6 ದಿನಗಳಲ್ಲಿ 19 ಸಾವಿರ ಕೋಟಿ ರೂ. ವ್ಯಾಪಾರ ಮಾಡಿದ ಫ್ಲಿಪ್‌ಕಾರ್ಟ್, ಅಮೆಜಾನ್!
ಹಬ್ಬದ ದಿನಗಳಲ್ಲಿ ಕಂಡು ಕೇಳರಿಯದ ರೀತಿ ಭರ್ಜರಿ ಮಾರಾಟ
Team Udayavani, Oct 8, 2019, 8:30 PM IST
ಹೊಸದಿಲ್ಲಿ: ಭಾರತದ ಎರಡು ಪ್ರಮುಖ ಆನ್‌ಲೈನ್ ಮಾರಾಟ ತಾಣಗಳಾದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಕೇವಲ 6 ದಿನಗಳಲ್ಲಿ 19 ಸಾವಿರ ಕೋಟಿ ರೂ. ವ್ಯಾಪಾರ ಮಾಡಿವೆ. ಸೆ.29ರಿಂದ ಅ.4ರವರೆಗಿನ ಅವಧಿಯಲ್ಲಿ ಉತ್ಪನ್ನಗಳು ಮಾರಾಟವಾಗಿವೆ.
ವಾಲ್‌ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಭಾರತದ ಆನ್‌ಲೈನ್ ಮಾರಾಟದಲ್ಲಿ ಶೇ.90ರಷ್ಟು ಪಾಲು ಹೊಂದಿವೆ. ಅಕ್ಟೋಬರ್ ತಿಂಗಳಿನಲ್ಲೀ ಈ ಎರಡು ತಾಣಗಳು 39 ಸಾವಿರ ಕೋಟಿ ರೂ. ವ್ಯಾಪಾರ ನಡೆಸಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು ಕಳೆದ ವರ್ಷಕ್ಕಿಂತ ಈ ವರ್ಷ ಶೇ.30ರಷ್ಟು ಹೆಚ್ಚು ಮಾರಾಟವಾಗಿದೆ. ಮೊಬೈಲ್ ಅತಿ ಹೆಚ್ಚು ಅಂದರೆ ಶೇ.55ರಷ್ಟು ಮಾರಾಟವಾಗಿವೆ. ಎಲೆಕ್ಟ್ರಾನಿಕ್ಸ್ ವಸ್ತುಗಳು, ಫ್ಯಾಶನ್, ಮನೆ ಸಾಮಗ್ರಿಗಳು ಅತಿ ಹೆಚ್ಚು ಮಾರಾಟವಾಗಿವೆ. ಅಮೆಜಾನ್ ಭಾರತದ ಶೇ.99.4ರಷ್ಟು ಪಿನ್‌ಕೋಡ್‌ಗಳಿಂದ ಈ ಬಾರಿ ಆರ್ಡರ್‌ಗಳನ್ನು ಸ್ವೀಕರಿಸಿರುವುದಾಗಿ ಹೇಳಿದೆ. ಫ್ಲಿಪ್‌ಕಾರ್ಟ್ ಬಿಗ್ ಬುಲಿಯನ್ ಡೇ ಕಳೆದ ವರ್ಷಕ್ಕಿಂತ ಶೇ.50ರಷ್ಟು ಅಭಿವೃದ್ಧಿ ದರ ದಾಖಲಿಸಿರುವುದಾಗಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.