Mahakumbha Mela: ಆ ಗಂಗೆ ಪ್ರವಾಹದಂತೆ ಜನಪ್ರವಾಹ ನಿತ್ಯವೂ ಹರಿಯುತ್ತಿದೆ ಸಂಗಮದತ್ತ!

ಕುಂಭ ಮೇಳದ ಅಂಗಳದಿಂದ: ಪ್ರಯಾಗ್‌ರಾಜ್‌: ಎಲ್ಲ ವ್ಯವಸ್ಥೆಗೂ ಸವಾಲೆಸೆಯುವಷ್ಟು ಜನರಾಶಿ, ತೀರ್ಥಸ್ನಾನದ ಕ್ಷಣ ಪವಿತ್ರ ಅನುಭವದ ಕಾಶಿ

Team Udayavani, Jan 30, 2025, 7:23 AM IST

putturu–Kumabha

ಪುತ್ತೂರು: ಮಹಾಕುಂಭ ಮೇಳದ ಸ್ಥಳದಲ್ಲಿ ಹಿಂದೆಂದೂ ಕಾಣದಷ್ಟು ಜನಪ್ರವಾಹ ಇತ್ತು. ಇಲ್ಲಿ ಅಗತ್ಯ ವ್ಯವಸ್ಥೆಗಳನ್ನು ಸರಕಾರ ಮಾಡಿದೆ. ಆದರೆ ಅದಕ್ಕಿಂತಲೂ ಮೀರಿ ಜನರು ಬರುತ್ತಿದ್ದಾರೆ.

ನಾವು 12 ಮಂದಿ ಪುತ್ತೂರಿನಿಂದ ಕುಂಭ ಮೇಳಕ್ಕೆ ಬಂದಿದ್ದು, ಸ್ನಾನಕ್ಕೆ ಹೋಗುವಾಗ ಮಧ್ಯಾಹ್ನ 12 ಗಂಟೆಯಾಗಿತ್ತು. ಸ್ನಾನ ಮುಗಿಸಿ ರೈಲು ನಿಲ್ದಾಣ ತಲುಪಿದಾಗ ಕಾಲ್ತುಳಿತ ಸಂಭವಿಸಿದ ಮಾಹಿತಿ ಸಿಕ್ಕಿತು. ಆದರೆ ಆ ಸ್ಥಳ ಯಾವುದು ಎಂದು ನಿಖರವಾಗಿ ತಿಳಿಯಲಿಲ್ಲ. ನಾವೂ ಅಲ್ಲಿಯವರಿಂದ ಮಾಹಿತಿ ಪಡೆದುಕೊಂಡೆವು.

ಮೌನಿ ಅಮಾವಾಸ್ಯೆಯ ಸ್ನಾನಕ್ಕಾಗಿ ಮಂಗಳ ವಾರ ರಾತ್ರಿಯಿಂದಲೇ ಸಂಗಮ ಸ್ಥಳದಲ್ಲಿ ಜನರು ಕಾದು ಕುಳಿತಿದ್ದರಂತೆ. ಐದು ಗಂಟೆ ಬಳಿಕ ಸ್ನಾನ ಮಾಡಲು ಅವಕಾಶ ಕಲ್ಪಿಸಿದ್ದರು. ಆ ಹೊತ್ತಿನಲ್ಲಿ ಬ್ಯಾರಿಕೇಡ್‌ ಹಾಕಿರುವ ಜಾಗದಲ್ಲಿ ನೂಕು ನುಗ್ಗಲು ಆರಂಭವಾಗಿ ದುರಂತ ಘಟಿಸಿತು. ಆದರೆ ಈ ಸ್ಥಳ ಹೊರತುಪಡಿಸಿ ಉಳಿದೆಡೆ ಸಂಗಮ ಸ್ನಾನ ವ್ಯವಸ್ಥಿತ ರೀತಿಯಲ್ಲಿ ನಡೆದಿದೆ.

ಕ್ಯಾಂಪ್‌ಗ್ಳು, ಅಲ್ಲಲ್ಲಿ ರಕ್ಷಣ ವ್ಯವಸ್ಥೆ, ಸಂಗಮ ಸ್ಥಳಕ್ಕೆ ತೆರಳಲು ಬೋಟಿಂಗ್‌, ಜನರನ್ನು ವಿಭಜಿಸಿ ಹೋಗಲು ಅವಕಾಶ – ಹೀಗೆ ಸ್ಥಳೀಯ ಸರಕಾರ ಹಲವು ವ್ಯವಸ್ಥಿತ ಕ್ರಮಗಳನ್ನು ಕೈಗೊಂಡಿದೆ. ಆದರೆ ನಿರೀಕ್ಷೆಗೂ ಮೀರಿ ಜನರು ಆಗಮಿಸುತ್ತಿರುವ ಕಾರಣ ಇಡೀ ಪ್ರಯಾಗ್‌ರಾಜ್‌ನಲ್ಲಿ ಜನರು ತುಂಬಿ ತುಳುಕುತ್ತಿದ್ದರು. ಪ್ರಯಾಗರಾಜ್‌ನ ಬಸ್‌ ನಿಲ್ದಾಣ 10 ಕಿ.ಮೀ. ದೂರ ಇದ್ದು, ಅಲ್ಲಿಂದಲೇ ವಾಹನ ಸಂಚಾರ ನಿಷೇಧಿಸಲಾಗಿದೆ. ಅಲ್ಲಿಂದ ನಡೆದುಕೊಂಡು ಹೋಗಲಷ್ಟೇ ಅನುಮತಿ ನೀಡಲಾಗಿತ್ತು.

2 ನಿಲ್ದಾಣ ಹಿಂದೆಯೇ ನಿಲುಗಡೆ
ನಾವು ವಂದೇ ಭಾರತ್‌ ರೈಲಿನಲ್ಲಿ ಕಾಶಿಯಿಂದ ಬಂದೆವು. ರೈಲಿನಲ್ಲಿ ವಿಪರೀತ ದಟ್ಟಣೆ ಇದೆ. ಬೇರೆ ಬೇರೆ ದಿಕ್ಕುಗಳಿಂದ ಬರುವ ಕೆಲವು ರೈಲುಗಳ ಸಂಚಾರ ವಿಳಂಬವಾಗಿದೆ. ಗಮ್ಯ ಸ್ಥಳದಿಂದ ಎರಡು ನಿಲ್ದಾಣ ಹಿಂದೆಯೇ ರೈಲನ್ನು ನಿಲ್ಲಿಸಲಾಗುತ್ತಿತ್ತು. ಅಯೋಧ್ಯೆ, ವಾರಾಣಸಿಗಳಿಂದ ವಾಹನ ಸಹಿತ ಇತರ ಮಾರ್ಗಗಳಲ್ಲಿ ಬರುವವರು 25 ಕಿ.ಮೀ. ದೂರದಲ್ಲೇ ವಾಹನ ನಿಲ್ಲಿಸಬೇಕು. ಬಳಿಕ 25 ಕಿ. ಮೀ. ಕಾಲ್ನಡಿಗೆ! ವಿಚಿತ್ರ ಎನಿಸಿದರೂ ನಿಜ. ಅಲ್ಲಿಂದಲೇ ನಡೆದು ಹೋಗುವಂತೆ ಸೂಚಿಸಲಾಗುತ್ತದೆ. ಹಾಗೆಂದು ವಯೋವೃದ್ಧರಿಗೆ, ನಡೆದಾಡಲು ಅಸಾಧ್ಯ ಎನ್ನಿಸುವವರಿಗೆ ಪ್ರತ್ಯೇಕ ವ್ಯವಸ್ಥೆ ಇದೆ ಎಂದು ಉದ್ಘೋಷಣೆ ಮಾಡಿ ತಿಳಿಸಲಾಗುತ್ತಿತ್ತು.

ನಡಿಗೆ ಎಲ್ಲಿಂದ?
ಪ್ರಯಾಗ್‌ರಾಜ್‌ ರೈಲು ನಿಲ್ದಾಣದಿಂದ 7 ಕಿ.ಮೀ. ದೂರ ನಡೆದು ಕ್ಯಾಂಪ್‌ ಸ್ಥಳಕ್ಕೆ ಬರಬೇಕಿತ್ತು. ಪ್ರಯಾಗ್‌ರಾಜ್‌ ಪರಿಸರದ 4 ಕಿ.ಮೀ.ವ್ಯಾಪ್ತಿಯೊಳಗೆ ಕ್ಯಾಂಪ್‌ಗ್ಳಿದ್ದವು. ಅಲ್ಲಿಂದ 3 ಕಿ.ಮೀ. ದೂರದಲ್ಲಿರುವ ಸಂಗಮ ಸ್ಥಳಕ್ಕೆ ನಡೆದುಕೊಂಡು ಹೋಗಬೇಕು.

ಜನರಲ್‌ ಬೋಗಿಗೆ ಬಂದವರು ಎಸಿ ಬೋಗಿಗೆ ನುಗ್ಗಿದ್ದರು!
ಪುತ್ತೂರಿನಿಂದ ತೆರಳಿದ್ದ ಇನ್ನೊಂದು ತಂಡದ ಸದಸ್ಯ ಲೋಕೇಶ್‌ ಹೇಳುವಂತೆ, ಪ್ರಯಾಗ್‌ ರಾಜ್‌ನ ಮೂರು ರೈಲು ನಿಲ್ದಾಣಗಳು ಬುಧವಾರ ಬೆಳಗ್ಗೆ ತುಂಬಿತುಳುಕಿತ್ತಿದ್ದವು. ಬಹುತೇಕ ರೈಲುಗಳ ಆಗಮನ, ನಿರ್ಗಮನ ತಾಸುಗಟ್ಟಲೇ ತಡವಾಗಿತ್ತು. ಜನರಲ್‌ ಬೋಗಿಗಳಲ್ಲಿ ಉಸಿರಾಡಲು ಕಷ್ಟ ಎನ್ನುವ ಸ್ಥಿತಿ ಇತ್ತು. ಹೀಗಾಗಿ ಅಲ್ಲಿ ನಿಲ್ಲಲಾಗದೆ ಎಸಿ ಬೋಗಿಗಳಿಗೂ ಪ್ರಯಾಣಿಕರು ನುಗ್ಗಿದ್ದರು ಎನ್ನುತ್ತಾರೆ ಅವರು.

ಅಲ್ಲಲ್ಲಿ ಆಹಾರ
ನಡೆದು ಕೊಂಡು ಹೋಗುವ ದಾರಿ ಬದಿಗಳಲ್ಲಿ ದಾನಿಗಳು ಉಚಿತವಾಗಿ ಆಹಾರದ ವ್ಯವಸ್ಥೆ ಮಾಡಿದ್ದಾರೆ. ಚಹಾ, ಸಮೋಸಾ ಮೊದಲಾದವು ಲಭ್ಯವಿದ್ದವು. ಆಹಾರಕ್ಕಾಗಿ ಸಂತೆ ಮಾದರಿಯಲ್ಲಿ ಅಂಗಡಿ ಮುಂಗಟ್ಟುಗಳಿವೆ. ಸಂಚಾರದ ದಾರಿಯಲ್ಲಿ ಮಾಹಿತಿ ಕೇಂದ್ರಗಳು ಮಾರ್ಗ ಹಾಗೂ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡುತ್ತಿರುವೆ. ನಾವು ಕುಂಭಮೇಳಕ್ಕೆ ಹೋಗಲು ಪ್ರತ್ಯೇಕ ಬುಕ್ಕಿಂಗ್‌ ಮಾಡಿಲ್ಲ. ಆದರೆ ಕುಂಭಮೇಳದ ದಿನಾಂಕ ಪ್ರಕಟವಾಗುತ್ತಿದ್ದಂತೆ ಸೆಪ್ಟಂಬರ್‌ನಲ್ಲಿಯೇ ವಿಮಾನ ಟಿಕೆಟ್‌ ಕಾದಿರಿಸಿದ್ದೆವು. – ವಿರೂಪಾಕ್ಷ ಮಚ್ಚಿಮಲೆ, ಪುತ್ತೂರು

ಸುಳ್ಯದ ತಂಡ ಸುರಕ್ಷಿತ
ಸುಳ್ಯ: ಮಹಾಕುಂಭ ಮೇಳಕ್ಕೆ ತೆರಳಿದ್ದ ಸುಳ್ಯದ 15 ಮಂದಿ ಸುರಕ್ಷಿತರಾಗಿದ್ದಾರೆ. ಸೋಮವಾರ ಅಲ್ಲಿಗೆ ತಲುಪಿದ್ದ ತಂಡ ಬುಧವಾರ ಬೆಳಗ್ಗೆ ಪುಣ್ಯ ಸ್ನಾನ ನೆರವೇರಿಸಿದೆ. ಮಂಗಳವಾರ ಬೆಳಗ್ಗೆ ನಾವು ಸಂಗಮ ತಾಣದಲ್ಲಿ ಸ್ನಾನ ನೆರವೇರಿಸಿದ್ದೆವು. ಬುಧವಾರ ಬೆಳಗ್ಗೆ ಅಲ್ಲಿ ಜನದಟ್ಟಣೆ ಯಿಂದ ಸ್ನಾನ ಮಾಡಲು ಸಾಧ್ಯವಾಗ ಲಿಲ್ಲ. ಹಾಗಾಗಿ ಹತ್ತಿರದ ಮತ್ತೂಂದು ಸ್ನಾನ ಘಟ್ಟದಲ್ಲಿ ಸ್ನಾನ ನೆರವೇರಿಸಿದೆವು ಎನ್ನುತ್ತಾರೆ ಸತೀಶ್‌ ಸುಳ್ಯ.

ಸಂಗಮ ತಾಣದ ಬಳಿ ಕಾಲ್ತುಳಿತ ಉಂಟಾಗಿದ್ದ ಬಗ್ಗೆ ನಮಗೆ ಮಾಹಿತಿ ಸಿಕ್ಕಿರಲಿಲ್ಲ. ಬೆಳಗ್ಗೆ 5ರ ವೇಳೆಗೆ ಅಲ್ಲಿ ಬಂದ್‌ ಮಾಡಲಾಯಿತು ಎಂಬ ಮಾಹಿತಿ ಸಿಕ್ಕಿತು. ನಾವು ಸ್ನಾನ ನೆರವೇರಿಸಿದಲ್ಲಿ ದಟ್ಟಣೆ ಇದ್ದರೂ ಸುಗಮವಾಗಿ ಭಕ್ತರು ಪುಣ್ಯ ಸ್ನಾನ ನೆರವೇರಿಸಿದರು. ನಾವು ಸ್ನಾನ ನೆರವೇರಿಸಿ ಅಲ್ಲಿಂದ ಕಾಶಿ ಕಡೆಗೆ ಹೊರಟೆವು ಎಂದು ಅವರು ಉದಯ ವಾಣಿಗೆ ತಿಳಿಸಿದ್ದಾರೆ. ಸತೀಶ್‌ ಕೆ.ಜಿ., ದೇವರಾಜ್‌ ಆಳ್ವ, ಹರಿರಾಯ ಕಾಮತ್‌, ಸುಧಾಕರ ಕಾಮತ್‌, ನಾರಾಯಣ ಕೇಕಡ್ಕ, ಜಗದೀಶ್‌ ಸರಳಿಕುಂಜ ಮತ್ತಿತರರು ತಂಡದಲ್ಲಿದ್ದರು.

ನಮ್ಮದು 17 ಕಿ. ಮೀ. ಪಾದಯಾತ್ರೆ!
ಬಂಟ್ವಾಳ: ನಮ್ಮದು 17 ಕಿ.ಮೀ. ಪಾದಯಾತ್ರೆ ಎನ್ನುತ್ತಾರೆ ಬಂಟ್ವಾಳದ ಸಂತೋಷ್‌ ರಾಯಿಬೆಟ್ಟು ಮತ್ತು ತಂಡ. ಬಂಟ್ವಾಳದಿಂದ 6 ಮಂದಿಯ ತಂಡ ಮಹಾಕುಂಭ ಮೇಳದಲ್ಲಿ ಪುಣ್ಯ ಸ್ನಾನಕ್ಕೆ ತೆರಳಿತ್ತು. “ನಾವೆಲ್ಲ ಸುರಕ್ಷಿತರಾಗಿದ್ದೇವೆ. ರಾತ್ರಿಯಿಡೀ ಪಾದಯಾತ್ರೆ ಮಾಡಿದೆವು. ಸುಮಾರು 17 ಕಿ. ಮೀ. ನಡೆದು ನಾವು ತ್ರಿವೇಣಿ ಸಂಗಮ ಸ್ಥಾನ ತಲುಪಿದೆವು’ ಎನ್ನುತ್ತಾರೆ ಸಂತೋಷ್‌.

ಸಂತೋಷ್‌ ರಾಯಿಬೆಟ್ಟು, ನಾಗೇಶ್‌ ಸಾಲ್ಯಾನ್‌, ಸುರೇಶ್‌ ಅಲ್ಲಿಪಾದೆ, ಪ್ರಶಾಂತ್‌ ಅಲ್ಲಿಪಾದೆ, ಪುರುಷೋತ್ತಮ ಜಾಲ್ಸೂರು, ಪ್ರವೀಣ್‌ ಮರಕಡ ಹೀಗೆ 6 ಮಂದಿ ತಂಡದಲ್ಲಿದ್ದಾರೆ. ಜ. 28ರಂದು ಬೆಂಗಳೂರಿನಿಂದ ವಾರಾಣಸಿಗೆ ಹೋಗಿ ಅಲ್ಲಿಂದ ಪ್ರಯಾಗ್‌ರಾಜ್‌ಗೆ ತಲುಪಿದ್ದಾರೆ. “ಜನಸಂದಣಿಯಿಂದ ಒಂದು ಹೆಜ್ಜೆ ಇಡುವುದೂ ಕಷ್ಟವೆನಿಸುತ್ತಿತ್ತು. ಅಂಥದ್ದರಲ್ಲಿ 17 ಕಿ.ಮೀ. ನಡೆದು ಸಂಗಮ ಸ್ಥಾನ ತಲುಪಿದೆವು. ಮಧ್ಯಾಹ್ನ 12ಕ್ಕೆ ಸ್ನಾನ ಮುಗಿಸಿದೆವು. ಅಷ್ಟರಲ್ಲಿ ಬೆಳಗ್ಗೆ ಘಟಿಸಿದ ದುರಂತದ ಬಗ್ಗೆ ತಿಳಿಯಿತು. ಆದರೆ ನಾವೆಲ್ಲ ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದಾರೆ.

ಬಂಟ್ವಾಳ ಉಪತಹಶೀಲ್ದಾರ್‌ ಸಹಿತ 5 ಮಂದಿ ಸಿಬಂದಿ ಹಾಗೂ ಮತ್ತಿಬ್ಬರು ಸೇರಿ ಒಟ್ಟು 7 ಮಂದಿ ಮಹಾ ಕುಂಭಮೇಳದಲ್ಲಿ ಬುಧವಾರ ಮುಂಜಾನೆ 4 ಗಂಟೆಗೆ ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನ ಮಾಡಿದ್ದು, ಬೆಳಗ್ಗೆ 6 ರ ಸುಮಾರಿಗೆ ಅಲ್ಲಿಂದ ಹಿಂದಿರುಗಿದ್ದಾರೆ. ಕಾಲು¤ಳಿತ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ ಉಪತಹ ಶೀಲ್ದಾರ್‌ ನವೀನ್‌ ಕುಮಾರ್‌.

ವ್ಯವಸ್ಥೆ ಅದ್ಭುತ, ನಡೆಯುವುದಷ್ಟೇ ಕಷ್ಟ
ಮಂಗಳೂರು: ಜನವರಿ 27ರಿಂದಲೇ ನಾವು ಇಲ್ಲಿದ್ದೇವೆ. ಮೌನಿ ಅಮಾವಾಸ್ಯೆಯಂದು ಭಾರೀ ಜನಸಂದಣಿ ಇತ್ತು. ದುರ್ಘ‌ಟನೆಯ ಸಂಗತಿ ನಮಗೆ ಗೊತ್ತಾಗದಷ್ಟು ಜನಸಂದಣಿ ಇದೆ ಎನ್ನುತ್ತಾರೆ ಹರೀಶ್‌ ಐತಾಳ್‌. ಮಂಗಳಾದೇವಿಯ ಅರ್ಚಕ ವೃಂದದವರೂ ಒಂದು ತಂಡದಲ್ಲಿ ಕುಂಭಮೇಳದಲ್ಲಿ ಪಾಲ್ಗೊಂಡಿದ್ದು, ಯಾವ ಕಡೆಯಿಂದ ಹೋದರೂ ಕನಿಷ್ಠ 5-6 ಕಿ.ಮೀ. ನಡೆಯಲೇಬೇಕು. ಪ್ರತಿದಿನ ಎರಡು ಬಾರಿ ಸ್ನಾನಕ್ಕೆ ಅವಕಾಶವಿದೆ. ಖುಷಿಯಾಯಿತು. ಒಟ್ಟಾrರೆ ವ್ಯವಸ್ಥೆ ಅದ್ಭುತ. ಇಷ್ಟು ಕೋಟಿ ಜನ ಬಂದರೂ ಗಲ್ಲಿಗಲ್ಲಿಗಳಲ್ಲಿ ಭಂಡಾರ್‌ಗಳ ಮೂಲಕ ರೋಟಿ ಸಬ್ಜಿ, ಪೂರಿ ಇತ್ಯಾದಿ ಉಚಿತವಾಗಿ ನೀಡುತ್ತಿದ್ದಾರೆ. ನೀರು, ಚಹಾ, ಕಾಫಿಗೇನೂ ತೊಂದರೆಯಿಲ್ಲ ಎನ್ನುತ್ತಾರೆ ಅವರು.

ಮೌನಿ ಅಮಾವಾಸ್ಯೆಯದ್ದೇ ವಿಶೇಷ ಅನುಭವ
ಮಂಗಳೂರು: ಕುಂಭಮೇಳ ದಲ್ಲಿ ಸರಕಾರ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಮಂದಿ ಮೌನಿ ಅಮಾವಾಸ್ಯೆಗೆ ಬಂದಿದ್ದು, ಹಾಗಿದ್ದರೂ ಯಾವುದೇ ಸಮಸ್ಯೆಯಾಗಿಲ್ಲ. ಜನದಟ್ಟಣೆಯನ್ನು ಚೆನ್ನಾಗಿ ನಿರ್ವಹಿಸಲಾಗಿದೆ. ಜ.28ರಂದು ಬೆಳಗ್ಗೆಯೇ ತಮ್ಮ 10 ಜನ ಮಿತ್ರರೊಂದಿಗೆ ಪ್ರಯಾಗ್‌ರಾಜ್‌ ತಲುಪಿದೆವು. ಮಂಗಳವಾರ ತಡರಾತ್ರಿ ಆಗಿರುವ ಕಾಲುಳಿತದಿಂದ ಮೌನಿ ಅಮಾವಾಸ್ಯೆ ದಿನದ ಸ್ನಾನಕ್ಕೆ ಏನೂ ತೊಂದರೆ ಆಗಿಲ್ಲ. ಅಖಾಡ ಶಾಹಿ ಸ್ನಾನವನ್ನು ರದ್ದು ಮಾಡಲಾಗಿತ್ತು. ಸರಕಾರ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಜನ ಬಂದಿದ್ದರೂ ಎಲ್ಲವೂ ಸುಗಮವಾಗಿ ನಡೆಯುತ್ತಿರುವುದು ವಿಶೇಷ.

ಸ್ವತ್ಛತೆಗೆ ಸಮಸ್ಯೆಯಾಗಿಲ್ಲ
ಈಗಾಗಲೇ 15 ಕೋಟಿ ಜನ ಭೇಟಿ ನೀಡಿ ಹೋಗಿದ್ದರೂ ಸ್ವತ್ಛತೆ ಸಮಸ್ಯೆ ಆಗಿಲ್ಲ. ಸಾಕಷ್ಟು ಮಂದಿ ಸ್ವಯಂ ಸೇವಕರಿದ್ದಾರೆ. ನದಿ ಸ್ವತ್ಛಗೊಳಿಸುವ ಯಂತ್ರ ಅಳವಡಿಸಲಾಗಿದೆ. ಪ್ಲಾಸ್ಟಿಕ್‌, ಬಟ್ಟೆ ಇತ್ಯಾದಿ ಹಾಕದಂತೆ ತಿಳಿಸಲಾಗು ತ್ತಿದೆ. ಬೇಕಾದಷ್ಟು ಶೌಚಾಲಯಗಳಿವೆ.

ಮರೆಯಲಾಗದ ಅನುಭವ
ನಿನ್ನೆ ಸಂಜೆ ಕುಂಭಮೇಳಕ್ಕೆ ಬಂದಿದ್ದೇವೆ. ಪ್ರಯಾಗ್‌ರಾಜ್‌ನಿಂದ ಸುಮಾರು 5 ಕಿ.ಮೀ. ನಡೆಯಬೇಕಿತ್ತು. ಪ‌ಲಿಮಾರು ಮಠದ ಕ್ಯಾಂಪ್‌ ಸಂಗಮದ ಬಳಿಯೇ ಇತ್ತು. ಹಾಗಾಗಿ ಅಲ್ಲಿ ಉಳಿದೆವು. ಇಂದು ಸಂಗಮ ಸ್ನಾನ ಮಾಡಿದ್ದು ಮರೆಯಲಾರದ ಅನುಭವ ಎನ್ನುತ್ತಾರೆ ಎಂಆರ್‌ಪಿಎಲ್‌ ಉದ್ಯೋಗಿಯಾಗಿರುವ ಸುರೇಶ್‌ ಭಟ್‌.

ತ್ರಿವೇಣಿ ಸಂಗಮವೇ ಗಮ್ಯ
ಕುಂಭಮೇಳಕ್ಕೆ ಬರುವವರಿಗೆ ಸ್ನಾನಕ್ಕೆಂದು ಹಲವಾರು ಸ್ನಾನಘಟ್ಟಗಳನ್ನು ನಿರ್ಮಿಸಿದ್ದಾರೆ. ಅಲ್ಲಲ್ಲೇ ಸ್ನಾನ ಮಾಡಿದರೆ ತೊಂದರೆಯಾಗದು. ಆದರೆ ಬರುವವರಿಗೆ ತ್ರಿವೇಣಿ ಸಂಗಮದಲ್ಲೇ ಸ್ನಾನ ಮಾಡಬೇಕೆಂಬ ಆಕಾಂಕ್ಷೆ ಇರುತ್ತದೆ. ಹಾಗಾದಾಗ ತುಸು ಕಷ್ಟ ಎನಿಸಬಹುದು.
-ವಿಕ್ರಮ್‌ ಮಂಗಳೂರು (ಕುಂಭಮೇಳದ ಅಂಗಳದಿಂದ)

ಅಹಿತಕರ ಘಟನೆ ದುಃಖದ ಸಂಗತಿ: ಪೇಜಾವರ ಶ್ರೀ
ಉಡುಪಿ: ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಬುಧವಾರ ಸಂಭ್ರಮದಿಂದ ನಡೆದಿದೆ. ಆದರೆ ಅಲ್ಲಿ ಕೆಲವು ಅಹಿತಕರ ಘಟನೆ ನಡೆದಿರುವುದು ಅತ್ಯಂತ ದುಃಖ ತಂದಿದೆ. ಮುಂದೆ ಈ ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆದಂತೆ ಜಾಗೃತರಾಗಿರೋಣ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದ್ದಾರೆ.

ಟಾಪ್ ನ್ಯೂಸ್

Maha Kumbh 2025: Minister Prahlad Joshi takes holy dip at Triveni Sangam

Maha kumbh 2025: ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಸಚಿವ ಪ್ರಹ್ಲಾದ ಜೋಶಿ

Maha Kumbh Mela: ಮಹಾಕುಂಭಮೇಳ ಅವಧಿ ವಿಸ್ತರಣೆ ಊಹಾಪೋಹ? ಜಿಲ್ಲಾಡಳಿತ ಹೇಳಿದ್ದೇನು

Maha Kumbh Mela: ಮಹಾಕುಂಭಮೇಳ ಅವಧಿ ವಿಸ್ತರಣೆ ಊಹಾಪೋಹ? ಜಿಲ್ಲಾಡಳಿತ ಹೇಳಿದ್ದೇನು

ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ವಿಸ್ತರಣೆಗೆ ಚಿಂತನೆ: ದಿನೇಶ್ ಗುಂಡೂರಾವ್

ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ವಿಸ್ತರಣೆಗೆ ಚಿಂತನೆ: ದಿನೇಶ್ ಗುಂಡೂರಾವ್

ತೆಲುಗು ಗೊತ್ತಿಲ್ಲದ ನಾಯಕಿಯರನ್ನು ಬೆಂಬಲಿಸುತ್ತೇವೆ – ವಿವಾದ ಎಬ್ಬಿಸಿದ ನಿರ್ಮಾಪಕನ ಹೇಳಿಕೆ

ತೆಲುಗು ಗೊತ್ತಿಲ್ಲದ ನಾಯಕಿಯರನ್ನು ಬೆಂಬಲಿಸುತ್ತೇವೆ – ವಿವಾದ ಎಬ್ಬಿಸಿದ ನಿರ್ಮಾಪಕನ ಹೇಳಿಕೆ

Davanagere: ಕೆಪಿಸಿಸಿ ಅಧ್ಯಕ್ಷರ ಹುದ್ದೆ ಖಾಲಿ ಇಲ್ಲ: ಸಚಿವ ಕೆ.ಜೆ. ಜಾರ್ಜ್

Davanagere: ಕೆಪಿಸಿಸಿ ಅಧ್ಯಕ್ಷರ ಹುದ್ದೆ ಖಾಲಿ ಇಲ್ಲ: ಸಚಿವ ಕೆ.ಜೆ. ಜಾರ್ಜ್

Maharashtra: ಬಿಜೆಪಿ-ಶಿಂಧೆ ಶಿವಸೇನೆ ನಡುವೆ ಬಿಕ್ಕಟ್ಟು: 20 ಶಾಸಕರ “Y” ಭದ್ರತೆ ವಾಪಸ್!

Maharashtra: ಬಿಜೆಪಿ-ಶಿಂಧೆ ಶಿವಸೇನೆ ನಡುವೆ ಬಿಕ್ಕಟ್ಟು: 20 ಶಾಸಕರ “Y” ಭದ್ರತೆ ವಾಪಸ್!

ಭೀಕರ ಅಪಘಾತ: ಎರಡು ಕಾರುಗಳು ನುಜ್ಜುಗುಜ್ಜು, ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಭೀಕರ ಅಪಘಾತ: ಎರಡು ಕಾರುಗಳು ನುಜ್ಜುಗುಜ್ಜು, ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಪ್ರಯಾಣಿಕರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Udupi, ಮಣಿಪಾಲದಲ್ಲಿ ವ್ಯಾಪಾರ ವಲಯ

8(1

Kaup: ಒಡೆಯನ ಸನ್ನಿಧಾನದಲ್ಲಿ ಉರುಳು ಸೇವೆ

6

Karkala: ಪುಟಾಣಿಗಳಿಗೆ ಸುರಕ್ಷಿತ ಗೂಡು ಯಾವಾಗ?

5

Kundapura: ಕಿಂಡಿ ಅಣೆಕಟ್ಟು ಅವಾಂತರ; ಅಧಿಕಾರಿಗಳಿಗೆ ಬೆವರು!

ಎಪ್ರಿಲ್ 5ರಂದು ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಾರೋಪ

ಎಪ್ರಿಲ್ 5ರಂದು ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಾರೋಪ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Olavina Payana Movie: ಪಯಣ ಆರಂಭಿಸಲು ಹೊಸಬರು ರೆಡಿ

Olavina Payana Movie: ಪಯಣ ಆರಂಭಿಸಲು ಹೊಸಬರು ರೆಡಿ

Sandalwood: ಫೆ.21ಕ್ಕೆ ʼಎಲ್ಲೋ ಜೋಗಪ್ಪ ನಿನ್ನರಮನೆʼ ಬಿಡುಗಡೆ

Sandalwood: ಫೆ.21ಕ್ಕೆ ʼಎಲ್ಲೋ ಜೋಗಪ್ಪ ನಿನ್ನರಮನೆʼ ಬಿಡುಗಡೆ

9

Udupi, ಮಣಿಪಾಲದಲ್ಲಿ ವ್ಯಾಪಾರ ವಲಯ

8(1

Kaup: ಒಡೆಯನ ಸನ್ನಿಧಾನದಲ್ಲಿ ಉರುಳು ಸೇವೆ

5-exam

UV Fusion: ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಪಂಚ ಮತ್ತು ಯುವಕರ ಮನೋವೃತ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.