ಅನುಮತಿ ಕೋರಲು ಒಪ್ಪಿಗೆ
Team Udayavani, Mar 24, 2019, 11:49 AM IST
ನವದೆಹಲಿ: ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್ ಕಂಪನಿ 8,100 ಕೋಟಿ ರೂ. ವಂಚಿಸಿದ ಆರೋಪಕ್ಕೆ ಸಂಬಂಧಿಸಿ 21 ರಾಷ್ಟ್ರಗಳಿಗೆ ತನಿಖೆಯ ಬಗ್ಗೆ ಅನುಮತಿ ಕೋರಿ ದಾಖಲೆ (ಲೆಟರ್ಸ್ ರೊಗೇಟರಿ)ಸಲ್ಲಿಸಲು ಜಾರಿ ನಿರ್ದೇಶನಾಲಯಕ್ಕೆ
-ನವದೆಹಲಿಯ ಕೋರ್ಟ್ ಅನುಮತಿ ನೀಡಿದೆ. ಅಮೆರಿಕ, ಚೀನಾ, ಪನಾಮಾ, ಆಸ್ಟ್ರೇಲಿಯಾ, ಅಲ್ಫೆನಿಯಾ ಸೇರಿದಂತೆ 21 ರಾಷ್ಟ್ರಗಳಲ್ಲಿ ತನಿಖೆ ನಡೆಸಲು ಅನುಮತಿಯನ್ನು ಕೇಂದ್ರ ತನಿಖಾ ಸಂಸ್ಥೆ ಹೆಚ್ಚುವರಿ ಸೆಷನ್ಸ್ ಕೋರ್ಟಿಂದ ಕೋರಿತ್ತು.
ಸಿಬಿಐ ದಾಖಲಿಸಿದ ಆರೋಪಪಟ್ಟಿಯನ್ವಯ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುತ್ತಿದೆ. ಸ್ಟರ್ಲಿಂಗ್ ಬಯೋಟೆಕ್ ಕಂಪನಿ ವಿರುದ್ಧ ಆದಾಯ ತೆರಿಗೆ ಇಲಾಖೆ ಕೂಡ ತನಿಖೆ ನಡೆಸುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.