ಮಿತಿ ಮೀರಿ ATM ನಿಂದ ಹಣ ವಿತ್ ಡ್ರಾ ಮಾಡುವುದು ಇನ್ಮುಂದೆ ದುಬಾರಿ: RBI ಹೇಳಿದ್ದೇನು..?
Team Udayavani, Jun 11, 2021, 4:16 PM IST
ನವ ದೆಹಲಿ: ನೀವು ಎಟಿಎಂನಿಂದ ಹಣವನ್ನು ವಿತ್ ಡ್ರಾ ಮಾಡುವುದಕ್ಕೆ ಇನ್ಮುಂದೆ ಹಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎಟಿಎಂಗಳಿಂದ ಉಚಿತ ವಿತ್ ಡ್ರಾ ಮಿತಿಯ ನಂತರದ ವಹಿವಾಟಿನ ಶುಲ್ಕವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಏರಿಕೆ ಮಾಡಿ ದೇಶ ಹೊರಡಿಸಿದೆ.
ಇದನ್ನೂ ಓದಿ : ಪ್ರತಿ ಕ್ವಿಂಟಲ್ ಭತ್ತದ ಬೆಂಬಲ ಬೆಲೆ 1,940 ರೂ.ಗೆ ಏರಿಕೆ : ಕೇಂದ್ರ ಸರ್ಕಾರ
ಎಟಿಎಂನಿಂದ ಹಣವನ್ನು ವಿತ್ ಡ್ರಾ ಮಾಡುವುದು ಇನ್ಮುಂದೆ ದುಬಾರಿ :
ಒಂದು ತಿಂಗಳಲ್ಲಿ ತಮ್ಮ ಬ್ಯಾಂಕಿನ ಎಟಿಎಂಗಳಿಂದ 5 ಉಚಿತ ವಹಿವಾಟು ನಡೆಸಲು ಅವಕಾಶವಿದ್ದರೆ, ಮೆಟ್ರೋ ನಗರಗಳಲ್ಲಿ ಇತರ ಬ್ಯಾಂಕಿನ ಎಟಿಎಂಗಳಿಂದ 3 ವಹಿವಾಟುಗಳು ಮುಕ್ತವಾಗಿವೆ ಮತ್ತು ಮೆಟ್ರೋ ಅಲ್ಲದ ನಗರಗಳಲ್ಲಿ ಇತರ ಬ್ಯಾಂಕಿನ ಎಟಿಎಂಗಳಿಂದ ಹಣ ಹಿಂಪಡೆಯಲು ಮೊದಲ 5 ವಹಿವಾಟುಗಳಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಈ ಮಿತಿಯನ್ನು ಮೀರಿ ಹಣ ವಿತ್ ಡ್ರಾ ಮಾಡಿದ್ದಲ್ಲಿ ನಿಮ್ಮ ಖಾತೆಗೆ ಇನ್ಮುಂದೆ ಕತ್ತರಿ ಬೀಳಲಿದೆ.
ಬ್ಯಾಂಕ್ ಗಳು ನೀಡುವ ಮಿತಿಯ ನಂತರ, ಗ್ರಾಹಕರು ಎಟಿಎಂನಿಂದ ಯಾವುದೇ ವಹಿವಾಟು ನಡೆಸಿದರೆ, ಅವರು ಪ್ರತಿ ವಹಿವಾಟಿಗೆ 21 ರೂ. ಪಾವತಿಸಬೇಕಾಗುತ್ತದೆ, ಅದು ಇಲ್ಲಿಯವರೆಗೆ 20 ರೂ. ಆಗಿತ್ತು. ಆರ್ ಬಿ ಐ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಈ ಶುಲ್ಕವು ಜನವರಿ 1, 2022 ರಿಂದ ಗ್ರಾಹಕರಿಗೆ ಅನ್ವಯವಾಗುತ್ತದೆ ಎಂದು ವರದಿ ತಿಳಿಸಿದೆ.
ಇದಲ್ಲದೆ, ಎಟಿಎಂ ಸ್ಥಾಪನೆ ಮತ್ತು ನಿರ್ವಹಣೆಯ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ಸುಮಾರು 9 ವರ್ಷಗಳ ನಂತರ ಇಂಟರ್ಚೇಂಜ್ ಶುಲ್ಕವನ್ನು ಹೆಚ್ಚಿಸಲು ಆರ್‌ಬಿಐ ಅನುಮತಿಸಿದ್ದು, ಆರ್ ಬಿ ಐ ಯಾವುದೇ ಹಣಕಾಸು ವಹಿವಾಟಿನ ಇಂಟರ್ಚೇಂಜ್ ಶುಲ್ಕವನ್ನು ಪ್ರತಿ ವಹಿವಾಟಿಗೆ 15 ರೂ.ನಿಂದ 17 ರೂ.ಗೆ, ಹಣಕಾಸಿನೇತರ ವಹಿವಾಟಿಗೆ 5 ರೂ.ಗಳಿಂದ 6 ರೂ.ಗೆ ಹೆಚ್ಚಿಸಿದೆ.
ಈ ಹೊಸ ಶುಲ್ಕಗಳು ಆಗಸ್ಟ್ ನಿಂದ ಅನ್ವಯ
ಯಾವುದೇ ಬ್ಯಾಂಕಿನ ಗ್ರಾಹಕರು ಮತ್ತೊಂದು ಬ್ಯಾಂಕಿನ ಎಟಿಎಂನಿಂದ ವಹಿವಾಟು ನಡೆಸಿದಾಗ, ಕಾರ್ಡ್ ನೀಡುವ ಬ್ಯಾಂಕ್ ಎಟಿಎಂ ಆಪರೇಟರ್ ಗೆ ಶುಲ್ಕವನ್ನು ಪಾವತಿಸುತ್ತದೆ, ಇದನ್ನು ಇಂಟರ್ಚೇಂಜ್ ಶುಲ್ಕ ಎಂದು ಕರೆಯಲಾಗುತ್ತದೆ. ಪ್ರಸ್ತುತ, ಈ ಇಂಟರ್ಚೇಂಜ್ ಶುಲ್ಕವು ಹಣಕಾಸಿನ ವಹಿವಾಟಿಗೆ 15 ರೂ. ಮತ್ತು ಹಣಕಾಸಿನೇತರ ವಹಿವಾಟಿಗೆ 5 ರೂ. ಆಗಿದೆ. ಇದನ್ನು 17 ಮತ್ತು 6 ರೂ.ಗಳಿಗೆ ಹೆಚ್ಚಿಸಲಾಗಿದೆ.
ಎರಡು ವರ್ಷಗಳ ಹಿಂದೆ, ಆರ್‌ಬಿಐ ಉಚಿತ ವಹಿವಾಟಿನ ಬಗ್ಗೆ ಸ್ಪಷ್ಟೀಕರಣವನ್ನು ನೀಡಿತ್ತು. ಇದರಲ್ಲಿ ಎಟಿಎಂನಲ್ಲಿ ಯಾವ ವಹಿವಾಟುಗಳು ಉಚಿತ ಮತ್ತು ಯಾವುದು ಉಚಿತವಲ್ಲ ಎಂದು ತಿಳಿಸಿತ್ತು. ಈಗ ಒಂಬತ್ತು ವರ್ಷಗಳ ನಂತರ ಈ ಶುಲ್ಕವನ್ನು ಆರ್ ಬಿ ಐ ಹೆಚ್ಚಳ ಮಾಡಲು ಬ್ಯಾಂಕ್ ಗಳಿಗ ಅನುಮತಿ ನೀಡಿದೆ.
ಇದನ್ನೂ ಓದಿ : ರಾಜ್ಯ ಅನ್ ಲಾಕ್: ರಾತ್ರಿ ಕರ್ಫ್ಯೂ , ವೀಕೆಂಡ್ ಕರ್ಫ್ಯೂ ಬಗ್ಗೆ ಸರ್ಕಾರದಿಂದ ಹೊಸ ಮಾರ್ಗಸೂಚಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.