New Year: ಎಲ್ಲವೂ ಹೊಸದು, ವರ್ಣಿಸಲಾಗದು!
Team Udayavani, Dec 31, 2023, 12:06 PM IST
ನನ್ನ ಜೀವನದಲ್ಲಿ ಮರೆಯಲಾಗದ, ಸದಾ ನೆನಪಿನಲ್ಲಿ ಇರುವಂಥ ಹಲವಾರು ಘಟನೆಗಳು 2023ರಲ್ಲಿ ನಡೆಯಿತು. ಅದರಲ್ಲಿ ಮೊದಲನೆಯದ್ದು, ನಾನು ಮತ್ತು ವಸಿಷ್ಠ ಸಿಂಹ ಮದುವೆಯಾಗಿದ್ದು. ಅನೇಕರಿಗೆ ಗೊತ್ತಿರುವಂತೆ, ಹಲವು ವರ್ಷಗಳಿಂದ ನನ್ನ ಮತ್ತು ವಸಿಷ್ಠ ನಡುವೆಯಿದ್ದ ಸ್ನೇಹ, ಪ್ರೀತಿಗೆ ಮದುವೆ ಎಂಬ ಮುದ್ರೆ ಸಿಕ್ಕಿದ್ದು ಇದೇ ವರ್ಷದಲ್ಲಿ. 2022ರ ಕೊನೆಗೆ ನಮ್ಮಿಬ್ಬರ ಎಂಗೇಜ್‌ಮೆಂಟ್ ಆಯಿತು. 2023ರ ಆರಂಭದಲ್ಲಿಯೇ ಮದುವೆ ಡೇಟ್ ಕೂಡ ಫಿಕ್ಸ್ ಆಗಿದ್ದರಿಂದ, ಕೆಲವೇ ದಿನಗಳಲ್ಲಿ ಎಲ್ಲ ತಯಾರಿಗಳನ್ನೂ ಮಾಡಿಕೊಳ್ಳಬೇಕಿತ್ತು. ಒಂದು ಕಡೆ ಶೂಟಿಂಗ್ ಮತ್ತೂಂದು ಕಡೆ ಮದುವೆ ತಯಾರಿ ಹೀಗೆ ಬಿಡುವಿಲ್ಲದ ಸಮಯದಲ್ಲಿ 2022 ಹೋಗಿ ಹೊಸ ವರ್ಷ 2023 ಬಂದಿದ್ದು, ಅದನ್ನು ಸೆಲೆಬ್ರೆಷನ್ ಮಾಡಿದ್ದು ಯಾವುದೂ ಗೊತ್ತಾಗಲೇ ಇಲ್ಲ.
ಆದರೆ 2023 ನನ್ನ ಬದುಕಿನಲ್ಲಿ ಮರೆಯಲಾಗದ ಅನೇಕ ನೆನಪುಗಳನ್ನು ನೀಡಿದೆ ಎಂದು ಖಂಡಿತವಾಗಿಯೂ ಹೇಳಬಹುದು. ನಾನು 16 ವರ್ಷಕ್ಕೇ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದೆ. ಸಿನಿಮಾಕ್ಕೆ ಬಂದಾಗಿನಿಂದ ಇಷ್ಟು ವರ್ಷಗಳಲ್ಲಿ ಯಾವತ್ತೂ ಕೂಡ ತಿಂಗಳುಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದೇ ಇಲ್ಲ. ನನ್ನ ಸಿನಿಮಾ ಕೆರಿಯರ್‌ನಲ್ಲಿ ತೆಗೆದುಕೊಂಡಿದ್ದು ದೊಡ್ಡ ಬ್ರೇಕ್ ತೆಗೆದುಕೊಂಡಿದ್ದು ಈ ವರ್ಷ. ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವ ಸಲುವಾಗಿ ನನಗೂ ಒಂದು ದೊಡ್ಡ ಬ್ರೇಕ್ ಬೇಕಾಗಿತ್ತು. ಆ ಬ್ರೇಕ್ ಅನ್ನು ನಾನು ಸದುಪಯೋಗಪಡಿಸಿಕೊಂಡಿದ್ದೇನೆ.
ಇಷ್ಟು ವರ್ಷ ನಮ್ಮ ಮನೆಯಲ್ಲಿ ಮಗಳಾಗಿದ್ದ ನಾನು 2023ರಲ್ಲಿ ಗಂಡನ ಮನೆಗೆ ಸೊಸೆಯಾಗಿ ಹೋಗಬೇಕಾಯಿತು. ಎಲ್ಲವೂ ಹೊಸ ವಾತಾವರಣ, ಹೊಸ ಪಾತ್ರ, ಹೊಸ ಜವಾಬ್ದಾರಿ. ಒಟ್ಟಾರೆ ಮದುವೆಯಾದಾಗಿನಿಂದ ಜೀವನದಲ್ಲಿ ನಾನು ನಿರ್ವಹಿಸುತ್ತಿರುವ ಬಹುತೇಕ ಕೆಲಸಗಳು ನನಗೆ ಹೊಸದಾಗಿಯೇ ಇದ್ದವು. ಎಲ್ಲರನ್ನು ಅರ್ಥ ಮಾಡಿಕೊಳ್ಳಲು, ಕಲಿಯಲು, ಕಲಿಸಲು ಒಂದಷ್ಟು ಸಮಯ ಬೇಕಾಗಿತ್ತು. ಹೀಗಾಗಿ ಸಿನಿಮಾರಂಗದಿಂದ ಸ್ವಲ್ಪ ದೂರ ಉಳಿಯಬೇಕಾಯಿತು. 2023ರಲ್ಲಿ ವೃತ್ತಿ ಜೀವನದಲ್ಲಿ ಬ್ರೇಕ್ ಇದ್ದರೂ, ವೈಯಕ್ತಿಕ ಜೀವನದಲ್ಲಿ ಬೆಲೆ ಕಟ್ಟಲಾಗದ ನೆನಪುಗಳು ಹಾಗೇ ಉಳಿದುಕೊಂಡಿವೆ. ತುಂಬ ಖುಷಿಯಾಗಿ ವೈವಾಹಿಕ ಜೀವನದ ಸ್ಮರಣೀಯ ಕ್ಷಣಗಳನ್ನು ಈ ವರ್ಷ ಕಳೆದಿದ್ದೇನೆ.
-ಹರಿಪ್ರಿಯಾ, ನಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.