Udayavani.com – ‘ಪರಿಶ್ರಮ’ NEET ಅಕಾಡೆಮಿ ಸಹಯೋಗ ; ಸೆ.4ರಂದು Online ವಿಶೇಷ ಕಾರ್ಯಕ್ರಮ
NEET, Sep 3, 2020, 8:26 PM IST
ದೇಶದ ಅಗ್ರಶ್ರೇಣಿಯ ನ್ಯೂಸ್ ಪೋರ್ಟಲ್ಗಳಲ್ಲಿ ಒಂದಾದ ಉದಯವಾಣಿ ಡಾಟ್ ಕಾಮ್ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಬರೆಯುವ ಕರ್ನಾಟಕದ ವಿದ್ಯಾರ್ಥಿಗಳಿಗೆ ಪರಿಶ್ರಮ ನೀಟ್ ಅಕಾಡೆಮಿ ಜತೆ ಸೇರಿ ಸೆಪ್ಟೆಂಬರ್ 4ರಂದು ಆನ್ಲೈನ್ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.
ನೀಟ್ ಪರೀಕ್ಷೆಯನ್ನು ಯಾವುದೇ ಭಯ, ಆತಂಕವಿಲ್ಲದೆ ಹೇಗೆ ಎದುರಿಸಬೇಕು ಎಂಬುದನ್ನು ಆನ್ಲೈನ್ ಮೂಲಕ ಮಾಹಿತಿ ಒದಗಿಸಲಾಗುತ್ತದೆ.
ಸೆ.13ರಂದು ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸಹಿತವಾಗಿ ಭವಿಷ್ಯದಲ್ಲಿ ನೀಟ್ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೂ ಇದು ಅನುಕೂಲವಾಗಲಿದೆ. ಸೆ.4ರ ಬೆಳಗ್ಗೆ 10 ಗಂಟೆಯಿಂದ udayavani.comನಲ್ಲಿ ಪ್ರಸಾರವಾಗಲಿದೆ.
ಜತೆಗೆ ಪರಿಶ್ರಮ ನೀಟ್ ಅಕಾಡೆಮಿಯು ದೀರ್ಘಕಾಲದ ವಸತಿ ಸಹಿತ ಕಾರ್ಯಕ್ರಮ ಮತ್ತು ಕ್ರಶ್ ಕೋರ್ಸ್ಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸೆ.4ರಂದು www.udayavani.comಗೆ ಲಾಗ್ಇನ್ ಆಗಿ ಅಥವಾ www.parishramaneetacademy.comಗೆ ಭೇಟಿ ನೀಡಬಹುದಾಗಿದೆ.
ನೀಟ್ ಪರೀಕ್ಷೆಯನ್ನು ಅತ್ಯಂತ ಆತ್ಮವಿಶ್ವಾಸದಿಂದ ಹೇಗೆ ಎದುರಿಸಬೇಕು. ಪರೀಕ್ಷೆಗೆ ಸಂಬಂಧಿಸಿದಂತೆ ಮಾಡಬೇಕಾದ ಮತ್ತು ಮಾಡಬಾರದ ಸಂಗತಿಗಳು, ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಧರಿಸುವ ಡ್ರೆಸ್ಕೋಡ್, ಮೋಕ್ ಪ್ರಶ್ನೆ ಪತ್ರಿಕೆ ಸೇರಿದಂತೆ ಅನೇಕ ಅಂಶಗಳ ಬಗ್ಗೆ ವಿದ್ಯಾರ್ಥಿ ಆನ್ಲೈನ್ ಲೈವ್ ಕಾರ್ಯಕ್ರಮದಲ್ಲಿ ಪೂರ್ಣ ಮಾಹಿತಿ ಸಿಗಲಿದೆ.
ಪರಿಶ್ರಮ ನೀಟ್ ಅಕಾಡೆಮಿಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಈಶ್ವರ್ ಅವರು ಸ್ಪೂರ್ತಿದಾಯಕ ವಿಡಿಯೋಗಳು, ಜೀವಶಾಸ್ತ್ರ ಹಾಗೂ ರಸಾಯನಶಾಸ್ತ್ರದ ವಿಷಯಕ್ಕೆ ಸಂಬಂಧಿಸಿದ ಮುಖ್ಯವಾದ ಅಂಶಗಳ ವಿಡಿಯೋ ತುಣುಕುಗಳನ್ನು ಹಂಚಿಕೊಳ್ಳಲಿದ್ದಾರೆ.
ದೇಶದ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಸೀಟು ಪಡೆಯಲು ಅನುಕೂಲ ಮಾಡಿಕೊಡುವ ಸದುದ್ದೇಶದಿಂದ 2018ರಿಂದ ಪರಿಶ್ರಮ ನೀಟ್ ಅಕಾಡೆಮಿ ಕಾರ್ಯರಂಭಿಸುತ್ತಿದೆ. ಆರಂಭವಾದ ಮೊದಲ ವರ್ಷದಲ್ಲೇ 60 ಪ್ರವೇಶಾತಿಯಲ್ಲಿ 48 ಸೀಟುಗಳನ್ನು ಈ ಸಂಸ್ಥೆ ನೀಡಿದೆ.
ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ತರಬೇತಿ ನೀಡುವ ಉದ್ದೇಶದಿಂದ ಪರಿಶ್ರಮವು ಫಲಿತಾಂಶ ಆಧಾರಿತ ಅಧ್ಯಯನ ಸಾಮಗ್ರಿಗಳನ್ನು ಒದಗಿಸುತ್ತದೆ. ಇದರ ಜತೆಗೆ ಪರಿಶ್ರಮ ನೀಟ್ ಅಕಾಡೆಮಿಯು ಆಸಕ್ತಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ ಮತ್ತು ಬೋರ್ಡ್ ಪರೀಕ್ಷೆಗೆಂದೇ ವ್ಯವಸ್ಥಿತವಾಗಿ ವಿನ್ಯಾಸಗೊಳಿಸಿದ ಕೋರ್ಸ್ಗಳನ್ನು ನೀಡುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.