‘ಸಹನೆ ನಿನ್ನದಾದ್ರೆ ಸಕಲವೂ ನಿನ್ನದೇ ಎಂದು ಉಪದೇಶಿದಳು’: ಪ್ರೀತಿಯ ಅಮ್ಮನಿಗೊಂದು ಪದ್ಯ
Team Udayavani, May 10, 2020, 12:07 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನಾ ಉಸಿರಾಡೋ ಪ್ರತಿ ಗಾಳಿಯು ನಿನ್ನ ಭಿಕ್ಷೆ ಅಮ್ಮ..
ನನ್ನ ಹೃದಯದ ಬಡಿತದ ಸದ್ದು ನಿನ್ನದಮ್ಮಾ.
ನನ್ನ ಜೀವನ ನಿನಗಾಗಿ ಮುಡಿಪು ಅಮ್ಮ..
ಮರಳಿ ಮಗುವಾಗಲು ಕಾತರಿಸುತ್ತಿದೆ ಈ ಮನಸ್ಸು
ನಿನ್ನಪ್ಪುಗೆಯಲ್ಲಿ ನಿನ್ನೊಲವನ್ನು ಸವಿಯುವುದೇ ಸೊಗಸು..
ನಿನ್ನಾಸರೆಯೊಂದು ನನಗೆ ಶಕ್ತಿಯ ಛಾಯೆ..
ನನ್ನೆಲ್ಲ ದುಃಖ ಮರೆಸುವ ಅಮೋಘ ಮಾಯೆ..
ಮನಸಲ್ಲಿ ನೂರಾರು ನೋವನ್ನು ನಿರ್ಮಿಸಿದಾಗ ನಗುವನ್ನು ಕಳಿಸಿದಳು..
ಹೆಜ್ಜೆ ಹೆಜ್ಜೆಗೂ ನೋವಾದಾಗ ಹೆಜ್ಜೆ ಇಡುವುದನ್ನು ಕಲಿಸಿದಳು..
ವಿನಯವು ನಿನ್ನದಾದರೆ ವಿಜಯವು ನಿನ್ನದೇ
ಸಹನೆ ನಿನ್ನದಾದ್ರೆ ಸಕಲವೂ ನಿನ್ನದೇ ಎಂದು ಉಪದೇಶಿದಳು ನನ್ನ ಅಮ್ಮ..
ನಮ್ಮ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವತೆ
ಮೂರು ಲೋಕಗಳ ಹಿಂಧಿಕ್ಕಿ ಕಾಣುವ ಜಗನ್ಮಾತೆ
ತನ್ನ ಕರುಳ ಕತ್ತರಿಸಿ ಜನ್ಮ ಕೊಟ್ಟ ಜನ್ಮದಾತೆ
ನಿನಗೆ ಈ ಸ್ವರ್ಗವು ಸಮಾನಾದಿತೇ ಅಮ್ಮ ❤️
– ಪೂರ್ಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಗು ಹುಟ್ಟಿದಾಗ ಕಣ್ಣು ಕಲ್ಪನೆಗೆ ಬಂದಾಗ ಮೊದಲು ಕಾಣುವ ಮುಖವೇ ಅಮ್ಮನದ್ದು
‘ಮಾತೃದೇವೋಭವ’: ಅಮ್ಮನ ಬಗ್ಗೆ ಹೇಳಲು ಪದಗಳೇ ಸಾಲದು…. ಅವಳಿಗೆ ಅವಳೇ ಸಾಟಿ….
ನೋವಲ್ಲಿ ಶೋಕ ಸಾಗರವೇ ಬಂದರು ದಾರಿ ಸವೆಸಿ ಕಂದನ ಬರಸೆಳೆದಪ್ಪುವಳು
ನಾನು ಅಮ್ಮನ ಕನಸಿನಲ್ಲಿ ಎಚ್ಚರವಾಗಿರುತ್ತೇನೆ, ಅವಳು ನನ್ನ ಕನಸಿನಲ್ಲಿ ಎಚ್ಚರವಾಗಿರುತ್ತಾಳೆ
ನವಮಾಸ ನಮ್ಮನ್ನು ಹೊತ್ತು, ಹೆರುವ ಆಕೆಗೆ ಕೇವಲ ಒಂದು ದಿನ ಇತ್ತರೆ ಸಾಕೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.