ಈ ವರ್ಷ ಅನ್ವಯವಾಗಲಿರುವ ಹೊಸ ನಿಯಮಗಳು
Team Udayavani, Jan 1, 2021, 7:56 AM IST
ನಮ್ಮ ಜೀವನದಲ್ಲಿ ಪರಿಣಾಮ ಬೀರುವ ಹಲವಾರು ನಿಯಮಗಳು ಜನವರಿ 1ರಿಂದ ಬದಲಾಗಲಿವೆ. ಈ ಬಗ್ಗೆ ಸಂಕ್ಷಿಪ್ತ ನೋಟ ಇಲ್ಲಿದೆ.
01 ಪೂರ್ವ ಮಾಹಿತಿ ನೀಡದ ದೊಡ್ಡ ಮೊತ್ತದ ಚೆಕ್‌ಗಳು ಇನ್ನು ಬೌನ್ಸ್!
2021ರ ಜ. 1ರಿಂದ ಹೊಸ ಚೆಕ್ ಪಾವತಿಗೆ “ಪಾಸಿಟಿವ್ ಪೇ ಸಿಸ್ಟಮ…’ ಅನ್ನು ಬ್ಯಾಂಕ್‌ಗಳು ಪರಿಚಯಿಸಲಿದೆ. ಇದರನ್ವಯ ಯಾವುದೇ ಮುನ್ಸೂಚನೆ ನೀಡದೆ ನೀಡುವ ದೊಡ್ಡ ಮೊತ್ತದ ಚೆಕ್‌ಗಳು ಬೌನ್ಸ್ ಆಗುವ ಸಾಧ್ಯತೆಯೂ ಇರುತ್ತದೆ. 50,000 ರೂ. ಮೇಲ್ಪಟ್ಟ ಮೊತ್ತದ ಚೆಕ್‌ಗೆ ಸಂಬಂಧಿಸಿದಂತೆ ಹೆಚ್ಚುವರಿ ಮಾಹಿತಿ ಪಡೆಯುವ ಅವಕಾಶವನ್ನು ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡಿದೆ. ಗ್ರಾಹಕರಿಗಾಗಬಹುದಾದ ವಂಚನೆಯನ್ನು ತಡೆಯುವುದೇ ಇದರ ಹಿಂದಿನ ಉದ್ದೇಶ. ಚೆಕ್ ನೀಡುವವರು ಎಸ್‌ಎಂಎಸ್, ಮೊಬೈಲ್ ಆ್ಯಪ್, ಇಂಟರ್‌ನೆಟ್ ಬ್ಯಾಂಕಿಂಗ್ ಅಥವಾ ಎಟಿಎಂ ಮೂಲಕ ಕೆಲವು ಮಾಹಿತಿಗಳನ್ನು ಇನ್ನು ಮುಂದೆ ಸಲ್ಲಿಸಬೇಕು. ಇದರಿಂದ ಬ್ಯಾಂಕ್‌ಗಳು ನಿರ್ದಿಷ್ಟ ಚೆಕ್‌ಗಳು ಬಂದಾಗ ಖಾತೆದಾರ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ನೀಡಿದ ಪೂರ್ವ ಮಾಹಿತಿಯನ್ನು ತಾಳೆ ಹಾಕಿ ಚೆಕ್ ಮಾನ್ಯ ಮಾಡುತ್ತವೆ. ಮಾಹಿತಿಗಳು ತಾಳೆಯಾಗದಿದ್ದಲ್ಲಿ ಚೆಕ್ ಅನ್ನು ಅಮಾನ್ಯಗೊಳಿಸಲು ಬ್ಯಾಂಕ್‌ಗಳಿಗೆ ಅವಕಾಶ ನೀಡಲಾಗಿದೆ. 50 ಸಾವಿರ ರೂ. ಅಥವಾ ಹೆಚ್ಚಿನ ಮೊತ್ತಕ್ಕೆ ಈ ಮಾಹಿತಿಯನ್ನು ಬ್ಯಾಂಕ್‌ಗಳು ಕೇಳಬಹುದು. ಆದರೆ 5 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಚೆಕ್‌ಗಳಿಗೆ ಮಾತ್ರ “ಪಾಸಿಟಿವ್ ಪೇ ಸಿಸ್ಟಮ್’ ಕಡ್ಡಾಯ.
02 ಸಂಪರ್ಕರಹಿತ ಕಾರ್ಡ್ ವಹಿವಾಟು ಮಿತಿ ಹೆಚ್ಚಳ
ಸಂಪರ್ಕರಹಿತ ಕಾರ್ಡ್ ವಹಿವಾಟು (Contactless card) ಗಳ ಇ-ಆರ್ಡರ್ ಮಿತಿ ಜ. 1ರಿಂದ ಹೆಚ್ಚಳವಾಗಲಿದೆ. ಈ ಮಿತಿಯನ್ನು ಈಗಿರುವ 2,000 ರೂ.ಗಳಿಂದ 5,000 ರೂ. ಗಳಿಗೆ ಹೆಚ್ಚಿಸಲಾಗುವುದು ಎಂದು ಆರ್‌ಬಿಐ ತಿಳಿಸಿದೆ. ಸುರಕ್ಷಿತ ರೀತಿಯಲ್ಲಿ ಡಿಜಿಟಲ್ ಪಾವತಿಯನ್ನು ಖಾತರಿಪಡಿಸಲು ಇದು ನೆರವಾಗಲಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಪಾವತಿಗಳು ಹೆಚ್ಚಾಗುತ್ತಿವೆ.
03 ಕೆಲವು ಮೊಬೈಲ್‌ಗಳಲ್ಲಿ ವಾಟ್ಸ್ ಆ್ಯಪ್ ಕೆಲಸ ಮಾಡಲ್ಲ
ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್‌ಆ್ಯಪ್ ಜ. 1ರಿಂದ ಕೆಲವೊಂದು ಮೊಬೈಲ್ ಫೋನ್‌ಗಳಲ್ಲಿ ಸೇವೆಯನ್ನು ಸ್ಥಗಿತಗೊಳಿಸಲಿದೆ. ಅಂಡ್ರಾಯx… ಚಾಲನೆಯಲ್ಲಿರುವ ಒಎಸ್ 4.0.3 ಮತ್ತದರ ಬಳಿಕದ ಆವೃತ್ತಿಗಳು, ಐಫೋನ್ ಚಾಲನೆಯಲ್ಲಿರುವ ಐಒಎಸ್ 9 ಮತ್ತು ಅದರ ಅನಂತರದ ಆವೃತ್ತಿಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸಲಿದೆ. ಇದಕ್ಕಿಂತ ಹಳೆಯ ಅಥವಾ ಆರಂಭದ ಆವೃತ್ತಿಗಳಲ್ಲಿ ವಾಟ್ಸ್‌ಆ್ಯಪ್ ಸ್ತಬ್ಧಗೊಳ್ಳಲಿದೆ.
04 ಕಾರುಗಳು ದುಬಾರಿ!
ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚವನ್ನು ಸರಿದೂಗಿಸಲು ದೇಶದ ಪ್ರಮುಖ ಕಾರು ಉತ್ಪಾದಕ ಕಂಪೆನಿಗಳಾದ ಮಾರುತಿ ಸುಜುಕಿ ಇಂಡಿಯಾ, ಮಹೀಂದ್ರಾ ಮತ್ತು ಮಹೀಂದ್ರಾ, ಹ್ಯುಂಡೈ ಜ.1ರಿಂದ ತನ್ನ ವಾಹನಗಳ ಬೆಲೆಯನ್ನು ಹೆಚ್ಚಿಸ ಲಿವೆ. ಇನ್ನುಳಿದ ಕಂಪೆನಿಗಳು ಇದೇ ನಡೆಯನ್ನು ಅನುಸರಿಸುವ ಸಾಧ್ಯತೆ ಇದೆ.
05 ಲ್ಯಾಂಡ್ ಲೈನ್ ಟು ಮೊಬೈಲ್ ಫೋನ್‌ಗೆ ಕರೆ
ಲ್ಯಾಂಡ್‌ಲೈನ್‌ಗಳಿಂದ ಮೊಬೈಲ್ ಫೋನ್‌ಗಳಿಗೆ ಕರೆ ಮಾಡಲು ಬಯಸುವವರು “0′ ನಮೂದಿಸುವುದು ಕಡ್ಡಾಯ. 0 ಬಟನ್ ಒತ್ತಿದ ಬಳಿಕವೇ ಮೊಬೈಲ್ ಸಂಖ್ಯೆಯನ್ನು ಒತ್ತಬೇಕಾಗುತ್ತದೆ. ಜ. 1ರೊಳಗೆ ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಟೆಲಿಕಾಂ ಕಂಪೆನಿಗಳಿಗೆ ಇಲಾಖೆ ಸೂಚಿಸಿದೆ.
06 ನಾಲ್ಕು ಚಕ್ರಗಳ ಎಲ್ಲ ವಾಹನಗಳಿಗೆ ಫಾಸ್ಟಾಗ್
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆ¨ªಾರಿಗಳ ಸಚಿವಾಲಯವು 2021ರ ಜ. 1ರಿಂದ ಎಲ್ಲ ನಾಲ್ಕು ಚಕ್ರ ವಾಹನಗಳಿಗೆ ಫಾಸ್ಟಾಗ್ ಕಡ್ಡಾಯ ಗೊಳಿಸುವ ಅಧಿಸೂಚನೆಯನ್ನು ಹೊರಡಿಸಿದೆ. 2017 ರ ಡಿ. 1ರ ಮೊದಲು ಮಾರಾಟವಾದ ಎಂ ಮತ್ತು ಎನ್ ವರ್ಗದ ನಾಲ್ಕು ಚಕ್ರಗಳಿಗೆ ಫಾಸ್ಟಾಗ್ ಕಡ್ಡಾಯ. ಇದಕ್ಕಾಗಿ ಕೇಂದ್ರ ಮೋಟಾರು ವಾಹನ ನಿಯಮಗಳು 1989 ಅನ್ನು ತಿದ್ದುಪಡಿ ಮಾಡಿದ್ದು, ಈ ಕುರಿತು 2020ರ ನ. 6ರಂದು ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
07 ಯುಪಿಐ ಪಾವತಿಗೆ ಶುಲ್ಕ
ಅಮೆಜಾನ್ ಪೇ, ಗೂಗಲ್ ಪೇ ಮತ್ತು ಫೋನ್ ಪೇ ವಹಿವಾಟಿನ ಮೇಲೆ ಬಳಕೆದಾರರು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಬಹುದು. ಜ. 1ರಿಂದ ಥರ್ಡ್ ಪಾರ್ಟಿ ಆ್ಯಪ್ಲಿಕೇಶನ್ ಪೂರೈಕೆದಾರರು ನಡೆಸುತ್ತಿರುವ ಯುಪಿಐ ಪಾವತಿ ಸೇವೆಗೆ ಹೆಚ್ಚುವರಿ ಶುಲ್ಕ ವಿಧಿಸಲು ಎನ್‌ಪಿಸಿಐ ನಿರ್ಧರಿಸಿದೆ ಎನ್ನಲಾಗುತ್ತಿದೆ. ಥರ್ಡ್ ಪಾರ್ಟಿ ಆ್ಯಪ್ಲಿಕೇಶನ್‌ಗಳಿಗೆ ಎನ್‌ಪಿಸಿಐ ಶೇ. 30ರ ಕ್ಯಾಪ್ ವಿಧಿಸಿದೆ.
08 ಗೂಗಲ್ ಪೇ ವೆಬ್ ಆ್ಯಪ್ಲಿಕೇಶನ್
ಗೂಗಲ್ ತನ್ನ ಪಾವತಿ ಆ್ಯಪ್ಲಿಕೇಶನ್ ವೆಬ್ ಆ್ಯಪ್ಲಿಕೇಶನ್ ಅನ್ನು ನಿಷ್ಕ್ರಿಯಗೊಳಿಸಲಿದೆ. ಗೂಗಲ್ ಪೇ – ಜನವರಿಯಲ್ಲಿ ಮತ್ತು ತ್ವರಿತ ಹಣ ವರ್ಗಾವಣೆಗೆ ಬಳಕೆದಾರರಿಗೆ ಶುಲ್ಕ ವಿಧಿಸಲಿದೆ. Google Pay ನಲ್ಲಿ, ಗ್ರಾಹಕರು ಇಲ್ಲಿಯವರೆಗೆ ಪಾವತಿಗಳನ್ನು ನಿರ್ವಹಿ ಸಲು ಹಾಗೂ ಮೊಬೈಲ್ ಆ್ಯಪ್ಲಿಕೇಶನ್‌ನಿಂದ ಅಥವಾ pay.google.comನಿಂದ ಹಣವನ್ನು ಕಳುಹಿಸುತ್ತಿದ್ದರು. ಜನವರಿಯಿಂದ ವೆಬ್
ಆ್ಯಪ್ಲಿಕೇಶನ್ ಸೈಟ್ ಕಾರ್ಯನಿರ್ವಹಿಸುವುದಿಲ್ಲ ಎಂದು ಗೂಗಲ್ ತಿಳಿಸಿದೆ.
09 ಎಲ್‌ಪಿಜಿ ಸಿಲಿಂಡರ್ ಬೆಲೆಗಳು
ತೈಲ ಮಾರುಕಟ್ಟೆ ಕಂಪೆನಿಗಳು ಅಂತಾ ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಚಾ ದರವನ್ನು ಅವಲಂಬಿಸಿ ಪ್ರತೀ ತಿಂಗಳ ಮೊದಲ ದಿನ ಎಲ್‌ಪಿಜಿಯ ಬೆಲೆಯನ್ನು ಪರಿಷ್ಕರಿಸಲಿವೆ. ಹೀಗಾಗಿ ತಿಂಗಳ ಮಧ್ಯದಲ್ಲಿ ಬೆಲೆ ಏರಿಕೆಯಾಗದೇ ತಿಂಗಳ ಆರಂಭದಲ್ಲೇ ಅದು ನಿಶ್ಚಯವಾಗಲಿದೆ. ಏತ ನ್ಮಧ್ಯೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ವಾರಕ್ಕೊಮ್ಮೆ ಪರಿಷ್ಕರಿಸುವ ಚಿಂತನೆಯನ್ನೂ ಐಒಸಿ ನಡೆಸಿದೆ.
10 ಜಿಎಸ್ಟಿ- ನೋಂದಾ ಯಿತ ಸಣ್ಣ ಉದ್ಯಮ
5 ಕೋಟಿ ರೂ.ಗಳ ವಹಿವಾಟು ಹೊಂದಿರುವ ವ್ಯವಹಾರಗಳು ಪ್ರಸ್ತುತ 12ರ ಬದಲು ಜನವರಿಯಿಂದ ಕೇವಲ ನಾಲ್ಕು ಜಿಎಸ್‌ಟಿ ಮಾರಾಟ ರಿಟರ್ನ್ಸ್ ಅಥವಾ ಜಿಎಸ್‌ಟಿಆರ್ -3 ಬಿ ಅನ್ನು ಸಲ್ಲಿಸಬೇಕಾಗುತ್ತದೆ. ತ್ತೈಮಾಸಿಕ ರಿಟರ್ನ್ ಜತೆಗೆ ಮಾಸಿಕ ಪಾವತಿ ಯೋಜನೆ(ಕ್ಯೂಆರ್‌ಎಂಪಿ) ಸುಮಾರು 94 ಲಕ್ಷ ತೆರಿಗೆದಾರರ ಮೇಲೆ ಪರಿಣಾಮ ಬೀರುತ್ತದೆ. ಇದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯ ಒಟ್ಟು ತೆರಿಗೆ ಮೂಲದ ಶೇ. 92ರಷ್ಟಿದೆ. ಇದರೊಂದಿಗೆ ಜನವರಿಯಿಂದ ಸಣ್ಣ ತೆರಿಗೆದಾರರು ಒಂದು ವರ್ಷದಲ್ಲಿ ಕೇವಲ ಎಂಟು ರಿಟರ್ನ್ಗಳನ್ನು (ನಾಲ್ಕು ಜಿಎಸ್‌ಟಿಆರ್ -3 ಬಿ ಮತ್ತು ನಾಲ್ಕು ಜಿಎಸ್‌ಟಿಆರ್ -1 ರಿಟರ್ನ್ಸ್) ಸಲ್ಲಿಸಬೇಕಾಗುತ್ತದೆ.
11 ಟೇಕ್ ಹೋಮ್ ಸ್ಯಾಲರಿಗೆ ಕತ್ತರಿ
ಈ ವರ್ಷದಿಂದ ನಿಮ್ಮ ಕೈಗೆ ಬರುವ ವೇತನದ ಮೊತ್ತವು ಇಳಿಕೆಯಾಗಲಿದೆ! ಹೊಸ ವೇತನ ನಿಯಮಗಳಅನ್ವಯ ಕೇಂದ್ರ ಸರಕಾರವು ಕರಡು ನಿಯಮಗಳನ್ನು ಸಿದ್ಧಪಡಿಸಿದ್ದು, ಅದರಂತೆ ಎಲ್ಲ ಕಂಪೆನಿಗಳಿಗೂ ಮುಂದಿನ ವಿತ್ತೀಯ ವರ್ಷದಿಂದ ತಮ್ಮ ಉದ್ಯೋಗಿ ಗಳ “ವೇತನದ ಪ್ಯಾಕೇಜ್’ ಪುನಾರಚಿಸುವ ಅನಿವಾರ್ಯ ಎದುರಾಗಿದೆ.
ಹೊಸ ನಿಯಮ ಎಪ್ರಿಲ್‌ನಿಂದ ಅನ್ವಯವಾಗಲಿವೆ. ಉದ್ಯೋಗಿ ಗಳಿಗೆ ನೀಡುವ ಭತ್ತೆಯು ಆತನ ಒಟ್ಟು ವೇತನದ ಶೇ.50ನ್ನು ಮೀರಬಾರದು ಎಂದು ಈ ನಿಯಮ ಹೇಳುತ್ತದೆ. ಅಂದರೆ ಉದ್ಯೋಗಿಯ ಮೂಲ ವೇತನವೇ ಶೇ. 50ರಷ್ಟಿರಬೇಕು. ನಿಯಮ ಪಾಲಿಸಬೇಕೆಂದರೆ ಉದ್ಯೋಗದಾತರು ಉದ್ಯೋಗಿಗಳ ಮೂಲವೇತನ ಹೆಚ್ಚಿಸಲೇಬೇಕಾಗುತ್ತದೆ. ಪರಿಣಾಮ ಗ್ರಾಚ್ಯುಟಿ ಪಾವತಿ ಮೊತ್ತವೂ ಸ್ವಲ್ಪಮಟ್ಟಿಗೆ ಏರಿಕೆಯಾಗುತ್ತದೆ ಮಾತ್ರವಲ್ಲ ಭವಿಷ್ಯ ನಿಧಿ (ಪಿಎಫ್)ಗೆ ಪಾವತಿಯಾಗುವ ಉದ್ಯೋಗಿ ಪಾಲೂ ಹೆಚ್ಚಾಗುತ್ತದೆ.
ಇವೆಲ್ಲದರ ಪರಿಣಾಮವೆಂಬಂತೆ ಉದ್ಯೋಗಿಯ ಕೈಗೆ ಬರುವ ಸಂಬಳ (ಟೇಕ್ ಹೋಂ ಸ್ಯಾಲರಿ) ಕಡಿಮೆಯಾಗುತ್ತದೆ. ಆದರೆ ಉದ್ಯೋಗಿಯ ನಿವೃತ್ತಿ ನಿಧಿ ಹೆಚ್ಚಾಗುವುದರಿಂದ ದೀರ್ಘಾವಧಿಯ ಲಾಭ ತರಲಿದೆ. ಸಾಮಾಜಿಕ ಭದ್ರತೆ ಪ್ರಸ್ತುತ ಬಹುತೇಕ ಖಾಸಗಿ ಕಂಪೆನಿಗಳು ಉದ್ಯೋಗಿಯ ಒಟ್ಟಾರೆ ಸಂಭಾವನೆಯ ಶೇ. 50ಕ್ಕಿಂತ ಕಡಿಮೆ ಮೊತ್ತವನ್ನು ಭತ್ತೆಯೇತರ ಮೊತ್ತವೆಂದೂ ಶೇ. 50ಕ್ಕಿಂತ ಹೆಚ್ಚಿನದನ್ನು ಭತ್ತೆಯ ಮೊತ್ತವೆಂದೂ ಪಾವತಿಸುತ್ತವೆ. ಹೊಸ ವೇತನ ನಿಯಮ ಜಾರಿಯಾದರೆ ಇದೂ ಬದಲಾಗುತ್ತದೆ.
12 ಹೆಚ್ಚಲಿದೆ ಎಲ್‌ಸಿಡಿ ಟಿವಿ ದರ
ಎಲ್‌ಸಿಡಿ ಟಿವಿ, ಫ್ರಿಡ್ಜ್ ಮತ್ತು ಇತರ ಗೃಹೋಪಯೋಗಿ ವಸ್ತುಗಳು ಹೊಸ ವರ್ಷದಿಂದ ದುಬಾರಿಯಾಗಲಿವೆ. ತಾಮ್ರ, ಉಕ್ಕು, ಅಲ್ಯುಮಿನಿಯಂ ದರ ಹೆಚ್ಚಾದ್ದರಿಂದ ಈ ನಿರ್ಧಾರ.
13 ಸರಳ ವಿಮೆ ಪಾಲಿಸಿ
ದೇಶದ ವಿಮಾ ಯೋಜನೆ ಕಂಪೆನಿಗಳೆಲ್ಲವೂ ಜನವರಿ 1ರಿಂದ “ಸರಳ ಜೀವನ ವಿಮೆ’ ಎನ್ನುವ ಏಕರೂಪದ ವಿಮಾ ಪಾಲಿಸಿಯನ್ನು ಜಾರಿ ಮಾಡ ಬೇಕು ಎಂದು ಐಆರ್ ಡಿಎಐ ಆದೇಶಿಸಿದೆ. ನವ ಗ್ರಾಹಕರಿಗೆ ಇದು ವರದಾನವೆನ್ನಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.