ಸಂಸಾರಕ್ಕೆ ಸೂತ್ರ ಇವಳು:ದಣಿವರಿಯದ ದೇವತೆ ಈ ತಾಯಿ
40ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಾನು ಅವರಿಗೆ ಗೊತ್ತಾಗದ ಹಾಗೆ ಉಡುಗೊರೆ ನೀಡಿದ್ದೆ.
Team Udayavani, May 10, 2020, 12:14 PM IST
Representative Image
ಮಗು ಹುಟ್ಟಿದಾಗ ಕಣ್ಣು ಕಲ್ಪನೆಗೆ ಬಂದಾಗ ಮೊದಲು ಕಾಣುವ ಮುಖವೇ ತಾಯಿಯದು ಅದುವೇ ನನ್ನ ತಾಯಿ ತುಳಸಾಬಾಯಿ ನಮ್ಮದು ಮಧ್ಯಮ ಕುಟುಂಬ ಅದರಲ್ಲಿ ನಮ್ಮೆಲ್ಲರಿಗಿಂತ ಬೆಳಿಗ್ಗೆ ಬೇಗ ಏಳುವುದರಿಂದ ಹಿಡಿದು ರಾತ್ರಿ ಎಲ್ಲರೂ ಮಲಗಿದ ನಂತರ ತಾನು ಕೊನೆಗೆ ಮನೆಯ ಬಾಗಿಲುಗಳನ್ನು ಲಾಕ್ ಮಾಡಿದ ಬಗ್ಗೆ ಪರಿಶೀಲಿಸಿ ಮಲಗುವಳು ದಣಿವರಿಯದ ದೇವತೆ ಈ ತಾಯಿ.
ನನ್ನ ತಂದೆ ವೆಂಕಟೇಶ್ ಕೆಲವು ವಿಷಯಕ್ಕೆ ಹಲವು ಸಲ ಕೋಪಗೊಡರೂ ಅವರನ್ನು ಆ ಕ್ಷಣ ಸಮಾಧಾನ ಪಡಿಸಿ ಮತ್ತೆ ಸಂಸಾರದ ನೌಕೆ ನಡೆಸುವಳು ತನ್ನ ಸಿಟ್ಟನ್ನು ಸವರಿಹಾಕಿ ಕ್ಷಮಾದಾನ ಕರಗತ ಮಾಡಿಕೊಂಡವಳು. ನನ್ನ ಮಕ್ಕಳು ಸಹ ಸಂಸ್ಕಾರಯುತವಾಗಿ ಬೆಳೆಯಲು ಇವಳದೆ ಪ್ರಮುಖ ಪಾತ್ರವಿದೆ.
ಅಲ್ಲದೆ ನನ್ನ ಮಡದಿ ಇದ್ದರೂ ಸಹ ಮೊದಲು ಸ್ನಾನಕ್ಕೆ ನೀರು ಹಾಕಿ ಇಡುವವಳು, ತನ್ನ ಮೊಮ್ಮಕ್ಕಳು ಜನಿಸಿದಾಗ ಅವುಗಳಿಗೆ ಎಣ್ಣೆ ಸ್ನಾನ (ಎರೆಯುವುದು) ವಿಶೇಷ ಮಸಾಜ್ ಮಾಡುವ ಕಲೆ ಅರಿತವಳು ಇದನ್ನೊಡಿದ ಪಕ್ಕದ ಮನೆಯವರು ಸಹ ತಮ್ಮ ಎಳೆಯ ಮಕ್ಕಳಿಗೂ ಇವಳಿಂದಲೇ ಎರೆಯಲು ಹೇಳುತ್ತಿದ್ದರು. ಇವಳ 40ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಾನು ಅವರಿಗೆ ಗೊತ್ತಾಗದ ಹಾಗೆ ತಂದೆ ತಾಯಿ ಇಬ್ಬರಿಗೂ ಹೊಸ ಬಟ್ಟೆಗಳನ್ನು ತಂದು ಹೂ ಹಾರಗಳಿಂದ ಸಣ್ಣ ಸಮಾರಂಭ ಮಾಡಿದೆವು. ಆ ಕ್ಷಣ ಅದೆನ್ನೆಲ್ಲ ನೋಡಿ ಅವರಿಗೆ ತಿಳಿಯಿತು ಅದು ನನ್ನ ಉಡುಗೊರೆ ಅವಳು ಅಂದು ಇಡೀ ದಿನ ಖುಷಿಯಾಗಿದ್ದಳು . ನನ್ನ ತಂದೆಗೆ ತಕ್ಕ ಹೆಂಡತಿಯಾಗಿ ನಮಗೆ ಪ್ರೀತಿಯ ತಾಯಿಯಾಗಿ, ಸೊಸೆಗೆ ಆತ್ಮೀಯಳಾಗಿ ಮೊಮ್ಮಕ್ಕಳಿಗೆ ಮಮತೆಯ ಅಜ್ಜಿಯಾಗಿರುವುದಕ್ಕೆ ಈ ತಾಯಂದಿರ ದಿನದಂದು ಅವಳಿಗೆ ಶುಭ ಕೋರುತ್ತೇನೆ.
ಚಂದ್ರಶೇಖರ ವೆ. ದಾದನಟ್ಟಿ
ಮಹಾಲಿಂಗಪುರ, ಬಾಗಲಕೋಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಗು ಹುಟ್ಟಿದಾಗ ಕಣ್ಣು ಕಲ್ಪನೆಗೆ ಬಂದಾಗ ಮೊದಲು ಕಾಣುವ ಮುಖವೇ ಅಮ್ಮನದ್ದು
‘ಮಾತೃದೇವೋಭವ’: ಅಮ್ಮನ ಬಗ್ಗೆ ಹೇಳಲು ಪದಗಳೇ ಸಾಲದು…. ಅವಳಿಗೆ ಅವಳೇ ಸಾಟಿ….
ನೋವಲ್ಲಿ ಶೋಕ ಸಾಗರವೇ ಬಂದರು ದಾರಿ ಸವೆಸಿ ಕಂದನ ಬರಸೆಳೆದಪ್ಪುವಳು
ನಾನು ಅಮ್ಮನ ಕನಸಿನಲ್ಲಿ ಎಚ್ಚರವಾಗಿರುತ್ತೇನೆ, ಅವಳು ನನ್ನ ಕನಸಿನಲ್ಲಿ ಎಚ್ಚರವಾಗಿರುತ್ತಾಳೆ
ನವಮಾಸ ನಮ್ಮನ್ನು ಹೊತ್ತು, ಹೆರುವ ಆಕೆಗೆ ಕೇವಲ ಒಂದು ದಿನ ಇತ್ತರೆ ಸಾಕೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.