ಕೇಂದ್ರ ಭದ್ರತಾ ಪಡೆ
Team Udayavani, Nov 28, 2019, 6:01 AM IST
ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ಭದ್ರತಾ ಪಡೆಯಲ್ಲಿ 300 ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳು ಖಾಲಿ ಇದ್ದು, ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ಡಿಸೆಂಬರ್ 17
https://www.cisf.gov.in/
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧೀನದಲ್ಲಿರುವ ಕಾರ್ಗೊ ಲಾಜಿಸ್ಟಿಕ್ ಆ್ಯಂಡ್ ಅಲೈಡ್ ಸರ್ವಿಸ್ ಕಂಪೆನಿ ಲಿಮಿಟೆಡ್‌ನಲ್ಲಿ 419 ಹುದ್ದೆಗಳು ಖಾಲಿ ಇದ್ದು, ಅರ್ಜಿ ಆಹ್ವಾನಿಸಿದೆ. ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ಡಿಸೆಂಬರ್ 9
https://aaiclas-ecom.or
ಬಾಬಾ ಅಣುಶಕ್ತಿ ಸಂಶೋಧನ ಕೇಂದ್ರ
ಬಾಬಾ ಅಣುಶಕ್ತಿ ಸಂಶೋಧನ ಕೇಂದ್ರದಲ್ಲಿ 92 ಅಸಿಸ್ಟೆಂಟ್ ಸೆಕ್ಯೂರಿಟಿ ಆಫೀಸರ್, ಸೆಕ್ಯೂರಿಟಿ ಗಾರ್ಡ್ ಹುದ್ದೆಗಳು ಖಾಲಿ ಇದ್ದು, ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅಸಿಸ್ಟೆಂಟ್ ಸೆಕ್ಯೂರಿಟಿ ಆಫೀಸರ್‌ಗಾಗಿ ಪದವಿ ಮತ್ತು ಸೆಕ್ಯೂರಿಟಿ ಗಾರ್ಡ್ ಹುದ್ದೆಗಾಗಿ ಎಸೆಸೆಲ್ಸಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ಡಿಸೆಂಬರ್6
http://www.barc.gov.in /
ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ
ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಸಹಾಯಕ ಕಾರ್ಯದರ್ಶಿ, ಅನಾಲಿಸ್ಟ್, ಕಿರಿಯ ಭಾಷಾಂತರಕಾರ, ಹಿರಿಯ ಸಹಾಯಕ, ಜೂನಿಯರ್ ಅಕೌಂಟೆಂಟ್ ಸಹಿತ ಒಟ್ಟು 357 ಹುದ್ದೆಗಳು ಖಾಲಿ ಇದ್ದು, ಅರ್ಜಿ ಆಹ್ವಾನಿಸಿದೆ. ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ಡಿಸೆಂಬರ್ 16
http://www.cbse.nic.in/
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಶನ್ ಲಿಮಿಟೆಡ್
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಶನ್ ಲಿಮಿಟೆಡ್‌ನಲ್ಲಿ 192 ಹುದ್ದೆಗಳು ಖಾಲಿ ಇದ್ದು, ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ವಿವರ: ಅಸಿಸ್ಟೆಂಟ್ ಮೈನ್ ಸರ್ವೇಯರ್, ಮೈನ್ಸ್ ಎಲೆಕ್ಟ್ರಿಕ್ ಸೂಪರ್‌ವೈಸರ್. ಎಂಜಿನಿಯರಿಂಗ್, ಡಿಪ್ಲೊಮಾ/ಐಟಿಐ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ನವೆಂಬರ್30
http://www.ntpccoalmines.in
ಕೇಂದ್ರ ನಾಗರಿಕ ಸೇವಾ ಆಯೋಗ
ಕೇಂದ್ರ ನಾಗರಿಕ ಸೇವಾ ಆಯೋಗದಲ್ಲಿ ಸಹಾಯಕ ರಿಜಿಸ್ಟ್ರಾರ್ ಸಹಿತ 48 ವಿವಿಧ ಹುದ್ದೆಗಳು ಖಾಲಿ ಇದ್ದು, ನೇಮಕಾತಿಗೆ ಅಧಿಸುಚನೆ ಹೊರಡಿಸಿದೆ. ಯಾವುದೇ ಪದವಿ, ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ಡಿಸೆಂಬರ್12
www.upsc.gov.in
ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್
ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಹೃಷಿಕೇಶದಲ್ಲಿ 372 ಸ್ಟಾಫ್ ನರ್ಸ್ ಹುದ್ದೆಗಳು ಖಾಲಿ ಇದ್ದು, ಅರ್ಜಿ ಆಹ್ವಾನಿಸಿದೆ. ಬಿ.ಎಸ್‌ಸಿ. ಇನ್ ನರ್ಸಿಂಗ್ /ಬಿ.ಎಸ್‌ಸಿ. ನರ್ಸಿಂಗ್ ವಿದ್ಯಾರ್ಹತೆ ಅಥವಾ ಡಿಪ್ಲೊಮಾ ಇನ್ ನರ್ಸಿಂಗ್ ಅನ್ನು ಇಂಡಿಯನ್ ನರ್ಸಿಂಗ್ ಕೌನ್ಸಿಲ್‌ನಿಂದ ಅಂಗೀಕೃತಗೊಂಡ ಸಂಸ್ಥೆಗಳು ಅಥವಾ ವಿ.ವಿ.ಗಳಲ್ಲಿ ಪಡೆದಿರಬೇಕು.
ಕೊನೆಯ ದಿನಾಂಕ ಡಿಸೆಂಬರ್24
www .aiimsrishikesh.edu.in
ನೇವಲ್ ಶಿಪ್ ದುರಸ್ತಿ ಯಾರ್ಡ್
ಕಾರವಾರದಲ್ಲಿರುವ ನೇವಲ್ ಶಿಪ್ ದುರಸ್ತಿ ಯಾರ್ಡ್‌ನಲ್ಲಿ 145 ಅಪ್ರಂಟಿಸ್ ಹುದ್ದೆಗಳು ಖಾಲಿ ಇದ್ದು, ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಹತ್ತನೇ ತರಗತಿ ಅಥವಾ ಐಟಿಐ ಕೋರ್ಸ್ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ಡಿಸೆಂಬರ್ 1
www .indiannavy.nic.in
ಕಂದಾಯ ಇಲಾಖೆ ಉಡುಪಿ
ಉಡುಪಿ ಜಿಲ್ಲಾ ಕಂದಾಯ ಘಟಕದಲ್ಲಿ 18 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ ಇದ್ದು, ಅರ್ಜಿ ಆಹ್ವಾನಿಸಿದೆ. ಪಿಯುಸಿ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ಡಿಸೆಂಬರ್ 31
https://udupi.nic.in/
ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ
ಸ್ಟೀಲ್ ಅಥಾರಿಟಿ ಆಫ್ ಇಂಡಿಯಾವು 148 ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸರಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಎಂಬಿಬಿಎಸ್, ಬಿಡಿಎಸ್ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ಡಿಸೆಂಬರ್ 31
https://www.sailcareers.com
ಈಶಾನ್ಯ ರೈಲ್ವೇ
ರೈಲ್ವೇ ಇಲಾಖೆಯ ಈಶಾನ್ಯ ವಿಭಾಗದಲ್ಲಿ 1,104 ಅಪ್ರಂಟಿಸ್ ಹುದ್ದೆಗಳು ಖಾಲಿ ಇದ್ದು, ಅರ್ಜಿ ಆಹ್ವಾನಿಸಿದೆ. ಫಿಟ್ಟರ್, ವೆಲ್ಡರ್, ಎಲೆಕ್ಟ್ರೀಷಿಯನ್, ಕಾರ್ಪೆಂಟರ್, ಪೇಂಟರ್, ಮೆಕ್ಯಾನಿಕ್ ಹುದ್ದೆಗಳು ಖಾಲಿ ಇದ್ದು, ಎಸೆಸೆಲ್ಸಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ಡಿಸೆಂಬರ್ 25
http://www.indianrail.gov.in/
ಡೀನ್, ಅಸೋಸಿಯೇಟ್ ಡೀನ್ ಹುದ್ದೆ
ಪ್ರಾದೇಶಿಕ ಜೈವಿಕ ತಂತ್ರಜ್ಞಾನ ಕೇಂದ್ರದಲ್ಲಿ ಡೀನ್ ಮತ್ತು ಅಸೋಸಿಯೇಟ್ ಡೀನ್ ಹುದ್ದೆ ಖಾಲಿ ಇದ್ದು, ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 18 ವರ್ಷಗಳ ಕಾಲ ಬೋಧಕರಾಗಿ ಅನುಭವವಿರುವ, ವಿಜ್ಞಾನ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ಡಿಸೆಂಬರ್ 15
htt ps://www .rcb.res.in/
ರಾಷ್ಟ್ರೀಯ ಆರೋಗ್ಯ ಅಭಿಯಾನ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಮಧ್ಯಮ ಹಂತದ ಆರೋಗ್ಯ ಪೂರೈಕೆದಾರ ಶುಶ್ರೂಷಕಿ ಹು¨ªೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ನರ್ಸಿಂಗ್ ಕೋರ್ಸ್ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಜ
http://techkshetra.info/
ಕೊನೆಯ ದಿನಾಂಕ ಡಿಸೆಂಬರ್ 10
ಎಐಐಎಸ್‌ಎಸ್‌ಎಚ್, ಮೈಸೂರು
ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಮೈಸೂರು ಇಲ್ಲಿ ಸಹಾಯಕ ಲೆಕ್ಕ ಪರಿಶೋಧಕ ಅಧಿಕಾರಿ ಹುದ್ದೆ ಖಾಲಿ ಇದೆ. ಬಿ.ಕಾಂ., ಎಂ.ಕಾಂ., ಎಂ.ಬಿ.ಎ. ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ಡಿಸೆಂಬರ್ 16
https://aiishmysore.in/
ರಾಷ್ಟ್ರೀಯ ತನಿಖಾ ಸಂಸ್ಥೆ
ಕೇಂದ್ರ ಸರಕಾರದ ಗೃಹ ಸಚಿವಾಲಯದ ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ 79 ಹು¨ªೆಗಳು ಖಾಲಿ ಇದ್ದು, ಅರ್ಜಿ ಆಹ್ವಾನಿಸಿದೆ. ಹುದ್ದೆಗಳು: ಕಾನ್‌ಸ್ಟೆಬಲ್, ಹೆಡ್ ಕಾನ್‌ಸ್ಟೆಬಲ್ ಮತ್ತು ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್. ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ಡಿಸೆಂಬರ್ 7
https://www.nia.gov.in/
ಧಾರವಾಡ ಕೃಷಿ ವಿ.ವಿ.
ಧಾರವಾಡದಲ್ಲಿರುವ ಕೃಷಿ ವಿವಿಯಲ್ಲಿ ಸಹಾಯಕ ಪ್ರೊಫೆಸರ್, ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನಿ ಸಿದೆ. ಸಹಾಯಕ ಪ್ರೊಫೆಸರ್ ಹುದ್ದೆಗೆ ಅರ್ಥಶಾಸ್ತ್ರದಲ್ಲಿ ಎಂ.ಎ. ಮತ್ತು ಪಿಎಚ್.ಡಿ ಪದವಿ ಪಡೆದಿರಬೇಕು. ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಯಾವುದೇ ಪದವಿ ಜತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಡಿ. 2.
ಸಹಾಯಕ ಪ್ರೊಫೆಸರ್ ಹುದ್ದೆಗೆ ಡಿ. 4.
ಕೊನೆಯ ದಿನಾಂಕ ಡಿಸೆಂಬರ್ 16
http://www.uasd.edu/
ಸಾರ್ವಜನಿಕ ಶಿಕ್ಷಣ ಇಲಾಖೆ
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸಂಪನ್ಮೂಲ ವ್ಯಕ್ತಿ, ಶಿಕ್ಷಣ ಸಂಯೋಜಕ ಹುದ್ದೆಗಳು ಖಾಲಿ ಇದ್ದು ಅನುಭವವಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರು ಅರ್ಜಿ ಸಲ್ಲಿಸಬಹುದು. ವಯೋಮಿತಿ: 55 ವರ್ಷ.
ಕೊನೆಯ ದಿನಾಂಕ ಡಿಸೆಂಬರ್ 20
www.schooleducation.kar.nic.in/
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್
ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಇಲ್ಲಿ ಮ್ಯಾನೇಜರ್, ಲೈಬರ್ರಿ ಟ್ರೈನಿ ಹುದ್ದೆಗಳು ಖಾಲಿ ಇದ್ದು ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.ಎಂ.ಬಿ.ಎ. ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ಡಿಸೆಂಬರ್ 01
https://www.iimb.ac.in/
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Job Opportunities: ಭಾರತೀಯ ನೌಕಾಪಡೆ ಇಲಾಖೆಯಲ್ಲಿ 250 ಹುದ್ದೆಗಳಿಗೆ ಅರ್ಜಿ ಆಹ್ವಾನ
Job Opportunities:ಪಂಜಾಬ್ and ಸಿಂಧ್ ಬ್ಯಾಂಕ್-213 ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ
Job:Indian ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ನಲ್ಲಿ ಅಪ್ರಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ
Career Guidance: PUC ನಂತರ Agricultural ಬಯೋಟೆಕ್ನೋಲೊಜಿಸ್ಟ್ ಆಯ್ಕೆ ಉತ್ತಮ…
Job Opportunities: ಭಾರತೀಯ ರೈಲ್ವೆ, KUIDFC- ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.