![Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣUdupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣ](https://www.udayavani.com/wp-content/uploads/2025/02/ga-1-415x216.jpg)
![Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣUdupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣ](https://www.udayavani.com/wp-content/uploads/2025/02/ga-1-415x216.jpg)
Team Udayavani, Jan 30, 2025, 9:23 AM IST
ಪ್ರಯಾಗ್‌ರಾಜ್: ಕಳೆದ ಕೆಲ ದಿನಗಳಿಂದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ನಡೆಯುತ್ತಿದ್ದು ಈ ನಡುವೆ ಬುಧವಾರ ಮುಂಜಾನೆ ಸಂಭವಿಸಿದ ಕಾಲ್ತುಳಿತದ ಬಳಿಕ ಯೋಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಮೌನಿ ಅಮಾವಾಸ್ಯೆಯ ದಿನ ನಡೆದ ಈ ಕಾಲ್ತುಳಿತದಲ್ಲಿ 30 ಭಕ್ತರು ಸಾವನ್ನಪ್ಪಿದ್ದು, 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ದುರ್ಘಟನೆಯ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನ್ಯಾಯಾಂಗ ಆಯೋಗದಿಂದ ತನಿಖೆಗೆ ಆದೇಶಿಸಿದ್ದಾರೆ ಮತ್ತು ಪೊಲೀಸ್ ವಿಚಾರಣೆಯನ್ನು ಸಹ ಪ್ರಾರಂಭಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.
ಪ್ರಯಾಗ್‌ರಾಜ್‌ನಲ್ಲಿ ವಾಹನಗಳ ಪ್ರವೇಶಕ್ಕೆ ನಿಷೇಧ:
ಅಪಘಾತದ ನಂತರ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಕುಂಭಮೇಳದ ಪ್ರದೇಶದಲ್ಲಿ ವಾಹನಗಳು ಬಂದು ಹೋಗುವುದನ್ನು ನಿಷೇಧಿಸಿ ಎಲ್ಲ ವಿಐಪಿ ಪಾಸ್ ಗಳನ್ನು ರದ್ದುಪಡಿಸುವಂತೆ ಸೂಚನೆ ನೀಡಿದ್ದಾರೆ. ಫೆಬ್ರವರಿ 4ರವರೆಗೆ ಭಕ್ತರಿಗೆ ಕಾಲ್ನಡಿಗೆಯಲ್ಲಿ ಸಂಗಮಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಪ್ರಯಾಗರಾಜ್ ನಗರದಲ್ಲಿ 4 ಚಕ್ರದ ವಾಹನಗಳ ಪ್ರವೇಶವನ್ನು ಸಹ ನಿಷೇಧಿಸಲಾಗಿದೆ. ನಗರದಲ್ಲಿ ಬೈಕ್, ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ದಳಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಅಲ್ಲದೆ, ಕುಂಭಮೇಳ ನಡೆಯುವ ಪ್ರದೇಶವನ್ನು ವಾಹನ ರಹಿತ ವಲಯ ಎಂದು ಘೋಷಿಸಲಾಗಿದೆ.
ಬೀದಿ ಬದಿ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ರಸ್ತೆಗಳಲ್ಲಿ ನಡೆಸುತ್ತಿದ್ದರೆ, ಅವರನ್ನು ಖಾಲಿ ಪ್ರದೇಶಗಳಿಗೆ ಸ್ಥಳಾಂತರಿಸಬೇಕು ಮತ್ತು ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ಮೇಳಕ್ಕೆ ಭೇಟಿ ನೀಡುವ ಜನರನ್ನು ಅನಗತ್ಯವಾಗಿ ನಿಲ್ಲಿಸಬಾರದು ಎಂದು ಆದಿತ್ಯನಾಥ್ ಹೇಳಿದರು.
ಮೇಳ ಪ್ರದೇಶದಲ್ಲಿ ಗಸ್ತು ಹೆಚ್ಚಿಸುವಂತೆ ಮತ್ತು ಅಯೋಧ್ಯೆ-ಪ್ರಯಾಗರಾಜ್, ಕಾನ್ಪುರ-ಪ್ರಯಾಗರಾಜ್, ಫತೇಪುರ್-ಪ್ರಯಾಗರಾಜ್, ಲಕ್ನೋ-ಪ್ರತಾಪಗಢ-ಪ್ರಯಾಗರಾಜ್ ಮತ್ತು ವಾರಣಾಸಿ-ಪ್ರಯಾಗರಾಜ್ ಮಾರ್ಗಗಳಲ್ಲಿ ಸಂಚಾರ ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಯಾಗ್‌ರಾಜ್‌ನಿಂದ ಹಿಂತಿರುಗುವ ಎಲ್ಲಾ ಮಾರ್ಗಗಳು ಯಾವುದೇ ಅಡೆತಡೆಗಳು ಇರದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
ಪರಿಸ್ಥಿತಿ ಆಧರಿಸಿ ಭಕ್ತರಿಗೆ ತೆರಳಲು ಅವಕಾಶ ನೀಡಬೇಕು. ಜೊತೆಗೆ ಅವರಿಗೆ ಆಹಾರ ಮತ್ತು ಕುಡಿಯುವ ನೀರಿನ ಸರಿಯಾದ ವ್ಯವಸ್ಥೆಯನ್ನು ಮಾಡಬೇಕು ಎಂದು ಹೇಳಿದರು.
ಕಾಲ್ತುಳಿತಕ್ಕೆ ಕಾರಣಗಳನ್ನು ತನಿಖೆ ಮಾಡಲು ಸೂಚನೆಗಳು:
ಈ ಅವಘಡದ ಕಾರಣಗಳ ಬಗ್ಗೆ ತನಿಖೆ ನಡೆಸುವಂತೆ ಸಿಎಂ ಯೋಗಿ ಸೂಚನೆ ನೀಡಿದ್ದಾರೆ. ಆರಂಭಿಕ ವರದಿಗಳ ಪ್ರಕಾರ, ಮೌನಿ ಅಮಾವಾಸ್ಯೆಯ ದಿನದಂದು ಅಮೃತ ಸ್ನಾನದ ಕಾರಣ ಪೊಂಟೂನ್ ಸೇತುವೆಗಳನ್ನು ಮುಚ್ಚಲಾಯಿತು, ಇದರಿಂದಾಗಿ ಸಂಗಮದಲ್ಲಿ ಭಾರಿ ಜನರು ಸೇರಿದ್ದರು. ಇದಲ್ಲದೇ ಪ್ರವೇಶ ಮತ್ತು ನಿರ್ಗಮನ ಮಾರ್ಗ ಒಂದೇ ಆಗಿರುವುದರಿಂದ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಮಸ್ಯೆಗಳನ್ನು ಪರಿಹರಿಸಲು ಆಡಳಿತ ತ್ವರಿತ ಕ್ರಮಗಳನ್ನು ಕೈಗೊಂಡಿದೆ ಮತ್ತು ಕುಂಭಮೇಳ ನಡೆಯುವ ಪ್ರದೇಶದಲ್ಲಿ ಕೆಲವೊಂದು ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.
ಏಕಮುಖ ಸಂಚಾರ:
ಮೌನಿ ಅಮಾವಾಸ್ಯೆ ಘಟನೆಯಿಂದ ಪಾಠ ಕಲಿತ ಸರ್ಕಾರ ಕುಂಭಮೇಳ ನಡೆಯುವ ವ್ಯಾಪ್ತಿಯ ರಸ್ತೆಗಳನ್ನು ಏಕಮುಖ ರಸ್ತೆಯನ್ನಾಗಿ ಮಾಡಿದ್ದು. ಭಕ್ತರು ಸ್ನಾನ ಮುಗಿಸಿ ಬೇರೆ ಮಾರ್ಗದ ಮೂಲಕ ಹಿಂತಿರುಗಬೇಕಾಗುತ್ತದೆ. ಇದಲ್ಲದೆ, ಪ್ರಯಾಗ್‌ರಾಜ್‌ಗೆ ಬರುವ 8 ಪ್ರಮುಖ ದ್ವಾರಗಳನ್ನು ಮುಚ್ಚಲಾಗಿದೆ, ಇದು ಜನಸಂದಣಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.
ಬುಧವಾರ 10 ಕೋಟಿ ಭಕ್ತರಿಂದ ಪವಿತ್ರ ಸ್ನಾನ:
ದುರಂತದ ಬಳಿಕ ಭಕ್ತರಿಗೆ ಸ್ನಾನಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಬುಧವಾರ ರಾತ್ರಿ ವೇಳೆಗೆ ಸುಮಾರು 10 ಕೋಟಿ ಭಕ್ತರು ಸಂಗಮ ಸೇರಿದಂತೆ 44 ಘಾಟ್‌ಗಳಲ್ಲಿ ಸ್ನಾನ ಮಾಡಿದ್ದಾರೆ ಎಂದು ಹೇಳಲಾಗಿದೆ. ಭದ್ರತಾ ವ್ಯವಸ್ಥೆಗಳ ದೃಷ್ಟಿಯಿಂದ ಪ್ರಯಾಗ್‌ರಾಜ್‌ನಾದ್ಯಂತ 60,000 ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಲಾಗಿತ್ತು.
ಇದನ್ನೂ ಓದಿ: ಅಮೂಲ್ಯ ಖನಿಜದ ಮೇಲೆ ಕೇಂದ್ರ ಕಣ್ಣು! ಹೊಸ ನಿಗಮ ಸ್ಥಾಪನೆಗೆ ಕೇಂದ್ರ ಸಂಪುಟ ಅಸ್ತು
Bhubaneswar: ನೇಪಾಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ, ಭಾರೀ ಪ್ರತಿಭಟನೆ
Kumbh stampede: ಸರ್ಕಾರದ ವಿರುದ್ಧ “ಅಸ್ಥಿ ಕುಡಿಕೆ’ ಪ್ರತಿಭಟನೆ
Augusta scam: 6 ವರ್ಷಗಳ ಕಸ್ಟಡಿ ಬಳಿಕ ಅಗಸ್ಟಾ ಹಗರಣ ದಲ್ಲಾಳಿ ಮೈಕೆಲ್‌ಗೆ ಜಾಮೀನು
TTD: ತಿರುಪತಿ ದೇಗುಲದ ಉಚಿತ ಅನ್ನಪ್ರಸಾದ ಟ್ರಸ್ಟ್‌ಗೆ ಮುಂಬೈ ವ್ಯಕ್ತಿ 11ಕೋಟಿ ರೂ.ದೇಣಿಗೆ!
ಮಹಾಕುಂಭ ‘ಮೃತ್ಯುಕುಂಭ’ ವಾಗಿ ಮಾರ್ಪಟ್ಟಿದೆ… ಯೋಗಿ ಸರ್ಕಾರದ ವಿರುದ್ಧ ಮಮತಾ ವಾಗ್ದಾಳಿ
Udupi: ಗೀತಾರ್ಥ ಚಿಂತನೆ-191: “ಡಿಸಿಶನ್ ಮೇಕರ್ ನೀನಲ್ಲ’ ಎಂಬ ಶ್ರೀಕೃಷ್ಣ
Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣ
Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್ ಜಾರಕಿಹೊಳಿ
Mangaluru: ವಿದ್ಯುತ್ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ
Bhubaneswar: ನೇಪಾಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ, ಭಾರೀ ಪ್ರತಿಭಟನೆ
You seem to have an Ad Blocker on.
To continue reading, please turn it off or whitelist Udayavani.