪ್ರಾಣ ಹಾನಿ ಸಂಭವಿಸಿದೆ.ಅನೇಕರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು
ಮೊದಲೇ ಕೋಟ್ಯಂತರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದುದರಿಂದ ಸೇನಾ ಪಡೆ, ಹೆಚ್ಚುವರಿ ಪೊಲೀಸರು, ಅರೆ ಸೈನಿಕರು, ಅಗ್ನಿ ಶಾಮಕ ದಳದ ಸಿಬಂದಿಗಳನ್ನು ಸನ್ನದ್ಧವಾಗಿಡಲಾಗಿತ್ತು. ಎಷ್ಟೇ ಕ್ರಮಗಳನ್ನೂ ಕೈಗೊಂಡರು, ಸುವ್ಯವಸ್ಥೆಯ ಹೊರತಾಗಿಯೂ ಜನರು ಆತುರ ತೋರಿದ್ದರಿಂದ ಪ್ರಾಣ ಕಳೆದುಕೊಳ್ಳಬೇಕಾಗಿ ಬಂದಿದೆ ಎಂದು ಸ್ಥಳದಲ್ಲಿದ್ದ ಕನ್ನಡಿಗರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್ ಅವರು ನಾವು ಹತ್ತು ಕೋಟಿ ಜನರು ಆಗಮಿಸಿದರೆ ಸ್ನಾನಕ್ಕೆ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದ್ದರು. ಆದರೆ ಇಂದಿನ ಸಂಖ್ಯೆ ಅದಕ್ಕೂ ಮೀರಿತ್ತು ಎಂದು ವರದಿಯಾಗಿದೆ.

ಇಂದು(ಜ29) ಬೆಳಗ್ಗೆ 6 ಗಂಟೆಯವರೆಗೆ 1.75 ಕೋಟಿ ಜನರು ಪವಿತ್ರ ಸ್ನಾನ ಮಾಡಿದ್ದಾರೆ. ಉತ್ತರ ಪ್ರದೇಶ ಸರಕಾರದ ಮಾಹಿತಿ ಪ್ರಕಾರ ಜನವರಿ 28 ರವರೆಗೆ ಒಟ್ಟು 19.94 ಕೋಟಿ ಜನರು ಪವಿತ್ರ ಸ್ನಾನ ಮಾಡಿದ್ದಾರೆ.

ಸಿಎಂ ಯೋಗಿಗೆ ಪ್ರಧಾನಿ, ಶಾ ಕರೆ
ದುರಂತ ಸಂಭವಿಸಿದ ಬಳಿಕ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ , ಗ್ರಹ ಸಚಿವ ಅಮಿತ್ ಶಾ ಅವರು ಕರೆ ಮಾಡಿ ಪರಿಸ್ಥಿತಿಯ ವಿವರ ಪಡೆದಿದ್ದಾರೆ. ಕೇಂದ್ರ ಸರಕಾರದಿಂದ ಸಕಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಸ್ಥಳಕ್ಕೆ ಇನ್ನಷ್ಟು ರಕ್ಷಣ ತಂಡಗಳು
ಈಗಾಗಲೇ ಸ್ಥಳದಲ್ಲಿ ಭಾರಿ ಸಂಖ್ಯೆಯ ಭದ್ರತಾ ಪಡೆಗಳನ್ನೂ ನಿಯೋಜಿಸಲಾಗಿದ್ದು, ದುರ್ಘಟನೆ ನಡೆದ ಬಳಿಕ ಹೆಚ್ಚುವರಿ ಸಂಖ್ಯೆಯ ಪೊಲೀಸರನ್ನು ,ಹೆಲಿಕ್ಯಾಪ್ಟರ್ ಗಳನ್ನು, ಭದ್ರತಾ ಸಿಬಂದಿಗಳನ್ನು ಕಳುಹಿಸಲಾಗುತ್ತಿದೆ. ಪ್ರಯಾಗ್ ರಾಜ್ ನ ಹಲವೆಡೆ ರಸ್ತೆಗಳಲ್ಲಿ ಭಾರೀ ಸಂಖ್ಯೆಯ ವಾಹನಗಳಿದ್ದು ಟ್ರಾಫಿಕ್ ಜಾಮ್ ಉಂಟಾಗಿದ್ದು ಕೋಟ್ಯಂತರ ಜನರು ಪರದಾಡುವಂತಾಗಿದೆ. ಘಟನೆಯ ಬಳಿಕ ತಿಳಿದು ಪರಿಸ್ಥಿತಿಯ ಬಗ್ಗೆ ಆತಂಕಿತರಾಗಿದ್ದಾರೆ.

ಗುಲಾಬಿ ದಳದ ಹೂಮಳೆ
ಮೌನಿ ಅಮಾವಾಸ್ಯೆಯ ಸ್ನಾನ ಸಾಧು, ಸಂತರಿಗೆ ಬಹಳ ಪವಿತ್ರವಾಗಿದ್ದು, ಇಂದು ಸಂಗಮದ ನೀರು ಅಮೃತವಾಗುತ್ತದೆ ಎಂಬ ನಂಬಿಕೆ ಇದೆ. ಸಾಧು ಸಂತರ ಸ್ನಾನದ ವೇಳೆ ಹೆಲಿಕ್ಯಾಪ್ಟರ್ ಮೂಲಕ ಭಾರಿ ಪ್ರಮಾಣದ ಗುಲಾಬಿ ದಳಗಳ ಹೂಮಳೆ ಸುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ದುರಂತದಲ್ಲಿ ಕನಿಷ್ಠ ಹತ್ತು ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಅವರೆಲ್ಲರ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stampede-Railway

Maha Kumbh Rush: ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಿಂದ 16 ಮಂದಿ ದುರ್ಮರಣ!

Akhilesh-Yadav

Maha Kumbh Mela: ಕುಂಭ ಮೇಳ ಅವಧಿ ಫೆ.26ರ ಬಳಿಕವೂ ವಿಸ್ತರಿಸಿ: ಅಖಿಲೇಶ್‌ ಯಾದವ್‌

Mahakumbh-fire

Maha Kumbh: ಕುಂಭಮೇಳದ ಸೆಕ್ಟರ್ 18, 19ರಲ್ಲಿ ಭಾರೀ ಅಗ್ನಿ ಅನಾಹುತ!

Maha Kumbh Mela: ಮಹಾಕುಂಭ ಮೇಳಕ್ಕೆ ಶಿರ್ವದ ಅಪ್ಪ -ಮಗನ ಬೈಕ್‌ ಯಾತ್ರೆ!

Maha Kumbh Mela: ಮಹಾಕುಂಭ ಮೇಳಕ್ಕೆ ಶಿರ್ವದ ಅಪ್ಪ -ಮಗನ ಬೈಕ್‌ ಯಾತ್ರೆ!

Mahakumbh: ಮಾಘ ಹುಣ್ಣಿಮೆ ದಿನ 2 ಕೋಟಿ ಮಂದಿ ಸ್ನಾನ, ಮಿಂದವರ ಸಂಖ್ಯೆ 47ಕೋಟಿಗೆ ಏರಿಕೆ

Mahakumbh: ಮಾಘ ಹುಣ್ಣಿಮೆ ದಿನ 2 ಕೋಟಿ ಮಂದಿ ಸ್ನಾನ, ಮಿಂದವರ ಸಂಖ್ಯೆ 47ಕೋಟಿಗೆ ಏರಿಕೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.