New Year: ಹೊಸ ಚೌಕುಳಿಯೊಳಗೆ ಹಳೆಯ ನೋವು..

Team Udayavani, Dec 31, 2023, 12:59 PM IST

New Year: ಹೊಸ ಚೌಕುಳಿಯೊಳಗೆ ಹಳೆಯ ನೋವು..

ಹರುಷಗಳು ಜಾರುತ್ತವೆ. ಕಾಲದ ಚಕ್ರಕ್ಕೆ ಬ್ರೇಕುಗಳಿಲ್ಲ. ಯಾವ ಎಂಜಿನ್ನನ್ನು ಬಂದ್‌ ಮಾಡಿದರೂ ಅದು ನಿಲ್ಲುವುದಿಲ್ಲ. ನೆನ್ನೆ, ಮೊನ್ನೆಯಷ್ಟೇ ತಂದಂತಿದ್ದ ಹೊಚ್ಚ ಹೊಸ ಕ್ಯಾಲೆಂಡರ್‌ ನಾಳೆಯ ಹೊತ್ತಿಗೆಲ್ಲಾ ಹಳತಾಗುತ್ತದೆ. ಮುನ್ನೂರ ಅರವತೈದು ದಿನಗಳ ಕಾಲ ನಾವು ಬದುಕಿದ ಒಂದೊಂದು ನಿಮಿಷವೂ ಬಸ್ಸಿನ ಕಿಟಕಿಯಾಚೆ ಹಿಂದಕ್ಕೋಡಿದ ಮರ ಗಿಡಗಳಂತೆ ಹಿಂದಿನ ಅನಂತದಲ್ಲಿ ಮರೆಯಾಗುತ್ತವೆ. ಆದರೆ ಕೆಲವು ಘಟನೆಗಳು ಮಾತ್ರ ಅದು ಹೇಗೋ ಬದಲಾದ ಕ್ಯಾಲೆಂಡರಿನ ಹೊಚ್ಚ ಹೊಸ ನಾಳೆಗಳೊಳಕ್ಕೂ ಹರಿದುಬಂದು ಬಿಡುತ್ತವೆ.

ಆ ದಿನ ಉಳಿದ ದಿನಗಳಂತೆಯೇ ಆರಂಭವಾಯಿತು. ಆದರೆ ಎಂದಿನಂತೆ ಮುಗಿಯಲಿಲ್ಲ. ಆ ಪುಟ್ಟ ಮನೆಯ ಪುಟ್ಟ ಕೋಣೆಯಲ್ಲಿ ಬೆಂಕಿ ಧಗಧಗ ಉರಿಯುತ್ತಿತ್ತು. ನಾವೆಲ್ಲ ನೋಡುತ್ತಾ ನಿಂತಿದ್ದೆವು. ಮಂದಿ ನೀರೆರೆಚುತ್ತಿದ್ದರು. ಅರ್ಧ ಸುಟ್ಟ ನನ್ನ ಗೆಳೆಯ ಹೊರಗಡೆ ಜಗುಲಿಯಲ್ಲಿ ನರಳುತ್ತಾ ಮಲಗಿದ್ದ. ತಡೆಯಲಾರದ ಉರಿಗೆ ಹೊದ್ದುಕೊಳ್ಳಲು ಒಂದು ಪಂಚೆಯನ್ನು ಬೇಡುತ್ತಾ ನರಳುತ್ತಿದ್ದ. ಕೋಣೆಯೊಳಗಣ ಬೆಂಕಿ ಕಿಟಕಿಯ ಸಮೀಪ ಸಹ ಹೋಗಗೊಡದೆ ಧಗಧಗಿಸುತ್ತಿತ್ತು. ಹೊತ್ತಿದ ಬೆಂಕಿಗಳೆಲ್ಲ ಆರಲೇಬೇಕು. ಈ ಜ್ವಾಲೆಯೂ ನಂದಿತು ನಿಜ, ಆದರೆ ಆರುವ ಮುನ್ನ ನಾಲ್ಕು ಜೀವಗಳನ್ನು ಇನ್ನೆಂದೂ ಉಸಿರಾಡಲಾರದಂತೆ ಬೂದಿಮಾಡಿ ಹೋಯಿತು. ಕೆಲವೇ ಗಂಟೆಗಳ ಕೆಳಗೆ, ಹಿಂದಿನ ದಿನ ಸಂಜೆ ಹಾದಿಯಲ್ಲಿ ಸಿಕ್ಕು “ನಮ್ಮನೆಗೆ ಬಾರೋ’ ಎಂದಿದ್ದ ಪುಟ್ಟ ತಮ್ಮನಂಥಾ ಗೆಳೆಯ ಹಾಗೂ ಅವನ ಇಡೀ ಕುಟುಂಬ ಇದ್ದಿಲಲ್ಲಿ ಕೆತ್ತಿದ ಭಗ್ನ ವಿಗ್ರಹಗಳಂತೆ ನಿಶ್ಚಲವಾಗಿ ಮಲಗಿದ್ದರು. ಜನರೆಲ್ಲ ಎರಚಿದ ನೀರಿಗೆ ಶವಗಳ ಮೇಲಿನ ಜ್ವಾಲೆಯನ್ನು ನಿಲ್ಲಿಸಲು ಸಾಧ್ಯವಾಯಿತೇ ಹೊರತು ತೆರಳಿದ ಜೀವಗಳ ಮರಳಿಸಲು ಆಗಲೇಇಲ್ಲ.

ದಿನಗಳು ಕಳೆದಿವೆ. ವಾರಗಳುರುಳಿವೆ. ತಿಂಗಳುಗಳು ಕಳೆದು ವರುಷವೇ ಬದಲಾಗಿದೆ. ಆದರೆ ಆ ದೌರ್ಭಾಗ್ಯದ ಮನೆಯ ಸುತ್ತ ಮಾತ್ರ ಕಾಲ ಸ್ತಂಭಿಸಿದೆ. ಆ ಹತಭಾಗ್ಯ ಜೀವಗಳ ನರಳಾಟ ಇನ್ನಾದರೂ ಅಲ್ಲಿ ಉಳಿದೇ ಹೋಗಿದೆ. ಇಂಥಾ ಇನ್ನೆಷ್ಟು ಹೊಸ ವರ್ಷಗಳು ಕಳೆದರೂ ಆ ಯಾತನೆಗೆ, ಆ ಆರ್ತನಾದಕ್ಕೆ ಮುಕ್ತಿಯಿಲ್ಲ. ಹೊಸ ವರ್ಷದ ಹೊಸ ಚೌಕಳಿಗಳೆಲ್ಲದರೊಳಗೆ ಹರಿಯಲು ಆ ಹಳೆಯ ವೇದನೆ ಪ್ರವಾಹವಾಗಿ ಕಾಯುತ್ತಿದೆ.

-ವಿನಾಯಕ ಅರಳಸುರಳಿ, ತೀರ್ಥಹಳ್ಳಿ

ಟಾಪ್ ನ್ಯೂಸ್

12-muniratna

Bengaluru: ಶಾಸಕ ಮುನಿರತ್ನ ಕೇಸ್‌: ವಿಕಾಸಸೌಧದಲ್ಲಿ ಸ್ಥಳ ಮಹಜರು

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

9

Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

12-muniratna

Bengaluru: ಶಾಸಕ ಮುನಿರತ್ನ ಕೇಸ್‌: ವಿಕಾಸಸೌಧದಲ್ಲಿ ಸ್ಥಳ ಮಹಜರು

1(1)

Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

11-kushtagi

Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.