ಸ್ಥಳೀಯ ಅರ್ಥಿಕತೆಗೆ ನೆರವು; ಸುಸ್ಥಿರ ಜೀವನ ನಡೆಸಲು 5 ಸರಳ ವಿಧಾನಗಳು
ಮೊಟ್ಟೆಯ ಕವಚ ಯಾವುದೇ ಇರಲಿ, ನೀವು ಅದನ್ನು ಕಸದ ಬುಟ್ಟಿಗೆ ಎಸೆಯಬೇಡಿ.
Team Udayavani, Sep 11, 2021, 12:37 PM IST
ನೀವು ಉತ್ಪಾದಿಸುತ್ತಿರುವ ತ್ಯಾಜ್ಯದ ಪ್ರಮಾಣವನ್ನು ನೋಡಿ, ಹೆಚ್ಚು ಜೈವಿಕ-ಪ್ರಜ್ಞೆಯ ಜೀವನ ನಡೆಸಲು ನೀವು ಬಯಸಿದ ಸಮಯ ನೆನಪಿನಲ್ಲಿದೆಯೇ? ಸಂಪೂರ್ಣ ಜೀವನಶೈಲಿಗೆ ಸಂಬಂಧಿಸಿದ ಕಾಳಜಿಯ ಕೂಲಂಕುಷತೆ ಮತ್ತು ಹೆಚ್ಚುವರಿ ವೆಚ್ಚ ನಿಮ್ಮನ್ನು ಇದರಿಂದ ಹಿಂದೆ ಸರಿಯುವಂತೆ ಮಾಡಿದೆ. ಆದರೆ, ಸ್ಥಿರತೆ ಚಿಕ್ಕ, ಮಿತವ್ಯಯಕಾರಿಯಾದ ಮತ್ತು ಪರಿಣಾಮದಾಯಕ ಹೆಜ್ಜೆಯೊಂದಿಗೆ ಆರಂಭವಾಗುತ್ತದೆ ಎನ್ನುವ ಬಗ್ಗೆ ನಾವು ಮರೆತಿದ್ದೇವೆ.
ಸುಸ್ಥಿರ ಜೀವನಶೈಲಿಯ ಪ್ರತಿಪಾದಕಿಯಾದ, ಮಾಳವಿಕಾ ಆರ್ ಹೀಗೆ ಹೇಳುತ್ತಾರೆ “ನಾನು ನನ್ನ ಜೈವಿಕ ಪ್ರಜ್ಞಾವಸ್ಥೆಯ ಪ್ರಯಾಣವನ್ನು ಅದರ ಬಗ್ಗೆ ಹೆಚ್ಚು ತಿಳಿಯುವ ಮೂಲಕ ಆರಂಭಿಸಿದೆ. ಇದು ಹೆಚ್ಚು ಬೆದರಿಕೆಯಿಂದ ಕೂಡಿದೆ ಮತ್ತು ಪರಿಸರಕ್ಕೆ ನೀವೇನೂ ಮಾಡುತ್ತಿಲ್ಲ ಎನ್ನುವ ಬಗ್ಗೆ ಅಪರಾಧಿಪ್ರಜ್ಞೆಯನ್ನು ಒಳಗೊಂಡಿದೆ. ಆದರೆ, ಮುಂದೆ ಹೋಗುವ ಮೊದಲು ನಾವು ಪುಟ್ಟ ಹೆಜ್ಜೆಯನ್ನಿಡಬೇಕು ಮತ್ತು ಚಿಕ್ಕ ಬದಲಾವಣೆಗಳೊಂದಿಗೆ ಹೆಚ್ಚು ಆರಾಮದಾಯಕವಾಗಿರಬೇಕು”.
ನತಾಶಾ ಆನಂದ್ ಮತ್ತೊಬ್ಬ ಸುಸ್ಥಿರತೆಯ ಉತ್ಸಾಹಿಯಾಗಿದ್ದು, ತನ್ನ ಅಭಿಪ್ರಾಯವನ್ನು ಹೀಗೆ ಹೇಳುತ್ತಾರೆ, “ಹಸಿರಿಗೆ ಬದಲಾಗುವುದು ಜೀವನಶೈಲಿಯ ಆಯ್ಕೆಯಾಗಿದೆ, ಆದರೆ ಇದು ನೀವು ನಡೆಸುವ ಜೀವನದ ಮೇಲೆ ಬೃಹತ್ ಪರಿಣಾಮ ಬೀರುತ್ತದೆ. ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ನಿಯಮಿತವಾಗಿ ಸುಸ್ಥಿರ ಜೀವನ ಅಭ್ಯಾಸ ಮಾಡುವ ಅವಕಾಶವಿದೆ. ಅದು ನೀವು ಸಂಚಾರ ಮಾಡುವ ವಾಹನ, ಆಹಾರ ಸೇವನೆಯ ಅಭ್ಯಾಸ, ನೀವು ಎಷ್ಟು ಕಸ ಉತ್ಪಾದಿಸುತ್ತೀರಿ ಇತ್ಯಾದಿಗಳನ್ನು ಅವಲಂಬಿಸಿದೆ. ನನ್ನ ಸುತ್ತಲಿನ ಪರಿಸರದ ಬಗ್ಗೆ ಕಾಳಜಿ ತೆಗೆದುಕೊಳ್ಳಲು ನಾನು ಅಳವಡಿಸಿಕೊಂಡಿರುವ ಹವ್ಯಾಸವೆಂದರೆ ಪರಿಸರ ಸ್ನೇಹಿಯಾಗಿರುವುದು ಮತ್ತು ಜೈವಿಕ-ಪ್ರಜ್ಞೆಯ ಜೀವನ ನಡೆಸಲು ಪ್ರಾಕೃತಿಕ ಕಾರ್ಯವಿಧಾನದ ಫ್ಲೋರ್ ಕ್ಲೀನರ್ ಆಗಿರುವ ನಿಮೈಲ್ ಬಳಸುವುದು”.
ಚಿಕ್ಕ ಹೆಜ್ಜೆಯಿಂದ ಆರಂಭಿಸುವುದು ನಿಮಗೆ ಮುಂದೆ ದೊಡ್ಡ ವ್ಯತ್ಯಾಸವನ್ನು ನೀಡುತ್ತದೆ. ಕೆಳಗೆ ನೀಡಿರುವ ಕೆಲವು ಅಂಶಗಳು ನಿಮ್ಮ ಪ್ರಯಾಣದಲ್ಲಿ ನಿಮಗೆ ನೆರವಾಗುತ್ತದೆ:
ಸ್ಥಳೀಯ ಆಹಾರ ಸೇವಿಸಿ: ನೀವು ಸ್ಥಳೀಯ ಆಹಾರ ಸೇವಿಸುವುದು ಎಂದರೆ, ಉತ್ಪಾದನೆಯಲ್ಲಿ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವುದು ಎಂದರ್ಥ. ಉದಾಹರಣೆಗೆ, ನೀವು ದೆಹಲಿಯಲ್ಲಿದ್ದು, ಅವಕಾಡೋ ತಿನ್ನಬೇಕೆಂದು ಬಯಸಿದರೆ, ಹಣ್ಣು ನಿಮ್ಮ ನಗರದ ಸುತ್ತ ಬೆಳೆಯುವುದಿಲ್ಲ ಎಂದು ನೆನಪಿರಬೇಕು, ಅದನ್ನು ಹಿಮಾಲಯದ ತಪ್ಪಲಿನಿಂದ ಅಥವಾ ದಕ್ಷಿಣ ಭಾರತದಿಂದ ಆಮದು ಮಾಡಲಾಗುತ್ತದೆ ಅಥವಾ ಸಾಗಿಸಲಾಗುತ್ತದೆ. ಇದು ದೆಹಲಿಗೆ ರವಾನೆಯಾಗುತ್ತದೆ, ಈ ಮೂಲಕ, ಮಾಲಿನ್ಯ ಮತ್ತು ಇಂಗಾಲದ ಪ್ರಮಾಣವನ್ನು ಹೆಚ್ಚಿಸುತ್ತದೆ. ಜೊತೆಗೆ, ನೀವು ಸ್ಥಳೀಯ ಆಹಾರ ಸೇವಿಸಿದರೆ, ನೀವು ಸ್ಥಳೀಯ ಅರ್ಥಿಕತೆಗೆ ನೆರವು ನೀಡಿದಂತಾಗುತ್ತದೆ. ಸಾಧ್ಯವಾದಲ್ಲಿ, ನಿಮ್ಮ ಮನೆಯ ಅಂಗಳದಲ್ಲೇ ತರಕಾರಿ ತೋಟ ಬೆಳೆಯಲು ಪ್ರಯತ್ನಿಸಿ.
ಸ್ಟೇನ್ ಲೆಸ್ ಸ್ಟೀಲ್ ಗ್ಲಾಸ್ ಮತ್ತು ಕಟ್ಲೆರಿಗಳನ್ನು ಕೊಂಡೊಯ್ಯಿರಿ: ಒಮ್ಮೆ ಲಾಕ್ ಡೌನ್ ಸಡಿಲಗೊಂಡ ನಂತರ ಮತ್ತು ಸಾಂಕ್ರಾಮಿಕ ಮುಗಿದ ನಂತರ, ನೀವು ಪ್ರಯಾಣಿಸುವಾಗ ಸ್ಟೇನ್ ಲೆಸ್ ಸ್ಟೀಲ್ ಗ್ಲಾಸ್ ಕೊಂಡೊಯ್ಯಿರಿ. ದೀರ್ಘ ರಸ್ತೆ ಪ್ರಯಾಣದಲ್ಲಿ ನಿಮಗೆ ಚೈತನ್ಯ ನೀಡಲು ಒಂದು ಕಪ್ ಹೊಗೆಯಾಡುವ ಬಿಸಿ ಟೀ/ಕಾಫಿ ಬೇಕೆನಿಸಿದಾಗ, ಒಂದು ಬಾರಿ ಬಳಸಿ ಕಸದ ಬುಟ್ಟಿಗೆ ಎಸೆಯುವ ಪ್ಲಾಸ್ಟಿಕ್/ಪೇಪರ್ ಕಪ್ ಗಳಲ್ಲಿ ಟೀ ಕುಡಿಯುವ ಬದಲಾಗಿ, ನೀವು ಇದನ್ನು ಬಳಸಬಹುದು. ಹೊಗೆಯಾಡುವ ಪೇಯವನ್ನು ನಿಮ್ಮ ಸ್ಟೀಲ್ ಕಪ್ ಗೆ ಹಾಕಿಸಿಕೊಳ್ಳಿ. ಪ್ಲಾಸ್ಟಿಕ್/ಪೇಪರ್ ಕಪ್ ಗಿಂತ ಸ್ಟೇನ್ ಲೆಸ್ ಸ್ಟೀಲ್ ಕಪ್ ನಲ್ಲಿ ಕುಡಿಯುವುದು ಆರೋಗ್ಯಕರ.
ಗೊಬ್ಬರಕ್ಕೆ ತ್ಯಾಜ್ಯ: ಹೆಚ್ಚಿನ ಸಾವಯವ ತ್ಯಾಜ್ಯವನ್ನು ಕೊಳೆಯಿಸುವ ಮೂಲಕ ನಿಮ್ಮ ತ್ಯಾಜ್ಯ ಪ್ರಮಾಣ ಕಡಿಮೆ ಮಾಡಿ. ಕಾಫಿ ಸಿಪ್ಪೆಗಳು, ತರಕಾರಿ ಸಿಪ್ಪೆಗಳು, ಮೊಟ್ಟೆಯ ಕವಚ ಯಾವುದೇ ಇರಲಿ, ನೀವು ಅದನ್ನು ಕಸದ ಬುಟ್ಟಿಗೆ ಎಸೆಯಬೇಡಿ. ಬದಲಾಗಿ, ಅದನ್ನು ಗೊಬ್ಬರ ಮಾಡುವ ಬಿನ್ ಗೆ ಹಾಕಿ, ಇದು ಸಾವಯವ ಪದಾರ್ಥಗಳು ಕೊಳೆತು ನಿಮ್ಮ ಸಸಿಗಳಿಗೆ ಗೊಬ್ಬರವಾಗಿಸುತ್ತದೆ. ನಿಮ್ಮ ಬಳಿ ಯಾವುದೇ ಗಿಡ ಇರದಿದ್ದಲ್ಲಿ, ಗಿಡ ಹೊಂದಿರುವವರಿಗೆ ಅಥವಾ ನರ್ಸರಿಗೆ ಗೊಬ್ಬರ ನೀಡಿ.
ಸೋರುವ ನಲ್ಲಿ ಸರಿಪಡಿಸಿ: ಪ್ರತಿಯೊಂದು ಮನೆಯಲ್ಲೂ, ಅನಗತ್ಯವಾಗಿ ಸೋರುವ ನಲ್ಲಿ ಇರಬಹುದು. ಅದನ್ನು ಸರಿಯಾಗಿ ಗಮನಿಸದಿದ್ದರೆ, ಹೆಚ್ಚಿನ ಪ್ರಮಾಣದ ಲೀಟರ್ ಗಟ್ಟಲೆ ನೀರು ವ್ಯರ್ಥವಾಗುತ್ತದೆ. ಪ್ಲಂಬಿಂಗ್ ನ ಮೂಲ ಕೆಲಸಗಳನ್ನು ಕಲಿಯಿರಿ. ಈ ಮೂಲಕ ವಾಷರ್ ಬೋಲ್ಟ್ ಸಡಿಲವಾಗಿದ್ದರೆ ಅದನ್ನು ಸರಿಪಡಿಸುವುದು ಸುಲಭವಾಗುತ್ತದೆ. ಅದು ಕಷ್ಟವೆನಿಸಿದರೆ, ಕೂಡಲೇ ಅದನ್ನು ಸರಿಪಡಿಸುವ ಪ್ಲಂಬರ್ ಗೆ ಕರೆಮಾಡಿ.
ಪರಿಸರ ಸ್ನೇಹಿ ಎಂದು ಪ್ರಮಾಣಿತವಾದ ಉತ್ಪನ್ನಗಳನ್ನು ಬಳಸಿ: ನೀವು ಮನೆಯಲ್ಲೇ ಸ್ವತಃ ಮಾಡಬಹುದಾದ ಪರಿಹಾರಗಳನ್ನು ಮಾಡುವುದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಭಾವಿಸಿದರೆ, ದಿನಸಿ ಸ್ಟೋರ್ ನಲ್ಲಿ ಖರೀದಿಸುವಾಗ ಅವು ಔದ್ಯೋಗಿಕ ಸಮಿತಿಗಳು/ಸ್ವತಂತ್ರ ಏಜೆನ್ಸಿಗಳಿಂದ ಪ್ರಾಕೃತಿಕವೆಂದು ಪ್ರಮಾಣೀಕರಿಸಲ್ಪಟ್ಟಿದೆಯೇ ಎಂದು ಪರೀಕ್ಷಿಸಿ ಪ್ರಾಕೃತಿಕ ಪರ್ಯಾಯಗಳನ್ನು ಹುಡುಕಿ. ಉದಾಹರಣೆಗೆ, ನಿಮೈಲ್ ನಂತಹ ಫ್ಲೋರ್ ಕ್ಲೀನರ್ ಗಳು ಟಿಯುವಿ ಇಂಡಿಯಾದಿಂದ ಹಸಿರು ಉತ್ಪನ್ನ ಎಂದು ಪ್ರಮಾಣಿತವಾಗಿದೆ.
ನೀವು ಪರಿಸರಕ್ಕೆ ಸುರಕ್ಷಿತವಾದ ಉತ್ಪನ್ನಕ್ಕೆ ಬದಲಾಗಲು ಆರಂಭಿಸುವ ಮೂಲಕ ಇತರರಿಗೂ ಹೀಗೆ ಮಾಡಲು ಪ್ರೋತ್ಸಾಹಿಸಿ, ಸ್ಥಾಪಿತ ಖರೀದಿದಾರರ ಅಗತ್ಯಗಳನ್ನು ಪೂರೈಸಲು ಉದ್ದಿಮೆ ಯಾವಾಗಲೂ ಹೊಸತನವನ್ನು ಅನ್ವೇಷಿಸುವ ಮೂಲಕ, ಪರಿಸರಕ್ಕೆ ಸುರಕ್ಷಿತವಾದ ಉತ್ಪನ್ನಗಳಿಗೆ ಇನ್ನೂ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.