ಹೊಸವರ್ಷಕ್ಕೆ ಅಮೆಜಾನ್ ನಿಂದ ‘ಮೆಗಾ ಸ್ಯಾಲರಿ ಡೇಸ್’ ಆಫರ್ ಮೇಳ
Team Udayavani, Dec 30, 2020, 12:34 PM IST
ನವದೆಹಲಿ: ವಿಶ್ವದ ಸುಪ್ರಸಿದ್ಧ ಆನ್ ಲೈನ್ ಮಾರಾಟ ಮಳಿಗೆಯಾಗಿರುವ ಅಮೇಜಾನ್, ತನ್ನ ಗ್ರಾಹಕರಿಗೆ ಹೊಸವರ್ಷದ ಬಿಗ್ ಗಿಫ್ಟ್ ನೀಡಿದೆ. 2021ರ ಜನವರಿ 1 ರಿಂದ ಅಮೆಜಾನ್ ‘ಮೆಗಾ ಸ್ಯಾಲರಿ ಡೇಸ್’ ಆರಂಭಿಸಲಿದ್ದು, ಆ ಮೂಲಕ ಹಲವು ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭಾರಿ ರಿಯಾಯಿತಿ ನೀಡಲಿದೆ.
ಜನವರಿ 1ರಿಂದ ಆರಂಭಗೊಂಡು ಮೂರು ದಿನಗಳ ಕಾಲ ನಡೆಯಲಿರುವ ಈ ಮೆಗಾ ಸ್ಯಾಲರಿ ಡೇಸ್ ನಲ್ಲಿ ಹಲವಾರು ವಸ್ತುಗಳಿಗೆ ರಿಯಾಯಿತಿ ನೀಡಲಾಗಿದ್ದು, ಅದರಲ್ಲೂ ಟೀವಿ ,ಹೆಡ್ ಪೋನ್ ,ರೆಪ್ರಿಜರೇಟರ್, ವಾಷಿಂಗ್ ಮಷಿನ್ ಒಳಗೊಂಡಂತೆ ಹಲವು ಎಲೆಕ್ಟ್ರಾನಿಕ್ ವಸ್ತುಗಳಿಗೆ 30ರಿಂದ 40 ಶೇ. ರಿಯಾಯಿತಿ ಸಿಗಲಿದೆ.
ಹಳೆ ಎಲೆಕ್ಟ್ರಾನಿಕ್ ವಸ್ತುಗಳ ಎಕ್ಸ್ ಚೇಂಜ್ ಒಳಗೊಂಡಂತೆ ಇ.ಎಂ.ಐ ಸೌಲಭ್ಯವನ್ನೂ ನೀಡಲಾಗಿದ್ದು, ಬ್ಯಾಂಕ್ ಆಫ್ ಬರೋಡಾದ ಗ್ರಾಹಕರು ತಮ್ಮ ಕಾರ್ಡ್ ಬಳಸಿ ಉತ್ಪನ್ನಗಳನ್ನು ಖರೀದಿಸಿದರೆ, ಪ್ರತಿ ಉತ್ಪನ್ನದ ಮೇಲೆ ಶೇ.10 ರಷ್ಟು ಡಿಸ್ ಕೌಂಟ್ ದೊರೆಯಲಿದೆ.
ಇದನ್ನೂ ಓದಿ:ಇಂಗ್ಲೆಂಡ್ ಪ್ರಯಾಣಿಕರಿಗೆ ರಾಜ್ಯ ಪ್ರವೇಶ ಇನ್ನೂ ಮುಕ್ತ
ವಾಷಿಂಗ್ ಮೆಷಿನ್ ಮೇಲೆ ಶೇ. 35 ರಷ್ಟು ರಿಯಾಯಿತಿಯನ್ನು ನೀಡಲಾಗಿದ್ದು, ಎಲ್ ಜಿ, ವೋಲ್ಟಾಸ್, ಡೈಕಿನ್ ಎ.ಸಿಗಳ ಮೇಲೆ ಶೇ.35 ರಷ್ಟು ರಿಯಾಯಿತಿಯನ್ನು ನೀಡಲಿದೆ. ಬೋಟ್, ಜೆ ಬಿ ಎಲ್ ಒಳಗೊಂಡಂತೆ ಹಲವು ಹೆಡ್ ಸೆಟ್ ಗಳ ಮೇಲೆ ಶೇ. 50 ರಷ್ಟು ರಿಯಾಯಿತಿ ಲಭ್ಯವಿದೆ.
ಇದರೊಂದಿಗೆ ಸ್ಮಾರ್ಟ್ ವಾಚ್ ಹಾಗೂ ಫಿಟ್ ನೆಸ್ ಟ್ರಾಕರ್ ಮೇಲೆ ಕೂಡಾ ಶೇ.40 ರಷ್ಟು ರಿಯಾಯಿತಿ ನೀಡಲಾಗಿದ್ದು, ಮೈಕ್ರೋವೇವ್ಸ್ ಸೇರಿದಂತೆ ಟೆಲಿವಿಷನ್ ಗಳ ಮೇಲೆ ಕೂಡಾ ಆಫರ್ ಶೇ.30 ಕ್ಕೂ ಅಧಿಕ ಆಫರ್ ಸಿಗಲಿದೆ.
ಇನ್ನು ಕ್ಯಾಮರಾಗಳ ಖರೀದಿಸುವವರಿಗೂ ಕೂಡಾ ಆಕರ್ಷಕ ರಿಯಾಯಿತಿಗಳನ್ನು ನೀಡಲಿದ್ದು ಹೊಸ ವರ್ಷಕ್ಕೆ ವಸ್ತುಗಳನ್ನು ಖರೀದಿ ಮಾಡಬೇಕು ಎಂದುಕೊಂಡವರಿಗೆ ಇದೊಂದು ಅದ್ಭುತ ಅವಕಾಶವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Stock Market: ಟ್ರಂಪ್ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!
US elections ಎಫೆಕ್ಟ್: ಷೇರುಪೇಟೆ ಸೂಚ್ಯಂಕ 1,300 ಅಂಕ ಕುಸಿತ, 8 ಲಕ್ಷ ಕೋಟಿ ರೂ. ನಷ್ಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.