ತನ್ನ 1,229 ಟವರ್ ಗಳನ್ನು ಮಾರಾಟ ಮಾಡುತ್ತಿದೆ ಏರ್ ಟೆಲ್..! ಎಲ್ಲಿ..?
Team Udayavani, Mar 24, 2021, 3:10 PM IST
ನವದೆಹಲಿ: ಮಡಗಾಸ್ಕರ್ ಮತ್ತು ಮಲಾವಿಯಲ್ಲಿ 1,229 ಟವರ್ ಗಳನ್ನು 108 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡಲು ಭಾರತಿ ಏರ್ ಟೆಲ್ ಲಿಮಿಟೆಡ್ ನ ಆಫ್ರಿಕಾ ಘಟಕವು ಹೆಲಿಯೊಸ್ ಟವರ್ಸ್ ಪಿ ಎಲ್ ಸಿ ಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಕಂಪನಿ ಸ್ಟಾಕ್ ಎಕ್ಸ್ ಚೇಂಜಿಂಗ್ ಫೈಲಿಂಗ್ ನಲ್ಲಿ ತಿಳಿಸಿದೆ.
“ಪ್ರತಿ ನ್ಯಾಯವ್ಯಾಪ್ತಿಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಒಪ್ಪಂದಗಳನ್ನು ಒಳಗೊಂಡಿರುವ ವಹಿವಾಟುಗಳು ಅಗತ್ಯವಾದ ನಿಯಂತ್ರಕ ಅನುಮೋದನೆಗಳು ಸೇರಿದಂತೆ ಕಸ್ಟಮರಿ ಕ್ಲೋಸಿಂಗ್ ಷರತ್ತುಗಳಿಗೆ ಒಳಪಟ್ಟಿರುತ್ತವೆ ಎಂದು ಕಂಪನಿ ತಿಳಿಸಿದೆ.
ಓದಿ : ಇಂದು ಭಾರತದಲ್ಲಿ ರಿಯಲ್ಮೆ 8, ರಿಯಲ್ಮೆ 8 ಪ್ರೊ ಬಿಡುಗಡೆ : ವಿಶೇಷತೆಗಳೇನು..?
ಟವರ್ಸ್ ಮಾರಾಟ ಒಪ್ಪಂದದಡಿಯಲ್ಲಿ, ಏರ್ ಟೆಲ್ ಆಫ್ರಿಕಾದ ಅಂಗಸಂಸ್ಥೆಗಳು ತಮ್ಮ ಉಪಕರಣಗಳನ್ನು ಟವರ್ಸ್ ಮೇಲೆ ಪ್ರತ್ಯೇಕ ಗುತ್ತಿಗೆ ಒಪ್ಪಂದಗಳಲ್ಲಿ, ಹೆಚ್ಚಾಗಿ ಸ್ಥಳೀಯ ಕರೆನ್ಸಿಗಳಲ್ಲಿ, ಹೆಲಿಯೊಸ್ ಟವರ್ಸ್ ನೊಂದಿಗೆ ಅಭಿವೃದ್ಧಿಪಡಿಸುವುದು, ನಿರ್ವಹಿಸುವುದನ್ನು ಮುಂದುವರಿಸಲಿದೆ.
ಉದ್ದೇಶಿತ ವಹಿವಾಟುಗಳಲ್ಲಿ ಗುತ್ತಿಗೆ ಒಪ್ಪಂದಗಳು ಮತ್ತು ಚಾಡ್ ಮತ್ತು ಗ್ಯಾಬೊನ್‌ನಲ್ಲಿನ ಟವರ್ಸ್ ಸೈಟ್ ಗಳ ವಿಸ್ತರಣೆ ಇರುತ್ತದೆ. ಮುಂದಿನ ಹಣಕಾಸು ವರ್ಷದ ಅಂತ್ಯದ ಮೊದಲು ಮುಚ್ಚುವ ನಿರೀಕ್ಷೆಯಿದೆ. ಒಪ್ಪಂದಕ್ಕೆ ಸಹಿ ಹಾಕಿದ ನಂತರ ಉದ್ದೇಶಿತ ವಹಿವಾಟಿನ ವಿವರಗಳನ್ನು ಹಂಚಿಕೊಳ್ಳಲಾಗುತ್ತದೆ. ಚಾಡ್ ಮತ್ತು ಗ್ಯಾಬೊನ್ ನಲ್ಲಿ 1,000 ಟವರ್ ಗಳನ್ನು ಮಾರಾಟ ಮಾಡಲು ಕಂಪನಿ ಪ್ರಸ್ತಾಪಿಸಿದೆ.
ಓದಿ : ‘ಮಹಾರಾಷ್ಟ್ರ ವಿಕಾಸ್ ಅಘಾಡಿ’ಗೆ ಅಧಿಕಾರ ನಡೆಸಲು ಯಾವ ನೈತಿಕತೆಯೂ ಇಲ್ಲ : ಫಡ್ನವಿಸ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.