ಲಾಕ್‌ಡೌನ್‌ ವೇಳೆ ರಾಜ್ಯದಲ್ಲಿ ಹಾಲು ಉತ್ಪಾದನೆ 12 ಲಕ್ಷ ಲೀ.ಹೆಚ್ಚಳ

ಉತಾದನೆ 80 ಲಕ್ಷ ಲೀಟರ್‌ಗೇರಿಕೆ: ಕೆಎಂಎಫ್ ಎಂಡಿ ಸತೀಶ್‌

Team Udayavani, Jun 2, 2020, 11:42 AM IST

ಲಾಕ್‌ಡೌನ್‌ ವೇಳೆ ರಾಜ್ಯದಲ್ಲಿ ಹಾಲು ಉತ್ಪಾದನೆ 12 ಲಕ್ಷ ಲೀ.ಹೆಚ್ಚಳ

ನಂದಿನಿ ಅರಿಶಿಣ ಹಾಲು ಉತ್ಪನ್ನವನ್ನು ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌ ಬಿಡುಗಡೆಗೊಳಿಸಿದರು.

ಬೆಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ರಾಜ್ಯಾದ್ಯಂತ ಪ್ರತಿದಿನ 12 ಲಕ್ಷ ಲೀಟರ್‌ ಹಾಲು ಉತ್ಪಾದನೆ ಹೆಚ್ಚಳವಾಗಿದೆ ಎಂದು ಕೆಎಂಎಫ್‌ನ ವ್ಯವಸ್ಥಾಪಕ
ನಿರ್ದೇಶಕ ಬಿ.ಸಿ.ಸತೀಶ್‌ ತಿಳಿಸಿದರು. ವಿಶ್ವ ಹಾಲು ದಿನಾಚರಣೆ ಅಂಗವಾಗಿ ಡೈರಿ ಸರ್ಕಲ್ ಬಳಿ ಇರುವ ಕೆಎಂಎಫ್‌ ಕಚೇರಿಯಲ್ಲಿ ನಂದಿನಿ ಉತ್ಪನ್ನಗಳ ಸಂಚಾರ ವಾಹನ ಮತ್ತು ನಂದಿನಿ ಅರಿಶಿಣ ಹಾಲು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಪ್ರತಿದಿನ ರಾಜ್ಯಾದ್ಯಂತ 68 ಲಕ್ಷ ಲೀಟರ್‌ ಹಾಲನ್ನು ಖರೀದಿಸಲಾಗುತ್ತಿದೆ. ದಿಗ್ಬಂಧನದ ಅವಧಿಯಲ್ಲಿ ಹೆಚ್ಚುವರಿ 12 ಲಕ್ಷ ಲೀಟರ್‌ ಉತ್ಪಾದನೆಯಾಗುತ್ತಿದೆ. ಪ್ರಸ್ತುತ 80 ಲಕ್ಷ ಲೀಟರ್‌ ಹಾಲು ಖರೀದಿಸಲಾಗುತ್ತಿದೆ. ಹೆಚ್ಚಿನ ಹಾಲು ಉತ್ಪಾದನೆಯಿಂದಾಗಿ ಅದನ್ನು ಪೌಡರ್‌ ಆಗಿ ಪರಿವರ್ತಿಸಿ ಶೇಖರಿಸಿಡಲಾಗುತ್ತಿದೆ ಎಂದರು.

ಕೋವಿಡ್ ನಡುವೆಯೂ ಗ್ರಾಹಕರು ನಂದಿನಿ ಮಳಿಗೆಗೆ ಬಂದು ಹಾಲು ಕೊಂಡೊಯ್ಯುತ್ತಿದ್ದು, ಗ್ರಾಹಕರ ಮನೆ ಬಾಗಿಲಿಗೆ ಹಾಲು ದೊರೆಯುವಂತೆ ಮಾಡಲು ವಾಹನ ಬಿಡುಗಡೆಗೊಳಿಸಲಾಗಿದೆ. ಪ್ರಾಯೋಗಿಕವಾಗಿ ಒಂದು ವಾಹನ ಬಿಡುಗಡೆಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ 10 ವಾಹನ ಸಂಚರಿಸಲು ವ್ಯವಸ್ಥೆ ಮಾಡ ಲಾಗುವುದು ಎಂದು ಸತೀಶ್‌ ಹೇಳಿದ್ದಾರೆ.

ರಾಜ್ಯದ 14 ಹಾಲು ಒಕ್ಕೂಟಗಳು ಸಂಚಾರ ವಾಹನ ಬಳಕೆ ಮಾಡಲು ಮನವಿ ಮಾಡಿವೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆರೋಗ್ಯ ತಜ್ಞರು ಹಾಲಿನಲ್ಲಿ ಅರಿಶಿಣ ಕಲೆಸಿ ಕುಡಿಯಲು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಕೆಎಂಎಫ್‌ ನಂದಿನಿ ಅರಿಶಿಣ ಹಾಲನ್ನು ಬಿಡುಗಡೆಗೊಳಿಸಿದೆ. ಮುಂದಿನ 3 ತಿಂಗಳು ರಿಯಾಯಿತಿ ದರದಲ್ಲಿ ಹಾಲು ದೊರೆಯಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಶುಸಂಗೋಪನೆ ನಿರ್ದೇಶಕ ಡಾ. ಡಿ.ಎನ್‌.ಹೆಗ್ಡೆ, ಕೆಎಂಎಫ್‌ ಮಾರುಕಟ್ಟೆ ನಿರ್ದೇಶಕ ಎಂ.ಟಿ.ಕುಲಕರ್ಣಿ, ಅಭಿಯಂತರ ವಿಭಾಗದ
ನಿರ್ದೇಶಕ ಬಿ.ಎಂ.ಸುರೇಶ್‌ ಕುಮಾರ್‌, ಗುಣ ನಿಯಂತ್ರಣ ನಿರ್ದೇಶಕ ಮುನಿರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅರಿಶಿಣ ಮಿಶ್ರಿತ ಹಾಲಿನಿಂದ ಹಲವು ಲಾಭ ನಂದಿನಿ ಅರಿಶಿಣ ಹಾಲಿನಲ್ಲಿ ರೋಗ ನಿರೋಧಕ ಶಕ್ತಿಯಿದೆ. ಅದು ಆ್ಯಂಟಿ ಬ್ಯಾಕ್ಟೀರಿಯಾ, ಆಂಟಿ – ವೈರಸ್‌ ಗುಣಗಳನ್ನು ಹೊಂದಿದೆ. ರೋಗ ಮತ್ತು ಸೋಂಕಿನಿಂದ ರಕ್ಷಿಸುತ್ತದೆ. ಜತೆಗೆ ಕೆಮ್ಮು ಮತ್ತು ಶೀತಕ್ಕೆ ಉತ್ತಮ ಪರಿಹಾರವಾಗಿದೆ. ಈ ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್‌ ಡಿ ಅಂಶವು ಸಮೃದ್ಧವಾಗಿದೆ. ಮೂಳೆ ಮತ್ತು ಕೀಲುಗಳನ್ನು ಬಲಪಡಿಸಿ, ಆಸ್ಟಿಯೋಪೊರೊಸಿಸ್‌ ತಡೆಯುತ್ತದೆ. ಖನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಜೀರ್ಣವನ್ನು ನಿವಾರಿಸುತ್ತದೆ ಹಾಗೂ ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ವಿಟಮಿನ್‌ ಎ ಮತ್ತು ಬಿ ಹೊಂದಿರುವುದರಿಂದ ಪ್ರತಿಯೊಬ್ಬ ವ್ಯಕ್ತಿಗೂ ಇದು ಅವಶ್ಯಕವಾಗಿದೆ. ಹುಟ್ಟಿದ ಮಕ್ಕಳಿಂದ ಹಿಡಿದು 15 ವರ್ಷದೊಳಗಿನ ಯುವಕರು ನಿತ್ಯ 300 ಗ್ರಾಮ್‌
ಹಾಲು ಕುಡಿಯಬೇಕು ಎಂದು ಆರೋಗ್ಯ ತಜ್ಞರೇ ಅಭಿಪ್ರಾಯಪಟ್ಟಿದ್ದಾರೆ ಎಂದು ಎಂದು ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌ ತಿಳಿಸಿದರು.

ಟಾಪ್ ನ್ಯೂಸ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್‌ ಕುಸಿತ

Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್‌ ಕುಸಿತ

Nirmala-Seetaraman

New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ

RBI-Logo

Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್

Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!

Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!

gold

Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.