ಚೇತರಿಕೆ ಕಾಣದ ಕಾರು ಮಾರುಕಟ್ಟೆ ; ಸೆಪ್ಟೆಂಬರ್ ನಲ್ಲಿ ಶೇ.24ರಷ್ಟು ಕುಸಿತ
ಇನ್ನಷ್ಟು ಉದ್ಯೋಗ ಕಡಿತದ ಭೀತಿ ; ಹಬ್ಬದ ದಿನಗಳಲ್ಲೂ ಮಾರಾಟ ನಿರಾಶಾದಾಯಕ
Team Udayavani, Oct 11, 2019, 7:13 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಹಬ್ಬದ ಅವಧಿಯಲ್ಲಿ ಕಾರು ಮಾರಾಟ ಚೇತರಿಕೆ ಕಾಣಬಹುದೆಂಬ ನಿರೀಕ್ಷೆ ಇತ್ತಾದರೂ ಸೆಪ್ಟೆಂಬರ್‌ನಲ್ಲಿ ಮಾರಾಟ ಶೇ.23.7ರಷ್ಟು ಇಳಿಕೆ ಕಂಡಿದೆ. ಈ ಮೂಲಕ ಕಳೆದ 11 ತಿಂಗಳಲ್ಲಿ ಮಾರಾಟ ಇಳಿಕೆಯಾಗುತ್ತಲೇ ಸಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 2,23,317 ಪ್ಯಾಸೆಂಜರ್ ಕಾರುಗಳು ಮಾರಾಟವಾಗಿವೆ ಎಂದು ಭಾರತೀಯ ಆಟೋಮೊಬೈಲ್ ತಯಾರಕರ ಒಕ್ಕೂಟದ ಅಂಕಿಅಂಶಗಳು ಹೇಳಿವೆ. ಇದೇ ವೇಳೆ ಪ್ಯಾಸೆಂಜರ್ ಕಾರುಗಳು 1,31,281 ಮಾರಾಟವಾಗಿವೆ.
ಇದರಿಂದ ಉದ್ಯಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಇನ್ನಷ್ಟು ಉದ್ಯೋಗ ಕಡಿತದ ಭೀತಿ ಕಾಡಿದೆ. ಕಾರು ಮಾರಾಟದ ಕುಸಿತದ ಪರಿಣಾಮ ವಿಮೆ ಕಂಪೆನಿಗಳ ಮೇಲೂ ಆಗಿವೆ. ನ್ಯೂ ಇಂಡಿಯಾ ಎಶೂರೆನ್ಸ್ ಮತ್ತು ಐಸಿಐಸಿಯ ಲೊಂಬಾರ್ಡ್‌ಗಳ ಆದಾಯಕ್ಕೆ ಕತ್ತರಿ ಬಿದ್ದಿವೆ. ಕಳೆದ ತಿಂಗಳು ಮಾರುತಿ ಸುಝುಕಿ ಮತ್ತು ಇತರ ಹಲವು ಕಂಪೆನಿಗಳು ಕಾರುಗಳಿಗೆ ಆಫರ್‌ಗಳನ್ನು ಘೋಷಿಸಿದ್ದವು. ಅಲ್ಲದೇ ಕಾರು ಮಾರುಕಟ್ಟೆ ಮೇಲೆತ್ತಲು ಕಾರ್ಪೊರೆಟ್ ತೆರಿಗೆ ಇಳಿಸುವ ತೀರ್ಮಾನವನ್ನು ಕೇಂದ್ರ ಸರಕಾರ ಘೋಷಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲಯನ್ಸ್ನಿಂದ ‘ರಸ್ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jaiswal: ಚಾಂಪಿಯನ್ಸ್ ಟ್ರೋಫಿಗೆ ಯಶಸ್ವಿ ಜೈಸ್ವಾಲ್; ಇಂಗ್ಲೆಂಡ್ ಸರಣಿಯಲ್ಲೇ ಪದಾರ್ಪಣೆ?
Maha Kumbh Mela 2025: 144 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ- ಇದರ ಹಿಂದಿದೆ ರೋಚಕ ಸಂಗತಿ!
Dharmasthala: ಭಾರತೀಯ ಆಧ್ಯಾತ್ಮಿಕ ತವರೂರು ಶ್ರೀ ಕ್ಷೇತ್ರ ಧರ್ಮಸ್ಥಳ: ಜಗದೀಪ್ ಧನ್ಕರ್
BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್
Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.