ಮಂಗಳೂರು ವಿಮಾನ ದುರಂತ@10: ಬೆಂಕಿಯ ಉಂಡೆಯಾಯಿತು ವಿಮಾನ…

ಮಂಗಳೂರು ವಿಮಾನ ದುರಂತಕ್ಕೆ ಹತ್ತು ವರ್ಷ

Team Udayavani, May 22, 2020, 9:00 AM IST

ಬೆಂಕಿಯ ಉಂಡೆಯಾಯಿತು ವಿಮಾನ…

ಮಂಗಳೂರು: ಏರಿಂಡಿಯಾ ಎಕ್ಸ್‌ಪ್ರಸ್‌ ವಿಮಾನ ಶನಿವಾರ ಮುಂಜಾನೆ ವಿಮಾನ ನಿಲ್ದಾಣದಲ್ಲಿ ಇಳಿಯುವ ಕ್ಷಣದವ ರೆಗೂ ಯಾವುದೇ ಸಮಸ್ಯೆಗಳು
ಇರಲಿಲ್ಲ. ದುಬಾೖ ನಿಂದ ಬರುತ್ತಿರುವ ಬಂಧು ಮಿತ್ರರ ಸ್ವಾಗತಕ್ಕೆ ಬಜ್ಪೆ ವಿಮಾನ ನಿಲ್ದಾಣದಲ್ಲಿ ವಾಹನಗಳ ಸಹಿತ ಆಪ್ತರು ಕಾದಿದ್ದರು. ವಿಮಾನ ಆಗಮಿಸಿದ
ಕ್ಷಣ ಅಲ್ಲಿ ಸಂತಸದ ವಾತಾವರಣವಿತ್ತು. ನಿಲ್ದಾ ಣದ ಸಿಬಂದಿ ಕೂಡಾ ಪೈಲಟ್‌ ಜತೆ ಸಂಕೇತಗಳ ವಿನಿಮಯ ನಡೆಸಿ ನಿರಾಳವಾಗಿದ್ದರು.

ಬಜ್ಪೆ ಯಲ್ಲಿ ನೂತನ ರನ್‌ ವೇ ಗಳ ನಿರ್ಮಾಣ ಪೂರ್ಣವಾಗಿ 2006ರಿಂದಲೇ ಅಲ್ಲಿ ವಿಮಾನಗಳ ಹಾರಾಟ ನಡೆಯುತ್ತಿದೆ. ಪ್ರಯಾಣಿಕರ ಆಗಮನ- ನಿರ್ಗಮನ ಮಾತ್ರ ಈಗಿನ ಟರ್ಮಿನಲ್‌ ಕಟ್ಟಡದ ಮೂಲಕ ಸಾಗುತ್ತದೆ. ಹೊಸ ಟರ್ಮಿನಲ್‌ ಕಟ್ಟಡದ ಉದ್ಘಾಟನೆ ಕಳೆದ ಮೇ 15ರಂದು ನಡೆದಿದ್ದರೂ ಅದರ ಬಳಕೆ ಮಾತ್ರ ಜೂನ್‌ ಪ್ರಥಮ ಅಥವಾ ದ್ವಿತೀಯ ವಾರದಿಂದ ಪ್ರಾರಂಭವಾಗಲಿದೆ. ಶನಿವಾರ ಮುಂಜಾನೆ ಇಳಿದ ವಿಮಾನ ರನ್‌ ವೇಯಿಂದ ಮುಂದೆ ಸಾಗುತ್ತಾ ಹೋಗಿದೆ. ನಿಲ್ದಾ ಣದ ಸಿಬಂದಿ ಉದ್ವೇಗದಿಂದ ಉಸಿರು ಬಿಗಿ ಹಿಡಿದಿದ್ದಾರೆ. ವಿಮಾನ ಕಾಣಿಸುತ್ತಿಲ್ಲ. ಸಂಕೇತ ಸಂಪರ್ಕಗಳೆಲ್ಲ ಕಡಿತವಾಗಿವೆ. ಈಗಿನ ಮಾಹಿತಿಯಂತೆ, ಪ್ರತಿಕೂಲ ವಾತಾವರಣವಿರಲಿಲ್ಲ. ವಿಮಾನ ಇಳಿಯಬೇಕಾದರೆ ಆಗಿನ ಹವಾಮಾನವನ್ನು ಅಥವಾ ಲಭ್ಯ ಬೆಳಕನ್ನು ವೈಮಾನಿಕ ಪರಿಭಾಷೆಯಲ್ಲಿ “ವಿಸಿಬಿಲಿಟಿ’ ಎಂದು ಉಲ್ಲೇಖಿಸಲಾಗುತ್ತದೆ. ಶನಿವಾರ ಮುಂಜಾವಿನ ಈ ಅವಧಿಯಲ್ಲಿ ವಿಸಿಬಿಲಿಟಿಯು ಅತ್ಯಂತ ಸೂಕ್ತ ವಾದ 6 ಕಿ.ಮೀ. ಆಗಿತ್ತು. ಮಳೆಯೂ ಸುರಿಯುತ್ತಿರಲಿಲ್ಲ. ಆದರೂ ಈ ದುರಂತ ಹೇಗೆ ಸಂಭವಿಸಿತು ?

ವಿಮಾನ ನಿಯಂತ್ರಣ ಕಳೆದುಕೊಂಡು ಎದುರು ಗೋಡೆಯನ್ನು ಭೇದಿಸಿ, ಎರಡು ಕಂಬಗಳನ್ನು ಮುರಿದು ಕೆಳಗೆ ಸುಮಾರು 150 ಮೀಟರ್‌ ಧುಮುಕಿ ಅಲ್ಲಿಂದ
ಮುನ್ನುಗ್ಗಿ ಮತ್ತೆ 150 ಮೀ. ಕೆಳಕ್ಕೆ ಕೆಂಜಾರು (ಸಂಪರ್ಕ ರಸ್ತೆ ಆದ್ಯಪಾಡಿ) ಗುಡ್ಡದಲ್ಲಿ ಪತನಗೊಂಡು ಭಸ್ಮಿ ಭೂತಗೊಂಡಿತು. ಹೀಗೆ, ಅಪಘಾತ ಸಂಭವಿಸಿದ ಕಾರಣಗಳು ಸ್ಪಷ್ಟವಾಗುತ್ತಿಲ್ಲ. ವಿಮಾನದಲ್ಲಿನ “ಬ್ಲ್ಯಾಕ್‌ ಬಾಕ್ಸ್‌’ ಮೂಲಕವೇ ಈ ಬಗ್ಗೆ ಮಾಹಿತಿ ದೊರೆಯಬೇಕಾಗಿತ್ತು. ಅಂದಾಜಿನ ವೈಫಲ್ಯ ರನ್‌ವೇ ಅಂದಾಜಿಸುವಲ್ಲಿನ ಪೈಲಟ್‌ನ ವೈಫಲ್ಯವೇ ದುರಂತಕ್ಕೆ ಕಾರಣಗಳಲ್ಲೊಂದಾಗಿರಬಹುದೆಂಬ ಶಂಕೆಯನ್ನು ಮಂಗಳೂರು ವಿಮಾನ ನಿಲ್ದಾ ಣದ ನಿರ್ದೇಶಕ
ಪೀಟರ್‌ ಅಬ್ರಹಾಂ ಅವರು ವ್ಯಕ್ತಪಡಿಸಿದ್ದರು. “”ಸಾಮಾನ್ಯವಾಗಿ ವಿಮಾನಗಳು ರನ್‌ ವೇಯ ಮುಕ್ತಾಯಕ್ಕೆ ಮೊದಲೇನಿಲ್ಲ ಬೇಕು. ಆದರೆ, ಇಲ್ಲಿ ವಿಮಾನ ಇಳಿಯುತ್ತಲೇ ರನ್‌ ವೇಯನ್ನು ದಾಟಿ ಮುಂದೆ ಹೋಗಿದೆ. ನಾಗರಿಕ ವಿಮಾನ ಯಾನ ಮಹಾನಿರ್ದೇಶನಾಲಯದ ತಜ್ಞರು ಈ ಬಗ್ಗೆ ತನಿಖೆ ನಡೆಸಿ ಮಾಹಿತಿ ನೀಡುವರು” ಎಂದಿದ್ದರು.

ಬ್ರೇಕ್‌ ನಿಯಂತ್ರಣದ ಏರು ಪೇರಿನ ಸಾಧ್ಯ ತೆಯೂ ಇದೆ. ಭೂ ಸ್ಪರ್ಶಕ್ಕೆ 4 ಮೈಲಿ ಅಂತರದಲ್ಲಿ ಪೈಲಟ್ ಗಳಿಗೆ ಏರ್‌ ಟ್ರಾಫಿಕ್‌ ಕಂಟ್ರೋಲ್ ನವರು ಅನುಮತಿ ನೀಡಿದ್ದಾರೆ. ಆದರೆ ವಿಮಾನದ ಚಕ್ರಗಳು ಭೂಸ್ಪರ್ಶದ ವಲಯಕ್ಕಿಂತ ಮುಂದೆ ನೆಲವನ್ನು ಸ್ಪರ್ಶಿಸಿದೆ. ಇದರ ಪರಿಣಾಮವಾಗಿ ವಿಮಾನವು ರನ್‌ವೇ ತುದಿಯಿಂದ ಮುಂದೆ, ಸುರಕ್ಷತಾ ವಲಯಕ್ಕಿಂತ 90 ಮೀಟರ್‌ ಮುಂದೆ ಸಾಗಿ ಕಣಿವೆಗೆ ಉರುಳಿದೆ. ಬಜ್ಪೆ ವಿಮಾನ ನಿಲ್ದಾ ಣವು 8000 ಅಡಿಗಳಷ್ಟು ರನ್ ವೇಯನ್ನು ಹೊಂದಿದೆ.

ವಿದೇಶೀ ಪೈಲಟ್‌
ಬಜ್ಪೆಯ ನತದೃಷ್ಟ ವಿಮಾನದ ಪೈಲಟ್ಗಳು ಕಮಾಂಡರ್‌ ಆಗಿದ್ದವರು ಸರ್ಬಿಯಾದ ಕ್ಯಾಪ್ಟನ್‌ ಝಡ್‌. ಗ್ಲೂಸಿಕಾ ಮತ್ತು ಸಹ ಪೈಲಟ್‌ ಆಗಿದ್ದವರು ಭಾರತೀಯ
ಎಚ್‌. ಎಸ್‌. ಅಹ್ಲುವಾಲಿಯಾ. ಭಾರತೀಯ ವಿಮಾನಗಳಲ್ಲಿ ವಿದೇಶೀ ಪೈಲಟ್ ಗಳ ಸೇವೆ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಈ ದುರಂತದ ಹಿನ್ನೆಲೆಯಲ್ಲಿ ಮತ್ತೆ ಚಾಲನೆ ದೊರೆತಿದೆ. ಭಾರತದಲ್ಲಿ 5500 ನಾಗರಿಕ ವಿಮಾನಯಾನ ಪೈಲಟ್ ಗಳಿದ್ದಾರೆ. ಅವರ ಪೈಕಿ 560 ಮಂದಿ ವಿದೇಶೀ ಪೈಲಟ್ ಗಳು. ಈ ವಿದೇಶೀ
ಪಲಟ್ ಗಳಿಗೆ ಭಾರತೀಯ ಹವಾಮಾನ ಮತ್ತು ವೈವಿಧ್ಯಮಯ ಭೌಗೋಳಿಕ ಹಿನ್ನೆಲೆಗಳ ಅರಿವು ಇರುವುದಿಲ್ಲ ಎಂಬ ಮಾತೊಂದು ಕೇಳಿ ಬಂದಿದೆ. ಅನೇಕ ಸಂದರ್ಭಗಳಲ್ಲಿ ಭಾಷೆ-ಉಚ್ಚಾರದ ಸಮಸ್ಯೆಗಳೂ ಸಂಪರ್ಕ ಸಂವಹನಕ್ಕೆ ತೊಡಕಾಗುತ್ತವೆ. ಭಾರತೀಯ ಉಚ್ಚಾರ ಅವರಿಗೆ ಅಥವಾ ಅವರ ಉಚ್ಚಾರ ಇಲ್ಲಿನವರಿಗೆ ಸಂವಹನವಾಗದಿರುವ ತೊಡಕುಗಳಿರುತ್ತವೆ. ವಿದೇಶೀ ಪೈಲಟ್ ಗಳ ಸೇವೆ ಸಂಬಂಧಿತ ಲೈಸೆನ್ಸ್‌ ಮುಂದಿನ ಜುಲೈ 31ರ ವರೆಗೆ ಪ್ರಚಲಿತವಿರುತ್ತದೆ. ಈ ಸಂಬಂಧಿತ ಹೊಸ ನಿಯಮಾವಳಿ ಬಗ್ಗೆ ವಿಮಾನ ಯಾನ ನಿರ್ವಾ ಹಕ ಸಂಸ್ಥೆ ಗಳ ಅಭಿಪ್ರಾಯಗಳನ್ನು ಕೇಳಲಾಗಿದೆ ಎಂದು ಕೇಂದ್ರ ವಿಮಾನ ಯಾನ ಖಾತೆಯ ಸಚಿವ ಪ್ರಫುಲ್‌ ಪಟೇಲ್‌ ತಿಳಿಸಿದ್ದರು.

ಟಾಪ್ ನ್ಯೂಸ್

13-bng

Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

12-muniratna

Bengaluru: ಶಾಸಕ ಮುನಿರತ್ನ ಕೇಸ್‌: ವಿಕಾಸಸೌಧದಲ್ಲಿ ಸ್ಥಳ ಮಹಜರು

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rangavaibhava

Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

Donald Trump Salry: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…

Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…

Kannada-Horata

Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

13-bng

Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

12-muniratna

Bengaluru: ಶಾಸಕ ಮುನಿರತ್ನ ಕೇಸ್‌: ವಿಕಾಸಸೌಧದಲ್ಲಿ ಸ್ಥಳ ಮಹಜರು

1(1)

Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.