ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
Team Udayavani, Oct 17, 2019, 1:15 AM IST
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧೀನ ದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರದಲ್ಲಿ 30 ವ್ಯವಸ್ಥಾಪಕರ ಹುದ್ದೆ ಖಾಲಿ ಇದ್ದು ಅರ್ಜಿ ಆಹ್ವಾನಿಸಿದೆ. ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
https://nhai.gov.in/
ಕೊನೆಯ ದಿನಾಂಕ ಅಕ್ಟೋಬರ್ 31
ಸಂಶೋಧಕ ಸಹಾಯಕ ಹುದ್ದೆ
ಆಯುಷ್ ಸಚಿವಾಲಯ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಆಯುರ್ವೇದ ಸೈನ್ಸ್ ಇಲ್ಲಿ ಸಂಶೋಧಕ ಸಹಾಯಕ ಹುದ್ದೆಗಳು
ಖಾಲಿ ಇದ್ದು ಅರ್ಜಿ ಸಲ್ಲಿಸ ಬಹುದು. ಪ್ರಾಣಿ ಶಾಸ್ತ್ರ, ಸಸ್ಯ ಶಾಸ್ತ್ರ, ರಾಸಾಯನ ಶಾಸ್ತ್ರ, ಔಷಧ ಮತ್ತು ಫಾರ್ಮಸಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಸಂದರ್ಶನ ಮತ್ತು ಲಿಖೀತ ಪರೀಕ್ಷೆ ನಡೆಯಲಿದೆ.
www.ccras.nic.in
ಕೊನೆಯ ದಿನಾಂಕ ಅಕ್ಟೋಬರ್ 31
ಧಾರವಾಡ ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಶೀಘ್ರ ಲಿಪಿಗಾರರ ಹುದ್ದೆಗಳು
ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ 9 ಶೀಘ್ರಲಿಪಿಗಾರರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇದೇ ತಿಂಗಳ 30ರ ಒಳಗೆ ಧಾರವಾಡ ಜಿಲ್ಲಾ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರ್ಣವಾಗಿರಬೇಕು. ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ 1: ಗರಿಷ್ಠ 40 ವರ್ಷ, ಪ್ರವರ್ಗ 2ಎ, 2ಬಿ, 3ಎ, 3 ಬಿ. ಗೆ ಗರಿಷ್ಠ 38 ವರ್ಷ ಎಂದು ನಿಗದಿಪಡಿಸಲಾಗಿದೆ.
ವಿದ್ಯಾರ್ಹತೆ: ಅಭ್ಯರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರತಕ್ಕದ್ದು. ಗಣಕ ಯಂತ್ರದಲ್ಲಿ ಬೆರಳಚ್ಚು ಮಾಡುವ ಜ್ಞಾನವು ಅವಶ್ಯವಾಗಿರಬೇಕು.
www.districts.ecoutrs.gov.in/dharwd-onlinerecruitement
ಕೊನೆಯ ದಿನಾಂಕ ಅಕ್ಟೋಬರ್ 30
ಎಚ್‌ಎಮ್‌ಟಿಯಲ್ಲಿ ಸಹಾಯಕ ಹುದ್ದೆಗಳು
ಹರಿಯಾಣದ ಎಚ್‌ಎಮ್‌ಟಿ ಮೆಷಿನ್ ಟೂಲ್ಸ್ ಸಂಸ್ಥೆಯಲ್ಲಿ ಜೂನಿಯರ್ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಐಟಿಐ ಮುಗಿದ 18ರಿಂದ 30 ವಯೋಮಿತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
http://www.hmtmachinetools.com/
ಸಿಮೆಂಟ್ ಮತ್ತು ಕಟ್ಟಡ
ಸಾಮಗ್ರಿಗಳ ರಾಷ್ಟ್ರೀಯ ಮಂಡಳಿ
ಕೇಂದ್ರ ಸರಕಾರದ ಅಧೀನದಲ್ಲಿರುವ ಸಿಮೆಂಟ್ ಮತ್ತು ಕಟ್ಟಡ ಸಾಮಗ್ರಿಗಳ ರಾಷ್ಟ್ರೀಯ ಮಂಡಳಿಯಲ್ಲಿರುವ ಪ್ರಯೋಗಾಲಯ ಸಹಾಯಕ, ಕಚೇರಿ ಸಹಾಯಕ, ಪ್ಲಂಬರ್ ಹುದ್ದೆ
ಗಳಿಗೆ ಆಸ್ತಕರು ಅರ್ಜಿ ಸಲ್ಲಿಸ ಬಹುದು. ಬಿ.ಎಸ್.ಸಿ, ಎಮ್ . ಎಸ್.ಸಿ , ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮತ್ತು ಐಟಿಐ ಕೋರ್ಸ್ ಮುಗಿಸಿದವರು ಅರ್ಹರು.
www.ncbindia.com
ಕೊನೆಯ ದಿನಾಂಕ ಅಕ್ಟೋಬರ್ 20
ಸಾಮಾಜಿಕ ನ್ಯಾಯ
ಮತ್ತು ಸಬಲೀಕರಣ ಸಚಿವಾಲಯ
ಸರಕಾರಿ ಅಧೀನದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿ ವಾಲಯದಲ್ಲಿ ಗ್ರಂಥಾಪಾಲಕ ಮತ್ತು ಡಾಕ್ಯುಮೆಂಟ್ ಅಧಿಕಾರಿ ಹುದ್ದೆಗಳು ಖಾಲಿ ಇದೆ. ಪದವಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
www.Socialjustice.nic.in
ಕೊನೆಯ ದಿನಾಂಕ ಅಕ್ಟೋಬರ್ 21
ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಹುದ್ದೆ
ಭಾರತೀಯ ಸೇನೆಯಲ್ಲಿರುವ 20 ಹವಾಲ್ದಾರ್ ಹುದ್ದೆಗಳ ನೇಮಕಾತಿ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. 20ರಿಂದ 25 ವಯೋಮಿತಿ ಒಳಗಿದ್ದು, ಪಿಯುಸಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಲಿಖೀತ ಮತ್ತು ದೈಹಿಕ ಪರೀಕ್ಷೆಗಳು ಇರಲಿವೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
www.joinindianarmy.nic.in
ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ
ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ಬಳ್ಳಾರಿ ಇದರಲ್ಲಿ ಖಾಲಿ ಇರುವ ವಿವಿಧ ವಿಭಾಗಗಳ ಒಟ್ಟು 29 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದಕ್ಕೆ ನೇರ ನೇಮಕಾತಿ ನಡೆಯಲಿದ್ದು, ಆನ್‌ಲೈನ್ ಮೂಲಕ ಹಾಗೂ ಮುಚ್ಚಿದ ಲಕೋಟೆಯಲ್ಲೂ ಆರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಿವಿಧ ವಿಭಾಗದ ಹುದ್ದೆಗಳಿಗೆ ಪ್ರತ್ಯೇಕ ಶೈಕ್ಷಣಿಕ ವಿದ್ಯಾರ್ಹತೆ ನೀಡಲಾಗಿದೆ. ಕನಿಷ್ಠ ಪದವಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳಿಂದ ತೊಡಗಿ ಎಂಬಿಎ, ಎಂ.ಟೆಕ್. ಪದವೀಧರರೂ ಅರ್ಜಿ ಸಲ್ಲಿಬಹುದು. ಪರಿಶಿಷ್ಟ ಜಾತಿ, ಪಂಗಡ ಮತ್ತು ಪ್ರವರ್ಗ 1 ವಿಭಾಗಕ್ಕೆ ಗರಿಷ್ಠ ವಯೋಮಿತಿ 40 ನಿಗದಿಪಡಿಸಲಾಗಿದ್ದು, ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗ 38 ಹಾಗೂ ಸಾಮಾನ್ಯ ಅಭ್ಯರ್ಥಿಗಳು 35 ವರ್ಷ ಮೀರಿರಬಾರದು.
http://recruitapp.in/rbkmul2019
ಕೊನೆಯ ದಿನಾಂಕ ಅಕ್ಟೋಬರ್ 11
ಕೊಂಕಣ್ ರೈಲ್ವೇಯಲ್ಲಿ
135 ತರಬೇತಿ ಅಪ್ರಂಟಿಸ್ ಹುದ್ದೆಗಳು
ಕೊಂಕಣ್ ರೈಲ್ವೇ ವಿಭಾಗದಲ್ಲಿ 135 ತರಬೇತಿ ಅಪ್ರಂಟಿಸ್ ಹುದ್ದೆಗಳು ಖಾಲಿ ಇದ್ದು ಡಿಪ್ಲೊಮಾ, ಎಂಜಿನಿಯರಿಂಗ್ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸ ಬಹುದು. ವಯೋ ಮಿತಿ 20ರಿಂದ 25 ವಯಸ್ಸು.
www.konkanrailway.com
ಕೊನೆಯ ದಿನಾಂಕ ಅಕ್ಟೋಬರ್ 30
ಜವಳಿ ಸಚಿವಾಲಯದಲ್ಲಿ
ವಿವಿಧ ಹುದ್ದೆಗಳು
ಕೇಂದ್ರ ಸರಕಾರದ ಅಧೀನದಲ್ಲಿರುವ ಜವಳಿ ಸಚಿವಾಲಯದಲ್ಲಿ ತನಿಖಾಧಿಕಾರಿ, ಗುಮಾಸ್ತ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
www.texmin.nic.in
ಕೊನೆಯ ದಿನಾಂಕ ಅಕ್ಟೋಬರ್ 31
ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳು
ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯಲ್ಲಿ ಎಂಜಿನಿಯರ್, ಅಕೌಂಟ್ ಹುದ್ದೆಗಳು ಖಾಲಿ ಇದ್ದು M.tech, ಎಂಜಿನಿಯರಿಂಗ್, B.com ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
http://www.iiap.res.in
ಕೊನೆಯ ದಿನಾಂಕ ಅಕ್ಟೋಬರ್ 28
ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಲ್ಲಿ ಸಹಾಯಕ ಎಂಜಿನಿಯರ್ ಹುದ್ದೆ
ಗುಜರಾತ್‌ನಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನಲ್ಲಿ 38 ಸಹಾ
ಯಕ ಎಂಜಿನಿಯರಿಂಗ್ ಹುದ್ದೆ ಗಳು ಖಾಲಿ ಇದ್ದು ಬಿ.ಎಸ್ಸಿ, ಎಂಜಿನಿಯರಿಂಗ್, ಡಿಪ್ಲೋಮಾ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 18ರಿಂದ 29 ವಯೋಮಿತಿ.
www.iocl.com
ಕೊನೆಯ ದಿನಾಂಕ ಅಕ್ಟೋಬರ್ 30
ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆಯಲ್ಲಿ ಗ್ರೂಪ್ ಬಿ ವೃಂದದ ಹುದ್ದೆ
ಕರ್ನಾಟಕ ಸರಕಾರದ ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಬಿ ವೃಂದದ ಸಹಾಯಕ ಸರಕಾರಿ ಅಭಿಯೋಜಕರು, ಸಹಾಯಕ ವಕೀಲರ ಒಟ್ಟು 100 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಹತೆ: ಅರ್ಜಿ ಸಲ್ಲಿಸುವ ಕಡೆಯ ದಿನಾಂಕಕ್ಕೆ ವಕೀಲರ ಕಾಯ್ದೆ 1961ರ ಪ್ರಕಾರ ದೇಶದ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯಗಳಲ್ಲಿ ಕನಿಷ್ಠ 3 ವರ್ಷ ವಕೀಲರಾಗಿ ಕೆಲಸ ಮಾಡಿದ ಅನುಭವ ಹೊಂದಿರಬೇಕು. ವಿವಿಧ ಹುದ್ದೆಗಳಿಗೆ ಪ್ರತ್ಯೇಕ ಆರ್ಹತೆ ಮತ್ತು ಮಾನದಂಡಗಳಿದ್ದು ಅವುಗಳನ್ನು ತಿಳಿದುಕೊಳ್ಳಲು ಈ ಕೆಳಗಿನ ಈ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಿ.
https://www.karnataka.gov.in/prosecution
ಕೊನೆಯ ದಿನಾಂಕ ನವೆಂಬರ್ 8
ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ಕೊಚ್ಚಿನ್‌ನಲ್ಲಿರುವ ಕೊಚ್ಚಿನ್ ಶಿಪ್
ಯಾರ್ಡ್ ಲಿಮಿಟೆಡ್‌ನಲ್ಲಿರುವ ಸುರಕ್ಷತಾ ಅಧಿಕಾರಿ, ಫೈರ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಹುದು. ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
www.cochinshipyard.com
ಕೊನೆಯ ದಿನಾಂಕ ಅಕ್ಟೋಬರ್ 18
ಅಂಚೆ ಇಲಾಖೆಯಲ್ಲಿ 546 ಹುದ್ದೆಗಳು
ಅಂಚೆ ಇಲಾಖೆ ಖಾಲಿ ಇರುವ 546 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಹತ್ತನೆ ತರಗತಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
www.appost.in/gud
ಕೊನೆಯ ದಿನಾಂಕ ನವೆಂಬರ್ 21
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Job Opportunities: ಭಾರತೀಯ ನೌಕಾಪಡೆ ಇಲಾಖೆಯಲ್ಲಿ 250 ಹುದ್ದೆಗಳಿಗೆ ಅರ್ಜಿ ಆಹ್ವಾನ
Job Opportunities:ಪಂಜಾಬ್ and ಸಿಂಧ್ ಬ್ಯಾಂಕ್-213 ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ
Job:Indian ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ನಲ್ಲಿ ಅಪ್ರಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ
Career Guidance: PUC ನಂತರ Agricultural ಬಯೋಟೆಕ್ನೋಲೊಜಿಸ್ಟ್ ಆಯ್ಕೆ ಉತ್ತಮ…
Job Opportunities: ಭಾರತೀಯ ರೈಲ್ವೆ, KUIDFC- ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.