ಸಿಂಗಪುರ-ಬೆಂಗಳೂರು ನಾನ್‌ಸ್ಟಾಪ್ ಏರ್‌ಇಂಡಿಯಾ ಎಕ್ಸ್‌ಪ್ರೆಸ್
Team Udayavani, Oct 30, 2018, 12:37 PM IST
ಏರ್ ಇಂಡಿಯಾದ ಅಗ್ಗದ ದರದ ಸಹಸಂಸ್ಥೆಯಾಗಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಗಾರ್ಡನ್ ಸಿಟಿ ಬೆಂಗಳೂರಿನಿಂದ ಸಿಗಂಪುರಕ್ಕೆ ನಿರಂತರವಾಗಿ ವಿಮಾನ ಯಾನ ಸೇವೆಯನ್ನು ಆರಂಭಿಸಿದೆ.
ಸೋಮವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೇವೆ ಆರಂಭವಾಗಿದೆ. ಇದರಿಂದಾಗಿ ಕೆಂಪೇಗೌಡ ವಿಮಾನ ನಿಲ್ದಾಣ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೆಟ್‌ವರ್ಕ್ ಇರುವ 18 ನೇ ಸ್ಥಳ ಎನಿಸಿಕೊಂಡಿದೆ.
ಏರ್ ಇಂಡಿಯಾದ ಸಿಎಂಡಿ ಪ್ರದೀಪ್ ಕುಮಾರ್ ಖರೋಲಾ ಅವರು ಪ್ರಥಮ ಯಾನಿಗೆ ಬೋರ್ಡಿಂಗ್ ಕಾರ್ಡ್ ನೀಡುವ ಮೂಲಕ ಸೇವೆಗೆ ಚಾಲನೆ ನೀಡಿದರು. ಈ ವೇಳೆ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಧ್ಯಾಹ್ನ 12.45 ಕ್ಕೆ ಸರಿಯಾಗಿ ಉದ್ಘಾಟನೆಯ ಬಳಿಕ ಹಾರಾಟ ನಡೆಸಿದ ಕ್ಯಾಪ್ಟನ್ ಪ್ರಶಾಂತ್ ಕುಮಾರ್ ವರ್ಮಾ ಮತ್ತು ಪ್ರಥಮ ಅಧಿಕಾರಿ ಥಾಮಸ್ ಕುನ್ನಾಪಲ್ಲಿ ಅವರಿದ್ದ ಮೊದಲ ವಿಮಾನ IX 486 ಸ್ಥಳೀಯ ಕಾಲಮಾನ ರಾತ್ರಿ 7.55 ಕ್ಕೆ ಸಿಂಗಪುರ ತಲುಪಿತು. ಸಿಂಗಪುರದಿಂದ ಬೆಂಗಳೂರಿಗ ರಾತ್ರಿ 9.10 ರ ವೇಳೆಗೆ ಹಾರಾಟ ಆರಂಭಿಸಿದ IX 485 ವಿಮಾನ ಬೆಂಗಳೂರಿನಲ್ಲಿ 11.15 ಕ್ಕೆ ಇಳಿಯಿತು.
ಈ ವಿಮಾನಗಳ ಸೇವೆ ವಾರದಲ್ಲಿ ನಾಲ್ಕು ದಿನಗಳ ಕಾಲ ಲಭ್ಯವಿದ್ದು, ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಸೇವೆ ಇರಲಿದೆ.
ಏರ್ ಇಂಡಿಯಾದ ಅಂಗಸಂಸ್ಥೆಯಾಗಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ದೇಶದ ಮೊದಲ ಅಗ್ಗದ ದರದ ಅಂತರಾಷ್ಟ್ರೀಯ ವಿಮಾನ ಸಂಸ್ಥೆ ಎನಿಸಿಕೊಂಡಿದೆ. ದೇಶದ 18 ನಗರಗಳಿಂದ, ಮಧ್ಯಪ್ರಾಚ್ಯ ರಾಷ್ಟ್ರಗಳು, ಆಗ್ನೇಯ ಏಶ್ಯಾ ರಾಷ್ಟ್ರಗಳಿಂದ ವಾರಕ್ಕೆ 600 ಬಾರಿ ಹಾರಾಟ ನಡೆಸುತ್ತಿದೆ. 24 ಬೋಯಿಂಗ್ 737-800 ಎನ್‌ಜಿ ಅತ್ಯಾಧುನಿಕ ವಿಮಾನಗಳ ಮೂಲಕ ಸೇವೆ ಒದಗಿಸುತ್ತಿದೆ.
ಪ್ರಯಾಣದ ವೇಳೆ ಸ್ವಾದಿಷ್ಟಕರವಾದ ಚಹಾ, ಪಾನೀಯಗಳು ಮತ್ತುಊಟವನ್ನು ವಿಮಾನದಲ್ಲಿ ನೀಡಲಾಗುತ್ತಿದೆ. ಆನ್‌ಲೈನ್ ಮೂಲಕ ಹೆಚ್ಚುವರಿ ವಿಶೇಷ ಊಟವನ್ನೂ ಆರ್ಡರ್ ಮಾಡಲು ಅವಕಾಶವಿದೆ.
ಆನ್‌ಲೈನ್ ಮೂಲಕ ನೆಚ್ಚಿನ ಸೀಟ್‌ಗಳ ಬುಕ್ಕಿಂಗ್ ಮತ್ತು ಹೆಚ್ಚುವರಿ ಸರಕು ಸಾಗಾಟಕ್ಕು ವ್ಯವಸ್ಥೆ ಕಲ್ಪಿಸಲಾಗಿದೆ.
ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ತಾಣಗಳ ಮೂಲಕ facebook.com/AirIndiaExpressOfficial ಪ್ರಯಾಣಿಕರೊಂದಿಗೆ ಅಧಿಕಾರಿಗಳು ಸಂಪರ್ಕ ಸಾಧಿಸಿ ಅಭಿಪ್ರಾಯಗಳನ್ನು ಪಡೆದು ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವವ್ಯವಸ್ಥೆಯೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.