ಎಸ್ ಬಿ ಐ ಗ್ರಾಹಕರು ಈ ಕೆಲಸಕ್ಕಾಗಿ ಬ್ಯಾಂಕ್ ಗೆ ಹೋಗಬೇಕೆಂದಿಲ್ಲ..! ಮಾಹಿತಿ ಇಲ್ಲಿದೆ.
Team Udayavani, May 3, 2021, 4:12 PM IST
ನವ ದೆಹಲಿ : ದೇಶದ ಅತಿದೊಡ್ಡ ನಾಗರಿಕ ಬ್ಯಾಂಕ್ ಎಸ್ ಬಿ ಐ ದೇಶದ ಕೆಲವು ರಾಜ್ಯಗಳಲ್ಲಿ ಕೋವಿಡ್ 19 ನ ಕಾರಣದಿಂದಾಗಿ ಲಾಕ್ ಡೌನ್, ಹಾಫ್ ಲಾಕ್ ಡೌನ್, ನೈಟ್ ಕರ್ಫ್ಯೂ ನಂತಹ ನಿರ್ಬಂಧಗಳು ಇರುವ ಕಾರಣದಿಂದಾಗಿ ಗ್ರಾಹಕ ಸ್ನೇಹಿ ಬೆಳವಣಿಗೆಯೊಂದನ್ನು ಎಸ್ ಬಿ ಐ ಕೈಗೊಂಡಿದೆ.
ಹೌದು, ತನ್ನ ಗ್ರಾಹಕರಿಗೆ ಕೆವೈಸಿ ನವೀಕರಣಗಳನ್ನು ಪಡೆಯುವ ಪ್ರಕ್ರಿಯೆಯನ್ನು ಎಸ್ ಬಿ ಐ ಸರಳೀಕರಿಸಿದೆ. ಕೆವೈಸಿ ಅಪ್ ಡೇಟ್ ಗಳ ಕೊರತೆಯಿಂದಾಗಿ ತೊಂದರೆಗೆ ಸಿಲುಕಿದ್ದ ಎಸ್ ಬಿ ಐ ಗ್ರಾಹಕರಿಗೆ ಇದು ಸಹಿ ಸುದ್ದಿಯಾಗಿದೆ ಎನ್ನುವುದರಲ್ಲಿ ಅನುಮಾನ ಪಡಬೇಕಾಗಿಲ್ಲ.
ಓದಿ : ಐಪಿಎಲ್ ಗೆ ಕೋವಿಡಾಘಾತ: ಚೆನ್ನೈ ಸೂಪರ್ ಕಿಂಗ್ಸ್ ನ ಇಬ್ಬರಿಗೆ ಕೋವಿಡ್ ಪಾಸಿಟಿವ್
ಕೆವೈಸಿ (Know Your Customer) ನವೀಕರಣಗೊಳ್ಳಲು ತನ್ನ ಗ್ರಾಹಕರಿಗೆ ಇ-ಮೇಲ್ ಅಥವಾ ಪೋಸ್ಟ್ ಮೂಲಕ ದಾಖಲೆಗಳನ್ನು ಕಳುಹಿಸಿ ಈ ಕೆಲಸವನ್ನು ಪೂರ್ಣಗೊಳಿಸಬಹುದು. ಶಾಖೆಗೆ ಹೋಗಬೇಕಾದ ಅಗತ್ಯವಿಲ್ಲ ಎಂದು ಎಸ್‌ಬಿಐ ತಿಳಿಸಿದೆ. ವಾಸ್ತವವಾಗಿ ತನ್ನ ಎಲ್ಲಾ 17 ಸ್ಥಳೀಯ ಪ್ರಧಾನ ಕಚೇರಿಗಳ ಮುಖ್ಯ ಜನರಲ್ ವ್ಯವಸ್ಥಾಪಕರೊಂದಿಗೆ ಸಂವಾದದ ನಂತರ, ಎಸ್ ಬಿ ಐ ಕೆವೈಸಿ ನವೀಕರಣವನ್ನು ಇ-ಮೇಲ್ ಅಥವಾ ಪೋಸ್ಟ್ ಮೂಲಕ ಸ್ವೀಕರಿಸುವಂತೆ ನಿರ್ದೇಶಿಸಿದೆ.
Important announcement for our customers in view of the lockdowns in place in various states. #KYCUpdation #KYC #StayStrongIndia #SBIAapkeSaath #StaySafe #StayStrong pic.twitter.com/oOGxPcZjeF
— State Bank of India (@TheOfficialSBI) May 1, 2021
ಕೆವೈಸಿ ಮಾಡುವುದು ಯಾಕೆ ಮುಖ್ಯ..?
ವಾಸ್ತವವಾಗಿ ಗ್ರಾಹಕರು ಎರಡು ವರ್ಷಗಳಲ್ಲಿ ಒಮ್ಮೆಯಾದರೂ ಕೆವೈಸಿ ನವೀಕರಣವನ್ನು ಮಾಡುವುದು ನಿಮ್ಮ ಖಾತೆ ಸುರಕ್ಷತೆಯ ದ್ರುಷ್ಟಿಯಿಂದ ಒಳ್ಳೆಯದು. ಗ್ರಾಹಕರಿಗೆ ಕೆವೈಸಿ ನವೀಕರಣ ಅಗತ್ಯವಿದೆ. ಕೋವಿಡ್ ಸೋಂಕಿನ ದೃಷ್ಟಿಯಿಂದ, ಬ್ಯಾಂಕ್ ಶಾಖೆಗಳಿಗೆ ಕೆವೈಸಿ ಅಪ್ ಡೇಟ್ ನ ಕೆಲಸವನ್ನು ಪೋಸ್ಟ್ ಮೂಲಕ ಪಡೆದ ದಾಖಲೆಗಳ ಆಧಾರದ ಮೇಲೆ ಮಾಡಲು ಕೇಳಲಾಗಿದೆ.
ಇನ್ನು, ಎಸ್ ಬಿ ಐ ಗ್ರಾಹಕರು ಸಾಕಷ್ಟು ಪ್ರಮಾಣದಲ್ಲಿ ಆನ್ ಲೈನ್ ವಂಚನೆಗೆ ಒಳಗಾಗುತ್ತಿದ್ದು, ಎಸ್ ಬಿ ಐ ಕೂಡ ತನ್ನ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡುತ್ತಲೇ ಬಂದಿದೆ. ಈಗ ಕೆವೈಸಿ ಅಪ್ ಡೇಟ್ ಮಾಡುವಾಗಲು ಎಚ್ಚರಿಕೆ ವಹಿಸಿ ಎಂದು ಕೇಳಿಕೊಂಡಿದೆ. ಮಾತ್ರವಲ್ಲದೇ, ಕಳೆದ ವರ್ಷ ಕೋವಿಡ್ ಸೋಂಕಿನ ಸಂದರ್ಭದಲ್ಲ ಎಸ್ ಬಿ ಐ ಗ್ರಾಹಕರು ಹೆಚ್ಚು ಆನ್ ಲೈನ್ ವಂಚನೆಗೆ ಒಳಗಾಗಿದ್ದು, ಈ ಬಾರಿಯೂ ವಂಚಕರು ವಂಚನೆಗೆ ಕಾರ್ಯ ತಂತ್ರ ಹೆಣೆಯ ಬಹುದು. ಎಚ್ಚರಿಕೆಯಿಂದಿರಿ ಎಂದು ತಿಳಿಸಿದೆ.
ಓದಿ : ಮೇ 3ರ ಮಧ್ಯರಾತ್ರಿಯೊಳಗೆ ದೆಹಲಿಗೆ ಆಕ್ಸಿಜನ್ ಸರಬರಾಜು ಮಾಡಿ: ಕೇಂದ್ರಕ್ಕೆ ಸುಪ್ರೀಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.