ಬಂಧನದಲ್ಲಿದ್ದ ಭಾರತದ ಐವರು ನಾವಿಕರು ಸ್ವದೇಶಕ್ಕೆ
Team Udayavani, Mar 25, 2019, 6:03 AM IST
ಸಾಂದರ್ಭಿಕ ಚಿತ್ರ
ಮುಂಬಯಿ: ತಮ್ಮ ಹಡಗಿನಲ್ಲಿ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಕಾರಣಕ್ಕಾಗಿ ಗ್ರೀಸ್‌ನಲ್ಲಿ ಬಂಧಿತರಾಗಿದ್ದ ಭಾರತ ಮೂಲದ ಐವರು ನಾವಿಕರು, ಗ್ರೀಸ್‌ನಲ್ಲಿರುವ ಭಾರತೀಯ ದೂತಾವಾಸದ ಸತತ ಪ್ರಯತ್ನದ ಫಲವಾಗಿ ಭಾರತಕ್ಕೆ ಸುರಕ್ಷಿತವಾಗಿ ಬಂದಿಳಿದಿದ್ದಾರೆ. 14 ತಿಂಗಳ ಬಂಧನದ ನಂತರ ರವಿವಾರ ಸ್ವದೇಶಕ್ಕೆ ಹಿಂದಿರುಗಿದ್ದಾರೆ. ಇವರಲ್ಲಿ ಬೆಂಗಳೂರು ಮೂಲದ ಗಗನ್ ದೀಪ್ ಕೂಡ ಒಬ್ಬರು.
ಕಳೆದ ವರ್ಷ ಜ.6ರಂದು ಟರ್ಕಿಯಿಂದ ಡಿಬೌಟಿ ದೇಶಕ್ಕೆ ಹೊರಟಿದ್ದ ಹಡಗು ಮಾರ್ಗ ಮಧ್ಯೆ ಜ. 8ರಂದು ಗ್ರೀಸ್ ದೇಶದ ಕರಾವಳಿ ವ್ಯಾಪ್ತಿಯ ಮೂಲಕ ಹಾದು ಹೋಗುವಾಗ ಗ್ರೀಕ್ ಕೋಸ್ಟ್ ಗಾರ್ಡ್‌ಗಳು ಹಡಗಿನ ತಪಾಸಣೆ ನಡೆಸಿದ್ದರು. ಪಟಾಕಿ ತಯಾರಿಕೆಗೆ ಬಳಸಲಾಗುವ ಕಚ್ಚಾ ವಸ್ತುಗಳು ಪತ್ತೆಯಾಗಿದ್ದರಿಂದ ಹಡಗಿನ ಸಿಬ್ಬಂದಿಯನ್ನು ಬಂಧಿ ಸಲಾಗಿತ್ತು. ನಾವಿಕರಲ್ಲೊಬ್ಬರಾದ, ಪಂಜಾಬ್‌ನ ಗುರುದಾಸ್‌ಪುರ ಮೂಲದ ಭೂಪೇಂದ್ರ ಸಿಂಗ್ ಪ್ರತಿಕ್ರಿಯಿಸಿ, ಟಕಾನೂನಾತ್ಮಕವಾಗಿ ನಾವು ಸ್ಫೋಟಕ ಕಚ್ಚಾ ವಸ್ತುಗಳನ್ನು ಕೊಂಡೊಯ್ಯುತ್ತಿದ್ದೆವು. ಅದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ನೀಡಿದ್ದರೂ ಸ್ಥಳೀಯ ಸರಕಾರವು ಅವುಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಬಂಧನದ ವೇಳೆ ಹಿಂಸೆ ನೀಡಲಿಲ್ಲವಾದರೂ, ಊಟಕ್ಕೆ ದನದ ಮಾಂಸದ ಭಕ್ಷ್ಯ ಗಳನ್ನು ನೀಡುತ್ತಿದ್ದಾಗ ಬೇಸರ ವಾಗುತ್ತಿತ್ತು’ ಎಂದಿದ್ದಾರೆ.
ಪಾಕಿಸ್ಥಾನ ಕೈದಿಗಳ ಸಹಾನುಭೂತಿ: ಬೆಂಗಳೂರಿನ ಗಗನ್ ದೀಪ್ ಮಾತನಾಡಿ, “”ಗ್ರೀಕ್ ಜೈಲಿನಲ್ಲಿ ಬಂಧಿತರಾದ ಮೊದಲ ಭಾರತೀಯರು ನಾವಾಗಿದ್ದೆವು. ಜೈಲಿನಲ್ಲಿದ್ದ ಪಾಕಿಸ್ಥಾನದ ಕೈದಿಗಳು ನಮ್ಮ ಬಗ್ಗೆ ಸಹಾನುಭೂತಿ, ಆತ್ಮಸ್ಥೈರ್ಯ ತುಂಬುತ್ತಿದ್ದುದು ವಿಶೇಷವಾಗಿತ್ತು” ಎಂದಿದ್ದಾರೆ. “ಪಾಕಿಸ್ಥಾನ ಕೈದಿಗಳು ಅನೇಕ ರೀತಿಯಲ್ಲಿ ನಮಗೆ ಮಾರ್ಗದರ್ಶನ ಮಾಡಿದರು. ಎರಡೂ ದೇಶಗಳ ನಡುವಿನ ದ್ವೇಷ ಅಲ್ಲಿ ಕಾಣಲೇ ಇಲ್ಲ” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.