ಶೀಘ್ರದಲ್ಲಿಯೇ ಖಾಸಗಿ ಹಿಡಿತಕ್ಕೆ ಏರ್‌ ಇಂಡಿಯಾ; ಖರೀದಿಗೆ ಟಾಟಾ ಸಮೂಹ ಸಂಸ್ಥೆ ಒಲವು

Team Udayavani, Jan 2, 2021, 6:01 AM IST

ಶೀಘ್ರದಲ್ಲಿಯೇ ಖಾಸಗಿ ಹಿಡಿತಕ್ಕೆ ಏರ್‌ ಇಂಡಿಯಾ; ಖರೀದಿಗೆ ಟಾಟಾ ಸಮೂಹ ಸಂಸ್ಥೆ ಒಲವು

ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾ ಮಾರಾಟ ಪ್ರಕ್ರಿಯೆ ನಡೆಯುತ್ತಿದೆ. ಮಾರಾಟ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು ಟಾಟಾ ಸಮೂಹ ಏರ್‌ ಇಂಡಿಯಾದ ಖರೀದಿಗೆ ಹೆಚ್ಚಿನ ಆಸಕ್ತಿಯನ್ನು ತೋರಿದೆ. ಕೇಂದ್ರ ಸರಕಾರ ನೀಡಿರುವ ಮಾಹಿತಿಯ ಪ್ರಕಾರ ಟಾಟಾ ಸಮೂಹವು ಏರ್‌ ಇಂಡಿಯಾ ಖರೀದಿಗೆ ಆಸಕ್ತಿಯನ್ನು ತೋರಿರುವುದು ಖಚಿತವಾಗಿದೆ. ಇದಲ್ಲದೆ ದಿಲ್ಲಿ ಮೂಲದ ಸ್ಪೈಸ್‌ಜೆಟ್‌ ಸಹಿತ ಹಲವು ಕಂಪೆನಿಗಳು ಖರೀದಿ ಬಗ್ಗೆ ಆಸಕ್ತಿಯನ್ನು ಹೊಂದಿವೆ.

ಖಾಸಗಿಗೆ ಮಾರಾಟ ಯಾಕೆ?
ಏರ್‌ ಇಂಡಿಯಾ ಕಂಪೆನಿಯು ನಷ್ಟ ಅನುಭವಿಸುತ್ತಿರುವುದೇ ಮಾರಾಟಕ್ಕೆ ಪ್ರಮುಖ ಕಾರಣ. ಕಂಪೆನಿಯು ಒಟ್ಟಾರೆ 62 ಸಾವಿರ ಕೋ.ರೂ.ಗಳ ನಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಸರಕಾರ ಇದನ್ನು ಮಾರಾಟ ಮಾಡಲು ತೀರ್ಮಾನಿಸಿದೆ. 2018ರಲ್ಲಿಯೇ ಕೇಂದ್ರ ಸರಕಾರ ಏರ್‌ ಇಂಡಿಯಾದ ಮಾರಾಟಕ್ಕೆ ಪ್ರಯತ್ನಿಸಿತ್ತಾದರೂ ಖರೀದಿಸಲು ಯಾರೂ ಮುಂದೆ ಬಂದಿರಲಿಲ್ಲ.

ಈ ಹರಾಜಿನಲ್ಲಿನ ಬದಲಾವಣೆಗಳೇನು?
ಈ ಬಾರಿ ಸರಕಾರ ಕಂಪೆನಿಯ ಶೇ. 100ರಷ್ಟು ಪಾಲನ್ನು ಹರಾಜು ಹಾಕುತ್ತಿದೆ. ಅಂದರೆ ಕಂಪೆನಿಯ ಯಾವುದೇ ಷೇರುಗಳು ಸರಕಾರದ ಬಳಿ ಉಳಿಯುವುದಿಲ್ಲ. ಕಂಪೆನಿಯ 60 ಸಾವಿರ ಕೋ. ರೂ. ಗಳಿಗೂ ಹೆಚ್ಚಿನ ಸಾಲದಲ್ಲಿ, ಖರೀದಿದಾರರು ಕೇವಲ 23,286 ಕೋ. ರೂ. ಗಳನ್ನು ಮಾತ್ರ ಮರುಪಾವತಿಸಬೇಕಾಗುತ್ತದೆ. ಉಳಿದ ಸಾಲವನ್ನು ಸರಕಾರ ಮರುಪಾವತಿ ಮಾಡುತ್ತದೆ. ಹರಾಜಿನಲ್ಲಿ ಭಾಗವಹಿಸುವ ಕಂಪೆನಿಯ ನಿವ್ವಳ ಮೌಲ್ಯ 3 ಸಾವಿರ ಕೋ. ರೂ. ಆಗಿರಬೇಕು. 2018ರಲ್ಲಿ ಅದು 5 ಸಾವಿರ ಕೋ. ರೂ. ಇತ್ತು.

ಸ್ಪೈಸ್‌ ಜೆಟ್‌ ಬಿಕ್ಕಟ್ಟಿನ ಮಧ್ಯೆ ಖರೀದಿಗೆ ಮುಂದು?
ಖರೀದಿಗೆ ಆಸಕ್ತಿ ತೋರಿರುವ ಸ್ಪೈಸ್‌ಜೆಟ್‌ ಸೆಪ್ಟಂಬರ್‌ಗೆ ಅಂತ್ಯಗೊಂಡ ತ್ತೈಮಾಸಿಕದಲ್ಲಿ ಸ್ಪೈಸ್‌ಜೆಟ್‌ 113 ಕೋ. ರೂ. ನಷ್ಟದಲ್ಲಿತ್ತು. ಅಂತಹ ಪರಿಸ್ಥಿತಿಯಲ್ಲಿ ಏರ್‌ ಇಂಡಿಯಾ ಖರೀದಿಸಲು ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಹರಾಜಿನಲ್ಲಿ ಟಾಟಾ ಪಾತ್ರ?
ಹರಾಜಿನಲ್ಲಿ ಗೆದ್ದರೆ 67 ವರ್ಷಗಳ ಬಳಿಕ ಏರ್‌ ಇಂಡಿಯಾದ ಕಾರ್ಯಾಚರಣೆ ಮತ್ತೆ ಟಾಟಾ ಸಂಸ್ಥೆಗೆ ಹಿಂದಿರುಗಿದಂತಾಗುತ್ತದೆ. 1932ರಲ್ಲಿ ಟಾಟಾ ಸಮೂಹವೇ ಏರ್‌ ಇಂಡಿಯಾವನ್ನು ಪ್ರಾರಂಭಿಸಿತ್ತು (ಆಗ ಟಾಟಾ ಏರ್‌ಲೈನ್ಸ್‌). 1953ರಲ್ಲಿ ಸರಕಾರವು ಅದರ ನಿಯಂತ್ರಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಇದೀಗ ಟಾಟಾ ಸಮೂಹ ಮತ್ತೆ ಏರ್‌ ಇಂಡಿಯಾ ಖರೀದಿಗೆ ಆಸಕ್ತಿ ತೋರಿದೆ. ಟಾಟಾ ಏಕಾಂಗಿಯಾಗಿ ಅಥವಾ ಯಾವುದೇ ವಿಮಾನಯಾನ ಸಂಸ್ಥೆಗಳ ಜತೆ ಸೇರಿ ಬಿಡ್‌ ಮಾಡಿದೆಯೇ ಎಂಬ ಕುರಿತು ಇನ್ನೂ ಸ್ಪಷ್ಟವಾಗಿಲ್ಲ. ಟಾಟಾ ಸಮೂಹ ವಿಸ್ತಾರ ಮತ್ತು ಏರ್‌ ಏಷ್ಯಾ ಇಂಡಿಯಾ ಎಂಬ ಎರಡು ವಿಮಾನಯಾನ ಸಂಸ್ಥೆಗಳನ್ನು ಹೊಂದಿದೆ. ಸದ್ಯ ಏರ್‌ಏಷ್ಯಾ ಇಂಡಿಯಾ ಸಂಸ್ಥೆಯ ಮೂಲಕ ಸರಕಾರಿ ವಿಮಾನ ಸಂಸ್ಥೆ ಖರೀದಿಸುವ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದೆ.

ಖರೀದಿಯ ಅನಂತರದ ಷರತ್ತುಗಳೇನು?
125 ವಿಮಾನಗಳ ಏರ್‌ ಇಂಡಿಯಾ ಖರೀದಿಸುವ ಸಂಸ್ಥೆಗಳು ಅದೇ ಹೆಸರಿನೊಂದಿಗೆ ಸೇವೆಯನ್ನು ಮುಂದು ವರಿಸ ಬೇಕಾಗುತ್ತದೆ. ಹೆಸರನ್ನು ಎಷ್ಟು ಸಮಯದ ವರೆಗೆ ಬದಲಾಯಿಸಬಾರದು ಎಂದು ಹರಾಜಿನ ಮೊದಲ ವಿನಂತಿಯ ಪ್ರಸ್ತಾವದಲ್ಲಿ ಉÇÉೇಖೀಸಲಾಗುತ್ತದೆ. ಏರ್‌ ಇಂಡಿಯಾದ ದಿಲ್ಲಿಯಲ್ಲಿನ ಕಾರ್ಪೊರೇಟ್‌ ಕಚೇರಿ ಮತ್ತು ಮುಂಬಯಿಯಲ್ಲಿರುವ ಪ್ರಧಾನ ಕಚೇರಿ ಕಟ್ಟಡಗಳು ಹರಾಜಿನಲ್ಲಿ ಸೇರಿರುವುದಿಲ್ಲ.

ಬಿಡ್ಡಿಂಗ್‌ ಕಂಪೆನಿಗಳ ಅಂತಿಮ ಪಟ್ಟಿ ಯಾವಾಗ?
ಇಒಐ ಸಲ್ಲಿಸಿದ ಕಂಪೆನಿಗಳು ಈಗಾಗಲೇ ತಮ್ಮ ಭೌತಿಕ ಬಿಡ್‌ಗಳನ್ನು ಸಲ್ಲಿಸಿವೆ. ಸರಕಾರವು ಅವರಲ್ಲಿ ಅರ್ಹ ಕಂಪೆನಿಗಳ ಪಟ್ಟಿಯನ್ನು ಜ. 5ರೊಳಗೆ ಬಿಡುಗಡೆ ಮಾಡ ಲಿದೆ. ಅಮೆರಿಕದ ಇಂಟರ್‌ಅಪ್‌ ಇಂಕ್‌ ಸಂಸ್ಥೆ ಖರೀದಿಗೆ ಆರಂಭದಲ್ಲಿ ಆಸಕ್ತಿ ವಹಿಸಿದ್ದರೂ ಬಳಿಕ ಹಿಂದೆ ಸರಿದಿದೆ. ಡಿ. 29ರಂದು ಖರೀದಿ ಉತ್ಸಾಹ ತೋರಿಸಲು ಕಡೆಯ ದಿನವಾಗಿತ್ತು. ಈ ಸಂದರ್ಭ ಯುಎಸ್‌ ಮೂಲದ ಫ‌ಂಡ್‌ ಇಂಟರ್‌ಅಪ್‌ ಇಂಕ್‌ ಹಿಂದೆ ಸರಿದಿದೆ. ಆದರೆ ಖರೀದಿಗೆ ಉತ್ಸಾಹ ತೋರಿಸಿರುವ ಏರ್‌ಇಂಡಿಯಾ ಉದ್ಯೋಗಿಗಳ ಬಿಡ್‌ ಅನ್ನು ಬೆಂಬಲಿಸಲು ಅದು ಪ್ರಸ್ತಾವಿಸಿದೆ. ಏರ್‌ ಇಂಡಿಯಾ ನೌಕರರು ತಮ್ಮ ಭೌತಿಕ ಬಿಡ್‌ ಅನ್ನು ಈಗಾಗಲೇ ಸಲ್ಲಿಸಿದ್ದಾರೆ.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

2-

ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ

Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ

Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ

ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್‌, ಕಿಟ್‌ಕ್ಯಾಟ್‌ ಚಾಕ್ಲೆಟ್‌ ಬೆಲೆ ಏರಿಕೆ?

Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್‌, ಕಿಟ್‌ಕ್ಯಾಟ್‌ ಚಾಕ್ಲೆಟ್‌ ಬೆಲೆ ಏರಿಕೆ?

1-digi

‘DigiLocker’; ಕ್ಲೇಮ್‌ ಮಾಡದ ಹೂಡಿಕೆಗೆ ಪರಿಹಾರ?

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.