ಇನ್ನೆರಡು ವರ್ಷಗಳಲ್ಲಿ ಭಾರತದಲ್ಲೇ ತಯಾರಾಗಲಿದೆ ಐ-ಫೋನ್
2020ರ ವೇಳೆ ಬಿಡಿ ಭಾಗ ತಯಾರಿಕೆಗೆ 2 ಸಾವಿರ ಕೋಟಿ ರೂ. ಹೂಡಿಕೆ
Team Udayavani, Nov 27, 2019, 7:12 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಫೋನ್ ಬಳಕೆದಾರರ ಹಾಟ್ ಫೇವರಿಟ್ ಆ್ಯಪಲ್ ಐ ಫೋನ್ ಇನ್ನು ನಮ್ಮಲ್ಲೇ ತಯಾರಾಗುವ ದಿನಗಳು ದೂರವಿಲ್ಲ. ಆ್ಯಪಲ್ ಈಗಾಗಲೇ ಭಾರತದಲ್ಲಿ ಐಫೋನ್ ಬಿಡಿ ಭಾಗಗಳನ್ನು ಜೋಡಿಸುವ ಕೇಂದ್ರವನ್ನು ತೆರೆದಿದೆ. ಇದೀಗ ಐಫೋನ್‌ಗೆ ಚಾರ್ಜರ್‌ಗಳನ್ನು ಪೂರೈಸುವ ಫಿನ್ಲಂಡ್‌ನ ಸಾಲ್ಕಾಂಪ್ ಕಂಪೆನಿ ಚೆನ್ನೈನಲ್ಲಿರುವ ನೋಕಿಯಾದ ಹಳೆಯ ತಯಾರಿಕಾ ಕೇಂದ್ರವನ್ನು ಖರೀದಿಸಿದೆ. ಈ ಘಟಕದಲ್ಲಿ ಈ ಕಂಪೆನಿ 2 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ.
ಇದರಿಂದಾಗಿ ಸುಮಾರು 10 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂಬ ವಿಶ್ವಾಸವನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೇ ಭಾರತದಲ್ಲೇ ತಯಾರಾದ ಐಫೋನ್ ಎಕ್ಸ್.ಆರ್. ಖರೀದಿಸಿದ ಖುಷಿಯನ್ನು ಸಚಿವರು ಇದೇ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿ ಆಪಲ್ ಐಫೋನ್ ಎಕ್ಸ್.ಆರ್. ಮತ್ತು ಐಪೋನ್ 7ನ ಬಿಡಿಭಾಗಗಳ ಜೋಡಣಾ ಘಟಕ ಕಾರ್ಯಾರಂಭ ಮಾಡಿದೆ. ಮುಂಬರುವ ದಿನಗಳಲ್ಲಿ ಬೇರೆ ರಾಷ್ಟ್ರಗಳಿಗೆ ಇಲ್ಲಿಂದಲೇ ಐಫೋನ್ ಪೂರೈಕೆ ಮಾಡುವ ಉದ್ದೇಶವನ್ನು ಕಂಪೆನಿ ಹೊಂದಿದೆ.
ಚೀನಾ ಮತ್ತು ಅಮೆರಿಕಾ ದೇಶಗಳ ನಡುವೆ ನಡೆಯುತ್ತಿರುವ ವಾಣಿಜ್ಯ ಸಮರದ ಲಾಭವನ್ನು ಪಡೆಯಲು ಭಾರತ ಪ್ರಯತ್ನಿಸುತ್ತಿದ್ದು, ಚೀನದಿಂದ ಹೊರಬರಲಿರುವ ಅಮೆರಿಕಾ ಕಂಪೆನಿಗಳಿಗೆ ತನ್ನ ನೆಲದಲ್ಲಿ ಉತ್ಪಾದನಾ ಅವಕಾಶವನ್ನು ಕಲ್ಪಿಸಿಕೊಡಲು ಭಾರತ ಇದೀಗ ಮುಕ್ತ ಅವಕಾಶ ನಿರ್ಮಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.