ಅಮ್ಮನ ಹೆಸರಿನಲ್ಲಿ ಶಾಲೆಯೊಂದನ್ನು ಕಟ್ಟಬೇಕೆಂಬುದು ನನ್ನ ಕನಸು
ನಮ್ಮಮ್ಮನ ತ್ಯಾಗ ಪರಿಶ್ರಮದ ಮುಂದೆ ನಂದೆಲ್ಲಾ ಏನೂ ಅಲ್ಲಾ ಬಿಡ್ರೋ ಅನ್ನುತ್ತದೆ ನನ್ನ ಒಳಮನಸ್ಸು.
Team Udayavani, May 10, 2020, 12:19 PM IST
Representative Image
ನಮ್ಮಮ್ಮನ ಬಗ್ಗೆ ನಾನು ಹೇಳಹೊರಟರೆ ನನಗೆ ಲಂಕೇಶರ ಅವ್ವ (ಕವನ) ಕಣ್ಣ ಮುಂದೆ (ಬರುತ್ತದೆ) ಬರುತ್ತಾಳೆ. ಏಕೆಂದರೆ ನಮ್ಮಮ್ಮನೂ ಹೆಚ್ಚು ಕಡಿಮೆ ಹಾಗೆಯೇ. ಒಮ್ಮೆಯೂ ಗುಲಗಂಜಿಯಷ್ಟು ಚಿನ್ನಕ್ಕೆ ಆಸೆ ಪಡದ, ರೇಷ್ಮೆ ಸೀರೆಯ ಕನಸು ಕಾಣದ, ಬಡತನವೇ ದರ್ಬಾರು ನಡೆಸುತ್ತಿದ್ದ ಮನೆಗೆ ಸೊಸೆಯಾಗಿ ಬಂದು, ನಮ್ಮಪ್ಪನ ಸಂಸಾರದ ನೊಗಕ್ಕೆ ಜೋಡೆತ್ತಿನಂತಾದ ಆಕೆಯ ಬಗ್ಗೆ ಹೇಳಹೊರಟರೆ ಪದಗಳೇ ಬಡವಾಗುತ್ತವೆ.
ತಾವು ಅನಕ್ಷರಸ್ಥಳಾದರೂ ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ, ಬೆಳೆಸಬೇಕೆಂದು ಅಪ್ಪನಿಗಿಂತ ಹೆಚ್ಚು ಕನಸು ಕಂಡ ನಮ್ಮಮ್ಮನ ಆ ಆಸೆಯ ಫಲವೇ ಅವರ ಐದು ಜನ ಮಕ್ಕಳಾದ ನಾವು ಇಂದು ಸಮಾಜದಲ್ಲಿ ಹೆಮ್ಮೆಯಿಂದ ಎದೆ ತಟ್ಟಿಕೊಂಡು ಹೇಳುವಷ್ಟು ಓದಿದ್ದೇವೆ. ಅದರಲ್ಲೂ ನಾನು ಸಾಹಿತಿ ಎನ್ನಿಸಿಕೊಳ್ಳುವಷ್ಟರ ಮಟ್ಟಿಗೆ ಓದಿ, ಬೆಳೆದಿದ್ದೇನೆಂದರೆ, ಅದರಲ್ಲಿ ನಮ್ಮಮ್ಮನ ಪಾಲು ಬಹಳಿದೆ. ಇದೆಲ್ಲಕ್ಕಾಗಿ ಆಕೆ ಪಟ್ಟಪಾಡು ಆಕೆಗೆ ಮಾತ್ರವೇ ಗೊತ್ತು.
ಗೆಳೆಯರು, ಒಮ್ಮೊಮ್ಮೆ ನಾನು ಹಸಿವು, ನಿದ್ರೆಗಳ ಪರಿವಿಲ್ಲದೆ ಕೆಲಸ ಮಾಡುವುದನ್ನು ಕಂಡು, ಏನ್ ಕೆಲ್ಸಾ ಮಾಡ್ತೀಯೋ, ಛಲ ಬಿಡದ ತ್ರಿವಿಕ್ರಮನಂತೆ ನೀನು ಗ್ರೇಟ್ ಬಿಡು ಅಂತಂದು ಬೆನ್ನುತಟ್ಟಿದಾಗ, ನಮ್ಮಮ್ಮನ ತ್ಯಾಗ ಪರಿಶ್ರಮದ ಮುಂದೆ ನಂದೆಲ್ಲಾ ಏನೂ ಅಲ್ಲಾ ಬಿಡ್ರೋ ಅನ್ನುತ್ತದೆ ನನ್ನ ಒಳಮನಸ್ಸು. ಏಕೆಂದರೆ ಆಕೆ ಹೀಗೆ ನಮ್ಮನ್ನೆಲ್ಲ ಓದಿಸಲು, ಬೆಳೆಸಲು, ಎಲ್ಲರಿಗೊಂದು ಸುಂದರ ಬದುಕು ಕಟ್ಟಿಕೊಡಲು, ನಿದ್ದೆಗೆಟ್ಟು ದುಡಿದ, ಅರೆಹೊಟ್ಟೆ ಉಂಡು ಮಲಗಿದ ದಿನಗಳ ಲೆಕ್ಕ ನನಗೆ ಗೊತ್ತಿದೆ. ಅಂತಹ ತ್ಯಾಗಮೂರ್ತಿ ನಮ್ಮಮ್ಮನ ಹೆಸರಿನಲ್ಲಿ ಶಾಲೆಯೊಂದನ್ನು ಕಟ್ಟಬೇಕೆಂಬುದು ನನ್ನ ಕನಸು.
*ಮಂಜುನಾಥ.ಎಸ್.ಕಟ್ಟಿಮನಿ
ಇಬ್ರಾಹಿಮಪೂರ
ವಿಜಯಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಗು ಹುಟ್ಟಿದಾಗ ಕಣ್ಣು ಕಲ್ಪನೆಗೆ ಬಂದಾಗ ಮೊದಲು ಕಾಣುವ ಮುಖವೇ ಅಮ್ಮನದ್ದು
‘ಮಾತೃದೇವೋಭವ’: ಅಮ್ಮನ ಬಗ್ಗೆ ಹೇಳಲು ಪದಗಳೇ ಸಾಲದು…. ಅವಳಿಗೆ ಅವಳೇ ಸಾಟಿ….
ನೋವಲ್ಲಿ ಶೋಕ ಸಾಗರವೇ ಬಂದರು ದಾರಿ ಸವೆಸಿ ಕಂದನ ಬರಸೆಳೆದಪ್ಪುವಳು
ನಾನು ಅಮ್ಮನ ಕನಸಿನಲ್ಲಿ ಎಚ್ಚರವಾಗಿರುತ್ತೇನೆ, ಅವಳು ನನ್ನ ಕನಸಿನಲ್ಲಿ ಎಚ್ಚರವಾಗಿರುತ್ತಾಳೆ
ನವಮಾಸ ನಮ್ಮನ್ನು ಹೊತ್ತು, ಹೆರುವ ಆಕೆಗೆ ಕೇವಲ ಒಂದು ದಿನ ಇತ್ತರೆ ಸಾಕೇ?
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.