ಏರ್ ಇಂಡಿಯಾ ಟಾಟಾ ತೆಕ್ಕೆಗೆ ?
Team Udayavani, Jun 22, 2017, 3:45 AM IST
ಹೊಸದಿಲ್ಲಿ: ಆರ್ಥಿಕ ಸಂಕಷ್ಟದಲ್ಲಿರುವ ಸರಕಾರಿ ಸ್ವಾಮ್ಯದ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ ಖರೀದಿಸಲಿದೆಯೇ? ಈ ಮೂಲಕ ಏರ್ ಇಂಡಿಯಾ ಮತ್ತೆ ಟಾಟಾ ಗ್ರೂಪ್ ತೆಕ್ಕೆಗೆ ಸೇರಲಿದೆಯೇ ಇಂಥ ಶಂಕೆ ದಟ್ಟವಾಗಿದೆ.
ಇಂಗ್ಲಿಷ್ ವಾಣಿಜ್ಯ ವಾಹಿನಿ ಇಟಿ ನೌ ವರದಿ ಪ್ರಕಾರ ಟಾಟಾ ಗ್ರೂಪ್ ಏರ್ ಇಂಡಿಯಾ ಖರೀದಿಗೆ ಸಿಂಗಾಪುರ ಏರ್ಲೈನ್ಸ್ ಜತೆಗೆ ಸಹಭಾಗಿತ್ವ ಮಾಡಿ ಕೊಳ್ಳಲಿದೆ ಎನ್ನಲಾಗಿದೆ.
ಏರ್ ಇಂಡಿಯಾ ಖರೀದಿ ಬಗ್ಗೆ ಈಗಾಗಲೇ ಟಾಟಾ ಗ್ರೂಪ್ನ ಅಧ್ಯಕ್ಷ ಎನ್. ಚಂದ್ರಶೇಖರನ್ ಕೇಂದ್ರ ಸರಕಾರದ ಜತೆ ಅನೌಪಚಾರಿಕ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಪ್ರಾಥಮಿಕವಾಗಿ ಏರ್ ಇಂಡಿಯಾದಲ್ಲಿ ಶೇ. 51 ಷೇರು ಖರೀದಿಗೆ ಆಸಕ್ತಿ ತೋರಿಸಿದ್ದಾರೆ.
ಇನ್ನು ಈಗಾಗಲೇ ಏರ್ ಇಂಡಿಯಾ ಖಾಸಗೀಕರಣದತ್ತ ಕೇಂದ್ರ ಸರಕಾರ ತೀವ್ರ ಒಲವು ಹೊಂದಿದೆ. ಅಲ್ಲದೇ ಈ ಸಂಬಂಧ ಖಾಸಗೀಕರಣ ಹೇಗೆ ಮಾಡ ಬಹುದು ಎಂಬ ಬಗ್ಗೆ ಸರಕಾರ ಎಲ್ಲ ರೀತಿಯಿಂದ ಆಲೋಚನೆ ನಡೆಸುತ್ತಿದೆ ಎಂದು ಇತ್ತೀಚೆಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟಿÉ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.