ಎಂಜಿಎಂ ಸ್ಟೂಡಿಯೊವನ್ನು 8.5 ಬಿಲಿಯನ್ ಗೆ ಸ್ವಾಧೀನಪಡಿಸಿಕೊಂಡ ಅಮೇಜಾನ್..!
Team Udayavani, May 26, 2021, 9:08 PM IST
ಜೇಮ್ಸ್ ಬಾಂಡ್ ಫ್ರ್ಯಾಂಚೈಸ್ ಮತ್ತು ಇತರ ಚಲನಚಿತ್ರ ಮತ್ತು ಟಿವಿ ಸರಣಿಗಳ ಸಹ ಮಾಲೀಕರಾದ ಎಂಜಿಎಂ ಸ್ಟುಡಿಯೋಸ್ ನನ್ನು 8.5 ಬಿಲಿಯನ್ ಗೆ ಸ್ವಾಧೀನಪಡಿಸಿಕೊಳ್ಳಲು ಅಮೆಜಾನ್ ಒಪ್ಪಂದವನ್ನು ಮಾಡಿಕೊಂಡಿದೆ.
ಈ ಸ್ವಾಧೀನವನ್ನು ಅಮೇಜಾನ್ ಇಂದು(ಬುಧವಾರ, ಮೇ. 26) ಘೋಷಿಸಿದ್ದು, 2017 ರಲ್ಲಿ ಹೋಲ್ ಫುಡ್ಸ್ ನ್ನು 13.7 ಬಿಲಿಯನ್ ಗೆ ಸ್ವಾಧಿನಪಡಿಸಿಕೊಂಡ ನಂತರ ಅತ್ಯಂತ ದೊಡ್ಡ ಮೊತ್ತಕ್ಕೆ ಅಮೇಜಾನ್ ಸ್ವಾಧಿನಪಡಿಸಿಕೊಂಡಿರುವುದು ಇದಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿಂದು 40741 ಜನ ಗುಣಮುಖ : 26811 ಕೋವಿಡ್ ಹೊಸ ಪ್ರಕರಣ ಪತ್ತೆ
ನೆಟ್ ಫ್ಲಿಕ್ಸ್, ಡಿಸ್ನಿ ಮತ್ತು ಇತರ ಸ್ಟ್ರೀಮಿಂಗ್ ವಿಡಿಯೋ ಸೇವೆಗಳೊಂದಿಗೆ ಸ್ಪರ್ಧಿಸುತ್ತಿರುವುದರಿಂದ ಅಮೆಜಾನ್ ತನ್ನ ಪ್ರೈಮ್ ವಿಡಿಯೋ ಸೇವೆಯನ್ನು ವೃದ್ಧಿಸಿಕೊಳ್ಳುವ ದೃಷ್ಟಿಯಿಂದ ಯಾವುದೇ ಸ್ಟ್ರೀಮಿಂಗ್ ಸೇವೆಗೆ ಎಂಜಿಎಂ ಸಹಕಾರಿಯಾಗಲಿದೆ ಎ0ಬ ಕಾರಣದಿಂದ ಎಂಜಿಎಂ ಸ್ಟೂಡಿಯೋವನ್ನು ಸ್ವಾಧಿನಪಡಿಸಿಕೊಂಡಿದೆ.
ಖಾಸಗಿ ಕಂಪನಿಯಾಗಿರುವ ಎಂಜಿಎಂ, ಆಂಕಾರೇಜ್ ಕ್ಯಾಪಿಟಲ್, ಹೈಲ್ಯಾಂಡ್ ಕ್ಯಾಪಿಟಲ್ ಪಾರ್ಟ್ನರ್ಸ್, ಡೇವಿಡ್ಸನ್, ಕೆಂಪ್ನರ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್, ಸೋಲಸ್ ಆಲ್ಟರ್ನೇಟಿವ್ ಅಸೆಟ್ ಮ್ಯಾನೇಜ್ಮೆಂಟ್ ಮತ್ತು ಒವೆಲ್ ಕ್ರೀಕ್ ನ ಪಾಲುದಾರಿಕೆಯನ್ನು ಹೊಂದಿತ್ತು.
ಇನ್ನು, ರಾಕಿ, ಲೀಗಲಿ ಬ್ಲಾಂಡ್, ದಿ ಪಿಂಕ್ ಪ್ಯಾಂಥರ್ ಮತ್ತು ಸ್ಟಾರ್‌ಗೇಟ್ ಸೇರಿದಂತೆ ಹಲವಾರು ಪ್ರಸಿದ್ಧ ಚಲನಚಿತ್ರ ಮತ್ತು ಟಿವಿ ಫ್ರಾಂಚೈಸಿಗಳನ್ನು ಎಂಜಿಎಂ ಒಳಗೊಂಡಿದೆ. “ದಿ ಹ್ಯಾಂಡ್ ಮೇಡ್ಸ್ ಟೇಲ್” ಮತ್ತು “ಫಾರ್ಗೋ” ಸೇರಿದಂತೆ ಖ್ಯಾತ ಟಿವಿ ಕಾರ್ಯಕ್ರಮಗಳನ್ನು ಮಾಡಿ ಯಶಸ್ಸನ್ನು ಕಂಡಿದೆ.
ಎಂಜಿಎಂ “ಶಾರ್ಕ್ ಟ್ಯಾಂಕ್,” “ಸರ್ವೈವರ್,” “ದಿ ರಿಯಲ್ ಹೌಸ್ವೈವ್ಸ್” ಸರಣಿ ಮತ್ತು “ದಿ ವಾಯ್ಸ್” ಸೇರಿದಂತೆ ಹಲವಾರು ಜನಪ್ರಿಯ ರಿಯಾಲಿಟಿ ಟಿವಿ ಕಾರ್ಯಕ್ರಮಗಳನ್ನು ಕೂಡ ಮಾಡಿದೆ.
ಎಂಜಿಎಂ 2017 ರಲ್ಲಿ ಸುಮಾರು 1.3 ಬಿಲಿಯನ್ ಮೌಲ್ಯದ ಪ್ರೀಮಿಯಂ ಪೇ-ಟಿವಿ ಸೇವೆಯಾದ ಎಪಿಕ್ಸ್ ನನ್ನು ಆರಂಭಿಸಿತ್ತು.
ಇದನ್ನೂ ಓದಿ : ಬ್ಲ್ಯಾಕ್ ಫಂಗಸ್‌ಗೆ ಔಷಧಿ ಕೊರತೆ ಇದ್ದು, ಇನ್ನೊಂದು ವಾರದಲ್ಲಿ ನಿವಾರಣೆ : ಡಿಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.