MahaKumbh: ಮಹಾಕುಂಭ ಮೇಳದಲ್ಲಿ ಕಾಲ್ತುಳಿತದಿಂದ 30 ಭಕ್ತರು ಮೃತ್ಯು: ಡಿಐಜಿ ವೈಭವ್

ಕಾಲ್ತುಳಿತ ವೇಳೆ ಗಾಯಗೊಂಡ 60 ಮಂದಿಗೆ ಚಿಕಿತ್ಸೆ, ಮಾಹಿತಿಗಾಗಿ ಹೆಲ್ಪ್‌ಲೈನ್ ನಂಬರ್ ನೀಡಿದ ಉತ್ತರ ಪ್ರದೇಶ ಸರಕಾರ

Team Udayavani, Jan 29, 2025, 8:15 PM IST

Mahakumabha-Stamped

ಪ್ರಯಾಗ್‌ರಾಜ್‌: ಮಹಾಕುಂಭ ಮೇಳದ ಮೌನಿ ಅಮಾವಾಸ್ಯೆ ಪ್ರಯುಕ್ತ ಪವಿತ್ರ ಸ್ನಾನಕ್ಕಾಗಿ ಸಾವಿರಾರು ಮಂದಿ ಭಕ್ತರು ಒಂದೆಡೆಯೇ ದಿಢೀರ್‌ ಹೆಚ್ಚಳವಾದ್ದರಿಂದ ಕಾಲ್ತುಳಿತ ಉಂಟಾಗಿ ಕರ್ನಾಟಕದ ಬೆಳಗಾವಿಯ ನಾಲ್ವರು ಸೇರಿ ಒಟ್ಟು 30 ಮಂದಿ ಮೃತಪಟ್ಟು, 60 ಭಕ್ತರು ಗಾಯಗೊಂಡಿದ್ದಾರೆ ಎಂದು ಮಹಾ ಕುಂಭಮೇಳದ ಡಿಐಜಿ ವೈಭವ್ ಕೃಷ್ಣ ಅಧಿಕೃತ ಮಾಹಿತಿ ನೀಡಿದ್ದಾರೆ.

ಮಹಾ ಕುಂಭಮೇಳದ ಡಿಐಜಿ ವೈಭವ್ ಕೃಷ್ಣ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ  ಮಹಾಕುಂಭದಲ್ಲಿ ಉಂಟಾದ ಕಾಲ್ತುಳಿತದಿಂದ 30 ಮಂದಿ ಭಕ್ತರು  ಮೃತಪಟ್ಟಿದ್ದು, ಕಾಲ್ತುಳಿತ ಘಟನೆಯು ಬೆಳಗಿನ ಜಾವ 1 ಗಂಟೆಯಿಂದ 2 ಗಂಟೆ ನಡುವೆ ಸಂಭವಿಸಿದೆ. ಈ ವರೆಗೆ 25 ಮಂದಿಯ ಮೃತದೇಹ ಗುರುತಿಸಲಾಗಿದೆ. ಉಳಿದ ಐವರ ಗುರುತುಗಳ  ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಪ್ರಯಾಗ್‌ರಾಜ್‌ ಕಾಲ್ತುಳಿತದ ಹೆಲ್ಪ್‌ಲೈನ್ ನಂಬರ್ 1920. ಮಹಾಕುಂಭ ಮೇಳಕ್ಕೆ ಧಾವಿಸಿದ ಭಕ್ತರ ಕುಟುಂಬದವರು ಹೆಲ್ಪ್‌ಲೈನ್ ನಂಬರ್‌ 1920ಕ್ಕೆ  ಕರೆ ಮಾಡಿ ಮಾಹಿತಿ ಪಡೆಯಬಹುದು.  ಬುಧವಾರ ಮೌನಿ ಅಮಾವಾಸ್ಯೆಯಾದ್ದರಿಂದ ಮಹಾಕುಂಭ ಮೇಳಕ್ಕೆ ಭಕ್ತರು ಹೆಚ್ಚಾಗಿ ಆಗಮಿಸಿದ್ದರು. ಈ ವೇಳೆ ತ್ರಿವೇಣಿ ಸಂಗಮದ ಬಳಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಮೃತಪಟ್ಟವರ ಪೈಕಿ ಕರ್ನಾಟಕದ ನಾಲ್ವರು, ಅಸ್ಸಾಂನ ಒಬ್ಬರು, ಗುಜರಾತ್‌ನ ಒಬ್ಬರು ಇದ್ದಾರೆ. ಕೆಲವು ಗಾಯಗೊಂಡ ಭಕ್ತರನ್ನು ಅವರ ಸಂಬಂಧಿಕರು ಕರೆದೊಯ್ದಿದ್ದಾರೆ. 36 ಗಾಯಾಳುಗಳು ಸ್ಥಳೀಯ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಂಭಮೇಳದ ಡಿಐಜಿ ವೈಭವ್ ಕೃಷ್ಣ ಹೇಳಿದರು.

ಪರಿಸ್ಥಿತಿ ನಿಯಂತ್ರಣದಲ್ಲಿದೆ: ಸಿಎಂ ಯೋಗಿ ಆದಿತ್ಯನಾಥ್‌ 
8ರಿಂದ 10 ಕೋಟಿ ಭಕ್ತರು ಆಗಮಿಸುತ್ತಿದ್ದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಲಭ್ಯವಿರುವ ಎಲ್ಲಾ ಘಾಟ್‌ಗಳನ್ನು ಬಳಸುವಂತೆ ಮತ್ತು ಸಂಗಮ ಮೂಗು  ಕಡೆಗೆ ಧಾವಿಸದಂತೆ ಭಕ್ತರ ಬಳಿ  ಮನವಿ ಮಾಡಿದ್ದಾರೆ. ಮಹಾಕುಂಭದಿಂದ ಹಿಂದಿರುಗುವ ಯಾತ್ರಿಕರಿಗೆ ಅಧಿಕಾರಿಗಳು ವಿಶೇಷ ರೈಲುಗಳ ವ್ಯವಸ್ಥೆ ಮಾಡಿದ್ದಾರೆ.

ಉತ್ತರ ಪ್ರದೇಶ ಸರಕಾರದ ಪ್ರಕಾರ ಬುಧವಾರ ಬೆಳಿಗ್ಗೆ 10 ಗಂಟೆಯವರೆಗೆ 3.61 ಕೋಟಿ ಭಕ್ತರು ಸಂಗಮದಲ್ಲಿ ಸ್ನಾನ ಮಾಡಿದ್ದಾರೆಂದು ತಿಳಿದು ಬಂದಿದೆ. ಅಲ್ಲದೆ, ಸ್ಥಗಿತಗೊಳಿಸಲಾಗಿದ್ದ  ಪುಣ್ಯಸ್ನಾನವನ್ನು ಪುನರಾರಂಭಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಕಾಲ್ತುಳಿತ ಘಟನೆ ಬಗ್ಗೆ  ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌, ಪ್ರಧಾನಿ ಮೋದಿ, ಸೇರಿದಂತೆ ಅನೇಕರು ಬೇಸರ ವ್ಯಕ್ತಪಡಿಸಿ ಸಂತಾಪ ಸೂಚಿಸಿದ್ದಾರೆ.

ಟಾಪ್ ನ್ಯೂಸ್

rahul-gandhi

Controversy; ಚೀನೀ ನಿರ್ಮಿತ ಡ್ರೋನ್‌ ಬಳಸಿ ರಾಹುಲ್‌ ಗಾಂಧಿ ವಿವಾದ

1-soudi

Abu Dhabi;ಭಾರತದ ಮಹಿಳೆಗೆ ಗಲ್ಲು ಶಿಕ್ಷೆ?

1-cy

Cyclone; ಬಂಗಾಲ ಕೊಲ್ಲಿಯಲ್ಲಿ ಚಂಡಮಾರುತ ಸಾಧ್ಯತೆ: 13 ರಾಜ್ಯಗಳಿಗೆ ಎಚ್ಚರಿಕೆ

Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’

Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’

Special Train: ಉಡುಪಿ-ಪ್ರಯಾಗರಾಜ್‌ ವಿಶೇಷ ರೈಲಿಗೆ ಪೇಜಾವರ ಶ್ರೀ ಚಾಲನೆ

Special Train: ಉಡುಪಿ-ಪ್ರಯಾಗರಾಜ್‌ ವಿಶೇಷ ರೈಲಿಗೆ ಪೇಜಾವರ ಶ್ರೀ ಚಾಲನೆ

New-CEC

CEC Appoint: ಜ್ಞಾನೇಶ್‌ ಕುಮಾರ್‌ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕ 

Udupi: ಮತ್ಸ್ಯಗಂಧ ರೈಲಿಗೆ ನೂತನ ಎಲ್‌ಎಚ್‌ಬಿ ಬೋಗಿ ಅಳವಡಿಕೆ

Udupi: ಮತ್ಸ್ಯಗಂಧ ರೈಲಿಗೆ ನೂತನ ಎಲ್‌ಎಚ್‌ಬಿ ಬೋಗಿ ಅಳವಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rahul-gandhi

Controversy; ಚೀನೀ ನಿರ್ಮಿತ ಡ್ರೋನ್‌ ಬಳಸಿ ರಾಹುಲ್‌ ಗಾಂಧಿ ವಿವಾದ

1-soudi

Abu Dhabi;ಭಾರತದ ಮಹಿಳೆಗೆ ಗಲ್ಲು ಶಿಕ್ಷೆ?

1-cy

Cyclone; ಬಂಗಾಲ ಕೊಲ್ಲಿಯಲ್ಲಿ ಚಂಡಮಾರುತ ಸಾಧ್ಯತೆ: 13 ರಾಜ್ಯಗಳಿಗೆ ಎಚ್ಚರಿಕೆ

1-pm

US ಆರ್ಥಿಕ ನೆರವು ದೊಡ್ಡ ಹಗರಣ: ಪ್ರಧಾನಿಯ ಸಲಹೆಗಾರ

1-cec

One Election: 25ರ ಜೆಪಿಸಿ ಸಭೆಗೆ ನಿವೃತ್ತ ನ್ಯಾಯಮೂರ್ತಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

rahul-gandhi

Controversy; ಚೀನೀ ನಿರ್ಮಿತ ಡ್ರೋನ್‌ ಬಳಸಿ ರಾಹುಲ್‌ ಗಾಂಧಿ ವಿವಾದ

1-soudi

Abu Dhabi;ಭಾರತದ ಮಹಿಳೆಗೆ ಗಲ್ಲು ಶಿಕ್ಷೆ?

1-cy

Cyclone; ಬಂಗಾಲ ಕೊಲ್ಲಿಯಲ್ಲಿ ಚಂಡಮಾರುತ ಸಾಧ್ಯತೆ: 13 ರಾಜ್ಯಗಳಿಗೆ ಎಚ್ಚರಿಕೆ

1-pm

US ಆರ್ಥಿಕ ನೆರವು ದೊಡ್ಡ ಹಗರಣ: ಪ್ರಧಾನಿಯ ಸಲಹೆಗಾರ

1-cec

One Election: 25ರ ಜೆಪಿಸಿ ಸಭೆಗೆ ನಿವೃತ್ತ ನ್ಯಾಯಮೂರ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.