ಬೆಂಗಳೂರಿನಲ್ಲಿ ಜೂನ್ ವೇಳೆಗೆ ಐಫೋನ್ ಉತ್ಪಾದನೆ ಆರಂಭ
Team Udayavani, Feb 3, 2017, 11:07 AM IST
ಹೊಸದಿಲ್ಲಿ : ಜಗತ್ ಪ್ರಸಿದ್ಧ ಆ್ಯಪಲ್ ಕಂಪೆಯು ಬೆಂಗಳೂರಿನ ತನ್ನ ಘಟಕದಲ್ಲಿ ಜನಪ್ರಿಯ ಐಪೋನ್ ಗಳನ್ನು ಉತ್ಪಾದಿಸಲಿದೆ.
ಬೆಂಗಳೂರಿನಲ್ಲಿ ಐಫೋನ್ ಉತ್ಪಾದನೆಯು ಯಾವಾಗ ಆರಂಭವಾಗುತ್ತದೆ ಎಂಬುದು ನಿಖರವಾಗಿ ಬಹಿರಂಗವಾಗಿಲ್ಲ; ಆದರೆ ಬಹುತೇಕ ಈ ವರ್ಷ ಜೂನ್ ವೇಳೆಗೆ ಐಫೋನ್ ಉತ್ಪಾದನೆ ಆರಂಭವಾಗುವುದೆಂದು ನಿರೀಕ್ಷಿಸಲಾಗಿದೆ.
ಬೆಂಗಳೂರಿನಲ್ಲಿ ಆ್ಯಪಲ್ ತನ್ನ ಆರಂಭಿಕ ಐಫೋನ್ ಉತ್ಪಾದನೆಯನ್ನು ಮಾಡಲು ನಿರ್ಧರಿಸಿರುವುದನ್ನು ಕರ್ನಾಟಕ ಸರಕಾರ ಸ್ವಾಗತಿಸಿದೆ.
ಕರ್ನಾಟಕದ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಹಿ ಮಾಡಿ ಬಿಡುಗಡೆಗೊಳಿಸಿರುವ ಅಧಿಕೃತ ಹೇಳಿಕೆಯಲ್ಲಿ, ” ಆ್ಯಪಲ್ ಕಂಪೆನಿಯು ಬೆಂಗಳೂರಿನಲ್ಲಿ ಐಫೋನ್ ಉತ್ಪಾದಿಸುವ ಮೂಲಕ ದೇಶದಲ್ಲಿನ ಐಫೋನ್ ಪೂರೈಕೆ ವ್ಯವಸ್ಥೆಯು ಬಲಿಷ್ಠಗೊಳ್ಳಲಿದ್ದು ಆದರಿಂದ ರಾಜ್ಯಕ್ಕೆ ತಾಂತ್ರಿಕ ಹೆಚ್ಚುಗಾರಿಕೆಯು ಪ್ರಾಪ್ತವಾಗಲಿದೆ; ಮಾತ್ರವಲ್ಲದೆ ಜಾಗತಿಕವಾಗಿ ಸ್ಪರ್ಧಿಸುವ ಭಾರತಕ್ಕೆ ಇದು ನಿರ್ಣಾಯಕವಾಗಲಿದೆ’ ಎಂದು ಹೇಳಿದ್ದಾರೆ.
ಆ್ಯಪಲ್ ಕಂಪೆನಿಯ ಪ್ರತಿನಿಧಿಗಳಾದ ಪ್ರಿಯಾ ಬಾಲಸುಬ್ರಮಣಿಯನ್ (ವಿಪಿ ಐಫೋನ್ ಆಪರೇಶನ್ಸ್), ಅಲಿ ಖನಾಫರ್ (ಸರಕಾರಿ ವ್ಯವಹಾರಗಳ ಮುಖ್ಯಸ್ಥರು), ಧೀರಜ್ ಛಗ್ ( ಐಫೋನ್ ಆಪರೇಶನ್ಸ್ ನಿರ್ದೇಶಕರು) ಮತ್ತು ಪ್ರಿಯೇಶ್ ಪೊವಣ್ಣ (ದೇಶೀಯ ಆಪ್ತಸಮಾಲೋಚಕರು) ಇವರು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಬೆಂಗಳೂರಿನಲ್ಲಿ ಐಫೋನ್ ಕಂಪೆನಿಯು ಉತ್ಪಾದಿಸುವ ಬಗ್ಗೆ ಹಾಗೂ ಇತರ ಕ್ಷೇತ್ರಗಳಲ್ಲಿ ಸರಕಾರದ ಸಂಭವನೀಯ ಭಾಗೀದಾರಿಕೆಯ ಬಗ್ಗೆ ಚರ್ಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.