ಜೂ.12ರಂದು BS6 ಎಂಜಿನ್ ಆಧಾರಿತ ನೂತನ ಹೋಂಡಾ ಆಕ್ಟೀವಾ ಮಾರುಕಟ್ಟೆಗೆ
Team Udayavani, Jun 1, 2019, 12:03 PM IST
ನವದೆಹಲಿ:ಹೋಂಡಾ ಮೋಟಾರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ(ಎಚ್ ಎಂಎಸ್ ಐ) ಬಿಎಸ್ 6 ಮಾಲಿನ್ಯ ನಿಯಂತ್ರಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನ ಹೋಂಡಾ ಆಕ್ಟೀವಾ ಮಾರುಕಟ್ಟೆಗೆ ಬಿಡುಗಡೆ ಮಾಡುವ ದಿನಾಂಕವನ್ನು ಬಹಿರಂಗಪಡಿಸಿದೆ.
ದೇಶದಲ್ಲಿ ಭಾರತ್ ಸ್ಟೇಜ್ 6 ವಾಹನಗಳ ಮಾರಾಟವನ್ನು 2020ರ ಏಪ್ರಿಲ್ 1ರಿಂದ ಕಡ್ಡಾಯಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಹೌದು ಇದೀಗ ಹೋಂಡಾ ಮೋಟಾರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಜೂನ್ 12ರಂದು ಭಾರತ್ ಸ್ಟೇಜ್ (ಬಿಎಸ್ 6) ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ ದ್ವಿಚಕ್ರ ಸ್ಕೂಟರ್ ಅನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.
ನೂತನ 6ನೇ ಜನರೇಶನ್ ನ ಹೋಂಡಾ ಆಕ್ಟೀವಾ ದೇಶದ ಮೊದಲ ಬಿಎಸ್ 6 ಎಂಜಿನ್ ಆಧಾರಿತ ದ್ವಿಚಕ್ರ ಸ್ಕೂಟರ್ ಆಗಿದೆ ಎಂದು ತಿಳಿಸಿದೆ. ಹೋಂಡಾ ಆಕ್ಟೀವಾ 6ಜಿ ಸ್ಕೂಟರ್ 110ಸಿಸಿ ಎಂಜಿನ್ ಹೊಂದಿದೆ. ಬಿಎಸ್ 6 ಹೋಂಡಾ ಆಕ್ಟೀವಾ ಸಂಪೂರ್ಣವಾಗಿ ಹೊಸ ಡಿಸೈನ್ ನಲ್ಲಿ ರಸ್ತೆಗಿಳಿಯಲಿದೆ. ಕೋಂಬಿ ಬ್ರೇಕ್ ಸಿಸ್ಟಮ್ ಅನ್ನು ಹೊಂದಿದೆ. ಅಷ್ಟೇ ಅಲ್ಲ ಹೋಂಡಾ ಆಕ್ಟೀವಾ ದಲ್ಲಿ ಡ್ರಮ್ ಮತ್ತು ಡಿಸ್ಕ್ ಬ್ರೇಕ್ ಗಳ ಆಯ್ಕೆಗಳಿವೆ.
ಎಲ್ ಇಡಿ ಲೈಟಿಂಗ್, ಡಿಜಿಟಲ್ ಡಿಸ್ ಪ್ಲೇನಲ್ಲಿ ಇಂಧನದ ಲೆವೆಲ್, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಹಾಗೂ ಟರ್ನ್ ಬೈ ಟರ್ನ್ ನ್ಯಾವಿಗೇಶನ್ ಫೀಚರ್ಸ್ ಹೊಂದಿರುವುದಾಗಿ ಹೋಂಡಾ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.