![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 14, 2021, 7:15 AM IST
ಹೊಸದಿಲ್ಲಿ: ಮೊಬೈಲ್ ಆ್ಯಪ್‌ಗ್ಳು ಹಾಗೂ ಆನ್‌ಲೈನ್ ವೇದಿಕೆಗಳ ಮೂಲಕ ನೀಡಲಾಗುವ ಡಿಜಿಟಲ್ ಸಾಲದ ಮೇಲೆ ಅಧ್ಯಯನ ನಡೆಸಲು ಆರ್‌ಬಿಐ ಬುಧವಾರ ಸಮಿತಿಯೊಂದನ್ನು ರಚಿಸಿದೆ. ನಿಯಂತ್ರಿತ ಮತ್ತು ಅನಿಯಂತ್ರಿತ ಹಣಕಾಸು ವಲಯಗಳಲ್ಲಿ ಡಿಜಿಟಲ್ ಸಾಲ ನೀಡುವ ಚಟುವಟಿಕೆಗಳ ಅಧ್ಯಯನ ನಡೆಸಲು ಹಾಗೂ ಸೂಕ್ತವಾದ ನಿಯಂತ್ರಣ ವಿಧಾನ ಜಾರಿಗೆ ತರಲು ಈ ಸಮಿತಿ ರಚಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ.
ದೇಶಾದ್ಯಂತ ಆ್ಯಪ್ ಸಾಲ ವ್ಯವಸ್ಥೆ ಸೃಷ್ಟಿಸಿರುವ ತೊಂದರೆಯ ಹಿನ್ನೆಲೆಯಲ್ಲಿ ಆರ್‌ಬಿಐನ ಈ ನಡೆ ಪ್ರಾಮುಖ್ಯ ಪಡೆದಿದೆ. ಕೆಲವು ಆ್ಯಪ್‌ಗ್ಳು ಸಾಲ ಪಡೆದವರಿಗೆ ನೀಡುವ ಕಿರುಕುಳ, ತತ್ಪರಿಣಾಮವಾಗಿ ಕೆಲವರು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ವರದಿಯಾಗುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ರಚನೆಯಾಗಿರುವ ಆರ್‌ಬಿಐ ಸಮಿತಿಯಲ್ಲಿ ಆಂತರಿಕ ಸದಸ್ಯರಷ್ಟೇ ಅಲ್ಲದೇ, ಖಾಸಗಿ ಸೈಬರ್ ಭದ್ರತೆ ಸಂಸ್ಥೆಗಳ ಸದಸ್ಯರೂ ಇರಲಿದ್ದಾರೆ.
ಇಬ್ಬರ ಬಂಧನ: ಈ ಎಲ್ಲ ಬೆಳವಣಿಗೆಗಳ ನಡುವೆಯೇ, ತೆಲಂಗಾಣದ ಆ್ಯಪ್ ಸಾಲ ಜಾಲ ಪ್ರಕರಣ ಸಂಬಂಧ ರಾಚಕೊಂಡ ಪೊಲೀಸರು ಒಬ್ಬ ಚೀನಿ ಪ್ರಜೆ ಸೇರಿದಂತೆ ಇಬ್ಬರನ್ನು ಬುಧವಾರ ಬಂಧಿಸಿದ್ದಾರೆ. ಮಹಾರಾಷ್ಟ್ರದ ಥಾಣೆಯಲ್ಲಿ ಈ ಬಂಧನ ನಡೆದಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸಾಲ ವಸೂಲಿಗೆ ಬಳಸುತ್ತಿದ್ದ ಪುಣೆ ಮೂಲದ ಕಾಲ್‌ಸೆಂಟರ್‌ವೊಂದನ್ನು ಪೊಲೀಸರು ಪತ್ತೆಹಚ್ಚಿದ್ದರು. ಒಟ್ಟಾರೆ ಆ್ಯಪ್ ಸಾಲ ಪ್ರಕರಣದಲ್ಲಿ ನಾಲ್ವರು ಚೀನೀಯರನ್ನು ಬಂಧಿಸಿದಂತಾಗಿದೆ.
ಬಜೆಟ್‌ನಲ್ಲಿ ತೆರಿಗೆದಾರರಿಗೆ ಸಿಗಲಿದೆಯೇ ಸಿಹಿಸುದ್ದಿ? ;
ಹೊಸದಿಲ್ಲಿ: ಫೆ.1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನಲ್ಲಿ ತೆರಿಗೆದಾರರಿಗೆ ಯಾವುದೇ ಸಿಹಿಸುದ್ದಿ ಸಿಗುವ ಸಾಧ್ಯತೆಯಿದೆಯೇ?
ದೇಶದ ಸದ್ಯದ ಆರ್ಥಿಕ ಪರಿಸ್ಥಿತಿ ಹಾಗೂ ಕೇಂದ್ರ ಸರಕಾರದ ಮೇಲಿರುವ ಆರ್ಥಿಕ ಹೊರೆಯನ್ನು ಗಮನಿಸಿದರೆ, ಬಜೆಟ್‌ನಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸುವ ಅಥವಾ ಹೊಸ ತೆರಿಗೆ ಕಡಿತ ಘೋಷಿಸುವ ಸಾಧ್ಯತೆ ಇಲ್ಲ ಎಂದು ಸಂಶೋಧನೆ ಮತ್ತು ಸಲಹಾ ಸಂಸ್ಥೆ ಟ್ಯಾಕ್ಸ್‌ಮನ್ ಹೇಳಿದೆ.
ಆದರೆ ಮತ್ತೂಂದು ಮೂಲದ ಪ್ರಕಾರ, ವೈಯಕ್ತಿಕ ಆದಾಯ ತೆರಿಗೆದಾರನ ತೆರಿಗೆ ವಿನಾಯಿತಿ ಮಿತಿಯನ್ನು ಸರಕಾರವು ಈಗಿರುವ 2.50 ಲಕ್ಷದಿಂದ 5 ಲಕ್ಷ ರೂ.ಗೆ ಏರಿಸುವ ಸಾಧ್ಯತೆಯಿದೆ. ಜನರ ಕೈಯ್ಯಲ್ಲಿ ಹೆಚ್ಚು ಹಣ ಓಡಾಡುತ್ತಿರುವಂತೆ ಮಾಡುವ ಉದ್ದೇಶದಿಂದ ಸರಕಾರ ಈ ಕ್ರಮ ಕೈಗೊಳ್ಳಬಹುದು ಎನ್ನಲಾಗಿದೆ.
ಕಳೆದ ವರ್ಷದ ಆಯವ್ಯಯದಲ್ಲಿ ಸರಕಾರವು ಹೊಸ ಮತ್ತು ಸರಳೀಕೃತ ವೈಯಕ್ತಿಕ ತೆರಿಗೆ ವ್ಯವಸ್ಥೆಯನ್ನು ಘೋಷಿಸಿತ್ತು. ಜತೆಗೆ, ಪ್ರಸ್ತುತ ಆದಾಯ ತೆರಿಗೆ ವ್ಯವಸ್ಥೆ ಹಾಗೂ ಪರ್ಯಾಯ ಹೊಸ ವ್ಯವಸ್ಥೆಯ ನಡುವೆ ಯಾವುದಾದರೂ ಒಂದನ್ನು ಆಯ್ಕೆ ಮಾಡುವ ಅವಕಾಶವನ್ನೂ ತೆರಿಗೆದಾರರಿಗೆ ನೀಡಿತ್ತು. ಆದರೆ ಆದಾಯ ತೆರಿಗೆಯ ಮೂಲ ಸ್ಲಾéಬ್‌ನಲ್ಲಿ ಬದಲಾವಣೆ ಮಾಡಿರಲಿಲ್ಲ.
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ
You seem to have an Ad Blocker on.
To continue reading, please turn it off or whitelist Udayavani.