ಟಿವಿಎಸ್ ಜ್ಯುಪಿಟರ್ 125 ಬಿಡುಗಡೆ
Team Udayavani, Oct 8, 2021, 1:32 PM IST
ಬೆಂಗಳೂರು: ವಿಶ್ವದ ಹೆಸರಾಂತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಉತ್ಪಾದಕ ಸಂಸ್ಥೆಯಾಗಿರುವ ಟಿವಿಎಸ್ ಮೋಟರ್ ಕಂಪನಿಯು ಟಿವಿಎಸ್ ಜ್ಯುಪಿಟರ್ 125 ನೂತನ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ದೊಡ್ಡ ಗಾತ್ರ, ಹೆಚ್ಚಿನ ಸ್ಥಳಾವಕಾಶವುಳ್ಳ ಹೊಸ ವಿವಿಧ ಸೌಲಭ್ಯಗಳನ್ನು ಒಳಗೊಂಡಿದೆ. ಆಕರ್ಷಕ ಎಲ್‌ಇಡಿ ಹೆಡ್ ಲ್ಯಾಂಪ್ ಇದ್ದು, ಫ್ರಂಟ್ ಲೈಟ್ ಗೈಡ್ಸ್ ಮತ್ತು ಆಕರ್ಷಕ ಹಿಂಬದಿಯ ಲ್ಯಾಂಪ್ ಮತ್ತು ಗ್ರ್ಯಾಬ್ ರೇಲ್ ರಿಫ್ಲೆಕ್ಟರ್ ಒಳಗೊಂಡಿದೆ. ಡಿಸ್ಕ್ ಮಾದರಿಯಲ್ಲಿ ಡೈಮಂಡ್ ಕಟ್ ಅಲಾಯ್ ಚಕ್ರಗಳಿದ್ದು, ಇದು ಸ್ಕೂಟರ್‌ನ ಒಟ್ಟಾರೆ ನೋಟವನ್ನು ಹೆಚ್ಚಿಸಲಿದೆ.
ಜೊತೆಗೆ ಬಾಡಿ ಬ್ಯಾಲೆನ್ಸ್ ಟೆಕ್ನಾಲಜಿ ಹೊಂದಿದ್ದು, ಸವಾರರಿಗೆ ಸುಲಲಿತ ಸಂಚಾರದ ಅನುಭವ ನೀಡಲಿದೆ. ಮುಂಭಾಗದ ಟೆಲಿಸ್ಕೋಪಿಕ್ ಸಸ್ಪೆನÒನ್ ಒಳಗೊಂಡಿದೆ. ಎರಡು ಹೆಲ್ಮೆಟ್‌ಗಳನ್ನು ಆರಾಮದಾಯಕವಾಗಿ ಇಡಬಹುದಾಗಿದೆ. ದೊಡ್ಡ ಸೀಟು ಇದ್ದು, ಮುಂದೆ ಆರಾಮದಾಯಕ ವಾಗಿ ಕಾಲು ಚಾಚಬಹುದಾಗಿದೆ. ಆರಂಭಿಕ ದರ 73,400 ರೂ. (ಎಕ್ಸ್‌ಷೋ ರೂಂ, ದೆಹಲಿ), ಡಾನ್ ಆರೆಂಜ್, ಇಂಡಿಬ್ಲೂ, ಪ್ರಿಸ್ಟ್ರೆನ್ ವೈಟ್, ಟೈಟಾನಿಯಂ ಗ್ರೇ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.
ಇದನ್ನೂ ಓದಿ;- ಕಾಶ್ಮೀರದಲ್ಲಿ ಅಲ್ಪಸಂಖ್ಯಾತರ ಹತ್ಯೆಗಳನ್ನು ಖಂಡಿಸಿ ಬೃಹತ್ ಪ್ರತಿಭಟನೆ
ಈ ಕುರಿತು ಮಾತನಾಡಿದ ಟಿವಿಎಸ್ ಮೋಟರ್ ಕಂಪನಿಯ ನಿರ್ದೇಶಕ ಮತ್ತು ಸಿಇಒ ಕೆ.ಎನ್. ರಾಧಾಕೃಷ್ಣನ್ ಅವರು, ಟಿವಿಎಸ್ ಸ್ಕೂಟರೀಕರಣ, ಪ್ರೀಮಿಯಮೈಸೇಶನ್, ಬ್ರಾಂಡ್‌ನಲ್ಲಿ ಹೂಡಿಕೆ ಮತ್ತು ಹೊಸ ಅನ್ವೇಷಣೆಗೆ ನಾಲ್ಕು ಅಂಶಗಳತ್ತ ಗಮನಹರಿಸಲಿದೆ. ಸದ್ಯ ಗ್ರಾಹಕರು ತಮ್ಮ ವ್ಯಕ್ತಿಗತ ಪ್ರಗತಿಗೆ ಪೂರಕವಾದ ಅನೇಕ ಸೌಲಭ್ಯಗಳನ್ನು ಬಯಸುತ್ತಾರೆ. ನೂತನ ಸ್ಕೂಟರ್ ಕೂಡಾ ಹಿಂದಿನಂತೇ ದೃಢವಾಗಿದ್ದು, ಹೆಚ್ಚುವರಿಯಾಗಿ ವಿವಿಧ ಸೌಲಭ್ಯಗಳನ್ನು ಹೊಂದಿದೆ ಎಂದರು.
ಟಿವಿಎಸ್ ಮೋಟರ್ ಕಂಪನಿಯ ಹಿರಿಯ ಉಪಾ ಧ್ಯಕ್ಷ (ಮಾರ್ಕೆಟಿಂಗ್) ಕಮ್ಯುಟರ್, ಕಾರ್ಪೊರೇಟ್ ಬ್ರಾಂಡ್ ಡೀಲರ್ ಟ್ರಾನ್ಸ್‌ಫಾರ್ಮೆಷನ ಅನಿರುದ್ಧ ಹಲ್ದಾರ್ ಮಾತನಾಡಿ, ಟಿವಿಎಸ್ ಜ್ಯುಪಿಟರ್ ಎಂದಿಗೂ ಜ್ಯಾದಾ ಕಾ ಫಾಯದಾ ಚಿಂತನೆಗೆ ಪೂರಕ ವಾಗಿದ್ದು, ದೇಶದಲ್ಲಿಯೇ ಹೆಚ್ಚು ಪ್ರೀತಿ ಪಾತ್ರ ಸ್ಕೂಟರ್ ಆಗಿದೆ. ಭಾರತೀಯ ಗ್ರಾಹಕರು ಸಂಚಾರ ಪರಿಹಾರಕ್ರಮಗಳ ಹುಡುಕಾಟದಲ್ಲಿ ಇದ್ದಾಗ ಹೊಸತನವನ್ನು ಕೊಡಲು, ಗ್ರಾಹಕರಿಗೆ ಜ್ಯಾದಾ ಸೆ ಭೀ ಜ್ಯಾದಾ ಸೌಲಭ್ಯಗಳನ್ನು ಕೊಡಲು ಪ್ರೇರೇಪಣೆ ನೀಡಿದೆ.
ಸೀಟಿನಡಿಯ ವಿಶಾಲವಾದ ಎರಡು ಹೆಲ್ಮೆಟ್ ಇಡಬಹುದಾದಷ್ಟು ಸಂಗ್ರಹಣಾ ಸ್ಥಳಾವ ಕಾಶ, ಅತಿದೊಡ್ಡದಾದ ಸೀಟು, ಉನ್ನತ ಮೈಲೇಜ್ ಹೊಂದಿದ್ದು, ಆಕರ್ಷಕ ವಿನ್ಯಾಸ ಮತ್ತು ಸೌಲಭ್ಯಗಳು ಗ್ರಾಹಕರಿಗೆ ಸಂಚಾರದ ಪ್ರೀಮಿಯಂ ಅನುಭವ ನೀಡಲಿವೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.