5 ಟ್ರಿಲಿಯನ್ ಡಾಲರ್ ಜಿಡಿಪಿ ಗುರಿ ಸಾಧನೆ ಅಸಾಧ್ಯ : ಆರ್‌ಬಿಐ ಗವರ್ನರ್
Team Udayavani, Nov 23, 2019, 2:34 PM IST
ಹೊಸದಿಲ್ಲಿ: ದೇಶದ ಆರ್ಥಿಕತೆ ಏರಿಳಿತಗಳ ಮಧ್ಯೆ ನಡೆಯುತ್ತಿದ್ದು, ಪ್ರಸ್ತುತ ಬೆಳವಣಿಗೆಯ ದರದಲ್ಲಿ 2025ರ ವೇಳೆಗೆ 5 ಟ್ರಿಲಿಯನ್ ಡಾಲರ್ ಜಿಡಿಪಿ ಗುರಿ ತಲುಪುವುದು ಕಷ್ಟ ಸಾಧ್ಯ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಸಿ. ರಂಗರಾಜನ್ ಅಭಿಪ್ರಾಯಪಟ್ಟಿದ್ದಾರೆ.
2025ರ ವೇಳೆಗೆ ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್‌ಗೆ ಕೊಂಡೊಯ್ಯುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಸರಕಾರ ಹೊಂದಿದ್ದು, ಸದ್ಯ ಆರ್ಥಿಕ ಕ್ಷೇತ್ರದಲ್ಲಿನ ಪರಿಸ್ಥಿತಿ ಗಮನಿಸಿದ್ದರೆ ಗುರಿಯನ್ನು ತಲುಪಲು ಸಾಧ್ಯವಿಲ್ಲ ಎಂದಿದ್ದಾರೆ. ಜತೆಗೆ ಅನೇಕ ಆರ್ಥಿಕ ತಜ್ಞರು, ವಿಶ್ಲೇಷಕರು, ಚಿಂತಕರು ಇದಕ್ಕೆ ಧ್ವನಿಗೂಡಿಸಿದ್ದು, ನಿಗದಿತ ಗುರಿ ತಲುಪುವುದು ಕಷ್ಟವೆಂದು ವ್ಯಾಖ್ಯಾನಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ತೈಮಾಸಿಕ ಬೆಳವಣಿಗೆಯು 6 ವರ್ಷಗಳಿಗಿಂತ ಕನಿಷ್ಠ ಮಟ್ಟದಲ್ಲಿದ್ದು, ಶೇ.5ಕ್ಕೆ ಇಳಿಕೆಯಾಗಿದೆ. 2ನೇ ತ್ತೈಮಾಸಿಕದ ವರದಿ ಬೆಳವಣಿಗೆಯ ಮುನ್ಸೂಚನೆಯಾದರೂ ದರ ಮಾತ್ರ ಶೇ 4.3ರಷ್ಟಿದೆ. ಆರ್‌ಬಿಐ ಸಹ ತನ್ನ ಬೆಳವಣಿಗೆ ಅಂದಾಜನ್ನು ಎರಡು ತಿಂಗಳಲ್ಲಿ 90 ಬಿಪಿಎಸ್‌ಯಿಂದ ಅಕ್ಟೋಬರ್ ನೀತಿ ಪರಿಶೀಲನೆಯಲ್ಲಿ ಶೇ.6.1ಕ್ಕೆ ಇಳಿಸಿದೆ.
ಪ್ರಸ್ತುತ ಆರ್ಥಿಕತೆಯು ಸುಮಾರು 2.7 ಟ್ರಿಲಿಯನ್ ಡಾಲರ್‌ನಷ್ಟಿದ್ದು, ಮುಂದಿನ 5 ವರ್ಷಗಳಲ್ಲಿ ಇದನ್ನು ದ್ವಿಗುಣಗೊಳಿಸಲು ಬೆಳವಣಿಗೆಯ ದರ ವಾರ್ಷಿಕವಾಗಿ ಶೇ.9ಕ್ಕಿಂತ ಹೆಚ್ಚಿರಬೇಕು ಆಗ ಮಾತ್ರ 5 ಟ್ರಿಲಿಯನ್ ಡಾಲರ್ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.